ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗಿದೆಯೆ/ಇಲ್ಲವೇ ಎಂಬುದನ್ನು ಚೆಕ್ ಮಾಡೋದು ಹೇಗೆ?

ಸರ್ಕಾರದ ಹಲವು ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ ಹಲವು ಅಗತ್ಯ ಯೋಜನೆಗಳ ಸೌಲಭ್ಯಕ್ಕಾಗಿ ಆಧಾರ್ ಜೋಡಣೆ ಮಾಡುವುದರಿಂದ ದುರ್ಬಳಕೆ ಆಗುವ ಭಯವಿದೆ.

ಸರ್ಕಾರದ ಹಲವು ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ ಹಲವು ಅಗತ್ಯ ಯೋಜನೆಗಳ ಸೌಲಭ್ಯಕ್ಕಾಗಿ ಆಧಾರ್ ಜೋಡಣೆ ಮಾಡುವ ಸಂದರ್ಭದಲ್ಲಿ ದುರ್ಬಳಕೆ ಆಗುವ ಭಯವಿದೆ. ಆಧಾರ್ ಸಂಖ್ಯೆಯನ್ನು ಗಮನಕ್ಕೆ ಬಾರದೆ ಏನಾದರೂ ಬಳಸಲಾಗಿದೆಯೆ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಬವಿಸಬಹುದು.

ಹೌದು, ನಿಮ್ಮ ಊಹೆ ಸರಿಯಾಗಿಯೇ ಇರಬಹುದು, ಏಕೆಂದರೆ ಅನೇಕ ಸಂದರ್ಭಗಳಲ್ಲಿ ನಮಗರಿವಿಲ್ಲದೆ ಆಧಾರ್ ನಂಬರ್ ದುರ್ಬಳಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. (Read More: Aadhaar)

ಆಧಾರ್

ಆಧಾರ್

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತನ್ನ ಪೋರ್ಟಲ್ ನಲ್ಲಿ ನಿಮ್ಮ ಆಧಾರ್ ಯಾವ ಉದ್ದೇಶಕ್ಕಾಗಿ ಮತ್ತು ಯಾವಾಗ ನೀವು ಪಬಳಸಲಾಗಿದೆ ಎಂಬುದನ್ನು ಚೆಕ್ ಮಾಡುವ ಸೇವೆ ಸಲ್ಲಿಸಿದೆ. ಆಧಾರ್ ಪರಿಶೀಲನೆಗೆ ನೀವು ಮಾಡಬೇಕಾಗಿರುವ ಪ್ರಕ್ರಿಯೆಯನ್ನು ಮುಂದಿನ ಹಂತದಲ್ಲಿ ನೀಡಲಾಗಿದೆ.

ವೆಬ್ಸೈಟ್ ಗೆ ಬೇಟಿ ನೀಡಿ

ವೆಬ್ಸೈಟ್ ಗೆ ಬೇಟಿ ನೀಡಿ

https://resident.uidai.gov.in/notification-aadhaar ಬೇಟಿ ನೀಡಿ ಈ ಹಂತಗಳನ್ನು ಅನುಸರಿಸಿ:
- ಇಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆಧಾರ್ ದೃಢೀಕರಣ ಪುಟವನ್ನು ಭೇಟಿ ಮಾಡಿ.
- ತಮ್ಮ ಆಧಾರ್ ಸಂಖ್ಯೆಯನ್ನು ಮತ್ತು ಭದ್ರತಾ ಕೋಡ್ ಅನ್ನು ಚಿತ್ರದಲ್ಲಿ ನಮೂದಿಸಿ.
- OTP ಜನರೇಟ್ ಮೇಲೆ ಕ್ಲಿಕ್ ಮಾಡಿ.
- ನೀವು UIDAI ವೆಬ್ಸೈಟ್ ನಿಂದ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಅನ್ನು ಸ್ವೀಕರಿಸುತ್ತೀರಿ.
- ನಂತರ ಬಳಕೆದಾರರು ಮಾಹಿತಿಯ ಅವಧಿಯನ್ನು ಮತ್ತು ವ್ಯವಹಾರಗಳ ಸಂಖ್ಯೆ ಎಂಬ ಆಯ್ಕೆಗಳನ್ನು ಪಡೆಯುತ್ತಾರೆ.
- ಬಳಕೆದಾರರು OTP ಅನ್ನು ಫೀಡ್ ಮಾಡಿ ಮತ್ತು ಸಬ್ಮಿಟ್ ಕ್ಲಿಕ್ ಮಾಡಿ.
- ಬಳಕೆದಾರರು ಆಯ್ಕೆ ಮಾಡಿದ ಅವಧಿಯಲ್ಲಿ ಮಾಡಿದ ಎಲ್ಲಾ ಆಧಾರ್ ದೃಢೀಕರಣ ವಿವರಗಳನ್ನು ಪಡೆಯುತ್ತಾರೆ.

ದೃಢೀಕರಣ ಪುಟ

ದೃಢೀಕರಣ ಪುಟ

ನೀವು ಮೇಲಿನ UADAI ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಪುಟ ತೆರೆಯುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಮತ್ತು ಭದ್ರತಾ ಕೋಡ್ ಅನ್ನು ಬಾಕ್ಸ್ ನಲ್ಲಿ ನಮೂದಿಸಿ. ಈಗ "OTP ಜನರೇಟ್ ಮೇಲೆ ಕ್ಲಿಕ್ ಮಾಡಿ.

OTP ಪಡೆದ ನಂತರ

OTP ಪಡೆದ ನಂತರ

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP SMS ಅನ್ನು ಪಡೆಯುತ್ತೀರಿ. ಈ ಒಟಿಪಿಯು 30 ನಿಮಿಷಗಳ ಕಾಲ ಮಾನ್ಯವಾಗಿರುತ್ತದೆ. OTP ಗೆ ಕೇಳುವ ಪುಟವು ಬಯೋಮೆಟ್ರಿಕ್, ಡೆಮಾಗ್ರಫಿಕ್ ಮತ್ತು ಇತರ ಆಯ್ಕೆಗಳನ್ನು ಕೇಳುತ್ತದೆ. ನಿಮ್ಮ ಆಧಾರ್ ನಿಂದ ಯಾವ ರೀತಿಯ ಮಾಹಿತಿ ಪಡೆಯಲು ಬಯಸುತ್ತಿರಿ ಎಂದು ಅರ್ಥ. ನಂತರ ದಿನಾಂಕ ವ್ಯಾಪ್ತಿಯನ್ನು ಕೇಳಲಾಗುತ್ತದೆ. ಅಂತಿಮವಾಗಿ, ನಿಮಗೆ ಕಳುಹಿಸಿದ OTP ಅನ್ನು ನೀವು ನಮೂದಿಸಬೇಕು.

ಕೊನೆಯದಾಗಿ

ಕೊನೆಯದಾಗಿ

ಈ ಪರದೆಯು ನೀವು ಬಯಸಿದ ಮಾಹಿತಿಯನ್ನು ಪ್ರದರ್ಶಿಸುತ್ತದೆ. ನೀವು ದೃಢೀಕರಣಕ್ಕಾಗಿ ಆಧಾರ್ ಅನ್ನು ಬಳಸಿದಾಗಲೆಲ್ಲಾ ಈ ಪುಟವನ್ನು ತೊರಿಸುತ್ತದೆ.

ಹೆಚ್ಚಿನ ಮಾಹಿತಿ

ಹೆಚ್ಚಿನ ಮಾಹಿತಿ

ಆಧಾರ್ ಸಂಬಂಧಿತ ಇತ್ತೀಚಿನ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?  

ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?  

ನಿಮ್ಮ ಆಧಾರ್ ಕಾರ್ಡ್ ನಲ್ಲಿ ವಿವರಗಳನ್ನು ಬದಲಾಯಿಸುವಾಗ ಈ 5 ವಿಷಯಗಳು ಗೊತ್ತಿರಬೇಕು 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+