ಮ್ಯೂಚುವಲ್ ಫಂಡ್ ಈಕ್ವಿಟಿ ಯೋಜನೆಗಳು ಎಷ್ಟೊಂದು ಪ್ರಯೋಜನಕಾರಿ ಗೊತ್ತೆ? 3 ಲಾಭದಾಯಕ ಅಂಶ

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಹೂಡಿಕೆದಾರರು ಬ್ಯಾಂಕಿನ ಸ್ಥಿರ ಠೇವಣಿಗಳ ಮೂಲಕ ಹೆಚ್ಚಿನ ಆದಾಯವನ್ನು ಪಡೆಯಲು ಮ್ಯೂಚುವಲ್ ಫಂಡ್ ಗಳ ಈಕ್ವಿಟಿ ಉಳಿತಾಯ ಯೋಜನೆಗಳಲ್ಲಿ ಕೆಲವೊಂದು ರಿಸ್ಕ್ ಇದ್ದರೂ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಸ್ಥಿರ ಆದಾಯದ ಮೂಲಗಳಲ್ಲಿ ಮೂರನೆ ಒಂದು ಭಾಗವನ್ನು, ಈಕ್ವಿಟಿ ಸಂಬಂಧಿತ ಸಲಕರಣೆಗಳಲ್ಲಿ ಮೂರನೆ ಒಂದು ಭಾಗವನ್ನು ಮತ್ತು ಮಧ್ಯಸ್ಥಿಕೆಯಲ್ಲಿ ಉಳಿದದ್ದನ್ನು ಹೂಡಿಕೆ ಮಾಡಬಹುದು. ಇದನ್ನು ಈಕ್ವಿಟಿ ಫಂಡ್ ಎಂದು ಪರಿಗಣಿಸಲಾಗುತ್ತದೆ.

  ಪರಿಣಿತರು ಹೇಳುವ ಪ್ರಕಾರ ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇಡುವ ಸಂಪ್ರದಾಯವಾದಿ ಹೂಡಿಕೆದಾರರು ಈ ಇಕ್ವಿಟಿ ಉಳಿತಾಯ ನಿಧಿಯನ್ನು ನೋಡಬೇಕು. ಏಕೆಂದರೆ ಇವು ಪರಿಣಾಮಕಾರಿ ತೆರಿಗೆ ಮತ್ತು ಹೆಚ್ಚಿನ ಪೂರ್ವ ತೆರಿಗೆ ರಿಟರ್ನ್ ನೀಡುತ್ತವೆ. ಇದು ಅಲ್ಪ ಪ್ರಮಾಣದ ರಿಸ್ಕ್ ತೆಗೆದುಕೊಳ್ಳುವ ಹೂಡಿಕೆದಾರರಿಗೆ ಸರಾಸರಿ ಮತ್ತು ದೀರ್ಘಾಕಾಲೀನ ಹೂಡಿಕೆ ಉದ್ದೇಶಗಳಿಗೆ ಸೂಕ್ತವಾಗಿದೆ. ಮ್ಯೂಚುವಲ್ ಫಂಡ್ಸ್ ವಿಧಗಳು ಯಾವುವು?

  ಸಮತೋಲಿತ ನಿಧಿಗಿಂತ ಇದು ಕಡಿಮೆ ರಿಸ್ಕ್ ಉಳ್ಳದ್ದಾಗಿದೆ. ಇದರಲ್ಲಿ ಮೂರನೆ ಒಂದು ಭಾಗವನ್ನು ಮಾತ್ರ ಇಕ್ವಿಟಿಯಲ್ಲಿ ಹೂಡಿಕೆ ಮಾಡಲಾಗುತ್ತದೆ. 2014 ರ ಯೂನಿಯನ್ ಬಜೆಟ್ ನಂತರ ಸರ್ಕಾರ ಋಣಭಾರ ಮ್ಯೂಚುವಲ್ ಫಂಡ್ ಹೊಲ್ಡಿಂಗ್ ಅವಧಿಯನ್ನು ಒಂದು ವರ್ಷದಿಂದ ಮೂರು ವರ್ಷಗಳವರಗೆ ಹೆಚ್ಚಿಸಿದ್ದು, ದೀರ್ಘಕಾಲೀನ ಬಂಡವಾಳದ ಆಸ್ತಿಗೆ ಅರ್ಹತೆ ಪಡೆಯಲು ಈಕ್ವಿಟಿ ಉಳಿತಾಯ ನಿಧಿಗಳು ಜನಪ್ರಿಯವಾಯಿತು.

  ಪರಿಣಾಮಕಾರಿ ತೆರಿಗೆ ಹೂಡಿಕೆ

  ರಿಸ್ಕ್ ತೆಗೆದುಕೊಳ್ಳಲು ಇಚ್ಚಿಸದ ಹೂಡಿಕೆದಾರರಿಗೆ ಈಕ್ವಿಟಿ ಉಳಿತಾಯ ನಿಧಿಯು ತೆರಿಗೆ ವಿಷಯದಲ್ಲಿ ಪ್ರಯೋಜನಗಳನ್ನು ಹೊಂದಿದೆ. ಠೇವಣಿಗಳ ಮೇಲಿನ ಬಡ್ಡಿಗೆ ಕನಿಷ್ಟ ದರದಲ್ಲಿ ತೆರಿಗೆಯನ್ನು ವಿಧಿಸಲಾಗುತ್ತದೆ. ಅಲ್ಲದೆ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಈಕ್ವಿಟಿ ಉಳಿತಾಯ ನಿಧಿಯ ಬಡ್ಡಿಯ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಅದಾಗ್ಯೂ ಉಳಿತಾಯ ನಿಧಿಯನ್ನು ಒಂದು ವರ್ಷಕ್ಕಿಂತ ಮೊದಲೇ ಹಿಂಪಡೆದಲ್ಲಿ ಹೂಡಿಕೆದಾರರು ಅಲ್ಪಾವಧಿ ಬಂಡವಾಳ ಲಾಭದ ಶೇ. 15 ರಷ್ಟನ್ನು ತೆರಿಗೆಯಾಗಿ ಪಾವತಿ ಮಾಡಬೇಕು. ಇದಲ್ಲದೆ ಹೂಡಿಕೆದಾರರು ಶುದ್ದ ಸಾಲ ನಿಧಿಗಳಲ್ಲಿ ಬಂಡವಾಳ ಹೂಡಲು ಬಯಸಿದರೆ ಅದು ಅಲ್ಪ ಮತ್ತು ದೀರ್ಘಕಾಲೀನ ಎರಡು ರೀತಿಯ ಬಂಡವಾಳ ಲಾಭಗಳನ್ನು ಆಕರ್ಷಿಸುತ್ತದೆ. ಹೂಡಿಕೆದಾರರ ಒಟ್ಟು ಆದಾಯಕ್ಕೆ ಅಲ್ಪಾವಧಿಯ ಲಾಭಗಳನ್ನು ಸೇರಿಸಿ, ಸ್ಲಾಬ್ ಪ್ರಕಾರ ತೆರಿಗೆಯನ್ನು ವಿಧಿಸಲಾಗುತ್ತದೆ. ಅಲ್ಲದೆ ದೀರ್ಘಾವಧಿಯ ಬಂಡವಾಳದ ಲಾಭಗಳ ಮೇಲೆ ಮೂರು ವರ್ಷಗಳ ನಂತರ ಶೇ. 20ರಷ್ಟು ಸೂಚ್ಯಂಕದೊಂದಿಗೆ ತೆರಿಗೆಯನ್ನು ವಿಧಿಸಲಾಗುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಋಣಭಾರ ಆಧಾರಿತ ಯೋಜನೆಗಳಂತಹ ಮಾಸಿಕ ಆದಾಯ ಯೋಜನೆ, ಬ್ಯಾಂಕ್ ಮತ್ತು ಅಂಚೆ ಕಛೇರಿಯಲ್ಲಿನ ಸ್ಥಿರ ಹೂಡಿಕೆಗಳ ಮೇಲೆ ಅದೇ ತೆರಿಗೆಯನ್ನು ಹೊಂದಿರುತ್ತದೆ.
  ಮಧ್ಯಸ್ಥಿಕೆ ಹಂಚಿಕೆ ಸ್ಥಿರ ಆದಾಯವನ್ನು ಪಡೆಯಲು ಮತ್ತು ಈಕ್ವಿಟಿ ನಿಧಿಯಾಗಿ ತೆರಿಗೆಗೆ ಸಹಾಯ ಮಾಡುತ್ತದೆ. ಮದ್ಯಸ್ಥಿಕೆಗೆ ಸಂಬಂಧಿಸಿದಂತೆ ಸ್ವತ್ತು ನಿರ್ವಹಣಾ ಕಂಪನಿಗಳು ಕಡಿಮೆ ರಿಸ್ಕ್ ಲಾಭವನ್ನು ಸೃಷ್ಟಿಸಲು ಪರಿಣತಿಯನ್ನು ಹೊಂದಿವೆ. ವಾಸ್ತವವಾಗಿ ಶೇ. 10 ನಿವ್ವಳ ತೆರಿಗೆ ರಿಟರ್ನ್ ಮತ್ತು ಶೇ. 50 ಇಕ್ವಿಟಿ ಪೋರ್ಟ್‍ಫೋಲಿಯೋಗಿಂತ, ಶೇ. 6 ಪೂರ್ವ ತೆರಿಗೆ ರಿಟರ್ನ್ ಗಿಂತ ಶೇ. 15 ರಿಟರ್ನ್ ಮತ್ತು ಶೇ. 50 ಸಾಲ ನಿಧಿ ಉತ್ತಮವಾಗಿರುತ್ತದೆ. ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?

  ಈಕ್ವಿಟಿ ಫಂಡ್ ಗಳಿಗಿಂತ ಕಡಿಮೆ ಸ್ಥಿರತೆ

  ಇಕ್ವಿಟಿ ಉಳಿತಾಯ ನಿಧಿಗಳು ಕಡಿಮೆ ಸ್ಥಿರತೆಯನ್ನು ಹೊಂದಿದೆ. ಏಕೆಂದರೆ ಸಮೂಹದ ಹೆಚ್ಚಿನ ಭಾಗವನ್ನು ಸಾಲ ಮತ್ತು ಹೂಡಿಕೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಅದು ಆದಾಯವನ್ನು ಸ್ಥಿರಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ, ಅಸ್ಥಿರತೆಯನ್ನು ಕಡಿಮೆ ಮಾಡಲು ಮತ್ತು ಬಂಡವಾಳವನ್ನು ರಕ್ಷಿಸಲು ನಿಧಿ ಉತ್ಪನ್ನ ತಂತ್ರಗಳನ್ನು ಬಳಸಲಾಗುತ್ತದೆ. ನಿಧಿಯ ಮಧ್ಯಸ್ಥಿಕೆಯ ಭಾಗವು ಮಾರುಕಟ್ಟೆಯ ವಿಭಿನ್ನ ಭಾಗಗಳಲ್ಲಿರುವ ಸೆಕ್ಯೂರಿಟಿಗಳಲ್ಲಿನ ಬೆಲೆ ವ್ಯತ್ಯಾಸವನ್ನು ನೋಡುತ್ತದೆ. ಆದಾಯದ ಸ್ಥಿರತೆ ಹೊಂದುವವರಿಗೆ ಈ ಇಕ್ವಿಟಿ ಉಳಿತಾಯ ನಿಧಿ ಸೂಕ್ತವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಅದಾಗ್ಯೂ ಕೆಲವು ರಿಸ್ಕ್ ಜೊತೆಗೆ ಹೆಚ್ಚಿನ ಆದಾಯವನ್ನು ಬಯಸುವವರು ಶುದ್ದ ಇಕ್ವಿಟಿ ಫಂಡುಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿ ಉಳಿತಾಯ ನಿಧಿಯಲ್ಲಿ ಮೂರು ಪ್ರಯೋಜನಗಳಿವೆ. ಅವುಗಳೆಂದರೆ- ದಕ್ಷತೆಯ ಬೆಳೆವಣಿಗೆ ಸಾಮರ್ಥ್ಯ, ಆದಾಯದ ಅವಕಾಶಗಳು ಮತ್ತು ತೆರಿಗೆ.
  ನಿಯಮಿತ ಆದಾಯ ಮತ್ತು ಮಧ್ಯಮ ಮಾರುಕಟ್ಟೆ ಚಂಚಲತೆ ಜೊತೆಗೆ ಬಂಡವಾಳ ಮೆಚ್ಚುಗೆ ಸಂಭಾವ್ಯತೆಯನ್ನು ಸಂಯೋಜಿಸುವವರಿಗೆ ಇದು ಸೂಕ್ತವಾಗಿದೆ. ಹೂಡಿಕೆದಾರರು ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಇಕ್ವಿಟಿ ಉಳಿತಾಯ ಫಂಡನ್ನು ಇಟ್ಟಿರಬೇಕು. ಒಂದು ವೇಳೆ ಒಂದು ವರ್ಷಕ್ಕಿಂತಲೂ ಅಥವಾ ಅವಧಿಗಿಂತಲೂ ಮೊದಲೆ ಅದನ್ನು ಪಡೆಯಲು ಶೇ. 1 ನಿರ್ಗಮನ ಶುಲ್ಕವನ್ನು ನೀಡಬೇಕು.

  ಸಮತೋಲನ ನಿಧಿಗಿಂತ ಭಿನ್ನವಾಗಿದೆ

  ಮ್ಯೂಚುವಲ್ ಫಂಡುಗಳ ಸಮತೋಲಿತ ನಿಧಿ ಸಂಸ್ಥೆಗಳಲ್ಲಿ ನಿಧಿ ವ್ಯವಸ್ಥಾಪಕರು ಅಥವಾ ಹೂಡಿಕೆದಾರರು ಇಕ್ವಿಟಿಯಲ್ಲಿ ಶೆ. 65 ಹಣವನ್ನು ಉಳಿದದ್ದನ್ನು ಸಾಲ ನಿಧಿಗಳಲ್ಲೂ ಹೂಡಿಕೆ ಮಾಡುತ್ತಾರೆ. ಅದಾಗ್ಯೂ ಇಕ್ವಿಟಿ ಉಳಿತಾಯ ನಿಧಿಯಲ್ಲಿನ ಇಕ್ವಿಟಿ ಅಂಶವು ಸಮತೋಲನ ನಿಧಿಗಿಂತ ಕಡಿಮೆ ಇದೆ. ಅದರೆ ಇವೇರಡು ಒಂದೆ ರೀತಿಯ ತೆರಿಗೆ ಪ್ರಯೋಜನವನ್ನು ಹೊಂದಿವೆ. ಸಮತೋಲಿತ ನಿಧಿಗಳು ಹೂಡಿಕೆದಾರರಿಗೆ ಮೂರು ವರ್ಷಗಳಿಗಿಂತ ಹೆಚ್ಚು ಸಾಧಾರಣ ರಿಸ್ಕ್ ಪ್ರೊಫೈಲ್ ಮತ್ತು ಬಂಡವಾಳದ ಸಮತಲಕ್ಕೆ ಸೂಕ್ತವಾಗಿದೆ. ಸಮತೋಲಿತ ನಿಧಿಗಳು ಮಾರುಕಟ್ಟೆ ಕುಸಿದಾಗ ಇಕ್ವಿಟಿ ಹಂಚಿಕೆಯನ್ನು ಹೆಚ್ಚಿಸುವುದರ ಮೂಲಕ ಅಸ್ಥಿರತೆಯನ್ನು ಕಡಿಮೆ ಮಾಡುತ್ತದೆ. ಮಾರುಕಟ್ಟೆ ಏರಿದಾಗ ಇಕ್ವಿಟಿ ಮಾನ್ಯತೆಯನ್ನು ಕಡಿಮೆ ಮಾಡುತ್ತದೆ. ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಏರಿಕೆಯಾಗುವ ಸಮಯದಲ್ಲಿ ಬಡ್ಡಿದರಗಳು ಕಡಿಮೆಯಾಗುತ್ತದೆ. ವಿಶ್ಲೇಷಕರು ಹೇಳುವ ಪ್ರಕಾರ ಈಕ್ವಿಟಿ ಉಳಿತಾಯ ನಿಧಿಗಳು ಸಂಪ್ರದಾಯವಾದಿ ಹೂಡಿಕೆದಾರರಿಗೆ ಸಮಂಜಸವಾದ ಆದಾಯವನ್ನು ನೀಡುವಲ್ಲಿ ಸೂಕ್ತವಾಗಿದೆ. ಈ ಯೋಜನೆಗಳಲ್ಲಿ ಬಂಡವಾಳ ಹೂಡಲು ಉತ್ತಮ ವಿಧಾನವೆಂದರೆ ವ್ಯವಸ್ಥಿತ ಹೂಡಿಕೆ ಯೋಜನೆಯಾಗಿದೆ.

  English summary

  Mutual fund equity savings schemes; how beneficial are they? 3 profitable power points

  Investors seeking higher returns than that offered by bank fixed deposits, can invest in equity savings schemes of mutual funds, albeit with some risk. These schemes invest one-third of the amount in fixed income instruments, one-third in equity-related instruments and the rest in arbitrage.
  Story first published: Saturday, December 2, 2017, 12:23 [IST]
  Company Search
  Enter the first few characters of the company's name or the NSE symbol or BSE code and click 'Go'
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more