ಸಾಮಾನ್ಯವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಲು ಎಲ್ಲರೂ ಹಿಂದೇಟು ಹಾಕುತ್ತಾರೆ. ಹೆಚ್ಚಿನ ಬಡ್ಡಿ ಸಹವಾಸವೇ ಬೇಡ ಎಂದು ದೂರ ಸರಿಯುತ್ತಾರೆ.
ಗೃಹ ಸಾಲ, ವಾಹನ ಸಾಲ, ಚಿನ್ನದ ಸಾಲಕ್ಕೆ ಹೋಲಿಕೆ ಮಾಡಿದರೆ ಇಲ್ಲಿ ಹೆಚ್ಚಿನ ಬಡ್ಡಿ ನೀಡಬೇಕಾದದ್ದು ಅನಿವಾರ್ಯ. ಆದರೆ ಅತಿ ಅಗತ್ಯವಾಗಿ ಹಣ ಹೊಂದಿಸಲೇಬೇಕಾದಾಗ ಬೇರೆ ದಾರಿ ಇಲ್ಲವಾದರೆ ಪರ್ಸನಲ್ ಲೋನ್ ಮೊರೆ ಹೋಗಬೇಕಾಗುತ್ತದೆ.[ಸಾವಿನ ಬಳಿಕ ನಿಮ್ಮ ಸಾಲ ತೀರಿಸುವವರು ಯಾರು?]

ನಿಮಗೆ ಇಂಥದ್ದೆ ಪರಿಸ್ಥಿತಿ ಎದುರಾಗಿ ಸಾಲ ತೆಗೆದುಕೊಳ್ಳಲೇಬೇಕು ಎಂಬ ಸ್ಥಿತಿ ಬಂದು ಒದಗಿದರೆ ಬಜಾಜ್ ಫಿನ್ ಸರ್ವ್ ಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ.
ಯಾಕೆ ಬಜಾಜ್ ಫಿನ್ ಸರ್ವ್ ಗಿಂತ ಅತ್ಯುತ್ತಮ ಆಯ್ಕೆ
* ಪ್ರಿ ಪೇಮೆಂಟ್ ಚಾರ್ಜ್ ಇಲ್ಲ: ಪರ್ಸನಲ್ ಲೋನ್ ಗೆ ಹೆಚ್ಚಿನ ಬ್ಯಾಂಕುಗಳು ಶೇ.4 ಪ್ರಿ ಪೇಮೆಂಟ್ ಶುಲ್ಕ ಪಡೆದುಕೊಳ್ಳುತ್ತವೆ. ಒಂದು ವರ್ಷಕ್ಕೆ 4 ಲಕ್ಷ ರು. ಸಾಲ ಬೇಕು ಅಂತಾದರೆ 16 ಸಾವಿರ ರು. ಮೊದಲೆ ಪಾವತಿ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಈ ಬಗೆಯ ಶುಲ್ಕ ತೆಗೆದುಕೊಳ್ಳಲಾಗುವುದಿಲ್ಲ.[ನಿಲ್ಲಿ...ಪರ್ಸನಲ್ ಲೋನ್ ತೆಗೆದುಕೊಳ್ತಾ ಇದೀರಾ?]
ಸ್ಟಾಂಡರ್ಡ್ ಚಾರ್ಜೆಟ್ ಬ್ಯಾಂಕ್ ಸಹ ಪ್ರಿ ಪೇಮೆಂಟ್ ಚಾರ್ಜ್ ಪಡೆದುಕೊಳ್ಳುವುದಿಲ್ಲ. ಆದರೆ ಬಜಾಜ್ ಗೆ ಹೋಲಿಕೆ ಮಾಡಿದರೆ ಬಡ್ಡಿ ದರ ಹೆಚ್ಚು.
*ಪ್ರಿ ಪೇಯ್ಡ್ ಕಾರ್ಡ್: 4 ಲಕ್ಷ ರು. ಸಾಲ ಮಾಡುತ್ತೀರಾ ಎಂದಾದಲ್ಲಿ 5 ಸಾವಿರ ರು., 6 ಲಕ್ಷ ಸಾಲ ಮಾಡುತ್ತಿದ್ದೀರಾ ಎಂದಾದರೆ 15 ಸಾವಿರ ರು. ಮೌಲ್ಯದ ಪ್ರಿ-ಪೇಯ್ಡ್ ಕಾರ್ಡ್ ಪಡೆದುಕೊಳ್ಳುವ ಸೌಲಭ್ಯವೂ ನಿಮಗೆ ಇಲ್ಲಿ ಲಭ್ಯವಾಗುತ್ತದೆ.
* ಬಡ್ಡಿ ದರ: ಪರ್ಸನಲ್ ಲೋನ್ ಗೆ ಸಾಮಾನ್ಯವಾಗಿ ಶೇ. 12-16 ರಷ್ಟು ಬಡ್ಡಿ ದರ ವಿಧಿಸಲಾಗುತ್ತದೆ. ಇದು ಸಹ ನಿಮ್ಮ ಬ್ಯಾಂಕ್ ನ ಕ್ರೆಡಿಟ್ ಆಧಾರಲ್ಲಿ ನಿರ್ಧರಿತವಾಗುತ್ತದೆ. ಬಜಾಜ್ ಫಿನ್ ಸರ್ವ್ ಶೇ. 13 ಬಡ್ಡಿ ದರವನ್ನು ವಿಧಿಸುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಸಹ ಇಲ್ಲಿ ಲೆಕ್ಕಕ್ಕೆ ಬರುತ್ತದೆ.
ಕೊನೆ ಮಾತು: ಯಾರೂ ಪರ್ಸನಲ್ ಲೋನ್ ತೆಗೆದುಕೊಳ್ಳಿ ಎಂದು ಸುಲಭವಾಗಿ ಸಹಲೆ ನೀಡುವುದಿಲ್ಲ. ಅತಿ ಅಗತ್ಯ ಎಂದ ಸಂದರ್ಭದಲ್ಲಿ ಸಾಲ ಮಾಡಿ. ಆದರೆ ಮಾಡುವ ಮುನ್ನ ಇನ್ನೊಮ್ಮೆ ಯೋಚನೆ ಮಾಡಿ.


Click it and Unblock the Notifications