ಗ್ಯಾಸ್ ಏಜೆನ್ಸಿಗಳು ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸುತ್ತವೆ. ಕೆಲವೊಮ್ಮೆ ಗ್ರಾಹಕರೇ ಗ್ಯಾಸ್ ಏಜೆನ್ಸಿಗೆ ಹೋಗಿ ಸಿಲಿಂಡರ್ ತರುತ್ತಾರೆ. ಅಂತಹ ಸಂದರ್ಭದಲ್ಲಿ ಗ್ರಾಹಕರು ಏಜೆನ್ಸಿಯಿಂದ ಹಣ ಪಡೆಯಬಹುದಾಗಿದೆ!
2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಲಾಂಚ್ ಮಾಡಿದ್ದರು. ಮೋದಿ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸುಮಾರು 6 ಕೋಟಿ ಜನರಿಗೆ ಎಲ್ಪಿಜಿ ಗ್ಯಾಸ್ ಕನೆಕ್ಷನ್ ನೀಡಿದೆ. ಆದರೆ ತುಂಬಾ ಜನರಿಗೆ ಉಜ್ವಲ ಯೋಜನೆ ಬಗ್ಗೆ ತಿಳಿದಿಲ್ಲ. ಗ್ಯಾಸ್ ಏಜೆನ್ಸಿಗಳು ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸುತ್ತವೆ.
ಕೆಲವೊಮ್ಮೆ ಗ್ರಾಹಕರೇ ಗ್ಯಾಸ್ ಏಜೆನ್ಸಿಗೆ ಹೋಗಿ ಸಿಲಿಂಡರ್ ತರುತ್ತಾರೆ. ಅಂತಹ ಸಂದರ್ಭದಲ್ಲಿ ಗ್ರಾಹಕರು ಏಜೆನ್ಸಿಯಿಂದ ಹಣ ಪಡೆಯಬಹುದಾಗಿದೆ!
ಡೆಲಿವರಿ ಶುಲ್ಕ ರೂ. 19.50
ಗ್ಯಾಸ್ ಏಜೆನ್ಸಿಯವರು ಮನೆಗೆ ಸಿಲಿಂಡರ್ ಪೂರೈಸುತ್ತಾರೆ. ಇದಕ್ಕಾಗಿ ಸೇವಾಶುಲ್ಕ ರೂ. 19 ರೂಪಾಯಿ 50 ಪೈಸೆ ಪಡೆಯುತ್ತಾರೆ. ಅನೇಕ ಸಂದರ್ಭಗಳಲ್ಲಿ ನೀವು ಸಿಲಿಂಡರ್ ಗೋಡೌನ್ ನಿಂದ ತಂದರೆ ಈ ಹಣವನ್ನು ವಾಪಸ್ ಕೇಳಬಹುದಾಗಿದೆ. ಡೆಲಿವರಿ ಶುಲ್ಕವಾಗಿ ಕಂಪನಿ ಪಡೆಯುವ ಹಣವನ್ನು ಕಂಪನಿ ವಾಪಸ್ ನೀಡದೆ ಹೋದರೆ ನೀವು ದೂರು ನೀಡಬಹುದು. 'ಅನಿಲಭಾಗ್ಯ ಯೋಜನೆ' ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮರೆಯದಿರಿ
ದೂರು ನೀಡಿ..
ಯಾವುದೇ ಎಲ್ಪಿಜಿ ಗ್ಯಾಸ್ ಏಜೆನ್ಸಿಯಿಂದ ನೀವು ಸಿಲಿಂಡರ್ ತೆಗೆದುಕೊಂಡು ಹೋದರೆ ಡಿಲೆವರಿ ಶುಲ್ಕ ವಸೂಲಿ ಮಾಡುವಂತಿಲ್ಲ. ಗ್ರಾಹಕ ಕೇಳಿದರೆ ಶುಲ್ಕ ವಾಪಸ್ ನೀಡಬೇಕು. ಒಂದು ವೇಳೆ ಶುಲ್ಕ ವಾಪಸ್ ನೀಡದೆ ಹೋದರೆ ಗ್ರಾಹಕರು 18002333555 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು.
ಆನ್ಲೈನ್ ಮೂಲಕ ಎಲ್ಪಿಜಿ ಕನೆಕ್ಷನ್ ಪಡೆಯುವಿಕೆ
ಭಾರತದಲ್ಲಿ ಈಗ ಬಹುತೇಕ ಎಲ್ಲ ಇಂಧನ ಮಾರಾಟ ಕಂಪನಿಗಳು ಆನ್ಲೈನ್ ಮೂಲಕ ಹೊಸ ಎಲ್ಪಿಜಿ ಸಂಪರ್ಕ ಪಡೆಯುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿವೆ.
ಆನ್ಲೈನ್ ಮೂಲಕ ಎಲ್ಪಿಜಿ ಕನೆಕ್ಷನ್ ಬುಕ್ ಮಾಡಲು ವಿವಿಧ ಇಂಧನ ಮಾರಾಟ ಕಂಪನಿಗಳ ವೆಬ್ಸೈಟ್ ಲಿಂಕ್‌ಗಳು ಈ ಕೆಳಗಿನಂತಿವೆ:
ಇಂಡೇನ್:http://indane.co.in/new_connection.php
ಎಚ್‌ಪಿ ಗ್ಯಾಸ್:
http://dcms.hpcl.co.in/consumerportal/logging/securelogin.aspx
ಭಾರತ ಗ್ಯಾಸ್:
http://www.ebharatgas.com/pages/Customer_Console/New_Domestic_Connection.html ಎಲ್ಪಿಜಿ (LPG) ಕನೆಕ್ಷನ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ
ಎಲ್ಪಿಜಿ ಕನೆಕ್ಷನ್ ಶುಲ್ಕಗಳು
ಒಂದು ಸಿಲಿಂಡರ್‌ನೊಂದಿಗೆ ಹೊಸ ಕನೆಕ್ಷನ್ ಶುಲ್ಕಗಳು ಹೀಗಿವೆ:
ಖಾಲಿ ಸಿಲಿಂಡರ್ ಶುಲ್ಕ: 1450 ರೂ. (ಮರುಪಾವತಿಯಾಗುವಂಥದ್ದು)
ಒಂದು ತುಂಬಿದ ಸಿಲಿಂಡರ್ ಬೆಲೆ (14.2 ಕೆಜಿ) : ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ರೆಗ್ಯುಲೇಟರ್ ಶುಲ್ಕ: ರೂ.150 (ಮರುಪಾವತಿಯಾಗುವಂಥದ್ದು)
ಗ್ಯಾಸ್ ಪಾಸಬುಕ್ ಶುಲ್ಕ : ರೂ. 25
ದಾಖಲಾತಿ ಶುಲ್ಕಗಳು: ಕಂಪನಿಯಿಂದ ಕಂಪನಿಗೆ ವ್ಯತ್ಯಾಸವಾಗುತ್ತವೆ.
ಗ್ಯಾಸ್ ಒಲೆಯ ಬೆಲೆ (ಐಚ್ಛಿಕ) : ಗ್ಯಾಸ್ ಒಲೆಯ ಮಾಡೆಲ್ ಅನ್ನು ಆಧರಿಸಿರುತ್ತದೆ.
ಎಲ್ಪಿಜಿ ಕನೆಕ್ಷನ್‌ಗಾಗಿ ಅಗತ್ಯ ದಾಖಲೆಗಳು
(ಇವುಗಳಲ್ಲಿ ಯಾವುದಾದರೂ ಒಂದು)
ವೋಟರ್ ಐಡಿ ಕಾರ್ಡ್
ಪಾಸ್ಪೋರ್ಟ
ಡ್ರೈವಿಂಗ್ ಲೈಸೆನ್ಸ್
ಪ್ಯಾನ್ ಕಾರ್ಡ್
ಸರಕಾರದಿಂದ ನೀಡಲಾದ ಭಾವಚಿತ್ರ ಸಹಿತ ಗುರುತಿನ ಪತ್ರ ಅಥವಾ ಆಧಾರ ಸಂಖ್ಯೆ. ಕೆವೈಸಿ ನಿಯಮಾವಳಿಗಳ ಪ್ರಕಾರ ಗುರುತು ಸಾಬೀತು ಪಡಿಸುವ ದಾಖಲೆ, ವಿಳಾಸದ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರ ಜೊತೆಗೆ ನಿಮ್ಮ ಮನೆಯಲ್ಲಿ ಈಗಾಗಲೇ ಎಲ್ಪಿಜಿ/ ಕೊಳವೆ ಮಾರ್ಗದ ಎಲ್ಪಿಜಿ ಕನೆಕ್ಷನ್ ಇಲ್ಲ ಎಂಬುದಾಗಿ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.
ಹೊಸ ಎಲ್ಪಿಜಿ ಕನೆಕ್ಷನ್‌ಗೆ ಅರ್ಜಿ ಸಲ್ಲಿಸುವ ವಿಧಾನ
ಮೊದಲಿಗೆ ನೀವು ವಾಸಿಸುತ್ತಿರುವ ಬಡಾವಣೆಗೆ ಎಲ್ಪಿಜಿ ಪೂರೈಸುವ ಏಜೆನ್ಸಿಯನ್ನು ಗುರುತಿಸಿಕೊಳ್ಳಿ. ನಿರ್ದಿಷ್ಟ ಇಂಧನ ಮಾರಾಟ ಕಂಪನಿಯ ಏಜೆನ್ಸಿಯು ನಿರ್ದಿಷ್ಟ ಪ್ರದೇಶಗಳಲ್ಲಿ ಎಲ್ಪಿಜಿ ಸಿಲಿಂಡರ್‌ಗಳನ್ನು ಪೂರೈಕೆ ಮಾಡುತ್ತದೆ. ಎಲ್ಪಿಜಿ ವಿತರಕರ ಕಚೇರಿಗೆ ತೆರಳಿ ಹೊಸ ಕನೆಕ್ಷನ್‌ಗಾಗಿ ಅರ್ಜಿ ಫಾರಂ ಪಡೆದುಕೊಳ್ಳಿ. ಅರ್ಜಿ ಫಾರಂ ಅನ್ನು ತುಂಬಿ ಅದರೊಂದಿಗೆ ಗುರುತು ಹಾಗೂ ವಿಳಾಸ ದಾಖಲೆಯ ಪ್ರತಿಗಳನ್ನು ಲಗತ್ತಿಸಿ ಏಜೆನ್ಸಿಗೆ ಸಲ್ಲಿಸಿ. ಅರ್ಜಿ ಪಡೆದ ನಂತರ ಏಜೆನ್ಸಿಯವರು ನಿಮ್ಮ ಹೆಸರಿನಲ್ಲಿ ಅರ್ಜಿ ಸ್ವೀಕೃತಿ ಪತ್ರವನ್ನು ನೀಡುತ್ತಾರೆ. ಇದರಲ್ಲಿ ನೋಂದಣಿ ದಿನಾಂಕ ಹಾಗೂ ನೋಂದಣಿ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ನಿಮ್ಮ ನೋಂದಣಿ ಸಂಖ್ಯೆಯ ಸರದಿ ಬಂದಾಗ ಏಜೆನ್ಸಿಯವರು ನಿಮಗೆ ಈ ಬಗ್ಗೆ ತಿಳಿಸುತ್ತಾರೆ. ಕೆಲ ಏಜೆನ್ಸಿಗಳಲ್ಲಿ ಈ ಕೆಲಸ ಶೀಘ್ರವಾಗಿ ಆದರೆ ಇನ್ನು ಕೆಲ ಏಜೆನ್ಸಿಗಳವರು ಸ್ವಲ್ಪ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳಬಹುದು. ಏಜೆನ್ಸಿಯವರು ತಿಳಿಸಿದ ನಂತರ ಏಜೆನ್ಸಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಕೆಯ ಸ್ವೀಕೃತಿ ಫಾರ್ಮ ತೋರಿಸಿ ರೆಗ್ಯುಲೇಟರ್, ಸಿಲಿಂಡರ್ ಹಾಗೂ ಠೇವಣಿಯ ಮೊತ್ತವನ್ನು ತುಂಬಬೇಕು.
More From GoodReturns

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

Price Hike: ಬೆಂಗಳೂರು ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್! ಗ್ಯಾಸ್ ಬೆನ್ನಲ್ಲೇ ಏರಿಕೆಯಾಗುತ್ತಾ ಹೋಟೆಲ್ ಫುಡ್ ದರ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

LPG Gas Cylinder: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ, ಹೋಟೆಲ್ ಉದ್ಯಮಕ್ಕೆ ಅಡ್ಡಿ; ಪ್ರಧಾನಿಗೆ ಪತ್ರ

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG cylinder Price: ದೇಶದ ಜನರಿಗೆ ಅಡುಗೆ ಅನಿಲ ದರ ಶಾಕ್… LPG ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ!

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?



Click it and Unblock the Notifications