ಮಹಿಳೆಯರಿಗಾಗಿ ಅತ್ಯುತ್ತಮ 5 ಬ್ಯಾಂಕ್ ಖಾತೆಗಳು

ಈ ಮಾಹಿತಿಯನ್ನು ಗಮನವಿಟ್ಟು ಓದಿ.. ಜತೆಗೆ ನಿಮ್ಮ ತಾಯಿ, ತಂಗಿ, ಅಕ್ಕ, ಹೆಂಡತಿಗೂ ತಿಳಿಸಿ. ಅವರ ಹೆಸರಿನಲ್ಲಿ ಒಂದು ಖಾತೆಯನ್ನು ಈ ಮಹಿಳಾ ದಿನಾಚರಣೆ ವೇಳೆಯಾದರೂ ಮಾಡಿಸಿ.... ಮತ್ತಷ್ಟು ಶಾಪಿಂಗ್ ಮಾಡಲು ಅನುಕೂಲ ಆಯಿತು ಎಂದು ಬೈದುಕೊಳ್ಳಬೇಡಿ!

ಮಹಿಳಾ ದಿನಾಚರಣೆ ಎದುರಾಗಿದೆ. ಮಹಿಳೆಯರಿಗೆ ಬ್ಯಾಂಕ್ ಗಳು ವಿಶೇಷವಾಗಿ ನೀಡುತ್ತಿರುವ ಯೋಜನೆಗಳನ್ನು ಒಂದು ಕ್ಷಣ ಅವಲೋಕಿಸುವುದು ಅಷ್ಟೇ ಅಗತ್ಯವಾಗುತ್ತದೆ.[ಕ್ರೆಡಿಟ್ ಕಾರ್ಡ್‌ಗೆ ವಿಧಿಸುವ ಇತರೆ ಶುಲ್ಕಗಳು ಯಾವವು?]

ಗ್ರಾಮೀಣ ಭಾಗದ ಎಷ್ಟೋ ಜನ ಮಹಿಳೆಯರು ಇಂದಿಗೂ ಗಂಡನ ಮೇಲೆ ಅವಲಂಬಿತರಾಗಿದ್ದಾರೆ. ಆರ್ಥಿಕ ಸ್ವಾತಂತ್ರ್ಯ ಅವರ ಪಾಲಿಗೆ ಇನ್ನು ಗಗನಕುಸುಮವೇ ಆಗಿದೆ. ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಹಾಗಾದರೆ ಬ್ಯಾಂಕ್ ಗಳು ಮಹಿಳೆಯರನ್ನು ಗುರಿಯಾಗಿ ಇಟ್ಟುಕೊಂಡು ನೀಡಿರುವ ಅತ್ಯುತ್ತಮ 5 ಉಳಿತಾಯ ಖಾತೆಗಳನ್ನು ನೋಡಿಕೊಂಡು ಬರೋಣ...

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ ಅಡ್ವಾಂಟೇಜ್ ವಿಮೆನ್ ಸೆವಿಂಗ್ಸ್ ಖಾತೆಯನ್ನು ಕೊಡಮಾಡುತ್ತಿದೆ. ಎಟಿಎಂನ ಅನಿಯಮಿತ ಬಳಕೆ ಇಲ್ಲಿ ಸಾಧ್ಯವಿದೆ. ಝೀರೋ ಬ್ಯಾಲೆನ್ಸ್ ಸೌಲಭ್ಯವನ್ನು ರಿಕರಿಂಗ್ ಡಿಪಾಸಿಟ್ ಮೇಲೆ ನೀಡಿತ್ತದೆ. ಮನೆ ಬಳಕೆ ಉದ್ದೇಶಕ್ಕೆ ಈ ಯೋಜನೆ ಅತ್ಯುತ್ತಮವಾಗಿದ್ದು ತಿಂಗಳಿಗೆ 10 ಸಾವಿರ ರು. ವಹಿವಾಟು ನಡೆಸಬೇಕಾಗುತ್ತದೆ.

ಎಕ್ಸಿಸ್ ಬ್ಯಾಂಕ್

ಎಕ್ಸಿಸ್ ಬ್ಯಾಂಕ್

ಇದು ಸಹ ಅನಿಯಮಿತ ಕ್ಯಾಸ್ ವಿಥ್ ಡ್ರಾ ಅವಕಾಶ ನೀಡುತ್ತದೆ. ಡೆಬಿಟ್ ಕಾರ್ಡ್ ಬಳಕೆ ಮೂಲಕ ಶಾಪಿಂಗ್ ಮಾಡಿದರೆ ಹೆಚ್ಚುವರಿ ಅಂಕಗಳನ್ನು ಬಾಚಿಕೊಳ್ಳಬಹುದು. ಒಂದೇ ಸಾರಿಗೆ 40 ಸಾವಿರ ಡ್ರಾ ಮಾಡಲು ಅವಕಾಶವಿದೆ. ಎಕ್ಸಿಸ್ ಬ್ಯಾಂಕ್ ನಲ್ಲಿ ಈ ಖಾತೆ ಮೂಲಕ 5 ಟ್ರಾನ್ಸಾಕ್ಷನ್ ಗಳನ್ನು ಉಚಿತವಾಗಿ ಮಾಡಬಹುದು.

ಕೊಟಾಕ್ ಸಿಲ್ಕ್ ಸೆವಿಂಗ್

ಕೊಟಾಕ್ ಸಿಲ್ಕ್ ಸೆವಿಂಗ್

ಇಲ್ಲಿ ಉಳಿತಾಯದ ಹಣಕ್ಕೆ ಶೇ.6 ಬಡ್ಡಿ ನೀಡಲಾಗುತ್ತದೆ. ಕೊಟಾಕ್ ಸಿಲ್ಕ್ ಡೆಬಿಟ್ ಕಾರ್ಡ್ ನಿಮಗೆ ಲಭ್ಯವಾಗುತ್ತದೆ. ಅಲ್ಲದೇ ವಿವಿಧ ಶಾಪಿಂಗ್ ಆಫರ್ ಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.

ಎಚ್ ಡಿಎಫ್ ಸಿ

ಎಚ್ ಡಿಎಫ್ ಸಿ

ಶಾಪಿಂಗ್ ಮಾಡಲಿಚ್ಛಿಸುವ ಮಹಿಳೆಯರಿಗೆ ಇದು ಹೇಳಿ ಮಾಡಿಸಿದ ಯೋಜನೆ. 25 ಸಾವಿರ ವಿತ್‌ ಡ್ರಾ ಅವಕಾಶ. ದ್ವಿಚಕ್ರ ವಾಹನದ ಮೇಲೆ ಸಾಲ, ಆಟೊ ಸಾಲ, ಚಿನ್ನದ ಸಾಲ ಮತ್ತು ಪರ್ಸನಲ್ ಲೋನ್ ಪಡೆದುಕೊಳ್ಳಲು ಸಾಧ್ಯವಿದೆ.

ಐಡಿಬಿಐ ಸೂಪರ್ ಶಕ್ತಿ

ಐಡಿಬಿಐ ಸೂಪರ್ ಶಕ್ತಿ

ಈ ಖಾತೆ ಮಾಡಿಸಿದವರ ಮಕ್ಕಳು ಝೀರೋ ಬ್ಯಾಲೆನ್ಸ್ ಖಾತೆಯನ್ನು ಹೊಂದುವ ಅವಕಾಶವಿದೆ. 18 ವರ್ಷದ ಒಳಗಿನ ಮಕ್ಕಳ ಖಾತೆಯನ್ನು ನಿಮ್ಮ ಖಾತೆಯೊಂದಿಗೆ ಹೊಂದಾಣಿಕೆ ಮಾಡಿ ಮುಂದುವರಿಸಲಾಗುವುದು. ಅಂತಾರಾಷ್ಟ್ರೀಯ ಟ್ರಾನ್ಸಾಕ್ಷನ್ ಗಳನ್ನು ಈ ಖಾತೆ ಕೊಡಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+