ಮ್ಯೂಚುವಲ್ ಫಂಡ್ ಹಾಗೂ ಹೆಡ್ಜ್ ಫಂಡ್‌ಗಳ ಹೂಡಿಕೆ ವಿಧಾನ, ಬಂಡವಾಳ ಹಾಗೂ ಹೂಡಿಕೆಯ ತೀವ್ರತೆಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ.
ಮ್ಯೂಚುವಲ್ ಫಂಡ್‌ಗಳ ಕಾರ್ಯವಿಧಾನದ ಬಗ್ಗೆ ಹೂಡಿಕೆದಾರರಲ್ಲಿ ಸಾಕಷ್ಟು ತಿಳುವಳಿಕೆ ಇದೆ. ಆದರೆ ಹೆಡ್ಜ್ ಫಂಡ್‌ಗಳ ಬಗ್ಗೆ ಜನರಿಗೆ ಇನ್ನೂ ಅಷ್ಟೊಂದು ಮಾಹಿತಿ ಇಲ್ಲ. ಮ್ಯೂಚುವಲ್ ಫಂಡ್ ಹಾಗೂ ಹೆಡ್ಜ್ ಫಂಡ್‌ಗಳ ಹೂಡಿಕೆ ವಿಧಾನ, ಬಂಡವಾಳ ಹಾಗೂ ಹೂಡಿಕೆಯ ತೀವ್ರತೆಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ.
ಸಾಮಾನ್ಯವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಎಲ್ಲರೂ ಹೂಡಿಕೆ ಮಾಡುವುದರಿಂದ ಈವರೆಗೂ ಹೆಡ್ಜ್ ಫಂಡ್‌ಗಳ ಬಗ್ಗೆ ಯಾರೂ ಅಷ್ಟೊಂದು ವಿಚಾರ ಮಾಡಲು ಹೋಗಿಲ್ಲ. ಇವೆರಡು ಫಂಡ್‌ಗಳ ಮಧ್ಯದ ಪ್ರಮುಖ ವ್ಯತ್ಯಾಸಗಳನ್ನು ಇಲ್ಲಿ ತಿಳಿಸಲಾಗಿದೆ. ಮ್ಯೂಚುವಲ್ ಫಂಡ್ ಎಂದರೇನು? ಹೂಡಿಕೆಯ ಲಾಭ ಹಾಗು ನಷ್ಟಗಳೇನು?
ನಿಯಂತ್ರಣದಲ್ಲಿನ ವ್ಯತ್ಯಾಸ
ಭಾರತ ಅಥವಾ ಅಮೆರಿಕ ಹೀಗೆ ಬಹುತೇಕ ದೇಶಗಳಲ್ಲಿ ಮ್ಯೂಚುವಲ್ ಫಂಡ್‌ಗಳು ಪ್ರತ್ಯೇಕ ನಿಯಂತ್ರಕ ಪ್ರಾಧಿಕಾರದಿಂದ ನಿಯಂತ್ರಿಸಲ್ಪಡುತ್ತವೆ. ಭಾರತದಲ್ಲಿ ಇವು ಸೆಕ್ಯುರಿಟೀಸ್ ಆಂಡ್ ಎಕ್ಸಚೇಂಜ್ ಬೋರ್ಡ ಆಫ್ ಇಂಡಿಯಾದಿಂದ ಹಾಗೂ ಅಮೆರಿಕದಲ್ಲಿ ಯುಎಸ್ ಸೆಕ್ಯುರಿಟೀಸ್ ಆಂಡ್ ಎಕ್ಸಚೇಂಜ್ ಕಮೀಷನ್‌ನಿಂದ ನಿಯಂತ್ರಣಕ್ಕೆ ಒಳಪಟ್ಟಿವೆ. ಆದರೆ ಇಲ್ಲಿಯವರೆಗೂ ಹೆಡ್ಜ್ ಫಂಡ್‌ಗಳನ್ನು ನಿಯಂತ್ರಿಸಲು ಯಾವುದೇ ಪ್ರಾಧಿಕಾರ ಸ್ಥಾಪನೆಯಾಗಿಲ್ಲ. ಬಹುಶಃ ಹತ್ತಿರದ ದಿನಗಳಲ್ಲಿ ಇಂಥದೊಂದು ನಿಯಂತ್ರಕ ಪ್ರಾಧಿಕಾರ ಜಾರಿಯಾಗುವ ಸಾಧ್ಯತೆಗಳಿವೆ. ಮ್ಯೂಚುವಲ್ ಫಂಡ್ಸ್ ವಿಧಗಳು ಯಾವುವು?
ಹೂಡಿಕೆಯ ನಿಬಂಧನೆಗಳು
ಹೆಡ್ಜ್ ಫಂಡ್ ಎಂಬುದು ಒಂದು ರೀತಿಯ ಮುಕ್ತ ನಿಧಿಯಾಗಿದೆ. ಇದರಲ್ಲಿನ ಬಂಡವಾಳವನ್ನು ಯಾವುದೇ ರೀತಿಯ ಯೋಜನೆಯಲ್ಲಿ ಮುಕ್ತವಾಗಿ ತೊಡಗಿಸಬಹುದಾಗಿದೆ. ಚಿನ್ನದಿಂದ ಹಿಡಿದು ಲಾಟರಿ ಟಿಕೆಟ್ ಹೀಗೆ ಯಾವುದರಲ್ಲಾದರೂ ಹೆಡ್ಜ್ ಫಂಡ್ ನಿಧಿಯನ್ನು ವಿನಿಯೋಜನೆ ಮಾಡಬಹುದು. ಆದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಈ ರೀತಿ ಕಾರ್ಯನಿರ್ವಹಿಸಲು ಅವಕಾಶವಿಲ್ಲ. ನಿಯಂತ್ರಕ ಪ್ರಾಧಿಕಾರದ ನಿಯಮಾವಳಿಗಳ ಪ್ರಕಾರ ಅತ್ಯಂತ ಶಿಸ್ತು ಹಾಗೂ ಯೋಜನಾಬದ್ಧವಾಗಿ ಮ್ಯೂಚುವಲ್ ಫಂಡ್ ನಿಧಿಯನ್ನು ವಿನಿಯೋಜನೆ ಮಾಡಲಾಗುತ್ತದೆ.
ಹೂಡಿಕೆ ಅವಧಿಯಲ್ಲಿನ ವ್ಯತ್ಯಾಸ
ಮ್ಯೂಚುವಲ್ ಫಂಡ್‌ಗಳು ಸಾಮಾನ್ಯವಾಗಿ ಅಲ್ಪಾವಧಿಯ ಗಳಿಕೆಗಿಂತ ದೀರ್ಘಾವಧಿ ಹೂಡಿಕೆಯ ಗಳಿಕೆಗೆ ಆದ್ಯತೆ ನೀಡುತ್ತವೆ. ಆದರೆ ಹೆಡ್ಜ್ ಫಂಡ್‌ಗಳು ತಕ್ಷಣ ಲಾಭ ಗಳಿಸಲು ನೋಡುತ್ತವೆ. ಅಂದರೆ ಯಾವುದೇ ವಿಧಾನದಲ್ಲಿ ಹೂಡಿಕೆ ಮಾಡಿದರೂ ಬೇಗನೆ ಲಾಭ ಬರಬೇಕೆಂಬುದು ಹೆಡ್ಜ್ ಫಂಡ್‌ಗಳ ಗುರಿಯಾಗಿರುತ್ತದೆ. ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?
ಡೆರಿವೇಟಿವ್ಸ್‌ಗಳಲ್ಲಿ ಹೂಡಿಕೆ
ಮ್ಯೂಚುವಲ್ ಫಂಡ್‌ಗಳು ಡೆರಿವೇಟಿವ್ಸ್‌ಗಳಲ್ಲಿ ಹೂಡಿಕೆ ಮಾಡುವುದಿಲ್ಲ. ಆದರೆ ಹೆಡ್ಜ್ ಫಂಡ್‌ಗಳು ಇದಕ್ಕೆ ವ್ಯತಿರಿಕ್ತ. ಇವು ಹೈ ರಿಸ್ಕ್ ಒಳಗೊಂಡ ಯಾವುದೇ ವಿಧಾನದಲ್ಲಿ ಹೂಡಿಕೆ ಮಾಡಿ ಹೆಚ್ಚು ರಿಸ್ಕ್ ಹೆಚ್ಚು ಲಾಭದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಸಾಲದ ಹಣದಿಂದ ಹೂಡಿಕೆ
ಸಾಲ ಮಾಡಿ ತಂದ ಹಣವನ್ನು ಸಹ ಹೆಡ್ಜ್ ಫಂಡ್‌ಗಳು ಹೂಡಿಕೆಯಾಗಿ ಉಪಯೋಗಿಸುತ್ತವೆ. ಹೆಚ್ಚು ರಿಸ್ಕ್ ಇರುವ ಯೋಜನೆಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವುದು ಇವುಗಳ ಪ್ರಮುಖ ಲಕ್ಷಣವಾಗಿದೆ. ಆದರೆ ಹೀಗೆ ಸಾಲದ ಹಣದಿಂದ ಕೊಳ್ಳುವಿಕೆ ಹಾಗೂ ಮಾರಾಟಗಳು ಯಾವಾಗಲೂ ಅತಿ ಹೆಚ್ಚು ರಿಸ್ಕ್ ಹೊಂದಿರುತ್ತವೆ. ಮ್ಯೂಚುವಲ್ ಫಂಡ್‌ಗಳು ಹೂಡಿಕೆಗೆ ಯಾವತ್ತೂ ಸಾಲ ಮಾಡಿ ನಿಧಿಯನ್ನು ತರುವುದಿಲ್ಲ. ತಮ್ಮಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಮಾತ್ರ ಇವು ಹೂಡಿಕೆ ಮಾಡುತ್ತವೆ.
ಶಾರ್ಟ್ ಸೆಲ್ಲಿಂಗ್
ಹೆಡ್ಜ್ ಫಂಡ್‌ಗಳು ಶೇರು ಮಾರುಕಟ್ಟೆಯಲ್ಲಿ ಧೈರ್ಯದಿಂದ ಶಾರ್ಟ್ ಸೆಲ್ಲಿಂಗ್‌ಗೆ ಮುಂದಾಗುತ್ತವೆ. ಆದರೆ ಮ್ಯೂಚುವಲ್ ಫಂಡ್‌ಗಳು ಯಾವತ್ತೂ ಹೈ ರಿಸ್ಕ್ ಇರುವ ಶಾರ್ಟ್ ಸೆಲ್ಲಿಂಗ್ ಮಾಡುವುದಿಲ್ಲ.
ಹೈ ರಿಸ್ಕ್ ಗ್ರಾಹಕರಿಗೆ ಹೆಡ್ಜ್ ಫಂಡ್ ಉತ್ತಮ
ಹೆಡ್ಜ್ ಫಂಡ್ ಹಾಗೂ ಮ್ಯೂಚುವಲ್ ಫಂಡ್‌ಗಳ ಮಧ್ಯೆ ದೊಡ್ಡ ವ್ಯತ್ಯಾಸವಿರುವುದು ಮೇಲೆ ತಿಳಿಸಲಾದ ಹಲವಾರು ಅಂಶಗಳಿಂದ ನಮಗೆ ಗೊತ್ತಾಗುತ್ತದೆ. ಅಲ್ಪಾವಧಿಯಲ್ಲಿ ಹೈ ರಿಸ್ಕ್ ಹೂಡಿಕೆ ಮಾಡಿ ಲಾಭ ಪಡೆಯುವುದು ಹೆಡ್ಜ್ ಫಂಡ್‌ಗಳ ಕಾರ್ಯವಿಧಾನವಾಗಿದೆ. ಆದರೆ ಮ್ಯೂಚುವಲ್ ಫಂಡ್‌ಗಳು ದೀರ್ಘಾವಧಿಯ ಹಾಗೂ ಕಡಿಮೆ ರಿಸ್ಕ್ ಇರುವ ಮಾರ್ಗದಲ್ಲಿ ದೀರ್ಘಾವಧಿಯಲ್ಲಿ ಆದಾಯ ಬರುವಂತೆ ಹೂಡಿಕೆ ಮಾಡುತ್ತವೆ. ಹೀಗಾಗಿ ಸಣ್ಣ ಹೂಡಿಕೆದಾರರು ಯಾವತ್ತೂ ಹೆಡ್ಜ್ ಫಂಡ್‌ಗಳಲ್ಲಿ ಹೂಡಿಕೆ ಮಾಡದೆ ಮ್ಯೂಚುವಲ್ ಫಂಡ್‌ಗಳಿಗೆ ಅಂಟಿಕೊಂಡಿರುವುದು ಕ್ಷೇಮಕರ. ಇನ್ನು ಹೆಡ್ಜ್ ಫಂಡ್ ಮ್ಯಾನೇಜರಗಳು ತಮ್ಮ ಕೆಲಸದ ಪ್ರದರ್ಶನವನ್ನು ಆಧರಿಸಿ ಸಂಬಳ ಪಡೆಯುತ್ತಾರೆ. ಆದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೀಗಾಗುವುದಿಲ್ಲ. ಎಲ್ಲ ಸಂದರ್ಭಗಳಲ್ಲಿಯೂ ಮ್ಯೂಚುವಲ್ ಫಂಡ್ ಮ್ಯಾನೇಜರ್ ಗಳು ತಮಗೆ ನಿಗದಿತ ಸಂಭಾವನೆಯನ್ನು ಪಡೆಯುತ್ತಾರೆ.
ಎಚ್‌ಎನ್‌ಐ (high networth individual) ವ್ಯಕ್ತಿಗಳ ಮೊದಲ ಆಯ್ಕೆ ಹೆಡ್ಜ್ ಫಂಡ್
ಹೂಡಿಕೆದಾರರಿಂದ ಬಂಡವಾಳವನ್ನು ಸಂಗ್ರಹಿಸಿ ಅದನ್ನು ಲಾಭ ಬರುವ ಹಾಗೆ ಮಾರುಕಟ್ಟೆಯಲ್ಲಿ ವಿನಿಯೋಜಿಸುವಲ್ಲಿ ಮ್ಯೂಚುವಲ್ ಫಂಡ್ ಹಾಗೂ ಹೆಡ್ಜ್ ಫಂಡ್‌ಗಳು ಕೆಲಸ ಮಾಡುತ್ತವೆ. ಆದರೆ ಹೆಡ್ಜ್ ಫಂಡ್‌ಗಳು 'ಶ್ರೀಮಂತರ ಮ್ಯೂಚುವಲ್ ಫಂಡ್' ಎಂದು ಹೆಸರುವಾಸಿಯಾಗಿವೆ. ಸಾಗರೋತ್ತರ ದೇಶಗಳಲ್ಲಿನ ಹೂಡಿಕೆದಾರರಿಗೆ ಹೆಡ್ಜ್ ಫಂಡ್‌ಗಳು ಅತಿ ಮೆಚ್ಚಿನ ಹೂಡಿಕೆ ಯೋಜನೆಯಾಗಿ ಹೊರಹೊಮ್ಮುತ್ತಿವೆ. ಹಲವಾರು ವಿಧಾನಗಳಲ್ಲಿ ಹೂಡಿಕೆ ಮಾಡಿ ಹೆಚ್ಚು ಆದಾಯ ಕೊಡುವುದರಿಂದ ಇವುಗಳ ಜನಪ್ರಿಯತೆ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಅದರಲ್ಲೂ ಎಚ್‌ಎನ್‌ಐ (high networth individual) ಹೂಡಿಕೆದಾರರು ಅಂದರೆ ದೊಡ್ಡ ಮೊತ್ತದ ಬಂಡವಾಳ ಹೊಂದಿದ ವ್ಯಕ್ತಿಗಳಿಗೆ ಹೆಡ್ಜ್ ಫಂಡ್‌ಗಳು ಅತಿ ಮೆಚ್ಚಿನ ಹೂಡಿಕೆ ವಿಧಾನವಾಗುತ್ತಿವೆ. ಸಣ್ಣ ಹೂಡಿಕೆದಾರರು ಸಹ ಹೆಡ್ಜ್ ಫಂಡ್‌ಗಳಲ್ಲಿ ಹಣ ತೊಡಗಿಸುವಂತೆ ಅನುಕೂಲ ಕಲ್ಪಿಸಲು ವಿಶ್ವದ ಕೆಲ ದೇಶಗಳಲ್ಲಿ ಕಾನೂನು ಜಾರಿಗೊಳಿಸುವ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ.


Click it and Unblock the Notifications