ಪರ್ಸನಲ್ ಲೋನ್ ಪಡೆಯಲು ಬೇಕಾದ ಅರ್ಹತೆ ಮತ್ತು ದಾಖಲೆಗಳೇನು?

ಜೀವನದಲ್ಲಿ ಕೆಲ ಸಂದರ್ಭಗಳಲ್ಲಿ ನಮಗೆ ಗೊತ್ತಿಲ್ಲದೆಯೋ ಅಥವಾ ಆಕಸ್ಮಿಕವಾಗಿಯೋ ಹಣಕಾಸಿನ ಮುಗ್ಗಟ್ಟಿಗೆ ಸಿಲುಕುತ್ತೇವೆ. ಈ ವೇಳೆ ನಮ್ಮ ಸಹಾಯಕ್ಕೆ ಬರುವುದು ಪರ್ಸನಲ್ ಲೋನ್ ಗಳು. ಹಲವಾರು ಸಂದರ್ಭಗಳಲ್ಲಿ ಪರ್ಸನಲ್ ಲೋನ್ ಅಗತ್ಯ ಬೀಳುತ್ತದೆ.

ಜೀವನದಲ್ಲಿ ಕೆಲ ಸಂದರ್ಭಗಳಲ್ಲಿ ನಮಗೆ ಗೊತ್ತಿಲ್ಲದೆಯೋ ಅಥವಾ ಆಕಸ್ಮಿಕವಾಗಿಯೋ ಹಣಕಾಸಿನ ಮುಗ್ಗಟ್ಟಿಗೆ ಸಿಲುಕುತ್ತೇವೆ. ಈ ವೇಳೆ ನಮ್ಮ ಸಹಾಯಕ್ಕೆ ಬರುವುದು ಪರ್ಸನಲ್ ಲೋನ್ ಗಳು. ಹಲವಾರು ಸಂದರ್ಭಗಳಲ್ಲಿ ಪರ್ಸನಲ್ ಲೋನ್ ಅಗತ್ಯ ಬೀಳುತ್ತದೆ. ಈ ವೇಳೆ ನಾವು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕಾದದ್ದು ತುಂಬಾ ಅಗತ್ಯ. ಭಾರತದಲ್ಲಿ ಲಭ್ಯವಿರುವ ಅನೇಕ ವಿಧದ ಸಾಲಗಳು ಯಾವುವು?

ನಿಮ್ಮ ಖರ್ಚು ಆದಾಯವನ್ನು ಮೀರಿದಾಗಲೂ ಪರ್ಸನಲ್ ಲೋನ್ ಬೇಕಾಗುತ್ತದೆ. ಆದರೆ ನಿಮಗೆ ಸಾಲ ಕೊಡುವವರು ಲೆಕ್ಕ ಹಾಕುವುದು ನಿಮ್ಮ ಆದಾಯದ ಮೌಲ್ಯವನ್ನು ಎಂಬುದನ್ನು ಮರೆಯಬೇಡಿ. ನಿಮ್ಮ ಇಎಮ್ ಐ ಅಂದರೆ ಕಂತು ತುಂಬುವ ಶಕ್ತಿಯೂ ಸಾಲ ನೀಡಿಕೆಯಲ್ಲಿ ಪ್ರಮುಖವಾಗುತ್ತದೆ. ಪರ್ಸನಲ್ ಲೋನ್ ಗೆ ಅರ್ಜಿ ಹಾಕುವ ಮುನ್ನ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಮರುಪಾವತಿ ಮಾಡಿರಬೇಕು. 2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು

ಪರ್ಸನಲ್ ಲೋನ್ ವಿವರಗಳು

ಪರ್ಸನಲ್ ಲೋನ್ ವಿವರಗಳು

1. 50 ಸಾವಿರದಿಂದ 25 ಲಕ್ಷ ದವರೆಗೆ ಪರ್ಸನಲ್ ಲೋನ್ ಪಡೆಯಬಹುದು.
2. ಸಾಲದ ಹಣ ಪಡೆಯುವಾಗ ಶೇ.1 ರಿಂದ 4 ರವರೆಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ
3. ಒಂದು ವರ್ಷದಿಂದ 5 ವರ್ಷದ ಅವಧಿಗೆ ಸಾಲ ಪಡೆಯಬಹುದು
4. ತಿಂಗಳ ಕಂತು ಅಥವಾ ಇಎಮ್ಐ ನೀವು ಪಡೆದ ಸಾಲ ಮತ್ತು ಬಡ್ಡಿದರದ ಆಧಾರದಲ್ಲಿ ನಿರ್ಧರಿತವಾಗುವುದು.

ಸಾಲ ಪಡೆಯಲು ಇರಬೇಕಾದ ಅರ್ಹತೆಗಳು

ಸಾಲ ಪಡೆಯಲು ಇರಬೇಕಾದ ಅರ್ಹತೆಗಳು

1. ಸಾಲ ಪಡೆಯಲು ಬಯಸುವವರು ವೇತನ, ಸ್ವಯಂ ಉದ್ಯೋಗ ಅಥವಾ ವ್ಯಾಪಾರದಲ್ಲಿ ತೊಡಗಿರಬೇಕು
2. ವಯಸ್ಸು 22 ರಿಂದ 59 ವರ್ಷದೊಳಗಿರಬೇಕು
3. ಬ್ಯಾಂಕ್ ಖಾತೆ ಹೊಂದಿರಬೇಕು
4. ಹಿಂದಿನ ವ್ಯವಹಾರ ಮತ್ತು ಮರುಪಾವತಿ ದಾಖಲಾತಿ ಉತ್ತಮವಾಗಿದ್ದರೆ ಒಳ್ಳೆಯದು 5. ಕಳೆದ ಮೂರು ತಿಂಗಳಲ್ಲಿ ನೀವು ಸಾಲ ಪಡೆಯಲು ಹೋಗಿ ಬರಿಗೈಯಲ್ಲಿ ಬಂದ ದಾಖಲೆ ಇರಬಾರದು
6. ಪ್ರತಿ ತಿಂಗಳು ಹಣ ಮರುಪಾವತಿ ಮಾಡುವ ಶಕ್ತಿ ಹೊಂದಿರಬೇಕು.

ಸಾಲ ಪಡೆಯಲು ಏನೇನು ಬೇಕು?

ಸಾಲ ಪಡೆಯಲು ಏನೇನು ಬೇಕು?

1. ಪಾಸ್ ಪೋರ್ಟ್ ಸೈಜ್ ಫೋಟೋ
2. ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿ
3. ಕೊನೆಯ ಮೂರು ತಿಂಗಳ ವೇತನ ಪತ್ರ(ಸ್ಯಾಲರಿ ಸ್ಲಿಪ್)
4. ಕೊನೆಯ ಆರು ತಿಂಗಳ ನಿಮ್ಮ ಬ್ಯಾಂಕ್ ವ್ಯವಹಾರದ ದಾಖಲಾತಿ
5. ಗುರುತಿನ ಪತ್ರ(ಯಾವುದಾದರೊಂದು): ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ಚಾಲನಾ ಪರವಾನಗಿ, ಚುನಾವಣಾ ಪತ್ರ, ಸರ್ಕಾರಿ ನೌಕರರಾಗಿದ್ದರೆ ನಿರ್ದಿಷ್ಟ ಇಲಾಖೆಯ ಗುರುತಿನ ಚೀಟಿ.
6. ವಿಳಾಸ ದೃಢೀಕರಣ(ಯಾವುದಾದರೊಂದು): ಆಧಾರ್ ಕಾರ್ಡ್, ಪಾಸ್ ಪೋರ್ಟ್, ಚಾಲನಾ ಪರವಾನಗಿ, ಚುನಾವಣಾ ಪತ್ರ, ರೆಶನ್ ಕಾರ್ಡ್, ಬ್ಯಾಂಕ್ ಸ್ಟೇಟ್ ಮೆಂಟ್, ಬಾಡಿಗೆ ಕರಾರು, ದೂರವಾಣಿ ಬಿಲ್, ವಿದ್ಯುತ್, ನೀರಿನ ಬಿಲ್

ಕೊನೆ ಮಾತು

ಕೊನೆ ಮಾತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+