ಹಣ ವ್ಯವಹಾರ ಅಥವಾ ಬ್ಯಾಂಕು ವ್ಯಹಾರದಲ್ಲಿ ಅನೇಕ ಅವಿಷ್ಕಾರಗಳು, ವೈಜ್ಞಾನಿಕ ಬದಲಾವಣೆಗಳು ಹಾಗೂ ಮುಂದುವರೆದ ತಂತ್ರಜ್ಞಾನಗಳು ಸ್ಥಾನ ಪಡೆದುಕೊಳ್ಳುತ್ತಿವೆ. ಇದರಿಂದಾಗಿ ದಿನದಿನ ವ್ಯವಹಾರಗಳು ಸುಲಭವಾಗುತ್ತಿವೆ. ಕೈ ಬೆರಳ ತುದಿಯಲ್ಲಿಯೇ ಎಲ್ಲಾ ಚಟುವಟಿಕೆಗಳು ನಡೆಯುತ್ತಿದ್ದು, ಇಂತಹ ತಂತ್ರಜ್ಞಾನಗಳು ಗ್ರಾಹಕರನ್ನು ಮೋಡಿ ಮಾಡುತ್ತಿವೆ ಎನ್ನುವುದರಲ್ಲಿ ಎರಡೂ ಮಾತಿಲ್ಲ.
ಯುಪಿಐ ತಂತ್ರಜ್ಞಾನದ ಜಾದೂ ಪ್ರಾರಂಭವಾಗಿದ್ದು, ಹಣಕಾಸು ವ್ಯವಹಾರ, ಬ್ಯಾಂಕು ವ್ಯವಹಾರ ಇನ್ನೂ ಸುಲಭವಾಗಿದೆ. ಸ್ಟಾರ್ಟ್ಫೋನ್ ಗಳ ಮೂಲಕ ಹಣ ರವಾನೆ, ಬಿಲ್ ಪಾವತಿ, ಮತ್ತು ಸ್ವೀಕೃತಿಯನ್ನು ತುಂಬಾ ಸುಲಭಗೊಳಿಸಿರುವ ಮತ್ತು ನಗದು ರಹಿತ ವರ್ಗಾವಣೆ ಸೌಲಭ್ಯ ವಿಸ್ತರಣೆಗೆ ಹೊಸ ಬ್ಯಾಂಕಿಂಗ್ ಆಪ್ ಸೌಲಭ್ಯ ಕಾರ್ಯರೂಪಕ್ಕೆ ಬಂದಿದೆ. ಇದರಿಂದಾಗಿ ಎಸ್ಎಂಎಸ್ ಕಳಿಸಿದಷ್ಟೇ ಸರಳವಾಗಿ ಹಣ ಪಾವತಿ ಮಾಡಬಹುದಾಗಿದೆ.
ಹಾಗಿದ್ದರೆ ಈ ಯುಪಿಐ ಏನು? ಏನಿದರ ಪ್ರಯೋಜನಗಳು? ಇದರ ಕಾರ್ಯವೈಖರಿ ಹೇಗೆ? ಗ್ರಾಹಕರು ಇದನ್ನು ಹೇಗೆ ಬಳಸಬಹುದು? ಇತ್ಯಾದಿ ಗೊಂದಲ, ಕುತೂಹಲ ನಮ್ಮಲ್ಲಿ ಇದ್ದೆ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಯುಪಿಐ ಎಂದರೇನು?
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೌಲಭ್ಯವನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿ ಪಡಿಸಿದೆ. ಸ್ಟಾರ್ಟ್ಫೋನ್ ಗಳನ್ನು ಬಳಸಿ ಯಾವುದೇ ಎರಡು ಬ್ಯಾಂಕ್ ಖಾತೆಗಳ ನಡುವಿನ ಹಣ ವರ್ಗಾವಣೆ ಮಾಡುವ ಒಂದು ಪಾವತಿ ವ್ಯವಸ್ಥೆಯೇ ಯುಪಿಐ ಎನ್ನಲಾಗುತ್ತದೆ.
ಕಡಿಮೆ ನಗದು ಹೆಚ್ಚು ಡಿಜಿಟಲ್ ಎಂಬ ಪರಿಕಲ್ಪನೆ ಕಡೆಗೆ ಇದು ಒಯ್ಯಲಿದೆ.
ಯುಪಿಐ ವಿಶೇಷತೆ
ಗ್ರಾಹಕರು ತಮ್ಮ ಬ್ಯಾಂಕು ಖಾತೆಯಿಂದ ಯುಪಿಐ ಮೂಲಕ ಯಾವುದೇ ವ್ಯಾಪಾರಿಗಳಿಗೆ ಹಣವನ್ನು ನೇರವಾಗಿ ಪಾವತಿಸಬಹುದು. ಇದು ಆನ್ಲೈನ್ ಅಥವಾ ಆಪ್ ಲೈನ್ ಮೂಲಕ ಇರಬಹುದು. ವ್ವಹರಿಸುವಾಗ
ಕ್ರೆಡಿಟ್ ಕಾರ್ಡ್ ವಿವರ, ಐಎಫ್ಎಸ್ಸಿ ಕೋಡ್ ಅಥವಾ ನೆಟ್ ಬ್ಯಾಂಕಿಂಗ್/ವ್ಯಾಲೆಟ್ ಪಾಸ್ವರ್ಡ್ ಗಳನ್ನು ನಮೂದಿಸುವ ಯಾವುದೇ ತೊಂದರೆಯಿರುವುದಿಲ್ಲ.
ಯುಪಿಐ ಕಾರ್ಯನಿರ್ವಹಣೆ ಹೇಗೆ?
ಯುಪಿಐ 24/7 ಕಾರ್ಯನಿರ್ವಹಿಸುತ್ತಿದ್ದು, ಇದು ತುಂಬಾ ಸುರಕ್ಷಿತ, ತ್ವರಿತ, ಸುಭದ್ರ, ಪರಿಣಾಮಕಾರಿ ವೆಚ್ಚ ಮತ್ತು ಬಳಸಲು ಅನುಕೂಲಕರವಾಗಿರುವ ವ್ಯವಸ್ಥೆಯಾಗಿದೆ. ಇದರಲ್ಲಿ ನಿಮ್ಮ ಬ್ಯಾಂಕು ಖಾತೆಯಿಂದ ನೇರವಾಗಿ ಹಣವನ್ನು ಪಾವತಿಸಬಹುದು.
ಯುಪಿಐ ಆಪ್ ಎಲ್ಲಿ ಲಭ್ಯ
ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಯುಪಿಐ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಒದಗಿಸಲಿವೆ.
ಯಾವ ಬ್ಯಾಂಕುಗಳಲ್ಲಿ ಲಭ್ಯ
ಆಂಧ್ರ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಭಾರತೀಯ ಮಹಿಳಾ ಬ್ಯಾಂಕ್, ಕೆನರಾ ಬ್ಯಾಂಕ್, ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್, DCB ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, TJSB ಸಹಕಾರಿ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ , ಕರ್ನಾಟಕ ಬ್ಯಾಂಕ್, UCO ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ , ವಿಜಯಾ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಗಳಲ್ಲಿ ಲಭ್ಯವಿದೆ.
ಯುಪಿಐ ಪಡೆಯುವ ವಿಧಾನ
- ಪ್ಲೇ ಸ್ಟೋರ್ ನಿಂದ ಆಫ್ ಡೌನ್ಲೋಡ್ ಮಾಡಿ, ಫೋನಿನಲ್ಲಿ ಇನ್ಸ್ಟಾಲ್ ಮಾಡಿ.
- ಆಪ್ ಲಾಗಿನ್ ಆಗಿ
- ಅಗೋಚರ ವಿಳಾಸ ರಚಿಸಿ
- ನಿಮ್ಮ ಬ್ಯಾಂಕ್ ಖಾತೆ ಸೇರಿಸಿ
- ಎಂ ಪಿನ್ ಸೆಟ್ ಮಾಡಿಕೊಳ್ಳಿ
- ಯುಪಿಐ ಮೂಲಕ ವ್ಯವಹಾರ ಪ್ರಾರಂಭಿಸಿ
ಸುರಕ್ಷಿತ ಸರಳ ವಿಧಾನ
- ಸುರಕ್ಷಿತ ಮತ್ತು ಸರಳ ವಿಧಾನದಲ್ಲಿ ತಕ್ಷಣಕ್ಕೆ ಹಣ ವರ್ಗಾವಣೆ
- ಯುಪಿಐ ಹಣಕಾಸು ವರ್ಗಾವಣೆ ದುರ್ಬಳಕೆ ಸಾದ್ಯ ಇಲ್ಲ
- ನಗದುರಹಿತ ಆರ್ಥಿಕತೆಗೆ ಪೂರಕ
- ಖಾತೆದಾರನ ಹೆಸರು ಸಂಖ್ಯೆ @ ಬ್ಯಾಂಕ್ ಹೆಸರು ಒಳಗೊಂಡ ವಿಳಾಸಕಕ್ಕೆ ಸುಲಭವಾಗಿ ಹಣ ವಗಾವಣೆ
- ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ
- ಮೊಬೈಲ್ ವಾಲೆಟ್ ಸೇರ್ಪಡೆಯಾಗಿಲ್ಲ
ವ್ಯವಹಾರದ ಮಿತಿ
ಸ್ಮಾರ್ಟ್ಫೋನ್ ಗಳಲ್ಲಿ ಬ್ಯಾಂಕ್ ನ ಯುಪಿಐ ಜತೆ ಹಣ ವಗಾವಣೆ ಮಾಡಿಕೊಳ್ಳಬೇಕಾಗುತ್ತದೆ. ರೂ. 50 ಸಾವಿರದಿಂದ ಗರಿಷ್ಠ 1 ಲಕ್ಷದವರೆಗೆ ಹಣ ರವಾನಿಸಬಹುದು.
ರಘುರಾಮ್ ರಾಜನ್ ಕೂಸು
ಈ ಯೋಜನೆ ಬಾರತೀಯ ರಿಸರ್ವ್ ಬ್ಯಾಂಕ್ ನಿರ್ಗಮಿತ ಗವರ್ನರ್ ಆಗಿರುವ ರಘುರಾಮ್ ರಾಜನ್ ರವರ ಕನಸಿನ ಕೂಸು. ಈ ಹೊಸ ಸೌಲಭ್ಯಗಳನ್ನು ಜಾರಿಗೆ ತರುವುದಾಗಿ ಏಪ್ರಿಲ್ ನಲ್ಲಿ ಪ್ರಕಟಿಸಿದ್ದರು. ಈಗ ಬ್ಯಾಂಕ್ ಗ್ರಾಹಕರ ಬಳಕೆಗೆ ಆರ್ಬಿಐ ಸಮ್ಮತಿಸಿದೆ.
ಇ-ಕಾಮರ್ಸ್ ವ್ಯವಹಾರಕ್ಕೂ ಬಳಸಬಹುದು
ಹೌದು. ಆನ್ಲೈನ್ ತಾಣದ ಇ_ಕಾಮರ್ಸ್ ಮಳಿಗೆಗಳಿಂದ ಖರೀದಿಸಿದ ಸರಕು ಮನೆ ಬಾಗಿಲಿಗೆ ಬಂದಾಗ ಯುಪಿಐ ಆಪ್ ಮೂಲಕ ಹಣ ಪಾವತಿಸಬಹುದು. ನಾಗರಿಕ ಸೇವೆಗಳ ಬಿಲ್, ಬಾರ್ ಕೋಡ್ ಆಧಾರಿತ ಸರಕು ಖರೀದಿ, ದೇಣಿಗೆ, ಶಾಲಾ ಶುಲ್ಕ, ಸೇರಿದಂತೆ ಅನೇಕ ಬಗೆಯ ಹಣ ಪಾವತಿ ಇದರ ಮೂಲಕ ಇನ್ನೂ ಸುಲಭವಾಗಲಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications