ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಮುಂದಾದರೆ ಕನಿಷ್ಠ ಒಬ್ಬ ನಾಮಿನಿಯನ್ನು ಕೇಳಿಯೇ ಇರುತ್ತಾರೆ. ನೀವು ನಾಮಿನಿ ಮಾಡಿದರೆ ಉತ್ತಮ ಎಂಬುದನ್ನು ತಿಳಿಸಿ ಹೇಳಿರುತ್ತಾರೆ.
ನಾಮಿನಿ ಮಾಡಿ ಇಟ್ಟುಕೊಳ್ಳುವುದು ಬ್ಯಾಂಕ್ ಮತ್ತು ನಿಮ್ಮ ದೃಷ್ಟಿಯಲ್ಲಿ ಉತ್ತಮ. ಒಂದು ವೇಳೆ ಉಳಿತಾಯ ಖಾತೆ ಹೊಂದಿದ್ದ ವ್ಯಕ್ತಿ ಆಕಸ್ಮಿಕ ಸಾವಿಗೀಡಾದರೆ ಪರಿಹಾರವೇನು? ಆತನ ಖಾತೆಯಲ್ಲಿರುವ ಹಣ ಪಡೆದುಕೊಳ್ಳುವುದು ಹೇಗೆ? ಎಂಬುದನ್ನು ಅರಿತುಕೊಂಡಿರಬೇಕಾಗುತ್ತದೆ.[ವಾಣಿಜ್ಯ ಬ್ಯಾಂಕ್ VS ಪೇಮೆಂಟ್ ಬ್ಯಾಂಕ್, ವ್ಯತ್ಯಾಸ ತಿಳ್ಕೊಳ್ಳಿ]

ಪಾಲಕ ಅಥವಾ ಜಾಯಿಂಟ್ ಖಾತೆ
ಉಳಿತಾಯ ಖಾತೆ ಪಾಲಕರ ಅಧೀನದಲ್ಲಿ ಅಥವಾ ಜಾಯಿಂಟ್ ಖಾತೆಯಲ್ಲಿದ್ದರೆ ಸಾವನ್ನಪ್ಪಿದ ವ್ಯಕ್ತಿಯ ಖಾತೆಯಲ್ಲಿದ್ದ ಹಣ ಸಬಂಧಿಸಿದವರಿಗೆ ಅಂದರೆ ಜಾಯಿಂಟ್ ಖಾತೆದಾರ ಅಥವಾ ಪಾಲಕರಿಗೆ ದೊರೆಯುವುದು.
ನಾಮಿನಿ ಮಾಡಿದ್ದರೆ
ಒಂದು ವೇಳೆ ಸಾವಿಗೀಡಾದವರ ಖಾತೆಗೆ ಸಂಬಂಧಿಸಿ ಯಾರಾದರೂ ನಾಮಿನಿ ಇದ್ದರೆ ಎಲ್ಲ ವ್ಯವಹಾರಗಳನ್ನು ಅವರ ಹೆಸರಿಗೆ ಮಾಡಿ ಕೊಡಲಾಗುತ್ತದೆ.
ವಿಲ್ ಬರೆಸಿದ್ದರೆ
ನಾಮಿನಿಯೂ ಇಲ್ಲ, ಜಾಯಿಂಟ್ ಅಕೌಂಟ್ ಅಲ್ಲ ಎಂದಾದಲ್ಲಿ ವಿಲ್ ಬರೆದಿಡಲಾಗಿದೆಯೇ ಎಂದು ಪರಿಶೀಲನೆ ಮಾಡಲಾಗುತ್ತದೆ.[ಚಿನ್ನ ಉಳಿತಾಯ ಖಾತೆ ತೆರೆಯುವುದು ಹೇಗೆ?]
ಯಾರೂ ವಾರಸದಾರರು ಇಲ್ಲವಾದಲ್ಲಿ
ಖಾತೆಗೆ ಯಾರೂ ವಾರಸದಾದರು ಇಲ್ಲ ಎಂದಾದಲ್ಲಿ ಸುಪ್ತ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಇಲ್ಲವಾದಲ್ಲಿ ಕಾನೂನಿನ ದೃಷ್ಟಿಯಲ್ಲಿ ಯಾರು ಹಕ್ಕು ದಾರರಾಗುತ್ತಾರೋ ಅವರಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ.
ಕೊನೆ ಮಾತು:
ಜಾಯಿಂಟ್ ಖಾತೆ ಸಾಧ್ಯವಾಗದಿದ್ದರೆ ನಾಮಿನಿ ಒಬ್ಬರನ್ನು ಖಾತೆ ತೆರೆಯುವ ವೇಳೆ ನೋಂದಣಿ ಮಾಡುವುದು ಎಲ್ಲ ಬಗೆಯಿಂದಲೂ ಒಳ್ಳೆಯದು. ಆಕಸ್ಮಿಕ ಸಾವು ಸಂಭವಿಸಿದರೆ ಯಾವುದೇ ಗೊಂದಲಗಳು ಏರ್ಪಡದಂತೆ ತಡೆಯಲು ಇದರಿಂದ ಸಾಧ್ಯವಾಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications