For Quick Alerts
ALLOW NOTIFICATIONS  
For Daily Alerts

ಎಲ್ಐಸಿ (LIC) ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ?

ಎಲ್ಐಸಿ ನಿರ್ದಿಷ್ಟ ಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ. ನಿಮ್ಮ ಹತ್ತಿರದ ಎಲ್ಐಸಿ ಶಾಖೆ ಅಥವಾ ಏಜೆಂಟರನ್ನು ಸಂಪರ್ಕಿಸಿ. ವೆಬ್ಸೈಟ್ ಅಥವಾ ಏಜೆಂಟರ ಮೂಲಕ ಅರ್ಜಿ ಪಡೆದುಕೊಳ್ಳಬಹುದಾಗಿದೆ.

|

ಭಾರತೀಯ ಜೀವ ವಿಮಾ ನಿಗಮ ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿದೆ. ಇದು ಹಲವು ವಿಧದ, ಬೇರೆ ಬೇರೆ ಅವಧಿಯ ವಿಮಾ ಪಾಲಿಸಿಗಳನ್ನು ಪರಿಚಯಿಸಿದೆ. ಗ್ರಾಹಕರು ತಾವು ಪಡೆಯುವ ವಿಮಾ ಪಾಲಿಸಿಗಳ ಮೇಲೆ ಸಾಲ ಪಡೆಯುವ ಅವಕಾಶ ಕೂಡ ಕಲ್ಪಿಸಲಾಗಿದೆ.

ನಿಮ್ಮ ಎಲ್ಐಸಿ ವಿಮಾ ಪಾಲಿಸಿಯ ಮೇಲೆ ಸಾಲ ಪಡೆಯಲು ಹಲವಾರು ಕ್ರಮಗಳನ್ನು ಅನುಸರಿಸಬೇಕಾಗಿದ್ದು, ಅದರ ವಿವರ ಇಲ್ಲಿ ನೀಡಲಾಗಿದೆ. ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಹಾಗು ಸ್ಟೇಟಸ್ ಚೆಕ್ ಮಾಡೋದು ಹೇಗೆ?

ಸಾಲ ಪಡೆಯಲು ಅರ್ಹತೆ

ಸಾಲ ಪಡೆಯಲು ಅರ್ಹತೆ

ಎಲ್ಐಸಿ ಪಾಲಿಸಿ ಮೇಲೆ ಸಾಲ ಪಡೆಯಲು ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಯ ಪಾಲಿಸಿ ಕಂತುಗಳನ್ನು ಸರಿಯಾಗಿ ತುಂಬಿರುವ ವ್ಯಕ್ತಿಗಳು ಅರ್ಹರಾಗಿರುತ್ತಾರೆ. ವಿಮಾ ಮೊತ್ತ ಮತ್ತು ಅವಧಿಯ ಆಧಾರದಲ್ಲಿ ಸಾಲ ನೀಡಿಕೆಯ ಪ್ರಮಾಣವೂ ವ್ಯತ್ಯಾಸವಾಗುವುದು. ಈ ಸಾಲ ಅತ್ಯಂತ ಸುರಕ್ಷಿತ ಮಾದರಿಯದ್ದಾಗಿದೆ. ಅಲ್ಲದೇ ಕಡಿಮೆ ಪ್ರಮಾಣದ ಬಡ್ಡಿಯನ್ನು ಹೊಂದಿದ್ದು ರಿಸ್ಕ್ ಗಳಿಂದ ಸಂಪೂರ್ಣ ಮುಕ್ತವಾಗಿದೆ. ಮಾತೃಶ್ರೀ ಯೋಜನೆ: ರೂ. 12 ಸಾವಿರ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಸಾಲ ಪಡೆಯುವುದು ಹೇಗೆ?

ಸಾಲ ಪಡೆಯುವುದು ಹೇಗೆ?

ಎಲ್ಐಸಿ ನಿರ್ದಿಷ್ಟ ಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ. ನಿಮ್ಮ ಹತ್ತಿರದ ಎಲ್ಐಸಿ ಶಾಖೆ ಅಥವಾ ಏಜೆಂಟರನ್ನು ಸಂಪರ್ಕಿಸಿ. ವೆಬ್ಸೈಟ್ ಅಥವಾ ಏಜೆಂಟರ ಮೂಲಕ ಅರ್ಜಿ ಪಡೆದುಕೊಳ್ಳಬಹುದಾಗಿದೆ. ಆದರೆ ನಿಮ್ಮ ಪಾಲಿಸಿ ಇರುವ ಶಾಖೆಯಲ್ಲೇ ಅರ್ಜಿ ಸಲ್ಲಿಸಬೇಕು. ನಂತರ ಅವರು ಕೇಳುವ ಎಲ್ಲ ಮಾಹಿತಿಗಳನ್ನು ನೀಡಬೇಕು. ಅಲ್ಲದೇ ನಿಮ್ಮ ಪಾಲಿಸಿಯ ಅಸಲಿ ಬಾಂಡ್ ಅನ್ನು ಸಾಲ ಪಡೆಯಲು ನೀವು ನೀಡಬೇಕಾಗುತ್ತದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲಿಗೆ, ನೀವು ಎಲ್ಐಸಿ ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬೇಕು.
- ವೆಬ್ಸೈಟ್ ನೋಂದಣಿಗಾಗಿ LIC ವೆಬ್ಸೈಟ್ (https://www.licindia.in/)ಲಿಂಕ್ ಅನ್ನು ಮೇಲೆ ಕ್ಲಿಕ್ ಮಾಡಿ.
- ನೀವು Customer portal ಮೇಲೆ ಕ್ಲಿಕ್ ಮಾಡಿ ಅಥವಾ ಕೆಳಗಿನ ಲಿಂಕ್ ಅನ್ನು ನೇರವಾಗಿ ಪ್ರವೇಶಿಸಬಹುದು. (https://licindia.in/Home-(1)/LICOnlineServicePortal).

- ಹೊಸ ಬಳಕೆದಾರ ಕ್ಲಿಕ್ ಮಾಡಿ. ನೀವು ಈಗಾಗಲೇ ನೋಂದಾಯಿತ ಬಳಕೆದಾರರಾಗಿದ್ದರೆ, ನೀವು ಸರಳವಾಗಿ ಲಾಗಿನ್ ಮಾಡಬಹುದು.
- ವೆಬ್ಸೈಟ್ ನಲ್ಲಿ ನೋಂದಾಯಿಸಲು, ನಿಮ್ಮ ಪಾಲಿಸಿ ವಿವರಗಳನ್ನು ಮತ್ತು ಪಾನ್/ಆಧಾರ್/ ಪಾಸ್ಪೋರ್ಟ್ ನಂತಹ ಕೆಲವು ವೈಯಕ್ತಿಕ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ.
- ನೀವು ನಮೂದಿಸಿದ ವಿವರಗಳು ಹೊಂದಾಣಿಕೆಯಾಗಬೇಕು. ನೀವು ನೋಂದಾಯಿಸಿದ ನಂತರ, ನೀವು LIC ಗ್ರಾಹಕ ಪೋರ್ಟಲ್ ಗೆ ಲಾಗ್ ಇನ್ ಮಾಡಬಹುದು.

ಬಡ್ಡಿ ದರ ಎಷ್ಟು?

ಬಡ್ಡಿ ದರ ಎಷ್ಟು?

ಯಾವುದೇ ಬ್ಯಾಂಕು, ಫೈನಾನ್ಸ್ ಅಥವಾ ಕೋಅಪರೇಟಿವ್ ಸೊಸೈಟಿಗಳಲ್ಲಿ ತೆಗೆದುಕೊಳ್ಳುವಂತೆ ಇಲ್ಲಿಯೂ ಕೂಡ ಸಾಲಕ್ಕೆ ಬಡ್ಡಿ ಅನ್ವಯವಾಗುತ್ತದೆ. ಶೇ. 9 ರಿಂದ 10 ರವರೆಗೆ ಆರು ತಿಂಗಳಿಗೆ ಅನ್ವಯಿಸುವಂತೆ ಸಾಮಾನ್ಯವಾಗಿ ಬಡ್ಡಿಯನ್ನು ವಿಧಿಸಲಾಗುತ್ತದೆ. ಬೇರೆ ಕಡೆ ಹೋಲಿಸಿದರೆ ಇದು ಕಡಿಮೆ ಎಂದೇ ಹೇಳಬಹುದು.

ಸಾಲದ ಮೊತ್ತ

ಸಾಲದ ಮೊತ್ತ

ನಿಮ್ಮ ಪಾಲಿಸಿಗೆ ಅನುಗುಣವಾಗಿ ಶೇ. 90 ರಷ್ಟು ಪ್ರಮಾಣದ ಸಾಲವನ್ನು ಒದಗಿಸಲಾಗುತ್ತದೆ. ಇಲ್ಲಿಯವರೆಗೆ ಪಾವತಿಯಾದ ಹಣದ ಮೊತ್ತ, ದೊರೆತ ಬೋನಸ್, ಪಾಲಿಸಿಯ ಇತಿಹಾಸ ಎಲ್ಲವನ್ನು ಗಮನಿಸಿ ಸಾಲ ನಿರ್ಧರಿಸಲಾಗುತ್ತದೆ.

ಸಾಲ ಪಾವತಿ ಮತ್ತು ಅವಧಿ

ಸಾಲ ಪಾವತಿ ಮತ್ತು ಅವಧಿ

ಅತಿ ಕಡಿಮೆ ಅಂದರೆ ಕನಿಷ್ಠ ಆರು ತಿಂಗಳ ಅವಧಿಗೆ ಸಾಲ ನೀಡಲಾಗುವುದು. ಸಾಲ ಮರುಪಾವತಿ ದಿನಾಂಕವನ್ನು ಮೊದಲೆ ತಿಳಿಸಲಾಗಿರುತ್ತದೆ. ಒಂದು ವೇಳೆ ಅವಧಿಗೂ ಮುನ್ನವೇ ಸಾಳ ಮರುಪಾವತಿಗೆ ಮುಂದಾದರೂ ಆರು ತಿಂಗಳ ಬಡ್ಡಿ ತುಂಬಲೇಬೇಕಾಗುತ್ತದೆ.

ಸಾವು-ನೋವು

ಸಾವು-ನೋವು

ಒಂದು ವೇಳೆ ಸಾಲ ಪಡೆದ ಪಾಲಿಸಿದಾರನ ಸಾವು ಸಂಭವಿಸಿದರೆ ಸಾವಿಗೀಡಾದ ದಿನದವರೆಗೆ ಬಡ್ಡಿ ಲೆಕ್ಕ ಹಾಕಲಾಗುವುದು. ಒಂದು ವೇಳೆ ಈ ಸಂದರ್ಭದಲ್ಲಿ ಬಡ್ಡಿ ಪಾವತಿ ಮಾಡಲು ವಿಫಲವಾದರೆ ಪಾಲಿಸಿಯ ಮೊತ್ತದಲ್ಲಿಯೇ ಹಣ ಕಡಿತಮಾಡಿಕೊಳ್ಳಲಾಗುವುದು. ಪಾಲಿಸಿಯ ಉಳಿದ ಹಣವನ್ನು ಪಾಲಿಸಿದಾರನಿಗೆ ನೀಡಲಾಗುವುದು.

English summary

How to Apply for Loan against LIC Policy?

To apply for the loan, you need to contact your agent or the nearest LIC branch. If this sounds too much work for you, now you can apply for loan against your LIC policy online too.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X