For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಪಿಪಿಎಫ್ ಖಾತೆ ಬಗ್ಗೆ ನಿಮಗೆಷ್ಟು ಗೊತ್ತು?

ಎಸ್ಬಿಐ ಪಿಪಿಎಫ್ ಖಾತೆಯಡಿ ಲಭ್ಯವಿರುವ ಬಡ್ಡಿದರ, ಹೂಡಿಕೆಯ ಕನಿಷ್ಟ ಮತ್ತು ಗರಿಷ್ಟ ಮೊತ್ತ, ತೆರಿಗೆ ಪ್ರಯೋಜನ, ಠೇವಣಿ ಅವಧಿ ಇತ್ಯಾದಿಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

|

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ತನ್ನ ಗ್ರಾಹಕರಿಗೆ ಹೊಸ ಸೇವೆಗಳನ್ನು ನೀಡುತ್ತಾ ಬಂದಿದೆ. ಅದರಲ್ಲಿ ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ) ಖಾತೆ ಕೂಡ ಒಂದಾಗಿದೆ.
ಎಸ್ಬಿಐ ಪಿಪಿಎಫ್ ಖಾತೆಯಡಿ ಲಭ್ಯವಿರುವ ಬಡ್ಡಿದರ, ಹೂಡಿಕೆಯ ಕನಿಷ್ಟ ಮತ್ತು ಗರಿಷ್ಟ ಮೊತ್ತ, ತೆರಿಗೆ ಪ್ರಯೋಜನ, ಠೇವಣಿ ಅವಧಿ ಇತ್ಯಾದಿಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

 

ಎಸ್ಬಿಐ ವೆಬ್ಸೈಟ್ sbi.co.in ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಪಿಪಿಎಫ್ ಖಾತೆಯು ತೆರಿಗೆ ಪ್ರಯೋಜನಗಳ ಜೊತೆಗೆ ಉತ್ತಮವಾದ ಆದಾಯ ಒದಗಿಸುತ್ತದೆ. ಎಸ್ಬಿಐನ ಯಾವುದೇ ಶಾಖೆಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಎಸ್‌ಬಿಐ ಬ್ಯಾಂಕ್ ನಲ್ಲಿ ಪಿಎಫ್ ಖಾತೆ ತೆರೆಯುವುದು ಹೇಗೆ?

 
ಎಸ್ಬಿಐ ಪಿಪಿಎಫ್ ಖಾತೆ ಬಗ್ಗೆ ನಿಮಗೆಷ್ಟು ಗೊತ್ತು?

ಎಸ್ಬಿಐ ಪಿಪಿಎಫ್ ಖಾತೆಯನ್ನು ಈ ಕೆಳಗಿನ 10 ಅಂಶಗಳ ಮೂಲಕ ತಿಳಿಯಬಹುದು.

1. ಎಸ್ಬಿಐ ಪ್ರಕಾರ, ಹಿಂದೂ ಅವಿಭಜಿತ ಕುಟುಂಬದ ಹೆಸರಿನಲ್ಲಿ ಪಿಪಿಎಫ್ ಖಾತೆಗಳನ್ನು ತೆರೆಯಲು ಅನುಮತಿ ಇಲ್ಲ.
2. ವಾರ್ಷಿಕವಾಗಿ ಕನಿಷ್ಠ ರೂ. 500 ಗರಿಷ್ಟ ರೂ. 1,50,000 ಠೇವಣಿ ಇಡಬಹುದು. ಚಂದಾದಾರರು ವಾರ್ಷಿಕವಾಗಿ ರೂ 1,50,000 ಕ್ಕಿಂತ ಹೆಚ್ಚು ಹಣವನ್ನು ಇಡಬಾರದು. ಏಕೆಂದರೆ ಹೆಚ್ಚುವರಿ ಮೊತ್ತಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ ಅಥವಾ ಆದಾಯ ತೆರಿಗೆ ಕಾಯಿದೆಯಡಿ ರಿಯಾಯಿತಿಗೆ ಅರ್ಹವಾಗಿರುವುದಿಲ್ಲ.

3. ಒಟ್ಟು ಮೊತ್ತ ಅಥವಾ ಗರಿಷ್ಠ 12 ಕಂತುಗಳಲ್ಲಿ ಮೊತ್ತವನ್ನು ಠೇವಣಿ ಮಾಡಬಹುದು.

4.ಯೋಜನೆಯ ಮೂಲ ಅವಧಿ 15 ವರ್ಷಗಳು. ನಂತರ ಮುಂದುವರೆಸಬೇಕಾದಲ್ಲಿ ಚಂದಾದಾರರು ಅದನ್ನು 1 ಅಥವಾ 5 ವರ್ಷಗಳವರೆಗೆ ವಿಸ್ತರಿಸಬಹುದು. (ಸರಿಯಾದ ಮಾಹಿತಿಗಾಗಿ ಶಾಖೆಯನ್ನು ಸಂಪರ್ಕಿಸಿ)

5. ಕೇಂದ್ರ ಸರ್ಕಾರವು ತ್ರೈಮಾಸಿಕ ಆಧಾರದ ಮೇಲೆ ಬಡ್ಡಿದರ ನಿರ್ಧರಿಸುತ್ತದೆ. ಪ್ರಸ್ತುತ ವರ್ಷಕ್ಕೆ ಶೇ. 8.0 ರಷ್ಟು ಬಡ್ಡಿದರ ಇದೆ.

6. ಖಾತೆಯ ಅವಧಿ ಮತ್ತು ನಿಗದಿತ ಬ್ಯಾಲೆನ್ಸ್ ಅವಲಂಬಿಸಿ ಸಾಲ ಮತ್ತು ಹಿಂಪಡೆಯುವಿಕೆಗೆ ಅವಕಾಶವಿರುತ್ತದೆ.
7. ಎಸ್ಬಿಐನ ಪಿಪಿಎಫ್ ಖಾತೆಯಡಿಯಲ್ಲಿ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 88 ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನ ಪಡೆಯಬಹುದು. ಬಡ್ಡಿಯಿಂದ ಬರುವ ಆದಾಯವು ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿದೆ.

8.ನಾಮನಿರ್ದೇಶನ (Nomination) ಸೌಲಭ್ಯ ಒಂದು ಅಥವಾ ಹೆಚ್ಚಿನ ವ್ಯಕ್ತಿಗಳ ಹೆಸರಿನಲ್ಲಿ ಲಭ್ಯವಿದೆ.

9. ಚಂದಾದಾರರ ಕೋರಿಕೆಯಂತೆ ಪಿಪಿಎಫ್ ಖಾತೆಯನ್ನು ಇತರ ಶಾಖೆಗಳಿಗೆ / ಇತರ ಬ್ಯಾಂಕುಗಳಿಗೆ ಅಥವಾ ಅಂಚೆ ಕಚೇರಿಗಳಿಗೆ ವರ್ಗಾಯಿಸಬಹುದು. ಇದಕ್ಕೆ ಯಾವುದೇ ಸೇವಾ ಶುಲ್ಕವಿರುವುದಿಲ್ಲ.

10. ಕೆಲವು ಷರತ್ತುಗಳ ಅಡಿಯಲ್ಲಿ ಖಾತೆಯು ಐದು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಮಾತ್ರ ಅಕಾಲಿಕ ಪಾವತಿಗೆ ಅವಕಾಶವಿರುತ್ತದೆ. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿರುವ ಖಾತೆಗೂ ಇದು ಅನ್ವಯಿಸುತ್ತದೆ. (Read More: PPF/ಪಿಪಿಎಫ್)

ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ

English summary

SBI Public Provident Fund (PPF) Account: Must know these things

As per extant instructions, opening of PPF accounts in the name of Hindu undivided family is not permitted, according to SBI.
Story first published: Wednesday, January 23, 2019, 17:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X