For Quick Alerts
ALLOW NOTIFICATIONS  
For Daily Alerts

'ಆಧಾರ್ ಪೇಮೆಂಟ್ ಆಪ್' ನಿಮಗೆಷ್ಟು ಗೊತ್ತು?

ನಗದು ರಹಿತ ವ್ಯವಹಾರ ಪ್ರೋತ್ಸಾಹಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಅದಕ್ಕಾಗಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕಾರ್ಯನಿರತವಾಗಿದೆ. ಅದಕ್ಕಾಗಿ ಇನ್ನೊಂದು ಹೊಸ ಸೇರ್ಪಡೆ ಆಧಾರ್ ಪೇಮೆಂಟ್ ಆಪ್.

|

ನಗದು ರಹಿತ ವ್ಯವಹಾರ ಪ್ರೋತ್ಸಾಹಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಅದಕ್ಕಾಗಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕಾರ್ಯನಿರತವಾಗಿದೆ. ಅದಕ್ಕಾಗಿ ಇನ್ನೊಂದು ಹೊಸ ಸೇರ್ಪಡೆ ಆಧಾರ್ ಪೇಮೆಂಟ್ ಆಪ್.

 

ಆಧಾರ್ ಪಾವತಿ ವ್ಯವಸ್ಥೆ ಅಡಿಯಲ್ಲಿ ಆಧಾರ್ ಕಾರ್ಡುದಾರರು ತಮ್ಮ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗಳ ಮುಖಾಂತರ ನಗದು ರಹಿತ ವ್ಯವಹಾರ ಮಾಡಬಹುದು. ಆಧಾರ್ ಕಾರ್ಡುಗಳನ್ನು ಡೆಬಿಟ್/ಕ್ರೆಡಿಟ್ ಕಾರ್ಡುಗಳಾಗಿ ಬಳಸಲು ಆಧಾರ್ ಪೇಮೆಂಟ್ ಸಿಸ್ಟಮ್ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

"ಆಧಾರ್ ಪೇಮೆಂಟ್ ಆಪ್‌" ಮೂಲಕ ಪಡೆಯಬಹುದಾದ ಎಲ್ಲಾ ಸೇವೆಗಳು ಉಚಿತವಾಗಿದ್ದು, ಸರ್ಕಾರಕ್ಕೆ ಸಲ್ಲಿಸಬೇಕಾದ ಎಲ್ಲಾ ಬಿಲ್‌ಗಳನ್ನು ಆಪ್ ಮೂಲಕ ಪಾವತಿಸಬಹುದಾಗಿದೆ. ಈ ಆಪ್ ನ ಕಾರ್ಯನಿರ್ವಹಣೆ, ಪ್ರಯೋಜನ, ಡೌನ್ಲೋಡ್ ಹಾಗೂ ಇತ್ಯಾದಿ ಸೇವೆಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

ಆಧಾರ್ ಪೇಮೆಂಟ್ ಆಪ್ ಹೇಗೆ ಕಾರ್ಯ ನಿರ್ವಹಿಸಲಿದೆ?

ಆಧಾರ್ ಪೇಮೆಂಟ್ ಆಪ್ ಹೇಗೆ ಕಾರ್ಯ ನಿರ್ವಹಿಸಲಿದೆ?

ಆಧಾರ್ ಪೇಮೆಂಟ್ ಆಪ್ ಸ್ಮಾರ್ಟ್ ಫೋನ್ ಗಳಿಗೆ ಡೌನ್ ಲೋಡ್ ಮಾಡಿ, ಈ ಅಪ್ಲಿಕೇಷನ್ ಬಳಸಲು ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಸಂಖ್ಯೆ ಜತೆ ಜೋಡಣೆ ಮಾಡಬೇಕು. ಬೆರಳಚ್ಚು ಬಯೋಮೆಟ್ರಿಕ್ ಸಾಧನವನ್ನು ಜೋಡಿಸಿಕೊಳ್ಳಬೇಕು. ಗ್ರಾಹಕ ತನ್ನ ಆಧಾರ್ ನಂಬರ್ ಆಪ್ ಗೆ ಫೀಡ್ ಮಾಡಿ, ವ್ಯವಹರಿಸುವ ಬ್ಯಾಂಕ್ ಆಯ್ಕೆ ಮಾಡಬೇಕು. ಬಯೋಮೆಟ್ರಿಕ್ ಸ್ಕ್ಯಾನ್ ಪ್ರಮಾಣೀಕೃತ ವ್ಯವಹಾರದ ಪಾಸ್ವರ್ಡ್ ಆಗಿ ಕಾರ್ಯನಿರ್ವಹಿಸುತ್ತದೆ. ಆಧಾರ್ ಪೇಮೆಂಟ್ ಆಪ್ ವ್ಯವಸ್ಥೆಯಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸುವ ಅಗತ್ಯ ಇಲ್ಲ.

ವ್ಯಾಪಾರಿಗಳು ಏನು ಮಾಡಬೇಕು?

ವ್ಯಾಪಾರಿಗಳು ಏನು ಮಾಡಬೇಕು?

ಮಾರಾಟಗಾರರು ಈ ಅಪ್ಲಿಕೇಷನ್(Merchant App) ಬಳಸಬಹುದಾಗಿದೆ. ವ್ಯಾಪಾರಿಗಳು ಈ ಅಪ್ಲಿಕೇಷನ್ ಜತೆಗೆ ಬಯೋಮೆಟ್ರಿಕ್ ಸ್ಕ್ಯಾನರ್ ಕೂಡಾ ಹೊಂದಿರಬೇಕು. ಅಪ್ಲಿಕೇಷನ್ ಹಾಗೂ ಸ್ಕ್ಯಾನರ್ ಎರಡನ್ನು ಹೊಂದಿಸಿದ ಬಳಿಕ ಅಪ್ಲಿಕೇಷನ್ ಸುಲಭವಾಗಿ ಬಳಸಬಹುದಾಗಿದೆ. ಈ ಮೂಲಕ ಮಾಸ್ಟರ್, ವೀಸಾ ಕಾರ್ಡ್ ಮೂಲಕ ಹಣ ಪಾವತಿ ಮಾಡಲು ಕೊಡಬೇಕಿದ್ದ ಶುಲ್ಕಕ್ಕೆ ಕಡಿವಾಣ ಬೀಳಲಿದೆ.

ಗ್ರಾಹಕರು ಏನು ಮಾಡಬೇಕು?
 

ಗ್ರಾಹಕರು ಏನು ಮಾಡಬೇಕು?

ಯಾವುದಾದರೂ ವಸ್ತು ಖರೀದಿ ಮಾಡುವಾಗ ಮಾರಾಟಗಾರರ ಬಳಿ ಆಧಾರ್ ಮರ್ಚೆಂಟ್ ಅಪ್ಲಿಕೇಷನ್ ಇದೆಯೇ ಎಂದು ಪ್ರಶ್ನಿಸಬೇಕು. ಅಪ್ಲಿಕೇಷನ್ ಇದ್ದರೆ, ನಿಮ್ಮ ಆಧಾರ್ ವಿವರಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕು. ನಂತರ ಆಧಾರ್ ಜತೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ ಲಭ್ಯವಾಗುತ್ತದೆ. ಬೇಕಾದ ಬ್ಯಾಂಕ್ ಬಳಸಿ ವ್ಯವಹರಿಸಬೇಕು. ಇದರ ಜತೆಗೆ ಬಯೋಮೆಟ್ರಿಕ್ ಸ್ಕ್ಯಾನರ್ ಮೂಲಕ ವ್ಯವಹಾರವನ್ನು ಸುರಕ್ಷಿತಗೊಳಿಸಲಾಗುತ್ತದೆ.

ಎರಡು ಖಾತೆಗಳಿದ್ದರೆ ಏನು ಮಾಡುವುದು?

ಎರಡು ಖಾತೆಗಳಿದ್ದರೆ ಏನು ಮಾಡುವುದು?

ಗ್ರಾಹಕರು ಒಂದೇ ಬ್ಯಾಂಕಿನಲ್ಲಿ ಎರಡು ಖಾತೆಗಳನ್ನು ಹೊಂದಿದ್ದರೆ, ಎರಡು ಖಾತೆಗಳಿಗೂ ಆಧಾರ್ ಲಿಂಕ್ ಮಾಡಬೇಕಾಗುತ್ತದೆ. ಈ ರೀತಿ ಆಧಾರ್ ಜೋಡಣೆಯುಳ್ಳ ಬ್ಯಾಂಕ್ ಖಾತೆ ಮೂಲಕ ಸುಲಭವಾಗಿ ಯಾವುದೇ ಗ್ರಾಮದಲ್ಲಿ ಬೇಕಾದರೂ ವ್ಯವಹರಿಸಬಹುದು ಎಂದು ಯುಐಎಡಿಐ ತಿಳಿಸಿದೆ.

ಆಪ್ ಪ್ರಯೋಜನಗಳೇನು?

ಆಪ್ ಪ್ರಯೋಜನಗಳೇನು?

* ಸರ್ಕಾರ ಬಿಡುಗಡೆ ಮಾಡಿರುವ ಆಧಾರ್ ಪೇಮೆಂಟ್ ಆಪ್‌ ಪೂರ್ಣ ಉಚಿತವಾಗಿದ್ದು, ಹೆಚ್ಚು ಸೆಕ್ಯೂರ್ ಆಗಿರುತ್ತದೆ.
* ಪೇಮೆಂಟ್ ಗಳ ಮೇಲೆ ಯಾವುದೇ ಸೇವಾ ತೆರಿಗೆ ಅಥವಾ ಹೆಚ್ಚುವರಿ ಶುಲ್ಕ ಇರುವುದಿಲ್ಲ.

* ಆಧಾರ್ ಪೇಮೆಂಟ್ ಆಪ್ ವ್ಯವಸ್ಥೆಯಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸುವ ಅಗತ್ಯ ಇಲ್ಲ.
* ಕಾರ್ಡುಗಳ ಪಾಸ್ವರ್ಡ್ ಸೋರಿಕೆಯಾಗುವ ಭಯವಿಲ್ಲ.

* ವೀಸಾ ಅಥವಾ ಮಾಸ್ಟರ್ ಕಾರ್ಡ್ ಸಂಸ್ಥೆಗಳಿಗೆ ಯಾವುದೇ ಶುಲ್ಕ ಪಾವತಿಯಾಗುವುದಿಲ್ಲ.

"ಆಧಾರ್ ಪೇಮೆಂಟ್ ಆಪ್‌" ಡೌನ್‌ಲೋಡ್ ಹೇಗೆ?

"ಆಧಾರ್ ಪೇಮೆಂಟ್ ಆಪ್‌" ಗೂಗಲ್‌ ಪ್ಲೇಸ್ಟೋರ್‌ನಲ್ಲಿ ನಮಗೆ ಲಭ್ಯವಿರುತ್ತದೆ. ಹಾಗಾಗಿ ಮೊದಲು "ಆಧಾರ್ ಪೇಮೆಂಟ್ ಆಪ್‌" ಡೌನ್‌ಲೋಡ್ ಮಾಡಿಕೊಂಡು ರಿಜಿಸ್ಟರ್ ಆಗಬೇಕು.
ಆಂಡ್ರಾಯ್ಡ್ ಫೋನ್ ನಲ್ಲಿ ಅಪ್ಲಿಕೇಷನ್ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಯುಎಡಿಎಐ, ಭಾರತದ ರಾಷ್ಟ್ರೀಯ ಪಾವತಿ ಸಹಕಾರ ಸಂಘ ಮತ್ತು ಐಡಿಎಫ್​ಸಿ ಬ್ಯಾಂಕ್ ಈ ಅಪ್ಲಿಕೇಷನ್ ರೂಪಿಸಿದೆ.

ನೋಂದಣಿ ಆಗುವುದು ಹೇಗೆ?

ನೋಂದಣಿ ಆಗುವುದು ಹೇಗೆ?

ನೀವು ಆಧಾರ್‌ ಪೇಮೆಂಟ್ ಆಪ್ ಉಪಯೊಗಿಸಲು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಸ್ಮಾರ್ಟ್‌ಫೋನ್ ಮತ್ತು ಆಧಾರ್‌ ಕಾರ್ಡ್‌ ನಂಬರ್ ಹೊಂದಿರಬೇಕು. ನಂತರ ನಿಮ್ಮ ಫಿಂಗರ್‌ಪ್ರಿಂಟ್ ನೀಡಿ ಆಧಾರ್‌ ನಂಬರ್‌ ನಮೂದಿಸಿದರೆ ನಿಮ್ಮ ಆಧಾರ್‌ ಪೇಮೆಂಟ್ ಆಪ್‌ಗೆ ರಿಜಿಸ್ಟರ್ ಆಗಬಹುದು. ಫಿಂಗರ್ಪ್ರಿಂಟ್ ಹೊಂದಾಣಿಕೆಯಾಗಿದ್ದಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ(NPCI) ಪಾವತಿಗಳಿಗೆ ಅನುವು ಮಾಡಿಕೊಡುತ್ತದೆ.

ಕೊನೆ ಮಾತು

ಕೊನೆ ಮಾತು

ಸರ್ಕಾರಿ ಅಧಿಕಾರಿಗಳ ಪ್ರಕಾರ ಈಗಾಗಲೇ 40 ಕೋಟಿ ಆಧಾರ್ ನಂಬರ್ ಗಳನ್ನು ಬ್ಯಾಂಕು ಖಾತೆಗಳಿಗೆ ಲಿಂಕ್ ಮಾಡಲಾಗಿದೆ. 2017ರ ಮಾರ್ಚ್ ಒಳಗಾಗಿ ಎಲ್ಲ ಆಧಾರ್ ಕಾರ್ಡ್ ಗಳನ್ನು ಬ್ಯಾಂಕ್ ಖಾತೆಗೆ ಸಂಪರ್ಕಿಸುವ ಗುರಿ ಹೊಂದಲಾಗಿದೆ.

English summary

Aadhaar Payment App: Here Are Key Things To Know

The Aadhaar Payment App, a banking solution for merchants as well as customers, uses fingerprints as authentication for making transactions. On the basis of that, the money is paid from the Aadhaar-linked bank account.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X