For Quick Alerts
ALLOW NOTIFICATIONS  
For Daily Alerts

ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?

|

ಬ್ಯಾಂಕ್ ನಲ್ಲಿ ಯಾವುದೇ ವ್ಯವಹಾರ ಮಾಡಬೇಕಾದರೆ ಆಧಾರ್ ಕಾರ್ಡ್ ಕೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ನಿಮ್ಮ ಖಾತೆಯ ಪ್ರಾಥಮಿಕ ಮಾಹಿತಿಗೆ ಆಧಾರ್ ಕಾರ್ಡ್ ಕಡ್ಡಾಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಲದು ಅದು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರಬೇಕು. ಆಗ ಮಾತ್ರ ಹೆಚ್ಚುವರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಎಲ್ ಪಿಜಿ ಯೊಂದಿಗೆ ಆಧಾರ್ ಲಿಂಕ್, ಪಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಬಗ್ಗೆ ನೀವು ತಿಳಿದುಕೊಂಡಿರುತ್ತೀರಿ. ಇದೀಗ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ನೋಡಿಕೊಂಡು ಬರೋಣ,..[ಪಾನ್ ಕಾರ್ಡ್ ನೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಹೇಗೆ?]

ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?

ಆನ್ ಲೈನ್ ಮೂಲಕ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

* ನೀವು ನೆಟ್ ಬ್ಯಾಂಕಿಂಗ್ ಅವಕಾಶವನ್ನು ಹೊಂದಿರಬೇಕಾಗುತ್ತದೆ

* ನೆಟ್ ಬ್ಯಾಂಕಿಂಗ್ ಗೆ ಮೊದಲು ಲಾಗ್ ಇನ್ ಆಗಿ

* ಅಲ್ಲಿ ಆಧಾರ್ ಲಿಂಕಿಂಗ್ ಎಂಬ ಆಯ್ಕೆ ನಿಮಗೆ ಕಾಣಸಿಗುವುದು, ಕೆಲವೊಂದು ಕಡೆ ಅಪ್ ಡೇಟ್ ಯುವರ್ ಕಾಂಟಾಕ್ಟ್ ಡಿಟೇಲ್ಸ್ ಎಂಬ ಆಯ್ಕೆ ಸಿಗುವುದು[ಆಧಾರ್ ಲಿಂಕ್ ಮಾಡದಿದ್ದರೆ ಎಲ್ ಪಿಜಿ ಸಬ್ಸಿಡಿ ಇಲ್ಲ]

* ಇನ್ನು ಕೆಲ ಬ್ಯಾಂಕ್ ಗಳು ಆಧಾರ್ ಬ್ಯಾಂಕ್ ಅಕೌಂಟ್ ಸೆಡಿಂಗ್ ಎಂಬ ಅವಕಾಶ ಕಲ್ಪಿಸಿರುತ್ತವೆ.

* ನಿಮ್ಮ ಆಧಾರ್ ಮಾಹಿತಿಯನ್ನು ಸರಿಯಾಗಿ ದಾಖಲು ಮಾಡಿ

* ಸಬ್ ಮಿಟ್ ಬಟನ್ ಕ್ಲಿಕ್ ಮಾಡಿ

* ಇದಾದ ಮೇಲೆ ಬ್ಯಾಂಕ್ ನೀವು ನೀಡಿದ ಮಾಹಿತಿಯನ್ನು ಪರಿಶೀಲನೆ ಮಾಡುತ್ತದೆ.

* ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಮತ್ತು ಇಮೇಲ್ ಗೆ ಈ ಬಗ್ಗೆ ಸಂದೇಶ ಬರುತ್ತದೆ.

ಆಫ್ ಲೈನ್ ಮೂಲಕ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

* ಆಧಾರ್ ಲಿಂಕ್ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ ಅಥವಾ ಹತ್ತಿರದ ಶಾಖೆಯಿಂದ ಪಡೆದುಕೊಳ್ಳಿ

* ಸರಿಯಾದ ಮಾಹಿತಿ ದಾಖಲು ಮಾಡಿ

* ನಿಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಪಾನ್ ಕಾರ್ಡ್ ಪ್ರತಿ ನೀಡಲು ಮರೆಯಬೇಡಿ

* ಪಾಸ್ ಬುಕ್ ಫೋಟೋ ಕಾಪಿ ಸಹ ಅಗತ್ಯ

*ಈ ಎಲ್ಲ ದಾಖಲೆಗಳನ್ನು ನಿಮ್ಮ ಬ್ಯಾಂಕ್ ಶಾಖೆಗೆ ನೀಡಿ

ಆಧಾರ್ ಕಾರ್ಡ್ ನ್ನು ಏಕ ದಾಖಲೆಯನ್ನಾಗಿ ಬಳಸುವಂತೆ ಮಾಡುತ್ತೇವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ(ಗುಡ್ ರಿಟರ್ನ್ಸ್. ಇನ್)

English summary

How To Link Aadhar Card To Your Bank Account Online?

Aadhaar is gaining popularity as most of banks, financial institutions reduce the KYC process if an individual is having a Aadhaar number. Else the person has to go through tedious process to complete KYC for doing a new transaction or opening a new account. Recently, the Aadhar Bill was passed by the Lok Sabha and once it becomes a law, it would be mandatory to have the same.
Story first published: Thursday, April 14, 2016, 16:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X