ಪೆಪಾಲ್ ಖಾತೆ ಹೆಸರನ್ನು ಬಹಳಷ್ಟು ಜನರು ಕೇಳಿರಲಿಕ್ಕೆ ಸಾಕು. ಬೈಯರ್ ಮತ್ತು ಸೆಲ್ಲರ್ಸ್ಸ್ ಗಳಿಗೆ ಇದರ ಐಡಿಯಾ ಇದ್ದೆ ಇರುತ್ತದೆ.
ಅಮೆರಿಕದ ಎನ್ ಎಸ್ ಡಿಎಕ್ಯೂ ನಿಂದ ಮಾನ್ಯತೆ ಪಡೆದುಕೊಂಡಿರುವ ಪೆಪಾಲ್ ಪ್ರಪಂಚದ 200 ಕ್ಕೂ ಅಧಿಕ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಲು ನೆರವು ನೀಡುತ್ತದೆ. ಸುಮಾರು 100ಕ್ಕೂ ವಿಭಿನ್ನ ಕರೆನ್ಸಿಗಳ ಮೂಲಕ ವ್ಯವಹಾರ ನಡೆಸಲು ಸಾಧ್ಯಮಾಡಿಕೊಡುತ್ತದೆ.[ಸಿವಿವಿ ಎಂದರೇನು? ಎಲ್ಲೆಲ್ಲಿ ಬಳಕೆ ಮಾಡುತ್ತಾರೆ?]

ಖಾತೆ ತೆರೆಯಲು ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿರಲೇಬೇಕು ಅಂಥ ಏನಿಲ್ಲ. ನಂತರ ಸವಕಾಶವಾಗಿ ಲಿಂಕ್ ಮಾಡಿಕೊಳ್ಳಬಹುದು. ನೀವು ಪಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಪೆಪಾಲ್ ಖಾತೆಯನ್ನು ತೆರೆದು ನಿರ್ವಹಣೆ ಮಾಡಬಹುದು.
ಪೆಪಾಲ್ ಖಾತೆ ತೆರೆಯುವುದು ಹೇಗೆ?
* ಮೊದಲು www.paypal.com ಗೆ ಭೇಟಿ ನೀಡಿ
* ಸೈನ್ ಅಪ್ ಬಟನ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಖಾತೆಯ ಬಗೆಯನ್ನು ಆಯ್ಕೆ ಮಾಡಿಕೊಳ್ಳಿ, ಅದು ವೈಯಕ್ತಿಕ ಅಥವಾ ವಾಣಿಜ್ಯ ಖಾತೆಯಾಗಿರಬಹುದು.
* ನಂತರ continue ಬಟನ್ ಕ್ಲಿಕ್ ಮಾಡಿ
* ಇಮೇಲ್ ಅಡ್ರೆಸ್ ಮತ್ತು ಪಾಸ್ ವರ್ಡ್ ನೀಡಿ ಮುಂದುವರಿಯಿರಿ
* ನೀವು ತುಂಬಿರುವ ಮಾಹಿತಿ ಸರಿಯಾಗಿದೆಯೇ ಎಂದು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ, ಪಾನ್ ಕಾರ್ಡ್ ನಲ್ಲಿ ಇರುವಂತೆ ಹೆಸರನ್ನು ಸರಿಯಾಗಿ ತುಂಬಿ.
* ಖಾತೆ ತರೆಯಲು ನೀವು ಒಪ್ಪಿಗೆ ನೀಡಿದ ನಂತರ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕೇಳಲಾಗುತ್ತದೆ.
* ನೀವು ಮಾಹಿತಿಯನ್ನು ಇದೇ ಹಂತದಲ್ಲಿ ನೀಡಲ್ಲ ಎಂದಾದರೆ "I'll link my card later" ಆಯ್ಕೆಯನ್ನು ಒತ್ತಿ
* ನಂತರ ಸ್ಕಿಪ್ ಇಟ್ ಒತ್ತಿ
* ನಿಮ್ಮ ಅಕೌಂಟ್ ಕ್ರಿಯೇಟ್ ಆದ ಬಗ್ಗೆ ಮಾಹಿತಿ ಬರುತ್ತದೆ. "Go to your account" ಗೆ ತೆರಳಿ ನಿಮ್ಮ ಖಾತೆಯನ್ನು ವೀಕ್ಷಣೆ ಮಾಡಬಹುದು.
ನಿಮ್ಮ ಅಗತ್ಯಕ್ಕೆ ತಕ್ಕಂತೆ ಖಾತೆ ಮಾಡಿಕೊಳ್ಳಿ
* ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಲಿಂಕ್ ಮಾಡಿ. ಇದು ಪೇಮೆಂಟ್ ಮಾಡಲು ಮತ್ತು ಶಾಪಿಂಗ್ ಮಾಡಲು ಅವಕಾಶ ನೀಡುತ್ತದೆ.
* ಮೊಬೈಲ್ ನಂಬರ್ ನೋಂದಣಿ ಮಾಡಿ. ಇದು ನಿಮಗೆ ಸಂದೇಶಗಳ ಮೂಲಕ ಮಾಹಿತಿ ನೀಡಲು ನೆರವಾಗುತ್ತದೆ.
* ಇಮೇಲ್ ಖಾತೆ ನೋಂದಣಿ ಮಾಡಿರುವುದರಿಂದ ನಿಮ್ಮ ಖಾತೆಯನ್ನು ಸುಲಭವಾಗಿ ವೀಕ್ಷಣೆ ಮಾಡಬಹುದು.
* ಬ್ಯಾಂಕ್ ಖಾತೆ ಲಿಂಕ್ ಮಾಡುವುದರಿಂದ ಹಣ ಸ್ವೀಕಾರ ಸುಲಭ ಸಾಧ್ಯವಾಗುತ್ತದೆ.
ಕೊನೆ ಮಾತು: ಇದು ಅತ್ಯಂತ ಸುರಕ್ಷಿತ ಖಾತೆ ಎಂದೇ ಹೆಸರು ಪಡೆದುಕೊಂಡಿದೆ. ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಯಾವ ಸಂದರ್ಭದಲ್ಲಿಯೂ ಯಾರಿಗೂ ಬಿಟ್ಟುಕೊಡಲಾಗುವುದಿಲ್ಲ. ಮೊಬೈಲ್ ಅಪ್ಲಿಕೇಶನ್ ಸಹ ಲಭ್ಯವಿದ್ದು ಅಂಗೈನಲ್ಲೇ ಎಲ್ಲ ವ್ಯವಹಾರಗಳನ್ನು ಮಾಡಿ ಮುಗಿಸಬಹುದು. (ಗುಡ್ ರಿಟರ್ನ್ಸ್. ಇನ್)


Click it and Unblock the Notifications