ಎಟಿಎಂ ಯಂತ್ರಗಳ ಮೂಲಕ ಹಣವನ್ನು ವಿತ್ ಡ್ರಾ ಹಾಗೂ ಡಿಪಾಸಿಟ್ ಮಾಡುವುದು ಹಳೆ ವಿಧಾನವಾಗಿದ್ದು, ಎಟಿಎಂ(CDM) ಮೂಲಕ ಹಣ ಡಿಪಾಸಿಟ್ ಮಾಡುವ ತಂತ್ರವನ್ನು ಪ್ರತಿಯೊಬ್ಬರು ತಿಳಿದುಕೊಂಡಿರಬೇಕಾಗುತ್ತದೆ.
ಎಟಿಎಂ ಯಂತ್ರಗಳ ಮೂಲಕ ಹಣವನ್ನು ವಿತ್ ಡ್ರಾ ಹಾಗೂ ಡಿಪಾಸಿಟ್ ಮಾಡುವುದು ಹಳೆ ವಿಧಾನ. ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡುವ ತಂತ್ರವನ್ನು ಪ್ರತಿಯೊಬ್ಬರು ತಿಳಿದುಕೊಂಡಿರಬೇಕಾಗುತ್ತದೆ.
ಬ್ಯಾಂಕುಗಳಲ್ಲಿ ಎದುರಾಗುವ ಜನದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಎಟಿಎಂ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಸಾಮಾನ್ಯವಾಗಿ ಈ ಹಿಂದೆ ಗ್ರಾಹಕರು ಎಟಿಎಂ ಕೇಂದ್ರಗಳನ್ನು ನಗದು ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು. ಆದರೆ ಈಗ ಹಣ ಡಿಪಾಸಿಟ್ ಮಾಡುವುದಕ್ಕೂ ಕೂಡ ಬಳಸಲಾಗುತ್ತದೆ. ಈ ಕ್ರಮ ಅನುಸರಿಸುವುದರಿಂದ ಬ್ಯಾಂಕ್ ನ ಕಚೇರಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುವುದರಿಂದ ಮುಕ್ತಿ ಕಾಣಲು ಸಾಧ್ಯವಿದೆ.
ಎಸ್ ಬಿಐ ಬ್ಯಾಂಕ್ ನ CDM ಯಂತ್ರದ ಉದಾಹರಣೆಯೊಂದಿಗೆ ವಿವರಿಸಿದರೆ ಮತ್ತಷ್ಟು ಸರಳವಾಗಿ ಅರ್ಥವಾಗುವುದು.
ಎಸ್ ಬಿಐ ಎಟಿಎಂ ಯಂತ್ರದಲ್ಲಿ ಹಣ ಡಿಪಾಸಿಟ್ ಹೇಗೆ?
1. ನಿಮ್ಮ ಡೆಬಿಟ್ ಕಾರ್ಡ್ ಸೈಪ್ ಮಾಡಿ
2. ನಿಮ್ಮ ಭಾಷೆ ಆಯ್ಕೆ ಮಾಡಿಕೊಳ್ಳಿ
3. ಪಿನ್ ನಂಬರ್ ನಮೂದಿಸಿ
4. ಡಿಪಾಸಿಟ್ ಐಕಾನ್ ಆಯ್ಕೆ ಪಡೆದುಕೊಳ್ಳಿ ಮತ್ತು
5. ಕ್ಯಾಶ್ ಡಿಪಾಸಿಟ್ ಆಯ್ಕೆ ಮಾಡಿಕೊಳ್ಳಿ
6. ಕನ್ ಫರ್ಮ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
7. ಯಾವ ಬಗೆಯ ಖಾತೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ(ಸೇವಿಂಗ್ಸ್ ಅಥವಾ ಕರೆಂಟ್)
8. ಎಟಿಎಂ ಯಂತ್ರದಲ್ಲಿ ಹಣ ಹಾಕಿ
8. ಎಂಟರ್ ಬಟನ್ ಒತ್ತಿ
9. ನೀವು ಹಾಕಿರುವ ಹಣವನ್ನು ಯಂತ್ರ ಎಣಿಕೆ ಮಾಡುವುದು
10. ನೀವು ಹಾಕಿದ ಹಣದ ಒಟ್ಟು ಮುಖಬೆಲೆಯನ್ನು ಯಂತ್ರ ತೋರಿಸುತ್ತದೆ.
11. ಒಂದು ವೇಳೆ ನೀವು ಇನ್ನು ಹೆಚ್ಚಿಗೆ ಹಣ ಡಿಪಾಸಿಟ್ ಮಾಡಲು ಬಯಸುವುದಾದರೆ ಆಡ್ ಮೋರ್ ಆಯ್ಕೆ ನಮೂದಿಸಿಕೊಳ್ಳಿ
12. ಮತ್ತೆ ಕ್ಯಾಶ್ ಯಂತ್ರದಲ್ಲಿ ಇಡಿ.
13. ಮತ್ತೆ ಕನ್ ಫರ್ಮ್ ಬಟನ್ ಒತ್ತಿ
14. ರಸೀದಿ ಪ್ರತಿ ಸಿಗುತ್ತದೆ.
ಯಂತ್ರದ ಮೂಲಕ ಹಣ ಡಿಪಾಸಿಟ್ ಮಾಡಿದರೆ ಲಾಭವೇನು?
CDM(ಕ್ಯಾಶ್ ಡಿಪಾಸಿಟ್ ಮೇಷಿನ್) ಯಂತ್ರದ ಮೂಲಕ ಹಣ ಡಿಪಾಸಿಟ್ ಮಾಡಲು ಅನೇಕ ಕಾರಣಗಳಿರುತ್ತವೆ. ಸಮಯದ ಉಳಿತಾಯ ಬಹುಮುಖ್ಯ ಲಾಭ. ಬ್ಯಾಂಕ್ ನ ಶಾಖೆ ಹುಡುಕುತ್ತ, ಸರದಿ ಸಾಲಲ್ಲಿ ನಿಂತು ಹಣ ಹಾಕುವುದರಿಂದ ಮುಕ್ತಿ ಕಾಣಬಹುದು. ನಿಮ್ಮ ಹಣ ಡಿಪಾಸಿಟ್ ಆದ ಮಾಹಿತಿನ ಕೂಡಲೇ ನಿಮ್ಮ ಮೊಬೈಲ್ ಗೆ ಬರುತ್ತದೆ. ಇದೊಂದು ಅತ್ಯಂತ ಸುರಕ್ಷಿತ ಮಾರ್ಗ ಎಂದೇ ಹೇಳಬಹುದು.
ಪಿನ್ ಬದಲಾವಣೆ ಅಗತ್ಯ
ಕ್ಯಾಶ್ ಡಿಪಾಸಿಟ್ ಮಾಡಲು ನೀವು ಸಿಡಿಎಂ ಯಂತ್ರ ಬಳಕೆ ಮಾಡುತ್ತಿದ್ದರೆ ಆಗಾಗ ಪಿನ್ ಬದಲಾವಣೆ ಮಾಡುತ್ತಿರಬೇಕು. ಅಲ್ಲದೇ ನಿಮ್ಮ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುತ್ತಿರುವುದು ಮುಖ್ಯ. ಮಿನಿ ಸ್ಟೇಟ್ ಮೆಂಟ್ ಮೂಲಕ ಖಾತೆಯ ಸಮಗ್ರ ಮಾಹಿತಿ ಪಡೆದುಕೊಳ್ಳಬಹುದು. ನಕಲಿ ನೋಟುಗಳನ್ನು ಯಂತ್ರ ತಿರಸ್ಕಾರ ಮಾಡುತ್ತದೆ. ಡ್ಯಾಮೇಜ್ ಆದ ಅಥವಾ ಚಲಾವಣೆಗೆ ಅಯೋಗ್ಯವಾದ ನೋಟುಗಳನ್ನು ಯಂತ್ರ ಸ್ವೀಕರಿಸುವುದಿಲ್ಲ.
ಪ್ರಮುಖ ಅಂಶಗಳು
ಒಂದು ಭಾರಿ ರೂ. 49,900 ಡಿಪಾಸಿಟ್ ಮಾಡಲು ಅವಕಾಶವಿದೆ. 200 ಕ್ಕೂ ಅಧಿಕ ನೋಟುಗಳನ್ನು ಒಂದೇ ಬಾರಿಗೆ ತಂತ್ರಕ್ಕೆ ತುಂಬಬಹುದು. 2000, 500, 200 ಮತ್ತು 100 ರೂ. ಮುಖಬೆಲೆಯ ನೋಟುಗಳನ್ನು CDM ಯಂತ್ರದಲ್ಲಿ ಡಿಪಾಸಿಟ್ ಮಾಡಬಹುದು. ಸಾಮಾನ್ಯವಾಗಿ ಎಲ್ಲ ಬಗೆಯ ಯಂತ್ರಗಳು ಒಂದೇ ಕಾರ್ಯತಂತ್ರದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. (kannadagoodreturns.in)


Click it and Unblock the Notifications