For Quick Alerts
ALLOW NOTIFICATIONS  
For Daily Alerts

ಕ್ಯಾನ್ಸಲ್ಡ್ ಚೆಕ್(Cancelled Cheque) ಯಾವಾಗೆಲ್ಲ ಬೇಕು?

ದೈನಂದಿನ ಜೀವನದಲ್ಲಿ ಕ್ಯಾನ್ಸಲ್ಡ್ ಚೆಕ್ ಗಳು ಕೂಡ ಹಲವಾರು ಉದ್ದೇಶಗಳ ಈಡೇರಿಕೆಗೆ ನೆರವಾಗುತ್ತದೆ. ಅವಧಿ ಮೀರಿದ ಅಥವಾ ಕ್ಯಾನ್ಸಲ್ ಆದ ಚೆಕ್ ಗಳು ಕೆಲವೊಂದು ಹಣಕಾಸು ಸಂಬಂಧಿ ಉಪಯೋಗಕ್ಕೆ ಬೇಕಾಗುತ್ತವೆ.

By Siddu
|

ಕ್ಯಾನ್ಸಲ್ಡ್ ಚೆಕ್ ಗಳ ಬಗ್ಗೆ ಪ್ರತಿಯೊಬ್ಬರೂ ಕೇಳಿರುತ್ತಾರೆ. ದೈನಂದಿನ ಜೀವನದಲ್ಲಿ ಕ್ಯಾನ್ಸಲ್ಡ್ ಚೆಕ್ ಗಳು ಕೂಡ ಹಲವಾರು ಉದ್ದೇಶಗಳ ಈಡೇರಿಕೆಗೆ ನೆರವಾಗುತ್ತದೆ. ಅವಧಿ ಮೀರಿದ ಅಥವಾ ಕ್ಯಾನ್ಸಲ್ ಆದ ಚೆಕ್ ಗಳು ಕೆಲವೊಂದು ಹಣಕಾಸು ಸಂಬಂಧಿ ಉಪಯೋಗಕ್ಕೆ ಬೇಕಾಗುತ್ತವೆ. ಇದು ಯಾವ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ತಿಳಿಯೋಣ... ನಿಲ್ಲಿ... ಚೆಕ್ ಬರೆಯುವ ಮುನ್ನ ಇಲ್ಲೊಮ್ಮೆ ನೋಡಿ

ಏನಿದು?

ಏನಿದು?

ಕ್ಯಾನ್ಸಲ್ ಆದ ಚೆಕ್ ಅಂದರೆ ಮತ್ತೇನೂ ಅಲ್ಲ. ಚೆಕ್ ಮೇಲೆ ಉದ್ದಕ್ಕೆ 'Cancelled' ಎಂದು ಬರೆದು ಗೆರೆ ಎಳೆಯಲಾಗಿರುತ್ತದೆ. ಇದನ್ನೇ ಚೆಕ್ ಕ್ಯಾನ್ಸಲ್ಡ್ ಎನ್ನಲಾಗುತ್ತದೆ.

ಯಾಕೆ ಬೇಕು?

ಯಾಕೆ ಬೇಕು?

ಈ ಬಗೆಯ ಕ್ಯಾನ್ಸಲ್ಡ್ ಚೆಕ್ ಗಳು ದುರುಪಯೋಗವಾಗುವ ಸಂಭವ ತುಂಬಾ ಕಡಿಮೆ. ಅದಾಗ್ಯೂ, ಕ್ಯಾನ್ಸಲ್ ಆಗಿರುವ ಚೆಕ್ ಮೂಲಕ ಖಾತೆ ಸಂಖ್ಯೆ, ಹೆಸರು, ಎಮ್ ಐಸಿಆರ್ ಕೋಡ್, ಐಎಫ್ಎಸ್ ಸಿ ಕೋಡ್ ಮಾತ್ರ ತಿಳಿಯಲು ಸಾಧ್ಯ. ಇದನ್ನು ದುರುಪಯೋಗಪಡಿಸಲು ಸಾದ್ಯ ಇಲ್ಲದೆ ಇರುವುದರಿಂದ ಯಾವುದೇ ಭಯವಿಲ್ಲ. ಒಂದು ವೇಳೆ ಆರ್ ಟಿ ಜಿಎಸ್ ಉದ್ದೇಶಕ್ಕೆ ಬಳಸುವುದಾದರೆ ಸಕಲ ದಾಖಲೆಗಳನ್ನು ನೀಡಬೇಕಾಗುತ್ತದೆ.

ಕ್ಯಾನ್ಸಲ್ ಆಗಿರುವ ಚೆಕ್ ಗಳು ಕೆಲವೊಂದು ವಾಣಿಜ್ಯ ಉದ್ದೇಶಗಳಿಗೆ ಬೇಕಾಗುತ್ತವೆ. ಅವು ಯಾವವು ಎಂಬುದನ್ನು ನೋಡೋಣ...

1. ಗ್ರಾಹಕರ ಗುರುತಿಗೆ(ಕೆವೈಸಿ)
 

1. ಗ್ರಾಹಕರ ಗುರುತಿಗೆ(ಕೆವೈಸಿ)

ಇತ್ತಿಚಿನ ದಿನಗಳಲ್ಲಿ ಮ್ಯೂಚುವಲ್ ಫಂಡ್ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡುವಾಗ Know your customer(ಕೆವೈಸಿ), ನಿಮ್ಮ ಗ್ರಾಕ ಗುರುತಿಸಿ ಭರ್ತಿ ಮಾಡುವುದು ಅತ್ಯಗತ್ಯ. ಆಗ ಈ ಕ್ಯಾನ್ಸಲ್ಡ್ ಚೆಕ್ ಗಳು ನೆರವಿಗೆ ಬರುತ್ತವೆ.

2. ಗಣಕೀಕೃತ ಸೇವೆಗಳು(ಇಸಿಎಸ್)

2. ಗಣಕೀಕೃತ ಸೇವೆಗಳು(ಇಸಿಎಸ್)

ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಹೂಡಿಕೆ ವೇಳೆ ಲಾಭ ತರುವುದು. ಇಸಿಎಸ್ ನಿಮ್ಮ ಖಾತೆಗಳಿಂದ ಪ್ರತಿ ತಿಂಗಳು ಹಣವನ್ನು ಕಡಿತಗೊಳಿಸುವಾಗ ಇಸಿಸ್ ಅಗತ್ಯವಿರುತ್ತದೆ. ಆಗ ರದ್ದುಗೊಂಡ ಚೆಕ್ ಬಳಸಬೇಕಾಗುತ್ತದೆ. ECS ಮ್ಯೂಚುವಲ್ ಫಂಡ್ ಗಳಿಗಾಗಿ ಹೆಚ್ಚು ಪ್ರಸಿದ್ದಿ ಪಡೆದಿದೆ.

3. ಮಾಸಿಕ ಕಂತು(EMI)

3. ಮಾಸಿಕ ಕಂತು(EMI)

ಬ್ಯಾಂಕ್ ಗಳು ಕೊಡಮಾಡುವ ಹಲವು ವಿಧದ ಸಾಲಗಳು ಅಂದರೆ ಶಿಕ್ಷಣ, ಗೃಹ, ಕಾರು ಸಾಲಗಳ ಇಎಂಐ ಪಾವತಿ ಮಾಡಬೇಕಾಗುತ್ತದೆ. ಇಂತಹ ಸಂದರ್ಭಗಳಲಲ್ಇ ಬ್ಯಾಂಕು/ಕಂಪನಿಗಳಿಗೆ ಕ್ಯಾನ್ಸಲ್ಡ್ ಚೆಕ್ ಗಳು ಬೇಕಾಗುತ್ತದೆ.

4. ವಿಮಾ ಯೋಜನೆಗಳು

4. ವಿಮಾ ಯೋಜನೆಗಳು

ನೀವು ಹೊಸ ವಿಮಾ ಯೋಜನೆ ಆರಂಭಿಸಬೇಕೆಂದು ಅಪೇಕ್ಷೆ ಪಟ್ಟಾಗಲೂ ಕ್ಯಾನ್ಸಲ್ಡ್ ಚೆಕ್ ಗಳು ನೆರವಿಗೆ ಬರುತ್ತವೆ. ಎಂಡೊವ್ಮೆಂಟ್, ಟರ್ಮ್, ಮನಿ ಬ್ಯಾಕ್, ಆರೋಗ್ಯ ವಿಮಾ ಸೌಲಭ್ಯ ಪಡೆಯುವಾಗ ಸಂಸ್ಥೆ ಅಥವಾ ಏಜೆಂಟ್ ಗೆ ಕ್ನ್ಸಲ್ಡ್ ಚೆಕ್ ನೀಡಬೇಕಾಗುತ್ತದೆ.

5. ಡಿಮ್ಯಾಟ್ ಖಾತೆ ತೆರೆಯಲು

5. ಡಿಮ್ಯಾಟ್ ಖಾತೆ ತೆರೆಯಲು

ಹೊಸದಾಗಿ ಡಿಮ್ಯಾಟ್ ಖಾತೆ ತೆರೆದು ಷೇರುಗಳಲ್ಲಿ ಹೂಡಿಕೆ ಮಾಡಲು ಬಯಸುವವರು ಕ್ಯಾನ್ಸಲ್ಡ್ ಚೆಕ್ ಒದಗಿಸಬೇಕಾಗುತ್ತದೆ. ಡಿಮ್ಯಾಟ್ ಖಾತೆ ಫಾರ್ಮ್, ಗುರುತಿನ ದಾಖಲಾತಿ, ವಿಳಾಸ ದಾಖಲೆಗಳೊಂದಿಗೆ ಕ್ಯಾನ್ಸಲ್ಡ್ ಚೆಕ್ ಹಾಜರು ಪಡಿಸಿದರೆ ವ್ಯವಹಾರ ಸುಲಭ.

6. ಇಪಿಎಫ್ ವಿತ್ ಡ್ರಾ

6. ಇಪಿಎಫ್ ವಿತ್ ಡ್ರಾ

ನಿಮ್ಮ ಪಿಎಫ್ ಖಾತೆಯಿಂದ ಹಣ ವಿತ್ ಡ್ರಾವಲ್ ಮಾಡುವಾಗ ಕ್ಯಾನ್ಸಲ್ಡ್ ಚೆಕ್ ಬೇಕಾಗುತ್ತದೆ. ಇದನ್ನು ನೀವು ಉದ್ಯೋಗದಾತ ಸಂಸ್ಥೆ ಅಥವಾ ಇಪಿಎಫ್ಒ ಗೆ ಒದಗಿಸಬೇಕಾಗುತ್ತದೆ. ಇದರಿಂದ ಅವರಿಗೆ ನಿಮ್ಮ ಖಾತೆ ವಿವರ ಸಂಪೂರ್ಣವಾಗಿ ದೃಢೀಕರಿಸಲು ಸಹಕಾರಿಯಾಗುತ್ತದೆ.

7. ಬ್ಯಾಂಕ್ ಖಾತೆ ತೆರೆಯಲು

7. ಬ್ಯಾಂಕ್ ಖಾತೆ ತೆರೆಯಲು

ಉಳಿತಾಯ ಅಥವಾ ಚಾಲ್ತಿ ಖಾತೆ ತೆರೆಯುವಾಗ ಬ್ಯಾಂಕಿಗೆ ಕ್ಯಾನ್ಸಲ್ಡ್ ಚೆಕ್ ನೀಡಬೇಕಾಗಬಹುದು. ಹೀಗಾಗಿ ಖಾತೆ ತೆರೆಯುವ ಪ್ರಕ್ರಿಯೆ ಪೂರ್ಣಗೊಳಿಸಲು ಈ ಚೆಕ್ ನೀಡಬೇಕಾಗುತ್ತದೆ.

ಕೊನೆಮಾತು

ಕೊನೆಮಾತು

ಆದರೆ ಪ್ರತಿಯೊಬ್ಬರೂ ಕ್ಯಾನ್ಸಲ್ಡ್ ಚೆಕ್ ಗಳ ಕುರಿತಾಗಿ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ. ಇದನ್ನು ಬಳಸಿ ಯಾರೂ ನಿಮ್ಮ ಖಾತೆಯಿಂದ ಹಣ ತೆಗೆಯಲೂ ಸಾಧ್ಯವಿಲ್ಲವಾದರೂ ನಿಮ್ಮ ಖಾತೆಯ ಕೆಲ ಮಾಹಿತಿ ಪಡೆದುಕೊಳ್ಳಬಹುದು.

English summary

What are the uses of cancelled cheques?

A cancelled cheque is one which is crossed and the word "Cancelled" is written on it. Except this, nothing else needs to be written on the cheque.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X