ಬ್ಯಾಂಕ್ ಡಿಪಾಸಿಟ್ ಗಳ ಬಳಕೆಯೂ ಬಹಳ ನಾಜೂಕಿನಿಂದ ಕೂಡಿರಬೇಕು. ಅದರಲ್ಲೂ ಹಿರಿಯ ನಾಗರಿಕರು ಫಿಕ್ಸೆಡ್ ಡಿಪಾಸಿಟ್ ಬಳಕೆ ಮಾಡಿಕೊಳ್ಳುವ ಸರಿಯಾದ ಮಾರ್ಗವನ್ನು ಅರಿತುಕೊಂಡಿರಬೇಕು.
ತುರ್ತು ಪರಿಸ್ಥಿತಿಯಲ್ಲಿ ನಮ್ಮ ಅಗತ್ಯವನ್ನು ಪೂರೈಕೆ ಮಾಡಲು ಫಿಕ್ಸೆಡ್ ಡಿಪಾಸಿಟ್ ಪ್ರಮುಖ ಮೂಲಕವಾಗಿ ಕಂಡುಬರುತ್ತದೆ. ಫಿಕ್ಸೆಡ್ ಡಿಪಾಸಿಟ್ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ ಅದರ ಸರಿಯಾದ ಬಳಕೆ ಬಗ್ಗೆ ಮಾಹಿತಿ ಕಡಿಮೆ ಇರುತ್ತದೆ. ಕೆಳಗಿನ ಮಾಹಿತಿ ನಿಮಗೆ ಒಂದು ಚಿತ್ರಣವನ್ನು ಒದಗಿಸಬಹುದು.[ಸಾವಿನ ಬಳಿಕ ನಿಮ್ಮ ಸಾಲ ತಿರಿಸುವವರು ಯಾರು?]
ಹೆಚ್ಚಿನ ಬಡ್ಡಿ ನೀಡುವ ಫಿಕ್ಸೆಡ್ ಡಿಪಾಸಿಟ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ. ಅಲ್ಲದೆ ಅದರ ಬಳಕೆಯನ್ನು ಯಾವ ಸಂದರ್ಭದಲ್ಲಿ ಮಾಡಿಕೊಳ್ಳಬೇಕು ಎಂಬುದನ್ನು ಅರಿತುಕೊಂಡಿರಬೇಕು(ಗುಡ್ ರಿಟರ್ನ್ಸ್. ಇನ್)
ತೆರಿಗೆ ಉಳಿತಾಯ ಮಾಡುವ ಎಫ್ ಡಿ
ಸೆಕ್ಷನ್ 80 ಸಿ ಅನ್ವಯ ಕೆಲ ಫಿಕ್ಸೆಡ್ ಡಿಪಾಸಿಟ್ ಗಳು ತೆರಿಗೆ ಉಳಿತಾಯ ಮಾಡಲು ನೆರವಾಗುತ್ತವೆ. ಆದರೆ 5 ವರ್ಷದ ಅವಧಿಗೆ ಇಟ್ಟ ಹಣವನ್ನು ಅನಿವಾರ್ಯ ಕಾರಣ ಅಂದರೆ ಸಾವು ಸಂಭವಿಸಿದರೆ ಮಾತ್ರ ಹಣವನ್ನು ಡ್ರಾ ಮಾಡಬಹುದು.
ಎಫ್ ಡಿ ಮತ್ತು ಕ್ರೆಡಿಟ್ ಕಾರ್ಡ್
ಫಿಕ್ಸೆಡ್ ಡಿಪಾಸಿಟ್ ಖಾತೆಯನ್ನು ತೆರೆದರೆ ಕೆಲ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ನ್ನು ನೀಡುತ್ತವೆ. ಇಲ್ಲಿ ನಿಮಗೆ ವಿವಿಧ ಕೊಡುಗೆಗಳು ಸಿಗಲು ಸಾಧ್ಯವಿದೆ.
ರಿಕರಿಂಗ್ ಡಿಪಾಸಿಟ್
ಸಣ್ಣ ಪ್ರಮಾಣದ ಉಳಿತಾಯ ನಾಡುವವರಿಗೆ ರಿಕರಿಂಗ್ ಡಿಪಾಸಿಟ್ ಅಂದರೆ ಆರ್ ಡಿ ಬಹಳ ಅತ್ಯುತ್ತಮ ಆಯ್ಕೆ. ಇದು ಫಿಕ್ಸೆಡ್ ಡಿಪಾಸಿಟ್ ತರಹವೇ ಕೆಲಸ ಮಾಡುತ್ತದೆ.
ಟಿಡಿಎಸ್ ಬೇಡ
ನೀವು ಬ್ಯಾಂಕ್ ಡಿಪಾಸಿಟ್ ನಿಂದ 10 ಸಾವಿರಕ್ಕೂ ಅಧಿಕ ಹಣವನ್ನು ಬಡ್ಡಿ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರೆ ಟಿಡಿಎಸ್ ನೀಡಬೇಕಾಗುತ್ತದೆ. ನಿಮ್ಮ ಆದಾಯ 2.5 ಲಕ್ಷ ದೊಳಗೆ ಇದ್ದರೆ 15ಜಿ/ಎಚ್ ಸಲ್ಲಿಕೆ ಮಾಡಿ ಟಿಡಿಎಸ್ ನಿಂದ ಮುಕ್ತಿ ಕಾಣಬಹುದು.