ಶೂನ್ಯ ಮೊತ್ತದ ಖಾತೆ (zero balance account) : ನಿಮಗೆ ಗೊತ್ತಿರಬೇಕಾದ 5 ಸಂಗತಿ

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹಲವಾರು ಶೂನ್ಯ ಮೊತ್ತದ ಉಳಿತಾಯ ಖಾತೆ (zero-balance savings accounts) ಸೌಲಭ್ಯ ನೀಡುತ್ತದೆ. ಅದರಲ್ಲಿ ಮಾಸಿಕ ಸರಾಸರಿ ಮೊತ್ತ (ಎಂಎಬಿ) ನಿಯಮ ಅನ್ವಯಿಸುವುದಿಲ್ಲ.

  ಸಾಮಾನ್ಯವಾಗಿ ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ಕನಿಷ್ಟ ಸರಾಸರಿ ಮೊತ್ತ (ಎಮ್ಎಬಿ) ಇರಿಸಬೇಕಾಗುತ್ತದೆ. ಜಿರೋ ಬ್ಯಾಲೆನ್ಸ್ ಉಳಿತಾಯ ಖಾತೆಗಳನ್ನು ಹೊರತುಪಡಿಸಿ ಉಳಿದ ಉಳಿತಾಯ ಖಾತೆಗಳಲ್ಲಿ ಎಮ್ಎಬಿ ಶುಲ್ಕಗಳು ವಿಧಿಸಲ್ಪಡುತ್ತವೆ. ಕೆವೈಸಿ ದಾಖಲೆಗಳೊಂದಿಗೆ ಯಾವುದೇ ವ್ಯಕ್ತಿಯಿಂದ ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ. ಸಾಮಾನ್ಯ ಉಳಿತಾಯ ಬ್ಯಾಂಕ್ ಖಾತೆಗಳ ಬಡ್ಡಿದರದಂತೆಯೇ ಶೂನ್ಯ ಖಾತೆಗಳ ಬಡ್ಡಿದರ ಇರುತ್ತದೆ. ಖಾತೆ ತೆರೆಯುವ ಮುನ್ನ ಈ ಅಂಶಗಳನ್ನು ತಪ್ಪದೇ ಚೆಕ್ ಮಾಡಿ..

   

  ಎಸ್ಬಿಐನ ಐದು ರೀತಿಯ ಶೂನ್ಯ ಮೊತ್ತ ಉಳಿತಾಯ ಖಾತೆಗಳ (SBI zero-balance savings accounts) ವಿವರ ಇಲ್ಲಿ ನೀಡಲಾಗಿದೆ.

  1. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ (BSBD)

  ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳನ್ನು KYC ದಾಖಲೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ತೆರೆಯಬಹುದಾಗಿದೆ.
  ಪ್ರಾಥಮಿಕವಾಗಿ ಸಮಾಜದ ಬಡ ಜನರಿಗೆ ಶುಲ್ಕ ಅಥವಾ ಯಾವುದೇ ಹೊರೆ ಇಲ್ಲದೆ ಹಣ ಉಳಿತಾಯವನ್ನು ಪ್ರೋತ್ಸಾಹಿಸಲು ಪ್ರಾರಂಭಿಸಲಾಗಿದೆ. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ (BSBD) ಖಾತೆಯನ್ನು ಏಕವ್ಯಕ್ತಿ ಅಥವಾ ಜಂಟಿಯಾಗಿ ನಿರ್ವಹಿಸಬಹುದು.

  2. ಪ್ರಧಾನ ಮಂತ್ರಿ ಜನ ಧನ ಖಾತೆ

  ಪ್ರಧಾನ ಮಂತ್ರಿ ಜನ ಧನ ಖಾತೆ (ಪಿಎಂಜೆಡಿವೈ) ಅಡಿಯಲ್ಲಿ ಶೂನ್ಯ ಮೊತ್ತದ ಖಾತೆಯನ್ನು ತೆರೆಯಬಹುದು. ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು ಪ್ರಧಾನ ಮಂತ್ರಿ ಜನ ಧನ ಯೋಜನೆಯ ಪ್ರಮುಖ ಧ್ಯೇಯವಾಗಿದೆ. ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಿದೆ. ಉಳಿತಾಯ ಖಾತೆ ತೆರೆಯುವಾಗ ಇಂತಿಷ್ಟು ಮೊತ್ತದ ಹಣ ಠೇವಣಿ ಇಡಬೇಕು ಎಂಬ ನಿಯಮ ಇರುತ್ತದೆ. ಆದರೆ ಜನಧನ ಯೋಜನೆಯಲ್ಲಿ ಇಂತಿಷ್ಟು ಪ್ರಮಾಣದ ಹಣ ಇಡಲೇಬೇಕೆಂಬ ನಿಯಮವಾಗಲಿ ಒತ್ತಾಯವಾಗಲಿ ಇಲ್ಲ. ಇದು ಶೂನ್ಯ ಬ್ಯಾಲೆನ್ಸ್ ಆಗಿದ್ದು, ಕನಿಷ್ಟ ಮೊತ್ತ ಇಡಬೇಕಾಗಿಲ್ಲ. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ರವಾನಿಸುವುದು ಅಥವಾ ವರ್ಗಾಯಿಸುವುದು ಜನಧನ ಯೋಜನೆಯಲ್ಲಿ ಅತ್ಯಂತ ಸುಲಭ. ಗ್ರಾಮೀಣ ಮತ್ತು ಮಧ್ಯಮ ವರ್ಗದ ಜನರಿಗೆ ಇದು ತುಂಬಾ ಸಹಕಾರಿ ಆಗಲಿದೆ.
  ಪಿಎಂಜೆಡಿವೈ ಖಾತೆ ತೆರೆದರೆ ದೇಶದ ಪ್ರತಿಯೊಬ್ಬರಿಗೂ ಅಪಘಾತ ವಿಮೆ ದೊರೆಯುತ್ತದೆ. ಆಕಸ್ಮಿಕ ಅವಘಡ ಸಂಭವಿಸಿ ವ್ಯಕ್ತಿ ಮೃತನಾದರೆ 1 ಲಕ್ಷ ರೂ. ಅಪಘಾತ ವಿಮೆಯನ್ನು ಈ ಯೋಜನೆ ಅನ್ವಯ ಪಾವತಿ ಮಾಡಲಾಗುತ್ತದೆ. ಸರ್ಕಾರ ನೇರವಾಗಿ ಫಲಾನುಭವಿಯ ಖಾತೆಗೆ ಹಣ ಜಮೆ ಮಾಡುತ್ತದೆ. 'ಪ್ರಧಾನ ಮಂತ್ರಿ ಜನ ಧನ ಖಾತೆ' ಯಾಕೆ ತೆರೆಯಬೇಕು?

  3. ಮಕ್ಕಳ ಖಾತೆಗಳು

  ಎಸ್ಬಿಐ ಕಿರಿಯರಿಗಾಗಿ ಪೆಹ್ಲಾ ಕದಮ್ ಮತ್ತು ಪೆಹ್ಲಿ ಉಡಾನ್ (Pehla Kadam and Pehli Udaan) ಉಳಿತಾಯ ಖಾತೆಗಳನ್ನು ಪರಿಚಯಿಸಿದೆ. 10 ವರ್ಷಕ್ಕಿಂತ ಮೇಲ್ಪಟ್ಟವರು ಹಾಗು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳ ಹೆಸರಿನಲ್ಲಿ ಖಾತೆ ತೆರೆಯಬಹುದು. ಈ ಖಾತೆಗಳಿಗೆ ಮಾಸಿಕ ಸರಾಸರಿ ಮೊತ್ತ (MAB) ಅನ್ವಯಿಸುವುದಿಲ್ಲ. ಮಕ್ಕಳಲ್ಲಿ ಹಣ ಉಳಿತಾಯದ ಮಹತ್ವವನ್ನು ತಿಳಿಸಲು ಇದು ಸಹಾಯ ಮಾಡುತ್ತದೆ.

  4. ಸಂಬಳ ಖಾತೆ

  ಎಸ್ಬಿಐನಲ್ಲಿ ಸಂಬಳ ಖಾತೆ ಹೊಂದಿರುವ ಗ್ರಾಹಕರು ಮಾಸಿಕ ಸರಾಸರಿ ಮೊತ್ತ (MAB) ಉಳಿಸುವ ಅಗತ್ಯವಿಲ್ಲ. ಸಂಬಳದ ಖಾತೆದಾರರಿಗೆ ಆನ್ಲೈನ್ ​​NEFT/RTGS ವಹಿವಾಟುಗಳು, ಡಿಮಾಂಡ್ ಡ್ರಾಪ್ಟ್ ಮತ್ತು ಎಸ್ಎಂಎಸ್ ನಂತಹ ಸೌಲಭ್ಯಗಳನ್ನು ಉಚಿತ ವಾಗಿ ಒದಗಿಸಲಾಗುತ್ತದೆ. ಸಂಬಳ ಖಾತೆದಾರರಿಗೆ ನೀಡಲಾಗುವ ವಿಶೇಷ ಸವಲತ್ತು ಮತ್ತು ಕೊಡುಗೆಗಳು ಕಂಪೆನಿ/ಸಂಸ್ಥೆಯ ಕೆಟಗರಿಯನ್ನು ಆಧರಿಸಿರುತ್ತದೆ.

  5. ಪಿಂಚಣಿ ಖಾತೆಗಳು

  ಎಸ್ಬಿಐ ನಲ್ಲಿ ಪಿಂಚಣಿ ಖಾತೆ ಹೊಂದಿದ್ದರೆ ಮಾಸಿಕ ಸರಾಸರಿ ಮೊತ್ತದ (MAB) ಅಗತ್ಯವಿರುವುದಿಲ್ಲ. ಪಿಂಚಣಿ ಖಾತೆಯ ನಿರ್ವಹಣೆಗಾಗಿ ಎಸ್ಬಿಐ ಯಾವುದೇ ಕನಿಷ್ಟ ಮೊತ್ತ ನಿಗದಿಪಡಿಸಿಲ್ಲ.

  Read more about: sbi banking savings money
  English summary

  Zero Balance Savings Accounts: 5 things to know

  SBI offers several zero-balance savings accounts, on which the monthly average balance (MAB) rule is not applicable.
  Story first published: Thursday, January 24, 2019, 13:12 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more