ಹಲವಾರು ಬ್ಯಾಂಕ್ ಗಳು ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಸಾಲ ನೀಡುತ್ತವೆ. ನಿಮ್ಮ ಜೀವನದ ಗುರಿ ಸಾಧನೆಗೆ ಶಿಕ್ಷಣದ ಸಾಲ ಮಹತ್ತರ ಪಾತ್ರವನ್ನು ನಿಭಾಯಿಸಬಹುದು.
ಬೇರೆ ಬೇರೆ ಬ್ಯಾಂಕ್ ಗಳು ನಿಮ್ಮ ಕೋರ್ಸ್ ಗೆ ಅನುಗುಣವಾಗಿ ಸಾಲ ನೀಡುತ್ತವೆ. ಸಾಲದ ಪ್ರಮಾಣದಲ್ಲಿಯೂ ವ್ಯತ್ಯಾಸ ಆಗಬಹುದು. ನೀವು ಅಧ್ಯಯನ ಮಾಡಲು ಮುಂದಾಗಿರುವ ಶಿಕ್ಷಣ ಸಂಸ್ಥೆ ಅಥವಾ ಯುನಿವರ್ಸಿಟಿ ಆಧಾರದಲ್ಲಿಯೂ ಸಾಲದ ಮೊತ್ತ ನಿರ್ಧರಿತವಾಗುತ್ತದೆ.
ವಿದೇಶದಲ್ಲಿ ಅಧ್ಯಯನ ಮಾಡಲು ಸಾಲ ನೀಡಿಕೆಯ ಕೆಲ ಅತ್ಯುತ್ತಮ ಆಯ್ಕೆಯನ್ನು ಇಲ್ಲಿ ನೀಡಲಾಗಿದೆ.[ಗೃಹ ಸಾಲದ ಕಂತು ತುಂಬದಿದ್ದರೆ ಪರಿಣಾಮ ಏನು?]

ಎಸ್ ಬಿಐ ಸ್ಟೂಡೆಂಟ್ ಲೋನ್ ಸ್ಕೀಮ್
ಕೇವಲ 5 ಸಾವಿರ ರು. ಡಿಪಾಸಿಟ್ ಇಟ್ಟು 4 ಲಕ್ಷ ರು. ಗೂ ಅಧಿಕ ಸಾಲ ಪಡೆದುಕೊಳ್ಳಲು ಇಲ್ಲಿ ಅವಕಾಶವಿದೆ. 12 ವರ್ಷದ ಅವಧಿಗೆ ಸಾಲ ಪಡೆದುಕೊಳ್ಳಬಹುದು. ನಿಮ್ಮ ಕೋರ್ಸ್ ಮುಗಿದ ವರ್ಷದಿಂದ 12 ವರ್ಷಕ್ಕೆ ಲೆಕ್ಕ ಹಾಕಲಾಗುತ್ತದೆ. ಎಸ್ ಬಿಐ ಯಾವುದೇ ವಿಶೇಷ ಶುಲ್ಕಗಳನ್ನು ವಿಧಿಸುವುದಿಲ್ಲ.
ಅತಿಹೆಚ್ಚು ಅಂದರೆ 30 ಲಕ್ಷ ರು. ವರೆಗೂ ಸಾಲ ಪಡೆದುಕೊಳ್ಳಬಹುದು. ಬೇಸ್ ರೇಟ್ ಗಿಂತ ಶೇ. 3.65 ರಷ್ಟು ಹೆಚ್ಚಿನ ಬಡ್ಡಿ ಆಕರಣೆ ಮಾಡಲಾಗುತ್ತದೆ. ಸದ್ಯದ ಆಧಾರದಲ್ಲಿ ಹೇಳುವುದಾದರೆ ಶೇ. 13.35 ಬಡ್ಡಿಯನ್ನು ನೀಡಬೇಕಾಗುತ್ತದೆ.
4 ಲಕ್ಷದಿಂದ 7.5 ಲಕ್ಷ ರು. ಒಳಗೆ ಬೇಸ್ ರೇಟ್ ಗಿಂತ 3.90 ಅಧಿಕ ಬಡ್ಡಿ ನೀಡಬೇಕು ಅಂದರೆ ಇಂದಿನ ಲೆಕ್ಕದಲ್ಲಿ ಶೇ. 13.60 ಆಗುತ್ತದೆ. 7.5 ಲಕ್ಷ ರು. ಗೂ ಅಧಿಕ ಸಾಲ ಪಡೆದರೆ ಬೇಸ್ ರೇಟ್ ಗಿಂತ ಶೇ. 1.90 ಅಧಿಕ ಬಡ್ಡಿ ನೀಡಬೇಕು ಅಂದರೆ ಶೇ. 11.60 ಆಗುತ್ತದೆ. ಐಐಟಿ, ಐಐಎಂ, ಎನ್ ಐಟಿ, ಎಐಐಎಂಎಸ್ ಇನ್ನು ಮುಂತಾದ ಮಹತ್ತರ ಕೋರ್ಸ್ ಗಳಿಗೆ ಸಾಲ ಸಿಗುತ್ತದೆ.
ಎಕ್ಸಿಸ್ ಬ್ಯಾಂಕ್ ಶೈಕ್ಷಣಿಕ ಸಾಲ
ಇಲ್ಲಿ ನೀವು 20 ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದು. ವಿದೇಶದ ಟ್ಯೂಷನ್ ಫೀ, ಹಾಸ್ಟೇಲ್ ಫೀ, ಪುಸ್ತಕ ಎಲ್ಲ ಬಗೆಯ ಹಣಕಾಸು ವ್ಯವಹಾರಗಳನ್ನು ಇದು ಕವರ್ ಮಾಡುತ್ತದೆ. ಅತಿ ಕನಿಷ್ಠ ಎಂದರೆ 50 ಸಾವಿರ ರು. ಸಾಲ ಪಡೆದುಕೊಳ್ಳಬಹುದು.
4 ಲಕ್ಷಕ್ಕಿಂತ 7.5 ಲಕ್ಷದವರೆಗೆ ಸಾಲ ಪಡೆದುಕೊಂಡರೆ ಬೇಸ್ ರೇಟ್ ಗಿಂತ ಶೇ.8 ರಷ್ಟನ್ನು ಅಧಿಕವಾಗಿ ನೀಡಬೇಕಾಗುತ್ತದೆ. 7.5 ಲಕ್ಷಕ್ಕಿಂತ ಅಧಿಕ ಸಾಲ ಪಡೆದುಕೊಂಡರೆ ಬೇಸ್ ರೇಟ್ ಗಿಂತ ಶೇಕಡಾ 6 ರಷ್ಟು ಅಧಿಕ ನೀಡಬೇಕಾಗುತ್ತದೆ.[ಯಾವ ಯಾವ ರೀತಿ ಗೃಹಸಾಲ ಸಿಗುತ್ತೆ?]
ಕ್ರೆಡಿಲಾ ಶಿಕ್ಷಣ ಸಾಲ
ಕ್ರೆಡಿಲಾ ಎಚ್ ಡಿಎಫ್ ಸಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು 20 ಲಕ್ಷಗಳವರೆಗೆ ಸಾಪ ಪಡೆದುಕೊಳ್ಳಬಹುದು. ಇಲ್ಲಿ ಯಾವುದೇ ಬಗೆಯ ಮಾರ್ಜಿನ್ ಹಣ ಎಂಬುದು ಇರುವುದಿಲ್ಲ. ಬಡ್ಡಿ ಶೇ. 12.35 ರ ಆಸುಪಾಸಿನಲ್ಲಿ ಇರುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಿಎಲ್ ಬಿ ಸರಸ್ವತಿ ಯೋಜನೆಯಡಿ 20 ಲಕ್ಷ ರು. ಸಾಲ ಪಡೆದುಕೊಳ್ಳಬಹುದು. 4 ಲಕ್ಷ ಸಾಲ ಪಡೆದುಕೊಳ್ಳಲು ಯಾವುದೇ ಮಾರ್ಜಿನ್ ಹಣ ನೀಡಬೇಕಾಗುವುದಿಲ್ಲ. ಭಾರತದಲ್ಲಿ ವ್ಯಾಸಂಗ ಮಾಡುದಾದರೆ ಶೇ.5, ವಿದೇಶದಲ್ಲಿ ಅಧ್ಯಯನ ಮಾಡುವುದಾದರೆ ಶೇ. 15 ಬಡ್ಡಿ ನೀಡಬೇಕಾಗುವುದು.
ಕೊನೆ ಮಾತು:
ಸಾಲ ನೀಡಿಕೆ ವೇಳೆ ಬ್ಯಾಂಕ್ ಸಕಲ ದಾಖಲೆಗಳನ್ನು ಕೇಳುತ್ತದೆ. ವಿವಿಧ ಆಸ್ತಿಗಳ ಆಧಾರದಲ್ಲಿಯೇ ಸಾಲ ನೀಡುತ್ತದೆ. ಆಧರೆ ಶೈಕ್ಷಣಿಕ ಸಾಲಕ್ಕೆ ಕೆಲವೆಡೆ ಮುಕ್ತಿ ನೀಡಲಾಗಿದೆ. ಇಲ್ಲಿ ನಿಮ್ಮ ಶೈಕ್ಷಣಿಕ ಸಾಧನೆ ಮುಖ್ಯವಾಗುತ್ತದೆ(ಗುಡ್ ರಿಟರ್ನ್ಸ್.ಇನ್)


Click it and Unblock the Notifications