ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಪ್ರಕಟಿಸಿದ್ದಾರೆ. ಕಳೆದ ಬಾರಿ ಬಜೆಟ್ ನಲ್ಲಿ ಪ್ರಕಟಿಸಿರುವ ಈ ಯೋಜನೆಯಲ್ಲಿ ಹಲವು ಹೊಸ ಬದಲಾವಣೆಗಳನ್ನು ಮಾಡಲಾಗಿದೆ.
ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಎರಡನೇ ಬಜೆಟ್ ನಲ್ಲಿ ರೈತರು, ಬಡವರು, ಹಿಂದುಳಿದವರು, ಎಸ್ಸಿ-ಎಸ್ಟಿ, ಕಾರ್ಮಿಕ ವರ್ಗದವರು, ವಿದ್ಯಾರ್ಥಿಗಳು ಒಳಗೊಂಡಂತೆ ಹಲವು ವಲಯಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಜೊತೆಗೆ ಮಹಿಳೆಯರಿಗಾಗಿ ಕೂಡ ಅನೇಕ ಯೋಜನೆಗಳನ್ನು ಘೋಷಿಸಿದ್ದು, ಮುಖ್ಯವಾಗಿ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಪ್ರಕಟಿಸಿದ್ದಾರೆ. ಕಳೆದ ಬಾರಿ ಬಜೆಟ್ ನಲ್ಲಿ ಪ್ರಕಟಿಸಿರುವ ಈ ಯೋಜನೆಯಲ್ಲಿ ಹಲವು ಹೊಸ ಬದಲಾವಣೆಗಳನ್ನು ಮಾಡಲಾಗಿದೆ. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ
ಮಾತೃಶ್ರೀ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಬೇಕಾಗುವ ದಾಖಲಾತಿ, ಸಿಗುವ ಸಹಾಯಧನ ಇತ್ಯಾದಿ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
ಮಾತೃಶ್ರೀ ಯೋಜನೆ ಎಂದರೇನು?
ರಾಜ್ಯ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಕುಟುಂಬ) ಗರ್ಭಿಣಿ ಮಹಿಳೆಯರಿಗಾಗಿ ಮಾತೃಶ್ರೀ ಯೋಜನೆ ಪ್ರಕಟಿಸಿದೆ. ಹೆಚ್ಚಿನ ಬಡ ಕುಟುಂಬಗಳಿಗೆ ಆರೋಗ್ಯ ಸಂಬಂಧಿತ ಸೌಲಭ್ಯ ಪಡೆಯಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಈಗಾಗಲೇ ರಾಜ್ಯಸರ್ಕಾರದ ಮಾತೃಪೂರ್ಣ ಮತ್ತು ಕೇಂದ್ರ ಸರ್ಕಾರದ ಮಾತೃ ವಂದನಾ ಯೋಜನೆಗಳು ಕೂಡ ಜಾರಿಯಲ್ಲಿವೆ. ಇವುಗಳೊಂದಿಗೆ ಕುಮಾರಸ್ವಾಮಿಯವರು ಮಾತೃಶ್ರೀ ಯೋಜನೆಯನ್ನು ಹೊಸದಾಗಿ ಘೋಷಿಸಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
ರೂ. 12 ಸಾವಿರ ಸಹಾಯಧನ
ಕುಮಾರಸ್ವಾಮಿಯವರ ಮಾತೃಶ್ರೀ ಯೋಜನೆ (Mathru shree scheme) ಮುಖಾಂತರ ಫಲಾನುಭವಿಗಳು ಒಟ್ಟು ರೂ. 12000 ಪಡೆಯಬಹುದಾಗಿದೆ. ಈ ಸಹಾಯಧನವನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ. ಹೆರಿಗೆ ಪೂರ್ವದ ಮೂರು ತಿಂಗಳಿಗೆ ತಲಾ ಎರಡು ಸಾವಿರ ಹಾಗು ಹೆರಿಗೆ ನಂತರದ ಮೂರು ತಿಂಗಳು ತಲಾ ಎರಡು ಸಾವಿರ ನೀಡಲಾಗುತ್ತದೆ. ಹೀಗೆ ಒಟ್ಟು 12 ಸಾವಿರ ಮೊತ್ತ ಫಲಾನುಭವಿಗಳು ಪಡೆಯಲು ಅರ್ಹರಾಗಿತ್ತಾರೆ. ಕಳೆದ ಬಾರಿಯ ಬಜೆಟ್ ನಲ್ಲಿ ಘೋಷಿಸಿದಂತೆ ಕೇವಲ 6 ಸಾವಿರ ಪಡೆಯಬಹುದಾಗಿತ್ತು. ಅಂದರೆ ಹೆರಿಗೆ ಪೂರ್ವದ ಮೂರು ತಿಂಗಳಿಗೆ ತಲಾ ಒಂದು ಸಾವಿರ ಹಾಗು ಹೆರಿಗೆ ನಂತರದ ಮೂರು ತಿಂಗಳು ತಲಾ ಒಂದು ಸಾವಿರ ನೀಡಲಾಗುತ್ತಿತ್ತು. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವುದು ಹೇಗೆ?
ಮಾತೃಶ್ರೀ ಯೋಜನೆಯ ಪ್ರಯೋಜನ ಪಡೆಯುವವರು ನಿಮ್ಮ ಗ್ರಾಮದ ಅಥವಾ ಸುತ್ತಮುತ್ತಲಿನ ಅಂಗನವಾಡಿ ಶಿಕ್ಷಕಿಯರು ಅಥವಾ ಆಶಾ ಕಾರ್ಯಕರ್ತೆಯರ ಬಳಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಬೇಕಾಗುವ ದಾಖಲಾತಿಗಳನ್ನು ಕೂಡ ಇವರಿಗೆ ಸಲ್ಲಿಸಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಅಂಗನವಾಡಿ ಶಿಕ್ಷಕಿ/ಕಾರ್ಯಕರ್ತೆಯರನ್ನು ಸಂಪರ್ಕಿಸಿ ಪರಿಪೂರ್ಣ ಮಾಹಿತಿ ಪಡೆಯಿರಿ.
ಬೇಕಾಗುವ ದಾಖಲಾತಿಗಳು
ತಾಯಿ ಕಾರ್ಡ್
ಆಧಾರ್ ಕಾರ್ಡ್
ಚುನಾವಣಾ ಚೀಟಿ
ಆಧಾರ್ ಕಾರ್ಡ್ ಲಿಂಕ್ ಆದ ಬ್ಯಾಂಕ್ ಖಾತೆ (ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ.)
ಪತಿಯ ಆಧಾರ್ ಮತ್ತು ಚುನಾವಣಾ ಚೀಟಿ
ಯೋಜನೆ ಜಾರಿ ಮತ್ತು ನಿಯಮ
ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ ಒಂದರಿಂದ ಮಾತೃಶ್ರೀ ಯೋಜನೆ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮಾತೃಶ್ರೀ ಯೋಜನೆಯ ನಿಯಮದನ್ವಯ ಎರಡು ಮಕ್ಕಳಿಗೆ ಇದು ಅನ್ವಯವಾಗಲಿದೆ. ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೀಡುವುದು ಕಡ್ಡಾಯವಾಗಿರುತ್ತದೆ. ಮೊತ್ತ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.
ಅಂಗನವಾಡಿ ಮೇಲುಸ್ತುವಾರಿ
ಮಾತೃಶ್ರೀ ಯೋಜನೆಯ ಮೇಲುಸ್ತುವಾರಿಯನ್ನು ಆಯಾ ಆಯಾ ಗ್ರಾಮಗಳ ಅಂಗನವಾಡಿ ಶಿಕ್ಷಕಿಯರಿಗೆ ಅಥವಾ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ. ಆಯಾ ಗ್ರಾಮದ ಎಲ್ಲಾ ಗರ್ಭೀಣಿಯರ ಸಂಪೂರ್ಣ ಮಾಹಿತಿಯನ್ನು ಅಲ್ಲಿನ ಅಂಗನವಾಡಿ ಅಥವಾ ಆಶಾ ಕಾರ್ಯಕರ್ತೆಯರು ಒದಗಿಸಬೇಕಾಗುತ್ತದೆ.
ಯೋಜನೆಗೆ ಮೀಸಲಿಟ್ಟ ಮೊತ್ತ
ರಾಜ್ಯ ಸರ್ಕಾರವು ಪ್ರಸ್ತುತ ಬಜೆಟ್ ನಲ್ಲಿ ಮಾತೃಶ್ರೀ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ರೂ. 470 ಕೋಟಿ ಮೀಸಲಿಟ್ಟಿದ್ದಾರೆ. ಕಳೆದ ಬಾರಿ ಈ ಮೊತ್ತ ೩೫೦ ಕೋಟಿಗಳಾಗಿತ್ತು. ಮಾತೃಶ್ರೀ ಯೋಜನೆಯ ಅನುದಾನವನ್ನು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಹೆಚ್ಚಿಸಲಾಗುವುದು.
ಕಾರ್ಯಕರ್ತೆಯರ ಗೌರವಧನ ಹೆಚ್ಚಳ
ಇನ್ನೊಂದು ಸಂತಸದ ಸಂಗತಿಯೆಂದರೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ರೂ. ೫೦೦ ಹಾಗು ಅಂಗನವಾಡಿ ಸಹಾಯಕಿಯರ ಗೌರವಧನ ರೂ. ೨೫೦ ಹೆಚ್ಚಿಸಲಾಗಿದೆ. ನವೆಂಬರ್ ಒಂದರಿಂದಲೇ ಈ ನಿಯಮ ಜಾರಿಯಾಗಲಿದೆ ಎಮದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಬಡವರಿಗಾಗಿ ಇನ್ನಿತರ ಯೋಜನೆಗಳು
- ಸಂಧ್ಯಾ ಸುರಕ್ಷಾ ಪಿಂಚಣಿಯ ಮೊತ್ತವನ್ನು ರೂ. 600 ರಿಂದ 1000 ರೂಪಾಯಿಗೆ ಏರಿಕೆ ಮಾಡಲಾಗಿದೆ.
- ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ ಜಾರಿ ಮಾಡಲಾಗುವುದು.
- ಆಭರಣಗಳ ಮೇಲೆ ಬೆಳೆ ಸಾಲ. ರೈತ ಮಹಿಳೆಯರ ಚಿನ್ನದ ಮೇಲೆ ಶೇ. 3ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಾಗುವುದು.
- ಕಾರ್ಮಿಕರು ಕೆಲಸದ ಸ್ಥಳದಲ್ಲಿ ಮೃತಪಟ್ಟರೆ ರೂ. 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಕಾರ್ಮಿಕರ ಮಕ್ಕಳ LKG, ನರ್ಸರಿ ಶಿಕ್ಷಣಕ್ಕಾಗಿ ರೂ. 2500 ಪ್ರೋತ್ಸಾಹಧನ ನೀಡಲಾಗುವುದು.
ಫಲಾನುಭವಿಗಳಿಗೆ ಕಿವಿ ಮಾತು
ಗರ್ಭಿಣಿಯರು ಹಾಗು ಇನ್ನಿತರ ಯೋಜನೆಯ ಸಹಾಯಧನ ಪಡೆಯಲು ಬೇಕಾಗಬಹುದಾದ ದಾಖಲಾತಿಗಳನ್ನು ಸರಿಪಡಿಸುವುದು ಒಳಿತು. ಗರ್ಭೀಣಿಯರು ತಾಯಿ ಮನೆಯ ಡಾಕ್ಯುಮೆಂಟ್ ಇಲ್ಲವೆ ಬೇರೆ ಬೇರೆ ಡಾಕ್ಯುಮೆಂಟ್ ಗಳು ತಯಾರಿ ಇಟ್ಟುಕೊಳ್ಳುವುದು ಉತ್ತಮ. ನಿಮ್ಮ ಹತ್ತಿರದ ನೆಮ್ಮದಿ ಕೇಂದ್ರ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ದಾಖಲಾತಿಗಳನ್ನು ಮಾಡಿಸಿಕೊಳ್ಳಿ. ಕರ್ನಾಟಕ ಬಜೆಟ್ 2019: ಎಚ್.ಡಿ ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..


Click it and Unblock the Notifications