ಬೆಂಗಳೂರು, ಜ. 28: ವಿಶಿಷ್ಟ ಗುರುತಿನ ಚೀಟಿ -ಆಧಾರ್ ಕಾರ್ಡ್ ಗಾಗಿ ಅರ್ಜಿ ಹಾಕಿದ ಮೇಲೆ ಕಾರ್ಡ್ ಗಾಗಿ ಕಾಯಲೇಬೇಕಾಗುತ್ತದೆ. ಆದರೆ, ಇದಕ್ಕೂ ಮುನ್ನ ನಿಮ್ಮ ದಾಖಲೆಗಳೆಲ್ಲ ಸರಿ ಇದ್ದರೆ ತ್ವರಿತವಾಗಿ ಆನ್ ಲೈನ್ ನಲ್ಲಿ ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ. ಆನ್ ಲೈನ್ ಮೂಲಕ ಇ-ಆಧಾರ್ ಕಾರ್ಡ್ ಡೌನ್ ಲೋಡ್ ಹೇಗೆ? ಇಲ್ಲಿದೆ ಮಾಹಿತಿ.
ಇ ಅಧಾರ್ ಕಾರ್ಡ್ ಪಡೆಯಲು ನಿಮಗೆ ತಿಳಿದಿರಬೇಕಾದ ಸಂಗತಿಗಳು:
* ನೋಂದಣಿ ಸಂಖ್ಯೆ [ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]
[ನೋಂದಣಿ ಸಂಖ್ಯೆ ಎಂದರೆ ನೀವು ಆಧಾರ್ ಕಾರ್ಡಿಗೆ ಅರ್ಜಿ ಹಾಕಿದ ಮೇಲೆ ಸಿಗುವ ಸ್ವೀಕೃತಿ ಪತ್ರದಲ್ಲಿರುವ ಸಂಖ್ಯೆ]
* ಪೂರ್ತಿ ಹೆಸರು (ಸ್ವೀಕೃತಿ ಪತ್ರದಲ್ಲಿರುವಂತೆ ಇರಬೇಕು)
* ಪೋಸ್ಟಲ್ ಇಂಡೆಕ್ಸ್ ನಂಬರ್ (ಪಿನ್)
* ನೋಂದಾಯಿತ ಮೊಬೈಲ್ ನಂಬರ್
* ಮೊದಲಿಗೆ ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ ಲಿಂಕ್ ಇಲ್ಲಿದೆ ಕ್ಲಿಕ್ಕಿಸಿ.

* 14 ಅಂಕಿಗಳ ನೋಂದಣಿ ಸಂಖ್ಯೆ ದಿನಾಂಕ ಹಾಗೂ ಸಮಯ ಸಮೇತ ಅಥವಾ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. [ಎನ್ನಾರೈಗಳು ಆಧಾರ ಕಾರ್ಡ್ ಪಡೆಯಲು ಮಾರ್ಗಸೂಚಿ]
* ನಂತರ ನಿಮ್ಮ ಪೂರ್ತಿ ಹೆಸರನ್ನು ದಾಖಲಿಸಿ
* ಅಮೇಲೆ ಪಿನ್ ಕೋಡ್ ಹಾಕಿ
* ಬಾಕ್ಸಿನಲ್ಲಿರುವ Captcha code ಸಂಖ್ಯೆಗಳನ್ನು ಟೈಪ್ ಮಾಡಿ.
* ನಂತರ ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನು ಕಳುಹಿಸಿಕೊಡಲಾಗುವುದು.
* ಒಟಿಪಿ(one time password) ಯನ್ನು ಹಾಕಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಿ
* ಪಿಡಿಎಫ್ ಮಾದರಿಯಲ್ಲಿ ಸಿಕ್ಕ ಆಧಾರ್ ಕಾರ್ಡ್ ಓಪನ್ ಮಾಡಲು ಮತ್ತೊಮ್ಮೆ ಪಿನ್ ಕೋಡ್ ದಾಖಲಿಸಿ.
* ಹೀಗೆ ಲಭ್ಯವಾಗುವ ಇ-ಆಧಾರ್ ಕಾರ್ಡನ್ನು ಪ್ರಿಂಟ್ ಔಟ್ ತೆಗೆದುಕೊಂಡು ಗುರುತು ಚೀಟಿಯಾಗಿ ಬಳಸಬಹುದಾಗಿದೆ.
ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಆಧಾರ್ ಕಾರ್ಡ್ ಸಂಖ್ಯೆ ಎಂದರೆ ಆಧಾರ್ ಕಾರ್ಡ್ ನಿಮಗೆ ಸಿಕ್ಕ ನಂತರ ಅದರಲ್ಲಿರುವ 12 ಅಂಕಿ ಸಂಖ್ಯೆ ಇದ್ದರೆ ಆರಂಭದಲ್ಲೇ ನನ್ನ ಬಳಿ ಆಧಾರ್ ಕಾರ್ಡ್ ಇದೆ ಎಂದು ಆಯ್ಕೆ ಮಾಡಿಕೊಂಡು ಇನ್ನೂ ಸುಲಭವಾಗಿ ಇ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು.[ಆಧಾರ್ ನಂಬರ್ ಕಂಡುಹಿಡಿಯಲು ಹೆಸರೊಂದಿದ್ರೆ ಸಾಕು]
ಇದೇ ಕ್ರಮವನ್ನು ಅನುಸರಿಸಲು ವಿಡಿಯೋ ಇಲ್ಲಿದೆ ನೋಡಿ:
(ಗುಡ್ ರಿಟರ್ನ್ಸ್.ಇನ್)
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications