For Quick Alerts
ALLOW NOTIFICATIONS  
For Daily Alerts

ಹೆಡ್ಜ್ ಫಂಡ್ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ ಏಕೆ?

ಇತ್ತೀಚಿನ ದಿನಗಳಲ್ಲಿ ಎಚ್‌ಎನ್‌ಐ ಮಾತ್ರವಲ್ಲದೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿಯೂ ಹೆಡ್ಜ್ ಫಂಡ್ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ.

|

ಇತ್ತೀಚಿನ ದಿನಗಳಲ್ಲಿ ಎಚ್‌ಎನ್‌ಐ ಮಾತ್ರವಲ್ಲದೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿಯೂ ಹೆಡ್ಜ್ ಫಂಡ್ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಯುನಿವರ್ಸಿಟಿ ಫಂಡ್, ಪೆನ್ಷನ್ ಫಂಡ್ ಹಾಗೂ ಇನ್ಸೂರೆನ್ಸ್ ಮತ್ತು ಎಂಡೋಮೆಂಟ್ ಫಂಡ್‌ಗಳು ಸಹ ಹೆಡ್ಜ್ ಫಂಡ್‌ಗಳತ್ತ ಗಮನ ಹರಿಸುತ್ತಿವೆ. ಮ್ಯೂಚುವಲ್ ಫಂಡ್‌ಗಳಿಗಿಂತ ಹೆಡ್ಜ್ ಫಂಡ್‌ಗಳು ಹೆಚ್ಚು ಮುಕ್ತ ಹೂಡಿಕೆಯ ಅವಕಾಶ ಹೊಂದಿವೆ. ಮ್ಯೂಚುವಲ್ ಫಂಡ್ ಹಾಗೂ ಹೆಡ್ಜ್ ಫಂಡ್‌ಗಳ ನಡುವಿನ ವ್ಯತ್ಯಾಸವೇನು ಗೊತ್ತೆ?

 

ಹೆಡ್ಜ್ ಫಂಡ್ ವೈಶಿಷ್ಟ್ಯತೆ

ಹೆಡ್ಜ್ ಫಂಡ್ ವೈಶಿಷ್ಟ್ಯತೆ

ಮ್ಯೂಚುವಲ್ ಫಂಡ್‌ಗಳ ಹಾಗೆ ಹೆಡ್ಜ್ ಫಂಡ್‌ಗಳ ಮೇಲೆ ಯಾವುದೇ ನಿಯಂತ್ರಕ ಪ್ರಾಧಿಕಾರದ ನಿಯಮಾವಳಿಗಳ ಅಂಕುಶವಿಲ್ಲ. ಶಾರ್ಟ್ ಸೆಲ್ಲಿಂಗ್, ತನ್ನದೇ ಸಂಪೂರ್ಣ ನಿಯಂತ್ರಣ ಹಾಗೂ ಮಾರುಕಟ್ಟೆಯಲ್ಲಿನ ಟ್ರೆಂಡ್‌ಗಳ ಮೇಲೆ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ ಹೊಂದಿರುವ ಹೆಡ್ಜ್ ಫಂಡ್‌ಗಳ ಕಾರ್ಯಶೈಲಿ ಮ್ಯೂಚುವಲ್ ಫಂಡ್‌ಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಹೆಡ್ಜ್ ಫಂಡ್‌ಗಳು ತಮ್ಮ ಕಾರ್ಯಶೈಲಿಯಿಂದಾಗಿ ಯಾವಾಗಲೂ ಅನಿಶ್ಚಿತತೆ ಹಾಗೂ ವದಂತಿಗಳಿಗೆ ಹೆಸರಾಗಿವೆ. ಈವರೆಗೂ ಹೆಡ್ಜ್ ಫಂಡ್‌ಗಳನ್ನು ನಿಯಂತ್ರಿಸಲು ಯಾವುದೇ ಕಾನೂನು ಇರದಿದ್ದರೂ ಮಾರುಕಟ್ಟೆಯ ದುರ್ಬಳಕೆ ಹಾಗೂ ಅಕ್ರಮ ಹಣ ವರ್ಗಾವಣೆಯ ಅಡಿಯಲ್ಲಿ ಇವು ಶಿಕ್ಷೆಗೆ ಒಳಗಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಕಾನೂನು ಜಾರಿಗೆ ಚಿಂತನೆ

ಕಾನೂನು ಜಾರಿಗೆ ಚಿಂತನೆ

ವಿಶ್ವದಲ್ಲಿನ ಬೆಳವಣಿಗೆ ಹೊಂದುತ್ತಿರುವ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಹೆಡ್ಜ್ ಫಂಡ್‌ಗಳು ಯತ್ನಿಸುತ್ತಿವೆ ಎನ್ನಲಾಗಿದೆ. ಕೆಲ ಅಭಿವೃದ್ಧಿಶೀಲ ದೇಶಗಳು ಹೆಡ್ಜ್ ಫಂಡ್‌ಗಳನ್ನು ವಿದೇಶಿ ಹೂಡಿಕೆದಾರರಾಗಿ ನೋಂದಾಯಿಸಿಕೊಂಡು ಅವುಗಳಿಗೆ ತಮ್ಮ ದೇಶಗಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮುಕ್ತ ಅವಕಾಶ ನೀಡುತ್ತಿವೆ. ಇಕ್ವಿಟಿ ಹಾಗೂ ಬಾಂಡ್‌ಗಳ ಏರಿಕೆಯ ಅಥವಾ ಇಳಿಕೆಯ ಎರಡೂ ರೀತಿಯ ಮಾರುಕಟ್ಟೆ ಸನ್ನಿವೇಶಗಳಲ್ಲಿ ಲಾಭ ಮಾಡುವ ವಿಶಿಷ್ಟತೆಯನ್ನು ಹೆಡ್ಜ್ ಫಂಡ್‌ಗಳು ಹೊಂದಿವೆ. ಈಗಾಗಲೇ ಭಾರತದಲ್ಲಿ ಇರುವ 'ಸಾಮೂಹಿಕ ಹೂಡಿಕೆ ಯೋಜನೆಗಳ' ನಿಯಮಾವಳಿಗಳ ಪ್ರಕಾರ ವಿಷಯ ಹಾಗೂ ಕಾರ್ಯವೈಖರಿಗಳ ಬಹಿರಂಗ ಕಾನೂನನ್ನು ರಿಟೇಲ್ ಹೂಡಿಕೆದಾರರಿಗೆ ಮಾರಾಟ ಮಾಡಲಾಗುವ ಹೆಡ್ಜ್ ಫಂಡ್‌ಗಳಿಗೂ ಅನ್ವಯಿಸಬೇಕೆಂದು ಇದಕ್ಕಾಗಿ ರಚಿಸಲಾದ ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ.

ಎಚ್‌ಎನ್‌ಐ (high networth individual) ಮತ್ತು ಹೆಡ್ಜ್ ಫಂಡ್
 

ಎಚ್‌ಎನ್‌ಐ (high networth individual) ಮತ್ತು ಹೆಡ್ಜ್ ಫಂಡ್

ಎಚ್‌ಎನ್‌ಐ (high networth individual) ವ್ಯಕ್ತಿಗಳ ಮೊದಲ ಆಯ್ಕೆ ಹೆಡ್ಜ್ ಫಂಡ್ ಆಗಿರುತ್ತದೆ. ಎಚ್‌ಎನ್‌ಐ ಹೂಡಿಕೆದಾರರು ಅಂದರೆ ದೊಡ್ಡ ಮೊತ್ತದ ಬಂಡವಾಳ ಹೊಂದಿದ ವ್ಯಕ್ತಿಗಳಿಗೆ ಹೆಡ್ಜ್ ಫಂಡ್‌ಗಳು ಅತಿ ಮೆಚ್ಚಿನ ಹೂಡಿಕೆ ವಿಧಾನವಾಗುತ್ತಿವೆ. ಹಲವಾರು ವಿಧಾನಗಳಲ್ಲಿ ಹೂಡಿಕೆ ಮಾಡಿ ಹೆಚ್ಚು ಆದಾಯ ಕೊಡುವುದರಿಂದ ಇವುಗಳ ಜನಪ್ರಿಯತೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.
ಹೂಡಿಕೆದಾರರಿಂದ ಬಂಡವಾಳವನ್ನು ಸಂಗ್ರಹಿಸಿ ಅದನ್ನು ಲಾಭ ಬರುವ ಹಾಗೆ ಮಾರುಕಟ್ಟೆಯಲ್ಲಿ ವಿನಿಯೋಜಿಸುವಲ್ಲಿ ಮ್ಯೂಚುವಲ್ ಫಂಡ್ ಹಾಗೂ ಹೆಡ್ಜ್ ಫಂಡ್‌ಗಳು ಕೆಲಸ ಮಾಡುತ್ತವೆ. ಆದರೆ ಹೆಡ್ಜ್ ಫಂಡ್‌ಗಳು 'ಶ್ರೀಮಂತರ ಮ್ಯೂಚುವಲ್ ಫಂಡ್' ಎಂದು ಹೆಸರುವಾಸಿಯಾಗಿವೆ. ಸಾಗರೋತ್ತರ ದೇಶಗಳಲ್ಲಿನ ಹೂಡಿಕೆದಾರರಿಗೆ ಹೆಡ್ಜ್ ಫಂಡ್‌ಗಳು ಅತಿ ಮೆಚ್ಚಿನ ಹೂಡಿಕೆ ಯೋಜನೆಯಾಗಿ ಹೊರಹೊಮ್ಮುತ್ತಿವೆ. ಸಣ್ಣ ಹೂಡಿಕೆದಾರರು ಸಹ ಹೆಡ್ಜ್ ಫಂಡ್‌ಗಳಲ್ಲಿ ಹಣ ತೊಡಗಿಸುವಂತೆ ಅನುಕೂಲ ಕಲ್ಪಿಸಲು ವಿಶ್ವದ ಕೆಲ ದೇಶಗಳಲ್ಲಿ ಕಾನೂನು ಜಾರಿಗೊಳಿಸುವ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ.

English summary

Why Hedge Funds are Popular Among HNI's?

Hedge Funds are similar to Mutual funds where funds pool investors money and invest with an aim to make profit.
Story first published: Friday, January 25, 2019, 10:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X