Englishहिन्दी മലയാളം தமிழ் తెలుగు

ಎಸ್‌ಬಿಐ ಬ್ಯಾಂಕ್ ನಲ್ಲಿ ಪಿಎಫ್ ಖಾತೆ ತೆರೆಯುವುದು ಹೇಗೆ?

Written By: Siddu
Subscribe to GoodReturns Kannada

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಬಗ್ಗೆ ಎಲ್ಲರಿಗೂ ಗೊತ್ತೆ ಇರುತ್ತದೆ. ಪಿಪಿಎಫ್ ಮತ್ತು ಉಳಿತಾಯ ಖಾತೆಗೆ ಅಂತಹ ವ್ಯತ್ಯಾಸವೇನಿಲ್ಲ. ಉಳಿತಾಯ ಖಾತೆಯಲ್ಲಿ ಹಣವನ್ನು ಯಾವಾಗ ಬೇಕಾದರೂ ತೆಗೆಯಬಹುದು. ಆದರೆ ಪಿಪಿಎಫ್‌ನಲ್ಲಿ ನಿಗದಿತ ಅವಧಿಯವರೆಗೆ ಹಣ ತೆಗೆಯಲು ಬರುವುದಿಲ್ಲ. ಜತೆಗೆ ಉಳಿತಾಯ ಖಾತೆಗಿಂತ ಬಡ್ಡಿದರ ಕೂಡ ಹೆಚ್ಚು. ಇದರ ಮತ್ತೊಂದು ಲಾಭವೆಂದರೆ, ಆದಾಯ ತೆರಿಗೆ ಉಳಿಸಲು ಈ ಖಾತೆ ಸಹಾಯ ಮಾಡುತ್ತದೆ. ಪಿಎಫ್ ವಿತ್ ಡ್ರಾ ಮಾಡುವ ಮುನ್ನ ಇಲ್ಲೊಮ್ಮೆ ನೋಡಿ...

ಅಂಚೆ ಕಚೇರಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದಲ್ಲಿ ಪಬ್ಲಿಕ್ ಪ್ರಾವಿಡೆಂಚ್ ಫಂಡ್ ಖಾತೆಯನ್ನು ತೆರೆಯಬಹುದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೆಸರು ಕೇಳಿಯೇ ಇದರಿಂದ ದೂರ ಉಳಿಯುವವರೇ ಹೆಚ್ಚು. ಆದರೆ ಈ ಖಾತೆಯನ್ನು ತೆರೆಯುವುದು ಎಷ್ಟು ಸುಲಭವೋ, ಇದನ್ನು ನಿಭಾಯಿಸುವುದು ಕೂಡ ಅಷ್ಟೇ ಸುಲಭ ಎಂಬುದನ್ನು ನೆನಪಿಡಿ.

ಈಗ ಎಲ್ಲ ಬ್ಯಾಂಕುಗಳೂ ಗಣಕೀಕರಣವಾಗಿದ್ದರಿಂದ ಎಸ್‌ಬಿಐನ ಯಾವುದೇ ಶಾಖೆಯಲ್ಲಿ ಖಾತೆ ತೆರೆದರೂ, ನಿಮ್ಮ ಮನೆ ಬಳಿಯ ಬ್ಯಾಂಕ್ ಶಾಖೆಯಲ್ಲಿ ಹಣ ಕಟ್ಟಬಹುದಾಗಿದೆ. ನಿಗದಿತ ಅವಧಿಯವರೆಗೆ ಹಣ ತೆಗೆಯಲು ಸಾಧ್ಯವಿಲ್ಲ ಮತ್ತು ಬಡ್ಡಿದರ(7.9%)ವೂ ಹೆಚ್ಚಿರುವುದರಿಂದ ಇಲ್ಲಿ ಉಳಿತಾಯವೂ ಉಳಿದೆಲ್ಲ ಖಾತೆಗಳಿಗಿಂತ ಹೆಚ್ಚು. (Read more: ಪಿಎಫ್)

ಪಿಪಿಎಫ್ ಖಾತೆ ಅಚ್ಚುಮೆಚ್ಚು

ಅಂಚೆ ಕಚೇರಿಗಿಂತ ಎಸ್‌ಬಿಐನಲ್ಲಿ ಪಿಪಿಎಫ್ ಖಾತೆ ತೆರೆಯಲು ಹೆಚ್ಚು ಜನರು ಇಷ್ಟಪಡುತ್ತಾರೆ. ಸಂಬಳದಾರರಿಗೆ ಮತ್ತು ಸ್ವಉದ್ಯೋಗಸ್ಥರಿಗೆ ಆದಾಯ ತೆರಿಗೆ ಉಳಿಸಲು ಇದು ಹೇಳಿ ಮಾಡಿಸಿದ ಖಾತೆ. ಆದಾಯ ತೆರಿಗೆ ಕಾಯ್ದೆಯ 80ಸಿ ಸೆಕ್ಷನ್ ಅಡಿ ಈ ಖಾತೆಯಲ್ಲಿ ಜಮಾ ಮಾಡಿದ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ದೊರೆಯುತ್ತದೆ. ಈ ಖಾತೆಯಲ್ಲಿ ಎಷ್ಟಾದರೂ ಮೊತ್ತವನ್ನು ಜಮಾ ಮಾಡಬಹುದು. ಆದರೆ, ವರ್ಷಕ್ಕೆ ಕನಿಷ್ಠ ಮಿತಿ ರೂ. 500 ಮತ್ತು ಗರಿಷ್ಠ ಮಿತಿ ರೂ. 1 ಲಕ್ಷ. ಇದೂ ಕೂಡ ಉಳಿತಾಯ ಖಾತೆ ನಿಭಾಯಿಸಿದಂತೆಯೇ ಅಲ್ಲವೆ? ಈ ಖಾತೆಯ ಸದುಪಯೋಗ ಪಡಿಸಿಕೊಂಡಲ್ಲಿ 15 ವರ್ಷಗಳ ಅವಧಿಯ ನಂತರ ನಿಮ್ಮ ಜೇಬು ತುಂಬುವುದು ಖಚಿತ.

ಶಾಖೆ ಆಯ್ಕೆ ಮಾಡಿಕೊಳ್ಳಿ

ಕೆಲವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ಪಿಪಿಎಫ್ ಅಕೌಂಟ್ ತೆರೆಯಲು ಸೌಲಭ್ಯ ಇಲ್ಲದೆ ಇರಬಹುದು. ಆದ್ದರಿಂದ ನಿಮ್ಮ ಮನೆಗೆ ಅಥವಾ ಕಚೇರಿಗೆ ಹತ್ತಿರವಾದ ಪಿಪಿಎಫ್ ಖಾತೆ ತೆರೆಯಲು ಸೌಲಭ್ಯವಿರುವ ಶಾಖೆಯನ್ನು ಆಯ್ದುಕೊಳ್ಳಿ. ಈ ಖಾತೆ ತೆರೆಯಲು ಎಸ್‌ಬಿಐನಲ್ಲಿ ಉಳಿತಾಯ ಖಾತೆ ಇರಬೇಕೆಂದೇನೂ ಇಲ್ಲ. ಅಂದರೆ ಉಳಿತಾಯ ಖಾತೆ ಇಲ್ಲದೆಯೂ ಪಿಪಿಎಫ್ ಅಕೌಂಟ್ ತೆರೆಯಬಹುದಾಗಿದೆ.

ಯಾವ್ಯಾವ ದಾಖಲೆಗಳು ಬೇಕು?

ಖಾತೆ ತೆರೆಯಲು ಮನೆ ವಿಳಾಸದ ದಾಖಲೆ, ಗುರುತಿನ ಪುರಾವೆ ಮತ್ತು ಎರಡು ಪಾಸ್ಪೋರ್ಟ್ ಸೈಜಿನ ಭಾವಚಿತ್ರಗಳು ಅಗತ್ಯ. ಪಿಪಿಎಫ್ ಫಾರ್ಮ್ ತುಂಬಿ ಅಗತ್ಯ ದಾಖಲೆಗಳ ಝೆರಾಕ್ಸ್ ಕಾಪಿಯನ್ನು ಲಗತ್ತಿಸಿ ಬ್ಯಾಂಕಿಗೆ ನೀಡಬೇಕು.

ಯಾವ ದಾಖಲೆ ಗುರುತಿನ ಪುರಾವೆ ಆಗಬಲ್ಲದು?

ಆಧಾರ್ ಕಾರ್ಡ್
ಪಾನ್ ಕಾರ್ಡ್
ಡ್ರೈವಿಂಗ್ ಲೆಸೆನ್ಸ್
ಮತದಾರರ ಗುರುತಿನ ಚೀಟಿ
ಪಾಸ್ಪೋರ್ಟ್
ರೇಷನ್ ಕಾರ್ಡ್
ಅರ್ಜಿ ಸಲ್ಲಿಸುವಾಗ ಈ ದಾಖಲೆಗಳ ಮೂಲ ಪ್ರತಿಯನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ.

ಪಾಸ್ ಬುಕ್ ವಿತರಣೆ

ಎಲ್ಲ ದಾಖಲೆಗಳ ತಪಾಸಣೆಯಾಗಿ ಎಲ್ಲವೂ ಸರಿಯಾಗಿದೆ ಎಂದು ಮನವರಿಕೆಯಾದರೆ ಬ್ಯಾಂಕ್ ಕನಿಷ್ಠ ಡಿಪಾಸಿಟ್ ಮೊತ್ತವನ್ನು ತುಂಬಿಸಿಕೊಂಡು ಉಳಿತಾಯ ಖಾತೆಗೆ ನೀಡುವಂತಹ ಪಾಸ್ ಬುಕ್ ನೀಡುತ್ತಾರೆ. ಮುಂದಿನ ದಿನಗಳಲ್ಲಿ ನಿಮ್ಮ ಖಾತೆಯಲ್ಲಿ ನೀವು ಎಷ್ಟು ಜಮಾ ಮಾಡಿದ್ದೀರಿ ಹಾಗೂ ಎಷ್ಟು ಬಡ್ಡಿ ಬಂದಿದೆ ಮುಂತಾದ ವಿವರಗಳನ್ನು ಪರಿಶೀಲಿಸಬಹುದು.

ಆನ್‌ಲೈನ್ ನಿರ್ವಹಣೆ

ಶಾಖೆಗಳಿಗೆ ಖುದ್ದಾಗಿ ಹೋಗಲು ಆಗದಿದ್ದರೆ ಆನ್‌ಲೈನ್ ಮುಖಾಂತರ ಕೂಡ ಹಣವನ್ನು ಜಮಾ ಮಾಡಬಹುದು. ಈ ಅವಕಾಶವನ್ನು ಗ್ರಾಹಕರು ಬ್ಯಾಂಕಿನಿಂದ ಕೇಳಿ, ನೊಂದಾಯಿಸಿಕೊಂಡು ಪಡೆದುಕೊಳ್ಳಬೇಕು. ನಿಮ್ಮ ಉಳಿತಾಯ ಖಾತೆಯಿಂದ ನೇರವಾಗಿ ಪಿಪಿಎಫ್ ಖಾತೆಗೆ ಹಣ ಹಾಕಬಹುದು. ಹಾಗೆಯೆ, ನಿಗದಿತ ಹಣವನ್ನು ನೇರವಾಗಿ ಜಮಾ ಮಾಡಲು ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್ ಕೂಡ ನೀಡಬಹುದು.

ಖಾತೆ ವರ್ಗಾವಣೆ

ಯಾವುದೇ ಶಾಖೆಯಿಂದ ಇನ್ನೊಂದು ಶಾಖೆಗೆ ಅಥವಾ ಇನ್ನೊಂದು ಬ್ಯಾಂಕಿಗೆ ಅಥವಾ ಅಂಚೆ ಕಚೇರಿಗಳಿಗೆ ಪಿಪಿಎಫ್ ಖಾತೆ ವರ್ಗಾವಣೆ ಮಾಡಬಹುದು. ಎಸ್‌ಬಿಐನ ಇನ್ನಾವುದೇ ಶಾಖೆಗೆ ಅಥವಾ ಪ್ರಧಾನ ಅಂಚೆ ಕಚೇರಿಗೆ ಶುಲ್ಕವಿಲ್ಲದೆ ಖಾತೆಯನ್ನು ವರ್ಗಾಯಿಸಬಹುದು.

ಎಸ್‌ಬಿಐ ನೀಡುವ ಇತರ ಸವಲತ್ತುಗಳು

- ಒಬ್ಬರು ಅಥವಾ ಇಬ್ಬರ ಹೆಸರನ್ನು ನಾಮಿನೇಟ್ ಮಾಡಬಹುದು.
- ಖಾತೆ ತೆರೆದ ವರ್ಷ ಮುಗಿದ ಮೇಲೆ, ಐದು ವರ್ಷಗಳ ನಂತರವೇ ಖಾತೆಯನ್ನು ಮುಚ್ಚಲು ಅವಕಾಶವಿದೆ.
- ಗ್ರಾಹಕ ಯಾವುದೇ ಸಮಯದಲ್ಲಿ ವಹಿವಾಟು ನಿಲ್ಲಿಸಬಹುದು. ಆದರೆ, ಖಾತೆ ತೆರೆದ ಹಣಕಾಸು ವರ್ಷ ಮುಗಿದ ಮೇಲೆ 15 ವರ್ಷಗಳ ನಂತರವೇ ಜಮಾ ಆಗಿರುವ ಹಣ ಹಿಂದಿರುಗಿಸಲಾಗುವುದು.
- ಒಂದು ವೇಳೆ ಖಾತೆ ಮುಂದುವರಿಯದ ಪಕ್ಷದಲ್ಲಿ, ಪ್ರತಿ ವರ್ಷಕ್ಕೆ ರೂ. 50ನಂತೆ ಹಣ ನೀಡಿ ಖಾತೆಯನ್ನು ಮತ್ತೆ ನವೀಕರಿಸಬಹುದು. ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ

English summary

How to open SBI PPF account?

Public Provident Fund is one of the favorite tax savings tool. This is an ideal tool for salaried as well as for self employed people. Under this investment upto to Rs 1,00,000 per annum qualifies for IT Rebate under section 80C of IT Act.
Story first published: Saturday, May 6, 2017, 15:27 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC