For Quick Alerts
ALLOW NOTIFICATIONS  
For Daily Alerts

2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು

2017ರ ಹೊಸ ವರ್ಷದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಬಡವರು ಮತ್ತು ಮಧ್ಯಮ ವರ್ಗದವರಿಗಾಗಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡಲು ಬ್ಯಾಂಕುಗಳಿಗೆ ಸೂಚಿಸಿದ್ದರು.

By Siddu
|

2017ರ ಹೊಸ ವರ್ಷದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಬಡವರು ಮತ್ತು ಮಧ್ಯಮ ವರ್ಗದವರಿಗಾಗಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡಲು ಬ್ಯಾಂಕುಗಳಿಗೆ ಸೂಚಿಸಿದ್ದರು.

 

ಅಲ್ಲದೇ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪ್ರಧಾನಮಂತ್ರಿ ಅವಾಸ್ ಯೋಜನೆ ಕೂಡ ಅತಿ ಕಡಿಮೆ ಬಡ್ಡಿದರದಲ್ಲಿ ಮನೆಗಳ ಸೌಲಭ್ಯವನ್ನು ಒದಗಿಸುತ್ತಿದೆ. ಮೋದಿಯವರ ಸೂಚನೆ ಮೇರೆಗೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಹಲವಾರು ಬ್ಯಾಂಕುಗಳು ಸಾಲದ ದರಗಳನ್ನು ಕಡಿತಗೊಳಿಸಿವೆ.

ಗೃಹಸಾಲದ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿರುವ ಪ್ರಮುಖ ಬ್ಯಾಂಕುಗಳ ವಿವರ ಇಲ್ಲಿ ನೀಡಲಾಗಿದೆ.

1. ಎಸ್ಬಿಐ(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ)

1. ಎಸ್ಬಿಐ(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ)

ಸರ್ಕಾರಿ ಸ್ವಾಮ್ಯದ ಭಾರತದ ಅತಿದೊಡ್ಡ ಬ್ಯಾಂಕು ಆಗಿರುವ ಎಸ್ಬಿಐ ತನ್ನ ಗೃಹಸಾಲದ ದರಗಳನ್ನು ಕಡಿತಗೊಳಿಸಿದೆ. ಎಸ್ಬಿಐ ಒಂದು ವರ್ಷಕ್ಕೆ 90 ಬೇಸ್ ಪಾಯಿಂಟ್ ಕಡಿತಗೊಳಿಸಿದೆ. ಅಂದರೆ ಇದು ಶೇ. 9.1 ರಿಂದ 8.65ಕ್ಕೆ ತನ್ನ ದರವನ್ನು ಕಡಿತಗೊಳಿಸಿದೆ. ಮಹಿಳಾ ಸಾಲಗಾರರಿಗೆ ಶೇ. 8.6ರಷ್ಟು ಬಡ್ಡಿದರ ಇದೆ.

2. ಎಚ್ಡಿಎಫ್ಸಿ(HDFC)

2. ಎಚ್ಡಿಎಫ್ಸಿ(HDFC)

ಎಚ್ಡಿಎಫ್ಸಿ 0.45ರಷ್ಟು ಗೃಹಸಾಲದ ದರವನ್ನು ಕಡಿತಗೊಳಿಸಿದೆ. ವಾರ್ಷಿಕವಾಗಿ ರೂ. 75 ಲಕ್ಷದವರೆಗಿನ ಗೃಹಸಾಲಕ್ಕೆ ಶೇ. 8.7ರಷ್ಟು ಆಕರ್ಷಕ ಬಡ್ಡಿದರ ಇದ್ದು, ಇದಕ್ಕಿಂತಲೂ ಹೆಚ್ಚಿನ ಮಟ್ಟದ ಮೊತ್ತಕ್ಕೆ ಶೇ. 8.75ರಷ್ಟು ಬಡ್ಡಿದರವಿದೆ. ಎಂಸಿಎಲ್ಆರ್(marginal cost of lending rate) ಶೇ.0.9ರಷ್ಟು ಕಡಿತಗೊಳಿಸಿದೆ. ಮಹಿಳಾ ಸಾಲಗಾರರು ಬಡ್ಡಿದರದ ಮೇಲೆ ಶೇ. 0.05ರಷ್ಟು ಡಿಸ್ಕೌಂಟ್ ಪಡೆಯಲಿದ್ದಾರೆ.
ಸ್ಥಿರ ಠೇವಣಿ ಬಡ್ಡಿದರ ಶೇ. 7 ರಿಂದ 6.75ಕ್ಕೆ ಇಳಿದಿದೆ. ಮೂರು ವರ್ಷ ಒಂದು ದಿನದಿಂದ ಐದು ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 6.75 ರಿಂದ 6.5ಕ್ಕೆ ಕಡಿತ ಮಾಡಲಾಗಿದೆ.

3. ಐಸಿಐಸಿಐ
 

3. ಐಸಿಐಸಿಐ

ಐಸಿಐಸಿಐ ಗೃಹಸಾಲದ ದರವನ್ನು 45 ಬೇಸ್ ಪಾಯಿಂಟ್ ಕಡಿತಗೊಳಿಸಿದ್ದು, ಶೇ. 9.1 ರಿಂದ 8.65ಕ್ಕೆ ಬಡ್ಡಿದರ ಇಳಿಸಿದೆ. ಎಂಸಿಎಲ್ಆರ್ ದರವನ್ನು 70 ಬೇಸ್ ಪಾಯಿಂಟ್ ಇಳಿಸಿದ್ದು, ಶೇ. 8.9 ರಿಂದ 8.2ಕ್ಕೆ ಕಡಿತಗೊಳಿಸಿದೆ.
ಐಸಿಐಸಿಐ ಬ್ಯಾಂಕು 390 ದಿನಗಳಿಂದ 2 ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 0.20 ಬಡ್ಡಿದರ ಕಡಿತಗೊಳಿಸಿದ್ದು, ಈಗಾಗಲೇ ಜಾರಿಯಾಗಿದೆ. ಐಸಿಐಸಿಐ ಠೇವಣಿಗಳ ಮೇಲೆ ಶೇ. 7.25 ರಿಂದ 7.10ಕ್ಕೆ ಬಡ್ಡಿದರ ಇಳಿಸಿದೆ.

4. ಎಕ್ಸಿಸ್ ಬ್ಯಾಂಕ್

4. ಎಕ್ಸಿಸ್ ಬ್ಯಾಂಕ್

ಎಕ್ಸಿಸ್ ಬ್ಯಾಂಕ್ ಎಂಸಿಎಲ್ಆರ್(marginal cost of lending rate) ದರವನ್ನು 65-70 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ. ಒಂದು ವರ್ಷದ ಅವಧಿಗೆ ಬ್ಯಾಂಕ್ ಎಂಸಿಎಲ್ಆರ್ ಶೇ. 8.25 ಇರಲಿದೆ. ಇದು ಜನೆವರಿ 18, 2017ರಿಂದ ಜಾರಿ ಬಂದಿದೆ.

5. ಸಿಟಿ ಬ್ಯಾಂಕ್

5. ಸಿಟಿ ಬ್ಯಾಂಕ್

ಸಿಟಿ ಬ್ಯಾಂಕ್ ಗೃಹಸಾಲದ ಬಡ್ಡಿದರವನ್ನು ಶೇ. 9.50 ರಿಂದ 8.80ಕ್ಕೆ ಇಳಿಸಿದ್ದು, ಜನೆವರಿ 9, 2017ರಿಂದ ಜಾರಿಯಾಗಿದೆ.

6. ಬ್ಯಾಂಕ್ ಆಫ್ ಬರೋಡಾ

6. ಬ್ಯಾಂಕ್ ಆಫ್ ಬರೋಡಾ

ಬರೋಡಾ ಬ್ಯಾಂಕ್ ತನ್ನ ಅನೇಕ ಅವಧಿಗಳ ಮೇಲಿನ ಎಂಸಿಎಲ್ಆರ್ ದರವನ್ನು 75 ಬೇಸ್ ಪಾಯಿಂಟ್ ಇಳಿಸಿದೆ.
ಈ ಹೊಸ ದರ ಜನೆವರಿ 7, 2017ರಿಂದ ಜಾರಿಯಾಗಿದ್ದು, ಹೊಸ ಮತ್ತು ನವೀಕೃತ ಎಲ್ಲ ಖಾತೆಗಳಿಗೂ ಅನ್ವಯವಾಗಲಿದೆ. ಎಂಸಿಎಲ್ಆರ್ ದರವನ್ನು ಶೇ. 8.80 ರಿಂದ 8.10ಕ್ಕೆ ಕಡಿತ ಮಾಡಲಾಗಿದೆ.

7. ಯೂನಿಯನ್ ಬ್ಯಾಂಕ್ ಆಫ್ ಇಂಡಿಯ

7. ಯೂನಿಯನ್ ಬ್ಯಾಂಕ್ ಆಫ್ ಇಂಡಿಯ

ಯೂನಿಯನ್ ಬ್ಯಾಂಕ್ ತನ್ನ ವಿವಿಧ ಅವಧಿಗಳ ಸಾಲದ ದರವನ್ನು ಶೇ. 0.90 ರಿಂದ 0.60ಕ್ಕೆ ಇಳಿಸಿದೆ. ಇದು ಜನೆವರಿ 6, 2017ರಿಂದ ಕಾರ್ಯರೂಪಕ್ಕೆ ಬಂದಿದೆ.

8. ಕೊಟಕ್ ಬ್ಯಾಂಕ್

8. ಕೊಟಕ್ ಬ್ಯಾಂಕ್

ಕೊಟಕ್ ಬ್ಯಾಂಕ್ ಎಂಸಿಎಲ್ಆರ್ ದರವನ್ನು ಶೇ. 0.45 ರಿಂದ 0.20ಕ್ಕೆ ಇಳಿಸಿದ್ದು, ಇದು ಬೇರೆ ಬೇರೆ ಅವಧಿಯ ಸಾಲಗಳಿಗೆ ಅನ್ವಯವಾಗಲಿದೆ. ಇದು ಜನೆವರಿ 1, 2017ರಿಂದ ಜಾರಿಯಾಗಿದೆ.

9. ದೇನಾ ಬ್ಯಾಂಕ್

9. ದೇನಾ ಬ್ಯಾಂಕ್

ದೇನಾ ಬ್ಯಾಂಕ್ ತನ್ನ ಒಂದು ವರ್ಷದ ಅವಧಿಯ ಮೇಲಿನ ಸಾಲದ ದರವನ್ನು ಶೇ. 0.75 ಕಡಿತ ಮಾಡಲಾಗಿದ್ದು, ಶೇ. 8.55ರಷ್ಟಿದೆ.

10. ಕೆನರಾ ಬ್ಯಾಂಕ್

10. ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್ ಒಂದು ವರ್ಷದ ಮೇಲೆ ಎಂಸಿಎಲ್ಆರ್ ದರವನ್ನು ಶೇ. 9.15 ರಿಂದ 8.45ಕ್ಕೆ ಕಡಿತ ಮಾಡಿದೆ.

11. ಬ್ಯಾಂಕ್ ಆಫ್ ಇಂಡಿಯ

11. ಬ್ಯಾಂಕ್ ಆಫ್ ಇಂಡಿಯ

ಬ್ಯಾಂಕ್ ಆಫ್ ಇಂಡಿಯ ಕೂಡ ಸಾಲದ ಮೇಲಿನ ಎಂಸಿಎಲ್ಆರ್ ದರವನ್ನು 90 ಬೇಸಿಸ್ ಪಾಯಿಂಟ್ ಇಳಿಸಿದ್ದು, ಜನೆವರಿ 7, 2017ರಿಂದ ಜಾರಿಯಾಗಿದೆ.

English summary

2017: These Banks have reduced Home Loan rates

On the New Year eve, Prime Minister Narendra Modi urged lenders to broaden their focus to the vast range of poorly served borrowers from the poor to the middle class. A day after both public and private banks started slashing their lending rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X