For Quick Alerts
ALLOW NOTIFICATIONS  
For Daily Alerts

ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?

|

ಇಂದು ಚಿನ್ನದ ಬಳಕೆ ಕೇವಲ ಆಭರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಲ ಪಡೆಯಲು, ಬಂಡವಾಳದ ರೀತಿ, ಚಿನ್ನದ ಪತ್ರಗಳ ಹೆಸರಿನಲ್ಲಿ ಹೀಗೆ ನೂರಾರು ಬಗೆಯಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ಬಳಕೆಯಾಗುತ್ತಿದೆ.

 

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 'ಗೋಲ್ಡ್ ಮಾನಿಟೈಸೇಶನ್' ಯೋಜನೆಯನ್ನು ಜಾರಿ ಮಾಡಹೊರಟಿದ್ದು ರೂಪು ರೇಷೆಗಳ ಬಗ್ಗೆ ಸ್ಪಷ್ಟವಾದ ವಿವರಣೆ ನೀಡಿದೆ. ಚಿನ್ನದ ಮಾರುಕಟ್ಟೆ ಮೇಲೆ ಸಕಾರಾತ್ಮಕ ಹಿಡಿತ ಸಾಧಿಸುವುದು ಮತ್ತು ಸಾಲ ಪಡೆಯುವಿಕೆಯ ಚಿನ್ನ ಹೇಗಿರಬೇಕು ಎಂಬುದದನ್ನು ಹೇಳುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

 

ಯೋಜನೆಗೆ ಅನೇಕ ಮೂಲ ಸೌಕರ್ಯಗಳ ಅಗತ್ಯವಿದೆ. ಹಾಗಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದ ನಗರಗಳಲ್ಲಿ ಮಾತ್ರ ಯೋಜನೆ ಕಾರ್ಯಗತ ಮಾಡಲು ಮುಂದಾಗಿದೆ

ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?

ಏನಿದು ಗೋಲ್ಡ್ ಮಾನಿಟೈಸೇಶನ್ ಯೋಜನೆ?
ಚಿನ್ನವನ್ನು ಬಂಡವಾಳ ಅಥವಾ ಹೂಡಿಕೆ ರೂಪದಲ್ಲಿ ಬಳಕೆ ಮಾಡಿಕೊಳ್ಳಬಹುದು (ಚಿನ್ನದ ಪತ್ರಗಳನ್ನು ಹೊರತುಪಡಿಸಿ). ಹೂಡಿಕೆಗೂ ಮುನ್ನ ನಿಮ್ಮ ಬಳಿ ಇರುವ ಚಿನ್ನವನ್ನು ಅನೇಕ ಪರೀಕ್ಷೆಗೆ ಒಡ್ಡಬೇಕಾಗುತ್ತದೆ. ಅಂದರೆ ಪರಿಶುದ್ಧತೆಯನ್ನು ಲೆಕ್ಕ ಹಾಕಬೇಕಾಗುತ್ತದೆ. ಈ ಪರೀಕ್ಷೆಗಳ ಸ್ಪಷ್ಟ ವಿಧಾನವನ್ನು ತಿಳಿಸುವುದೇ ಗೋಲ್ಡ್ ಮಾನಿಟೈಸೇಶನ್ ಯೋಜನೆ.[ನಿಮ್ಮ ನಗರದ ಚಿನ್ನದ ದರ ಒಂದೆ ಕ್ಲಿಕ್ ನಲ್ಲಿ]

ಯೋಜನೆಯ ಪ್ರಮುಖ ಅಂಶಗಳು
1. ಚಿನ್ನದ ಪರಿಶುದ್ಧತೆ ಅಳೆಯುವ ಕೇಂದ್ರ
ಸದ್ಯ ಭಾರತದಲ್ಲಿ (ಬಿಎಸ್ ಐ) 350 ಹಾಲ್ ಮಾರ್ಕಿಂಗ್ ಕೇಂದ್ರಗಳಿವೆ. ಚಿನ್ನದ ಆಭರಣದ ಪರಿಶುದ್ಧತೆಯನ್ನು ಇವೇ ನಿರ್ಧರಿಸುತ್ತಿವೆ. ಇಲ್ಲಿ ಚಿನ್ನದ ಪರಿಶುದ್ಧತೆ ಅಳೆಯುವ ಪ್ರಯತ್ನ ಮಾಡಲಾಗುವುದು.

2. ಪ್ರಾಥಮಿಕ ಪರೀಕ್ಷೆ
ಕೇಂದ್ರದಲ್ಲಿರುವ ಎಕ್ಸ್ ಆರ್ ಎಫ್ ಯಂತ್ರದ ಮೂಲಕ ಚಿನ್ನದ ಪರಿಶುದ್ಧತೆಯ ಲೆಕ್ಕ ಮಾಡಲಾಗುತ್ತದೆ. ಚಿನ್ನ ಪರಿಶೀಲನೆ ಮಾಡಬೇಕಾದವರು ಕೆವೈಸಿ ಸೇರಿದಂತೆ ವಿವಿಧ ಮಾಹಿತಿಯನ್ನು ನೀಡಬೇಕಾಗುತ್ತದೆ.[ಅಂತಾರಾಷ್ಟ್ರೀಯ ಚಿನ್ನದ ದರ ಗಣನೀಯ ಇಳಿಕೆ: ಹೂಡಿಕೆಗೆ ಸಕಾಲವೇ?]

3. ಚಿನ್ನ ನಷ್ಟವೇ?
ಚಿನ್ನ ಪರೀಕ್ಷೆ ಮಾಡಿದಾಗ ಕೆಲ ಪ್ರಮಾಣದ ನಷ್ಟವಾಗುತ್ತದೆ ಎಂದೇ ಒಡವೆ ಹೊಂದಿರುವವರು ಇಂದಿಗೂ ನಂಬಿಕೊಂಡಿದ್ದಾರರೆ. ಕೆಲವೊಂದು ಸಂದರ್ಭದಲ್ಲಿ ಎಲ್ಲ ಬಗೆಯ ಪರಿಶೀಲನೆ ನೋಡುವ ಅವಕಾಶವೂ ಆಭರಣ ಮಾಲೀಕರಿಗೆ ಇರುವುದಿಲ್ಲ.

4. ಚಿನ್ನದ ಹೂಡಿಕೆ
ಚಿನ್ನದ ಪರಿಶುದ್ಧತೆ ಫಲಿತಾಂಶ ಬಂದ ನಂತರ ಗ್ರಾಹಕ ಅದನ್ನು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಲುಬಹುದು. ತಿರಸ್ಕಾರ ಮಾಡುವುದಾದರೆ ನಿರ್ದಿಷ್ಟ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಒಪ್ಪಿಕೊಂಡರೆ ಪರಿಶೀಲನೆಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.

5.ನಿಯಮಾವಳಿಗಳು
ಪರೀಕ್ಷೆಗೆ ಒಯ್ಯಲು ಕನಿಷ್ಠ 30 ಗ್ರಾಂ ಚಿನ್ನವನ್ನಾದರೂ ಕೊಂಡೊಯ್ಯಬೇಕಾಗುತ್ತದೆ. ಸಣ್ಣ ಪ್ರಮಾಣದ ಹೂಡಿಕೆ ಮಾಡಲು ಇಂಥ ಕ್ರಮಗಳು ನೆರವಾಗುತ್ತದೆ ಎಂದು ಭಾವಿಸಲಾಗಿದೆ.(ಗುಡ್ ರಿಟರ್ನ್ಸ್.ಇನ್)

English summary

Gold Monetisation Scheme: 5 Must-Know Points

In an aim to curb gold imports and encourage the mobilisation of gold held by households and institutions. The government has drafted a guidelines for the scheme called as Gold Monetisation scheme. The main objective of the scheme is to provide a positive stimulus to the gems and jewellery sector in the country by making gold available as raw material on loan from the banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X