For Quick Alerts
ALLOW NOTIFICATIONS  
For Daily Alerts

ಆಧಾರ್ FAQ: ಆಧಾರ್ ಸಂಬಂಧಿಸಿ ಕೇಳಲಾದ ಪ್ರಶ್ನೆ ಮತ್ತು ಉತ್ತರಗಳು

ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಿದ ನಂತರ ಆಧಾರ್ ಕಾರ್ಡ್ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದರಲ್ಲಿ ಮಾಹಿತಿ ಅಥವಾ ಮೂಲ ಡೇಟಾಬೇಸ್ ಭದ್ರತೆಗೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಿವೆ.

|

ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಿದ ನಂತರ ಆಧಾರ್ ಕಾರ್ಡ್ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದರಲ್ಲಿ ಮಾಹಿತಿ ಅಥವಾ ಮೂಲ ಡೇಟಾಬೇಸ್ ಭದ್ರತೆಗೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಿವೆ. ಯುಐಡಿಎಐ ಗೆ ವಿಭಿನ್ನ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಮತ್ತು ಯುಐಡಿಎಐ ಕೂಡ ಜನರಿಗೆ ಸಂಬಂಧಿತ ಉತ್ತರಗಳನ್ನು ನೀಡುತ್ತಿದೆ. ಈಗ ಯುಐಡಿಎಐ ಆಧಾರ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಿದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

 

ಇಲ್ಲಿ ನಾವು ಆಧಾರ್ ಗೆ ಸಂಬಂಧಿತ ಪ್ರಶ್ನೆಗಳು ಮತ್ತು ಅದರ ಉತ್ತರಗಳ ಬಗ್ಗೆ ಮಾತನಾಡುತ್ತಿದ್ದೇವೆ...

1. ಯುಐಡಿಎಐ ಬಯೋಮೆಟ್ರಿಕ್ಸ್, ಬ್ಯಾಂಕ್ ಖಾತೆ, ಪ್ಯಾನ್ ಇತ್ಯಾದಿ ಸೇರಿದಂತೆ ಎಲ್ಲಾ ನನ್ನ ಡೇಟಾವನ್ನು ಹೊಂದಿರುತ್ತದೆ. ನನ್ನ ಚಟುವಟಿಕೆಗಳ ಮೇಲೆ ಕಣ್ಣಿಡಲು ಇವುಗಳನ್ನು ಬಳಸಲಾಗುವುದೆ?

1. ಯುಐಡಿಎಐ ಬಯೋಮೆಟ್ರಿಕ್ಸ್, ಬ್ಯಾಂಕ್ ಖಾತೆ, ಪ್ಯಾನ್ ಇತ್ಯಾದಿ ಸೇರಿದಂತೆ ಎಲ್ಲಾ ನನ್ನ ಡೇಟಾವನ್ನು ಹೊಂದಿರುತ್ತದೆ. ನನ್ನ ಚಟುವಟಿಕೆಗಳ ಮೇಲೆ ಕಣ್ಣಿಡಲು ಇವುಗಳನ್ನು ಬಳಸಲಾಗುವುದೆ?

ಸಂಪೂರ್ಣವಾಗಿ ಸುಳ್ಳು. ಯುಐಡಿಎಐ ಡೇಟಾಬೇಸ್ ಕೆಳಗಿನ ಮಾಹಿತಿಯನ್ನು ಮಾತ್ರ ಹೊಂದಿದೆ -
(ಎ) ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ
(ಬಿ) ಹತ್ತು ಬೆರಳುಗಳ ಮುದ್ರಣ, ಎರಡು ಐಆರ್ಐಎಸ್ ಸ್ಕ್ಯಾನ್ ಗಳು ಮತ್ತು ಮುಖದ ಛಾಯಾಚಿತ್ರ
(ಸಿ) ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ.
ನಿಮ್ಮ ಕುಟುಂಬ, ಜಾತಿ, ಧರ್ಮ, ಶಿಕ್ಷಣ, ಬ್ಯಾಂಕ್ ಖಾತೆಗಳು, ಷೇರುಗಳು, ಮ್ಯೂಚುಯಲ್ ಫಂಡ್, ಹಣಕಾಸು ಮತ್ತು ಆಸ್ತಿ ವಿವರಗಳು, ಆರೋಗ್ಯ ದಾಖಲೆಗಳು ಮುಂತಾದ ಮಾಹಿತಿಯನ್ನು ಯುಐಡಿಎಐ ಅದರ ಡೇಟಾಬೇಸ್ ನಲ್ಲಿ ಎಂದಿಗೂ ಹೊಂದಿರುವುದಿಲ್ಲ.
ವಾಸ್ತವವಾಗಿ, ಆಧಾರ್ ಕಾಯಿದೆ 2016ರ ಸೆಕ್ಷನ್ 32 (3) ನಿರ್ದಿಷ್ಟವಾಗಿ ಯಾವುದೇ ಮಾಹಿತಿಯನ್ನು ನಿಯಂತ್ರಿಸುವುದು, ಸಂಗ್ರಹಿಸುವುದು, ಇಟ್ಟುಕೊಳ್ಳುವುದು ಅಥವಾ ನಿರ್ವಹಿಸುವುದು ಯುಐಡಿಎಐ ನಿಷೇಧಿಸುತ್ತದೆ.

2. ಬ್ಯಾಂಕು ಖಾತೆಯನ್ನು ಆಧಾರ್ ಗೆ ಸಂಪರ್ಕಿಸುವುದು ಅಗತ್ಯವೆ?
 

2. ಬ್ಯಾಂಕು ಖಾತೆಯನ್ನು ಆಧಾರ್ ಗೆ ಸಂಪರ್ಕಿಸುವುದು ಅಗತ್ಯವೆ?

ಹಣಕಾಸು ಸಚಿವಾಲಯದ 1 ಜೂನ್ 2017 ದಿನಾಂಕದ ಗೆಜೆಟ್ ಅಧಿಸೂಚನೆಯ ಪ್ರಕಾರ, ವೈಯಕ್ತಿಕ ವ್ಯಕ್ತಿಗಳು ತಮ್ಮ ಎಲ್ಲಾ ಬ್ಯಾಂಕು ಖಾತೆಗಳನ್ನು ಸಂಪರ್ಕಿಸುವುದಕ್ಕಾಗಿ 31 ಡಿಸೆಂಬರ್ 2017ರ ಒಳಗೆ ಆಧಾರ್ ಸಂಖ್ಯೆಯನ್ನು ಒದಗಿಸುವ ಅಗತ್ಯತೆಯಿರುತ್ತದೆ.
ಆಧಾರ್ ಹೊಂದಿರದ ನಿವಾಸಿಗಳು ಸ್ವತ: ತಾವೇ ಆಧಾರ್ ಅನ್ನು ಪಡೆಯುವುದಕ್ಕಾಗಿ ನೋಂದಣಿ ಮಾಡಿಸಲು ಈ ಮೂಲಕ ಸಲಹೆ ನೀಡಲಾಗುತ್ತಿದೆ.

3. ಒಂದು ವೇಳೆ ನಿವಾಸಿಯು ಅನಿವಾಸಿ ಭಾರತೀಯನಾಗಿದ್ದು, ಭಾರತದಲ್ಲಿ ಬ್ಯಾಂಕು ಖಾತೆಯನ್ನು ಹೊಂದಿದ್ದು ಆಧಾರ್ ಅನ್ನು ಹೊಂದಿರದಿದ್ದರೆ ಆತನ/ಆಕೆಯ ಬ್ಯಾಂಕು ಖಾತೆಯ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?
ತಮ್ಮ ಅನಿವಾಸಿ ಸ್ಥಾನಮಾನವನ್ನು ದಾಖಲೆಗಳೊಂದಿಗೆ ತಮ್ಮ ಬ್ಯಾಂಕುಗಳಿಗೆ ಬಹಿರಂಗಪಡಿಸುವಂತೆ ಅನಿವಾಸಿ ಭಾರತೀಯರಿಗೆ ಈ ಮೂಲಕ ಸಲಹೆಯನ್ನು ನೀಡಲಾಗುತ್ತಿದೆ.
ಖಾತೆಗಳು ನಿಷ್ಕ್ರಿಯಗೊಂಡಿರುವ ಸ್ಥಿತಿಗತಿಗೆ ಸಂಬಂಧಿತ ಪ್ರತಿಕ್ರಿಯೆ ನೀಡಲು ಬ್ಯಾಂಕುಗಳಿಗೆ ಸಾಧ್ಯವಾಗುತ್ತದೆ.  ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

4. ವ್ಯವಹಾರ ಮೊತ್ತವು ರೂ. 50,000 ಮೀರಿದಲ್ಲಿ ಬ್ಯಾಂಕಿಗೆ ಆಧಾರ್ ನ ಸಲ್ಲಿಕೆಯ ಅಗತ್ಯತೆಯಿರುತ್ತದೆಯೇ?

4. ವ್ಯವಹಾರ ಮೊತ್ತವು ರೂ. 50,000 ಮೀರಿದಲ್ಲಿ ಬ್ಯಾಂಕಿಗೆ ಆಧಾರ್ ನ ಸಲ್ಲಿಕೆಯ ಅಗತ್ಯತೆಯಿರುತ್ತದೆಯೇ?

ಹಣಕಾಸು ಮಂತ್ರಾಲಯದ 1 ಜೂನ್ 2017 ದಿನಾಂಕದ ಗೆಜೆಟ್ ಅಧಿಸೂಚನೆಯ ಪ್ರಕಾರ, ವ್ಯವಹಾರ ಮಾಡುತ್ತಿರುವ ಮೊತ್ತವು ಭಾರತೀಯ ರೂಪಾಯಿಗಳಲ್ಲಿ 50,000ವನ್ನು ಮೀರಿದಲ್ಲಿ ಆಧಾರ್ ಸಲ್ಲಿಕೆಯನ್ನು ಕೇಳಲಾಗುವುದು.

5. ಸರ್ಕಾರವು ನೀಡಿರುವ ಇತರೆ ಯಾವುದೇ ಗುರುತಿನ ಚೀಟಿಗಿಂತ ಆಧಾರ್ ಯಾವ ರೀತಿಯಲ್ಲಿ ವಿಭಿನ್ನವಾಗಿದೆ?
ಆಧಾರ್ ಅತ್ಯಗತ್ಯವಾಗಿ ಓರ್ವ ನಿವಾಸಿಗೆ ಆತನ/ಆಕೆಯ ಸಂಪೂರ್ಣ ಜೀವಿತಾವಧಿಗೆ ನೀಡಲಾಗುವ ಗುರುತಾಗಿದೆ. ಇದನ್ನು ಒಂದು ಕಾಗದರಹಿತ ಆನ್ ಲೈನ್ ಮೂಲಕ ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಬಳಸಬಹುದು. ಆಧಾರ್ ದೃಢೀಕರಣ ಸೇವೆಯು ಸಂಪೂರ್ಣ ಕ್ರಿಯಾಶೀಲವಾಗಿದ್ದು, ದೇಶದ ಉದ್ದಗಲಕ್ಕೂ ಅನೇಕ ಸೇವಾ ವಿತರಣಾ ಯೋಜನೆಗಳಲ್ಲಿ ಬಳಕೆಯಲ್ಲಿದೆ. ಆಧಾರ್ ಕಾರ್ಡು ಅಥವಾ ಇ-ಆಧಾರ್ (ಆಧಾರ್ ನ ವಿದ್ಯುನ್ಮಾನೀಯ ಪ್ರತಿ) ಅನ್ನು ನಿವಾಸಿಗಳಿಗೆ ತಮ್ಮದೇ ಆದಂತಹ ಸ್ವಂತ ಆಧಾರ್ ಅನ್ನು ತಿಳಿದುಕೊಳ್ಳುವ ಸಲುವಾಗಿ ಅತ್ಯಗತ್ಯವಾಗಿ ನೀಡಲಾಗುವುದು.

6. ಭಾರತದಲ್ಲಿ ತೆರಿಗೆ ಸಲ್ಲಿಕೆ ಅಥವಾ ಪ್ಯಾನ್ ಗಾಗಿ ಅರ್ಜಿ ಸಲ್ಲಿಸುವಾಗ ಆಧಾರ್ ಗೆ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವೇ? ಹೌದು ಎಂದಾದಲ್ಲಿ ಅನಿವಾಸಿ ಭಾರತೀಯರಿಗಾಗಿ ಯಾವ ಕಾರ್ಯವಿಧಾನಗಳಿರುತ್ತವೆ?

6. ಭಾರತದಲ್ಲಿ ತೆರಿಗೆ ಸಲ್ಲಿಕೆ ಅಥವಾ ಪ್ಯಾನ್ ಗಾಗಿ ಅರ್ಜಿ ಸಲ್ಲಿಸುವಾಗ ಆಧಾರ್ ಗೆ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವೇ? ಹೌದು ಎಂದಾದಲ್ಲಿ ಅನಿವಾಸಿ ಭಾರತೀಯರಿಗಾಗಿ ಯಾವ ಕಾರ್ಯವಿಧಾನಗಳಿರುತ್ತವೆ?

ಆದಾಯ ತೆರಿಗೆ ಸಲ್ಲಿಕೆಯನ್ನು ಸಲ್ಲಿಸುವುದಕ್ಕಾಗಿ ಮತ್ತು ಶಾಶ್ವತ ಖಾತೆ ಸಂಖ್ಯೆಯ (PAN) ನೀಡಿಕೆಗಾಗಿ ಸಲ್ಲಿಸಲಾಗುವ ಅರ್ಜಿಗೆ 1 ಜುಲೈ 2017ರಿಂದ ಜಾರಿಗೆ ಬರುವಂತೆ ಆಧಾರ್/ಆಧಾರ್ ಅರ್ಜಿ ನಮೂನೆಯ ನೋಂದಣಿ ಗುರುತಿನ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಿರುವುದನ್ನು ಹಣಕಾಸು ಅಧಿನಿಯಮ, 1961ರ ಪರಿಚ್ಚೇದ 139ಎಎ ಅನುವು ಮಾಡಿದೆ.
ಆಧಾರ್ ಅಥವಾ ನೋಂದಣಿ ಗುರುತಿನ ಸಂಖ್ಯೆಯ ಅಂತಹ ಕಡ್ಡಾಯ ನಮೂದಿಸುವಿಕೆಯು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಿರುವ ವ್ಯಕ್ತಿಗೆ ಮಾತ್ರ ಅನ್ವಯಿಸುತ್ತದೆ.
ಆಧಾರ್ (ಹಣಕಾಸು ಮತ್ತಿತರ ಸಹಾಯಧನ, ಪ್ರಯೋಜನಗಳೂ ಮತ್ತು ಸೇವೆಗಳು) ಅಧಿನಿಯಮ, 2016ರ ಪ್ರಕಾರ, ಕೇವಲ ನಿವಾಸಿ ವ್ಯಕ್ತಿಗಳು ಮಾತ್ರ ಆಧಾರ್ ಅನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ. ಆದಾಯ ತೆರಿಗೆ ಅಧಿನಿಯಮದ ಪರಿಚ್ಚೇದ 139ಎಎ ಪ್ರಕಾರ ಆಧಾರ್ ಅಧಿನಿಯಮ, 2016ರ ಪ್ರಕಾರ ಓರ್ವ ನಿವಾಸಿಯಾಗಿರದ ವೈಯಕ್ತಿಕ ವ್ಯಕ್ತಿಗೆ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸುವ ಅಗತ್ಯತೆಯು ಅನ್ವಯವಾಗುವುದಿಲ್ಲ.

7. ಆಧಾರ್ ನೊಂದಿಗೆ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ಮತ್ತು ಲಿಂಕ್ ಮಾಡಲು ನನ್ನನ್ನು ಏಕೆ ಕೇಳಿಕೊಳ್ಳಲಾಗುತ್ತದೆ?

7. ಆಧಾರ್ ನೊಂದಿಗೆ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ಮತ್ತು ಲಿಂಕ್ ಮಾಡಲು ನನ್ನನ್ನು ಏಕೆ ಕೇಳಿಕೊಳ್ಳಲಾಗುತ್ತದೆ?

ನಿಮ್ಮ ಸುರಕ್ಷತೆ ಮತ್ತು ದೇಶದ ಭದ್ರತೆಗಾಗಿ, ಮೊಬೈಲ್ ಚಂದಾದಾರರ ಗುರುತಿಸುವಿಕೆಗಾಗಿ ಆಧಾರ್ ನೊಂದಿಗೆ ಮೊಬೈಲ್ ಸಂಖ್ಯೆಯನ್ನು ಪರಿಶೀಲನೆ ಮತ್ತು ಆಧಾರ್ ಜತೆ ಜೋಡಣೆ ಮಾಡಬೇಕಾಗುತ್ತದೆ. ವಂಚನೆದಾರರು, ಕ್ರಿಮಿನಲ್ಸ್, ಭಯೋತ್ಪಾದಕರಿಂದ ಸುರಕ್ಷಿತವಾಗಿರಲು ಇದು ಮುಖ್ಯವಾಗಿರುತ್ತದೆ. ಪ್ರತಿ ಮೊಬೈಲ್ ಸಂಖ್ಯೆಯನ್ನು ಆಧಾರ್ ನೊಂದಿಗೆ ಪರಿಶೀಲಿಸಿದಾಗ ಮತ್ತು ಸಂಪರ್ಕಿಸಿದಾಗ ವಂಚನೆದಾರರು, ಅಪರಾಧಿಗಳು, ಮತ್ತು ಭಯೋತ್ಪಾದಕರನ್ನು ಸುಲಭವಾಗಿ ಗುರುತಿಸಿ ಕಾನೂನು ಪ್ರಕಾರ ಶಿಕ್ಷೆ ನೀಡಬಹುದು.

8. ಸೇವೆಯನ್ನು ಒದಗಿಸುವವರು ಇ-ಆಧಾರ್ ಪ್ರತಿಯನ್ನು ಒಪ್ಪಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಏನು ಮಾಡುವುದು?

8. ಸೇವೆಯನ್ನು ಒದಗಿಸುವವರು ಇ-ಆಧಾರ್ ಪ್ರತಿಯನ್ನು ಒಪ್ಪಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಏನು ಮಾಡುವುದು?

ಡೌನ್ ಲೋಡ್ ಮಾಡಿಕೊಳ್ಳಲಾಗಿರುವ ಆಧಾರ್ ಅಥವಾ ಇ-ಆಧಾರ್ ಮುದ್ರಿತ ಆಧಾರ್ ಪತ್ರದ ನಮೂನೆಯಂತೆಯೇ ಆಧಾರ್ ಹೊಂದಿರುವವರ ಹೆಸರು, ವಿಳಾಸ, ಲಿಂಗ, ಛಾಯಾಚಿತ್ರ ಮತ್ತು ಹುಟ್ಟಿದ ದಿನಾಂಕದ ವಿವರಗಳನ್ನು ಹೊಂದಿರುತ್ತದೆ. ಇ-ಆಧಾರ್ ಕೂಡ ಆಧಾರ್ ಅನ್ನು ಪಡೆದುಕೊಂಡ ದಿನಾಂಕ ಹಾಗೂ ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಂಡ ದಿನಾಂಕವನ್ನು ಒಳಗೊಂಡಿರುತ್ತದೆ. ಡೌನ್ ಲೋಡ್ ಮಾಡಿಕೊಂಡ ಆಧಾರ್ ಅಥವಾ ಇ-ಆಧಾರ್ ಆದಾಯ ತೆರಿಗೆ ಅಧಿನಿಯಮ, 2000ದ ಪ್ರಕಾರ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ ಸಹಿ ಮಾಡಲ್ಪಟ್ಟಿರುತ್ತದೆ. ಅದು ಅಂಕೀಯ ಸಹಿಗಳೊಂದಿಗೆ ವಿದ್ಯುನ್ಮಾನೀಯ ದಾಖಲೆಗಳ ಕಾನೂನಾತ್ಮಕ ಗುರುತಿಸುವಿಕೆಗೆ ಅನುವು ಮಾಡಿಕೊಡುತ್ತದೆ.
ಆದ್ದರಿಂದ ಡೌನ್ ಲೋಡ್ ಮಾಡಿಕೊಳ್ಳಲ್ಪಟ್ಟ ಆಧಾರ್/ಇ-ಆಧಾರ್ ಕಾನೂನಾತ್ಮಕವಾಗಿ ಊರ್ಜಿತವಾಗಿರುತ್ತದೆ ಮತ್ತು ವಿದ್ಯುನ್ಮಾನೀಯ ದಾಖಲೆಯ ಭದ್ರತೆಯನ್ನು ಖಚಿತಪಡಿಸುತ್ತದೆ. ಇದನ್ನು ಮುದ್ರಿತ ಆಧಾರ್ ಪತ್ರಕ್ಕೆ ಸಮನಾಗಿ ಪರಿಗಣಿಸತಕ್ಕದ್ದು.

9. ನಾನು ನನ್ನ ಆಧಾರ್ ಅನ್ನು ವಾಪಸ್ಸು ಮಾಡಬೇಕೆಂದಿರುವೆನು. ಅದನ್ನು ಯಾವ ರೀತಿ ಮತ್ತು ಏನೇನು ಮಾಡಬೇಕು?

9. ನಾನು ನನ್ನ ಆಧಾರ್ ಅನ್ನು ವಾಪಸ್ಸು ಮಾಡಬೇಕೆಂದಿರುವೆನು. ಅದನ್ನು ಯಾವ ರೀತಿ ಮತ್ತು ಏನೇನು ಮಾಡಬೇಕು?

ಪ್ರಸ್ತುತ ಆಧಾರ್ ಅನ್ನು ವಾಪಸ್ಸು ಮಾಡುವ ಸಲುವಾಗಿ ಯಾವುದೇ ಕಾರ್ಯನೀತಿಯೂ ಇರುವುದಿಲ್ಲ. ಆದಾಗ್ಯೂ, ಅಗತ್ಯತೆಗೆ ತಕ್ಕಂತೆ ವಿದ್ಯುನ್ಮಾನೀಯವಾಗಿ ಲಾಕ್ ಮಾಡಿಡುವ/ ಲಾಕ್ ತೆಗೆಯುವ ಕಾರ್ಯಾಚರಣೆಯನ್ನು ಯುಐಡಿಎಐ ಅಧಿಕೃತ ಜಾಲತಾಣ resident.uidai.gov.in" ನಲ್ಲಿ ಭದ್ರವಾಗಿಟ್ಟುಕೊಳ್ಳಬಹುದು.

10. ಅನಿವಾಸಿ ಭಾರತೀಯರು ಆಧಾರ್ ಅನ್ನು ಪಡೆದುಕೊಳ್ಳಬಹುದೆ?
ಆಧಾರ್ (ಹಣಕಾಸು ಮತ್ತು ಇತರೆ ಸಹಾಯಧನಗಳೂ, ಪ್ರಯೋಜನಗಳು ಮತ್ತು ಸೇವೆಗಳ ಗುರಿಯಾಗಿಸಿಕೊಳ್ಳಲಾಗಿರುವ ವಿತರಣೆ) ಅಧಿನಿಯಮ, 2016ರ ಅನುಸಾರ, ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸುವ ದಿನಾಂಕಕ್ಕೆ ತತ್ ಕ್ಷಣದ ಹಿಂದಿನ 12 ತಿಂಗಳುಗಳಿಂದ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಭಾರತದಲ್ಲಿ ನೆಲೆಸಿರುವ ನಿವಾಸಿಯು ಮಾತ್ರ ಅರ್ಹರಾಗಿರುತ್ತಾರೆ.

11. ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಮತ್ತು ಆಧಾರ್ ನಲ್ಲಿ ನನ್ನ ಹೆಸರು ವಿಭಿನ್ನವಾಗಿದೆ. ಎರಡನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಏನು ಮಾಡಬೇಕು?

11. ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಮತ್ತು ಆಧಾರ್ ನಲ್ಲಿ ನನ್ನ ಹೆಸರು ವಿಭಿನ್ನವಾಗಿದೆ. ಎರಡನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಏನು ಮಾಡಬೇಕು?

ಆಧಾರ್ ಅನ್ನು ಶಾಶ್ವತ ಖಾತೆ ಸಂಖ್ಯೆಗೆ ಸಂಪರ್ಕಿಸುವ ಸಲುವಾಗಿ, ಎರಡೂ ದಾಖಲೆಗಳಲ್ಲಿನ ವಿವರಗಳು (ಹೆಸರು, ಲಿಂಗ ಮತ್ತು ಹುಟ್ಟಿದ ದಿನಾಂಕ) ತಾಳೆ ಹೊಂದತಕ್ಕದ್ದು.
ಆಧಾರ್ ನಲ್ಲಿನ ವಾಸ್ತವಿಕ ಮಾಹಿತಿಗೆ ಹೋಲಿಸಿದಂತೆ ತೆರಿಗೆದಾರರು ಒದಗಿಸಿರುವ ಆಧಾರ್ ಹೆಸರಿನಲ್ಲಿ ಅಪ್ರಧಾನವಾಗಿ ತಾಳೆ ಹೊಂದದಿದ್ದಲ್ಲಿ, ಒನ್ ಟೈಮ್ ಪಾಸ್ವರ್ಡ್ (ಆಧಾರ್ ಒಟಿಪಿ) ಆಧಾರ್ ಜೊತೆಯಲ್ಲಿ ನೋಂದಣಿಯಾಗಿರುವ ಮೊಬೈಲಿಗೆ ಕಳುಹಿಸಲಾಗುವುದು. ಶಾಶ್ವತ ಖಾತೆ ಸಂಖ್ಯೆ ಮತ್ತು ಆಧಾರ್ ನಲ್ಲಿ ಹುಟ್ಟಿದ ದಿನಾಂಕ ಮತ್ತು ಲಿಂಗ ಒಂದೇ ಆಗಿರುವುದನ್ನು ತೆರಿಗೆದಾರರು ಖಚಿತಪಡಿಸಿಕೊಳ್ಳತಕ್ಕದ್ದು.
ಶಾಶ್ವತ ಖಾತೆ ಸಂಖ್ಯೆಯಲ್ಲಿನ ಹೆಸರಿಗಿಂತ ಆಧಾರ್ ಹೆಸರು ಸಂಪೂರ್ಣ ವಿಭಿನ್ನವಾಗಿರುವ ವಿರಳ ಪ್ರಕರಣದಲ್ಲಿ, ಸಂಪರ್ಕತೆಯು ವಿಫಲಗೊಳ್ಳುತ್ತದೆ ಮತ್ತು ಆಧಾರ್ ಅಥವಾ ಪ್ಯಾನ್ ನಲ್ಲಿ ಹೆಸರನ್ನು ಬದಲಾಯಿಸುವಂತೆ ತೆರಿಗೆದಾರರಿಗೆ ಪ್ರೇರೇಪಿಸಲಾಗುತ್ತದೆ.

ಟಿಪ್ಪಣಿ:
ಶಾಶ್ವತ ಖಾತೆ ಸಂಖ್ಯೆಯ ಸಂಬಂಧಿತ ಪ್ರಶ್ನೆಗಳಿಗಾಗಿ
ನೀವು https://www.utiitsl.com ಗೆ ಭೇಟಿ ನೀಡಬಹುದು.
ಆಧಾರ್ ನ ಸಂಬಂಧಿತ ಪ್ರಶ್ನೆಗಳಿಗೆ ನೀವು www.uidai.gov.in ಗೆ ಭೇಟಿ ನೀಡಬಹುದು.
ಎರಡನ್ನೂ ಸಂಪರ್ಕಿಸುವ ಸಮಸ್ಯೆಯು ಇನ್ನೂ ಇದ್ದಲ್ಲಿ ಆದಾಯ ತೆರಿಗೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು ಅಥವಾ ಆದಾಯ ತೆರಿಗೆ ಇಲಾಖೆ ಸಹಾಯವಾಣಿಗೆ ಕರೆ ಮಾಡಬಹುದು.

12. ಶಾಶ್ವತ ಖಾತೆ ಸಂಖ್ಯೆ ಆಧಾರ್ ನಲ್ಲಿ ನನ್ನ ಹುಟ್ಟಿದ ದಿನಾಂಕವು ತಾಳೆಯಾಗಿರುವುದಿಲ್ಲ. ಅವುಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ.

12. ಶಾಶ್ವತ ಖಾತೆ ಸಂಖ್ಯೆ ಆಧಾರ್ ನಲ್ಲಿ ನನ್ನ ಹುಟ್ಟಿದ ದಿನಾಂಕವು ತಾಳೆಯಾಗಿರುವುದಿಲ್ಲ. ಅವುಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ.

ಆಧಾರ್ ಅನ್ನು ಶಾಶ್ವತ ಖಾತೆ ಸಂಖ್ಯೆಗೆ ಸಂಪರ್ಕಿಸುವ ಸಲುವಾಗಿ, ನಿಮ್ಮ ಜನಸಂಖ್ಯಾಶಾಸ್ತ್ರದ ವಿವರಗಳು - ಹೆಸರು, ಲಿಂಗ ಮತ್ತು ಹುಟ್ಟಿದ ದಿನಾಂಕವು ತಾಳೆಯಾಗತಕ್ಕದ್ದು. ಸೂಕ್ತ ದಾಖಲೆ ಅಂದರೆ ಶಾಶ್ವತ ಖಾತೆ ಸಂಖ್ಯೆಯಲ್ಲಿ ಅಥವಾ ಆಧಾರ್ ನಲ್ಲಿ ನಿಮ್ಮ ಹೆಸರಿನ ಕಾಗುಣಿತವು (ಸ್ಪೆಲ್ಲಿಂಗ್) ಸರಿಯಾಗುವಂತೆ ಮಾಡಿಕೊಳ್ಳಿ ಮತ್ತು ಪುನ: ಸಂಪರ್ಕಿಸಲು ಪ್ರಯತ್ನಿಸಿ.
ಸಂಪರ್ಕಿಸುವಲ್ಲಿ ಸಮಸ್ಯೆ ಇನ್ನೂ ಇದ್ದಲ್ಲಿ, ಆದಾಯ ತೆರಿಗೆ ಇಲಾಖೆಯ incometaxindia.gov.in ಅಥವಾ https://www.utiitsl.comಗೆ ಭೇಟಿ ಕೊಡಿ ಎಂಬುದಾಗಿ ನಿಮ್ಮನ್ನು ಕೋರುತ್ತಿದ್ದೇವೆ.

13. ಆಧಾರ್ ನೊಂದಿಗೆ ನನ್ನ ಶಾಶ್ವತ ಖಾತೆ ಸಂಖ್ಯೆಯು (ಪ್ಯಾನ್) ಸಂಪರ್ಕಿಸದಿದ್ದಲ್ಲಿ ನಿಷ್ಕ್ರಿಯಗೊಳ್ಳುವುದೆ?

13. ಆಧಾರ್ ನೊಂದಿಗೆ ನನ್ನ ಶಾಶ್ವತ ಖಾತೆ ಸಂಖ್ಯೆಯು (ಪ್ಯಾನ್) ಸಂಪರ್ಕಿಸದಿದ್ದಲ್ಲಿ ನಿಷ್ಕ್ರಿಯಗೊಳ್ಳುವುದೆ?

ಯುಐಡಿಎಐ ಸಂಸ್ಥೆ ಆಧಾರ್ ಅನ್ನು ಮಾತ್ರ ನೀಡುವುದು ಮತ್ತು ಅದನ್ನು ದೃಢೀಕರಿಸಲು ಮಾರ್ಗವನ್ನು ಒದಗಿಸುವುದು. ಯಾವುದೇ ಯೋಜನೆಗೆ ಸಂಬಂಧಿತ ಪ್ರಶ್ನೆಗಳಿಗಾಗಿ, ಸಂಬಂಧಿತ ಯೋಜನೆಯ ಮಾಲೀಕರನ್ನು ಸಂಪರ್ಕಿಸಬೇಕಾಗಿ ನಾವು ನಿಮ್ಮನ್ನು ಕೋರುತ್ತಿದ್ದೇವೆ.
ಶಾಶ್ವತ ಖಾತೆ ಸಂಖ್ಯೆಗೆ ಸಂಬಂಧಿತ ಪ್ರಶ್ನೆಗಳಿಗೆ, ಆದಾಯ ತೆರಿಗೆ ಇಲಾಖೆಯ incometaxindia.gov.in ಅಥವಾ https://www.utiitsl.com ಜಾಲತಾಣಗಳಿಗೆ ಭೇಟಿ ಕೊಡಿ ಎಂಬುದಾಗಿ ನಾವು ನಿಮ್ಮನ್ನು ಕೋರುತ್ತಿದ್ದೇವೆ.

14. ನಿವಾಸಿಯು ಆದಾಯ ತೆರಿಗೆ ಸಲ್ಲಿಕೆಗಾಗಿ ಅರ್ಜಿಯನ್ನು ಸಲ್ಲಿಸಲು ಬಯಸುತ್ತಿದ್ದಾರೆ, ಆದರೆ ಆಧಾರ್ ಮಾಹಿತಿಯು ಹೊಂದಾಣಿಕೆಯಾಗುತ್ತಿಲ್ಲ ಎಂಬುದಾಗಿ ತೋರಿಸುತ್ತಿದೆ?

14. ನಿವಾಸಿಯು ಆದಾಯ ತೆರಿಗೆ ಸಲ್ಲಿಕೆಗಾಗಿ ಅರ್ಜಿಯನ್ನು ಸಲ್ಲಿಸಲು ಬಯಸುತ್ತಿದ್ದಾರೆ, ಆದರೆ ಆಧಾರ್ ಮಾಹಿತಿಯು ಹೊಂದಾಣಿಕೆಯಾಗುತ್ತಿಲ್ಲ ಎಂಬುದಾಗಿ ತೋರಿಸುತ್ತಿದೆ?

ಆಧಾರ್ ಅನ್ನು ಶಾಶ್ವತ ಖಾತೆ ಸಂಖ್ಯೆಗೆ (ಪ್ಯಾನ್) ಸಂಪರ್ಕಿಸುವ ಸಲುವಾಗಿ, ನಿಮ್ಮ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ವಿವರಗಳು ಹೊಂದಾಣಿಕೆಯಾಗಬೇಕಾಗುತ್ತದೆ. ಸೂಕ್ತ ದಾಖಲೆಯಲ್ಲಿ ಅಂದರೆ ಶಾಶ್ವತ ಖಾತೆ ಸಂಖ್ಯೆ ಅಥವಾ ಆಧಾರ್ ನಲ್ಲಿ ನಿಮ್ಮ ವಿವರಗಳನ್ನು ದಯವಿಟ್ಟು ಸರಿಪಡಿಸಿಕೊಳ್ಳಿರಿ ಮತ್ತು ಪುನ: ಪ್ರಯತ್ನಿಸಿ ಎಂಬುದಾಗಿ ನಾವು ನಿಮ್ಮನ್ನು ಕೋರುತ್ತಿದ್ದೇವೆ.
ಸಂಪರ್ಕ ಮಾಡುವಲ್ಲಿ ಸಮಸ್ಯೆಗಳಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯ incometaxindia.gov.in ಅಥವಾ https://www.utiitsl.com. ಗೆ ಭೇಟಿ ಕೊಡಿ ಎಂಬುದಾಗಿ ನಿಮ್ಮನ್ನು ಕೋರುತ್ತಿದ್ದೇವೆ.

15. ಆಧಾರ್ ಸಾಮಾನ್ಯ ಜನರಿಗೆ ಹೇಗೆ ಪ್ರಯೋಜನಕಾರಿಯಾಗಿದೆ?

15. ಆಧಾರ್ ಸಾಮಾನ್ಯ ಜನರಿಗೆ ಹೇಗೆ ಪ್ರಯೋಜನಕಾರಿಯಾಗಿದೆ?

ಆಧಾರ್ 119 ಕೋಟಿ ಭಾರತೀಯರಿಗೆ ವಿಶ್ವಾಸಾರ್ಹ ಗುರುತನ್ನು ನೀಡಿದೆ. ದೇಶದಲ್ಲಿ ಬೇರೆ ಯಾವುದೇ ಗುರುತಿಗಿಂತಲೂ ಆಧಾರ್ ಹೆಚ್ಚು ವಿಶ್ವಾಸ ಮತ್ತು ನಂಬಿಕೆಯನ್ನು ಹೊಂದಿದೆ. ಉದಾಹರಣೆಗೆ, ನೀವು ಉದ್ಯೋಗದಾತರಾಗಿದ್ದರೆ, ಯಾವ ಗುರುತು ನಿಮ್ಮ ನಿರೀಕ್ಷಿತ ನೌಕರರಿಂದ ಡಾಕ್ಯುಮೆಂಟ್ ಆಗಿ ಪಡೆಯಲು ಆದ್ಯತೆ ನೀಡುತ್ತೀರಿ? ಅಥವಾ ಮನೆಯ ಸಹಾಯಕ, ಚಾಲಕ ಇನ್ನಿತರರಿಂದ ಆಧಾರ್ ನ್ನು ಮಾತ್ರ ಗುರುತಿನ ಚೀಟಿಯಾಗಿ ಬಯಸುತ್ತಿರಿ. ಬ್ಯಾಂಕ್ ಖಾತೆಗಳು, ರೈಲು ಪ್ರಯಾಣಕ್ಕಾಗಿ, ಮತ್ತು ವಿವಿಧ ಅರ್ಹತೆಗಳು ಮತ್ತು ಮಧ್ಯವರ್ತಿಗಳಿಲ್ಲದೆಯೇ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಸರ್ಕಾರದ ಅನುಕೂಲಗಳನ್ನು ನೇರವಾಗಿ ಪಡೆಯಲು ಆಧಾರ್ ಮೂಲವಾಗಿದೆ. ಇವೇಲ್ಲವೂ ಸಹ ಆಧಾರ್ ನ ಪ್ರಾಮುಖ್ಯತೆಯನ್ನು ತಿಳಿಯಪಡಿಸುತ್ತವೆ.

16. ಆಧಾರ್ ದತ್ತಾಂಶ ನಿಯಮ ಉಲ್ಲಂಘನೆ/ಸೋರಿಕೆಯಾಗುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಕೇಳುತ್ತೇವೆ. ಅದು ನಿಜವೆ?

16. ಆಧಾರ್ ದತ್ತಾಂಶ ನಿಯಮ ಉಲ್ಲಂಘನೆ/ಸೋರಿಕೆಯಾಗುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಕೇಳುತ್ತೇವೆ. ಅದು ನಿಜವೆ?

ಆಧಾರ್ ಡೇಟಾಬೇಸ್ ಕಳೆದ 7 ವರ್ಷಗಳಲ್ಲಿ ಎಂದಿಗೂ ಉಲ್ಲಂಘನೆಯಾಗಿಲ್ಲ. ಎಲ್ಲಾ ಆಧಾರ್ ಹೊಂದಿರುವವರ ಮಾಹಿತಿಯು ಸುರಕ್ಷಿತ ಮತ್ತು ಭದ್ರವಾಗಿದೆ. ಆಧಾರ್ ಡೇಟಾ ಉಲ್ಲಂಘನೆ ಕುರಿತು ತಪ್ಪಾಗಿ ವರದಿಯಾದ ಸಂದರ್ಭಗಳಿವೆ. ನಿಮ್ಮ ಡೇಟಾವನ್ನು ಸುರಕ್ಷಿತವಾಗಿಡಲು ಯುಐಡಿಎಐ ಸುಧಾರಿತ ತಂತ್ರಜ್ಞಾನ ಬಳಸುತ್ತದೆ. ಮುಂದಾಗಬಹುದಾದ ಭದ್ರತಾ ಅಪಾಯಗಳು ಮತ್ತು ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯುಐಡಿಎಐ ಸಮರ್ಥವಾಗಿದೆ.

English summary

AADHAAR: Frequently Asked Questions and Answers

Here You Can Read Frequently Asked Questions (FAQ) Related AADHAAR Card In Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X