ಕ್ರೆಡಿಟ್ ಕಾರ್ಡ್ ಬಳಕೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಶಾಪಿಂಗ್ ವೇಳೆ ಇದನ್ನು ಬಳಕೆ ಮಾಡಿ ಪಾಯಿಂಟ್ಸ್ ಗಳನ್ನು ಹೆಚ್ಚಿಗೆ ಮಾಡಿಕೊಳ್ಳುವುದು ನಮಗೆ ಗೊತ್ತೆ ಇದೆ.
ಕ್ರೆಡಿಟ್ ಕಾರ್ಡ್ ಲಿಮಿಟ್ ಆಧಾರದಲ್ಲಿ ಬಹಳಷ್ಟು ಶಾಪಿಂಗ್ ಮಾಡಿದ ವ್ಯಕ್ತಿ ಆಕಸ್ಮಿಕ ಸಾವಿಗೆ ಈಡಾದರೆ ಆ ಹಣವನ್ನು ಯಾರು ತುಂಬಬೇಕು? ಎಂಬ ಪ್ರಶ್ನೆಯೂ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.[ಸಾವಿನ ಬಳಿಕ ನಿಮ್ಮ ಸಾಲ ತೀರಿಸುವವರು ಯಾರು?]
ಸಾಲಗಾರರಾದರೆ ಏನಾಗುತ್ತದೆ? ಕ್ರೆಡಿಡ್ ಕಾರ್ಡ್ ಕಂತು ಸರಿಯಾಗಿ ಮರುಪಾವತಿಯಾಗದಿದ್ದರೆ ಬ್ಯಾಂಕ್ ಸಂದೇಶಗಳನ್ನು ರವಾನೆ ಮಾಡಲು ಆರಂಭಿಸುತ್ತದೆ. ದೂರವಾಣಿ ಮೂಲಕವೂ ನಿಮಗೆ ವಿವರಗಳನ್ನು ನೀಡಬಲ್ಲದು. ಚಿಕ್ಕ ಮೊತ್ತ ಆಗಿದ್ದರೆ ಬ್ಯಾಂಕ್ ಕೆಲ ದಿನ ಕಾಯಬಹುದು. ಆದರೆ ದೊಡ್ಡ ಮೊತ್ತವಿದ್ದರೆ ಬ್ಯಾಂಕ್ ನಿರಂತರವಾಗಿ ಬೆನ್ನು ಬೀಳುತ್ತದೆ.[ನಿಲ್ಲಿ...ಪರ್ಸನಲ್ ಲೋನ್ ತೆಗೆದುಕೊಳ್ತಾ ಇದೀರಾ?]
ಕಾರ್ಡ್ ದಾರ ಸಾವಿಗೀಡಾದರೆ ಏನಾಗುತ್ತದೆ? ಉಳಿದ ವೇಳೆ ಕಾನೂನು ಹೇಗೆ ಕಾರ್ಯ ಮಾಡುತ್ತದೆಯೋ ಅಂತೆಯೇ ಇಲ್ಲಿಯೂ ಸಹ ಉತ್ತರಾಧಿಕಾರಿಗೆ ಕ್ರೆಡಿಟ್ ಕಾರ್ಡ್ ನ ಸಾಲದ ಜವಾಬ್ದಾರಿ ದೊರೆಯುತ್ತದೆ. ಸಾವಿಗೀಡಾದ ವ್ಯಕ್ತಿಯ ಉತ್ತರಾಧಿಕಾರಿ ಯಾರೋ ಅಥವಾ ಕಾನೂನು ಬದ್ಧವಾಗಿ ಯಾರೂ ಲೀಗಲ್ ಹೈರ್ ಆಗುತ್ತಾರೋ ಅವರು ದಂಡ ಸಮೇತ ಬಾಕಿ ಮೊತ್ತವನ್ನು ತುಂಬಬೇಕಾಗುತ್ತದೆ.
ಬ್ಯಾಂಕ್ ನಿಂದ ಬೇರೆ ಬಗೆಯ ಕಿರುಕುಳ ಆರಂಭವಾದರೆ ದೂರು ಸಲ್ಲಿಕೆ ಮಾಡಲು ಇಲ್ಲಿ ಅವಕಾಶವಿದೆ. ಸಾವಿಗೀಡಾದ ವ್ಯಕ್ತಿಯಿಂದ ಯಾವ ಲಾಭ ಆಗಿಲ್ಲದೇ ಇರಬಹುದು ಆದರೆ ಹೇಗೆ ಉತ್ತರಾಧಿಕಾರಿ ವಿಮೆ ಮತ್ತು ಇತರ ಬಡ್ಡಿಗಳಿಗೆ ಹೇಗೆ ಪಾಲುದಾರನೋ ಸಾಲವನ್ನು ಹಾಗೇ ತುಂಬಬೇಕಾಗುತ್ತದೆ.(ಗುಡ್ ರಿಟರ್ನ್ಸ್. ಇನ್)