For Quick Alerts
ALLOW NOTIFICATIONS  
For Daily Alerts

ಎಲ್ಪಿಜಿ (LPG) ಕನೆಕ್ಷನ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸ ಎಲ್ಪಿಜಿ ಸಂಪರ್ಕ ಪಡೆಯುವುದು ಹೇಗೆ, ಅದಕ್ಕಾಗಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ, ಬೇಕಾಗುವ ದಾಖಲೆಗಳೇನು ಇತ್ಯಾದಿ ಎಲ್ಲ ವಿವರಗಳ ಬಗ್ಗೆ ಈ ಅಂಕಣದಲ್ಲಿ ವಿವರಿಸಲಾಗಿದೆ.

|

ಅಡುಗೆ ಅನಿಲ ಅಥವಾ ಎಲ್ಪಿಜಿ ಎಂಬುದು ಈಗ ಎಲ್ಲ ಕುಟುಂಬಗಳ ಅತ್ಯವಶ್ಯಕ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಮದುವೆಯಾಗಿ ಹೊಸ ಸಂಸಾರ ಆರಂಭಿಸಬೇಕಾದರೆ ದಂಪತಿಗಳು ಮೊದಲು ಚಿಂತಿಸುವುದೇ ಹೊಸ ಎಲ್ಪಿಜಿ ಸಂಪರ್ಕ ಪಡೆಯುವುದು ಹೇಗೆಂದು. ಈಗಲೂ ನಮ್ಮ ದೇಶದಲ್ಲಿ ಹೊಸ ಎಲ್ಪಿಜಿ ಸಂಪರ್ಕ ಹೇಗೆ ಪಡೆಯುವುದು ಎಂಬ ಮಾಹಿತಿ ಅನೇಕರಿಗೆ ಇಲ್ಲ. ಹೊಸ ಎಲ್ಪಿಜಿ ಸಂಪರ್ಕ ಪಡೆಯುವುದು ಹೇಗೆ, ಅದಕ್ಕಾಗಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ, ಬೇಕಾಗುವ ದಾಖಲೆಗಳೇನು ಇತ್ಯಾದಿ ಎಲ್ಲ ವಿವರಗಳ ಬಗ್ಗೆ ಈ ಅಂಕಣದಲ್ಲಿ ವಿವರಿಸಲಾಗಿದೆ.

 

ಆನ್ಲೈನ್ ಮೂಲಕ ಎಲ್ಪಿಜಿ ಸಂಪರ್ಕ ಪಡೆಯುವಿಕೆ

ಆನ್ಲೈನ್ ಮೂಲಕ ಎಲ್ಪಿಜಿ ಸಂಪರ್ಕ ಪಡೆಯುವಿಕೆ

ಭಾರತದಲ್ಲಿ ಈಗ ಬಹುತೇಕ ಎಲ್ಲ ಇಂಧನ ಮಾರಾಟ ಕಂಪನಿಗಳು ಆನ್ಲೈನ್ ಮೂಲಕ ಹೊಸ ಎಲ್ಪಿಜಿ ಸಂಪರ್ಕ ಪಡೆಯುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿವೆ.

ಆನ್ಲೈನ್ ಮೂಲಕ ಎಲ್ಪಿಜಿ ಕನೆಕ್ಷನ್ ಬುಕ್ ಮಾಡಲು ವಿವಿಧ ಇಂಧನ ಮಾರಾಟ ಕಂಪನಿಗಳ ವೆಬ್ಸೈಟ್ ಲಿಂಕ್‌ಗಳು ಈ ಕೆಳಗಿನಂತಿವೆ:
ಇಂಡೇನ್: http://indane.co.in/new_connection.php

ಎಚ್‌ಪಿ ಗ್ಯಾಸ್:
http://dcms.hpcl.co.in/consumerportal/logging/securelogin.aspx

ಭಾರತ ಗ್ಯಾಸ್:
http://www.ebharatgas.com/pages/Customer_Console/New_Domestic_Connection.html

ಹೊಸ ಎಲ್ಪಿಜಿ ಕನೆಕ್ಷನ್‌ಗೆ ಅರ್ಜಿ ಸಲ್ಲಿಸುವ ವಿಧಾನ

ಹೊಸ ಎಲ್ಪಿಜಿ ಕನೆಕ್ಷನ್‌ಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲಿಗೆ ನೀವು ವಾಸಿಸುತ್ತಿರುವ ಬಡಾವಣೆಗೆ ಎಲ್ಪಿಜಿ ಪೂರೈಸುವ ಏಜೆನ್ಸಿಯನ್ನು ಗುರುತಿಸಿಕೊಳ್ಳಿ.
ನಿರ್ದಿಷ್ಟ ಇಂಧನ ಮಾರಾಟ ಕಂಪನಿಯ ಏಜೆನ್ಸಿಯು ನಿರ್ದಿಷ್ಟ ಪ್ರದೇಶಗಳಲ್ಲಿ ಎಲ್ಪಿಜಿ ಸಿಲಿಂಡರ್‌ಗಳನ್ನು ಪೂರೈಕೆ ಮಾಡುತ್ತದೆ.
ಎಲ್ಪಿಜಿ ವಿತರಕರ ಕಚೇರಿಗೆ ತೆರಳಿ ಹೊಸ ಕನೆಕ್ಷನ್‌ಗಾಗಿ ಅರ್ಜಿ ಫಾರಂ ಪಡೆದುಕೊಳ್ಳಿ.
ಅರ್ಜಿ ಫಾರಂ ಅನ್ನು ತುಂಬಿ ಅದರೊಂದಿಗೆ ಗುರುತು ಹಾಗೂ ವಿಳಾಸ ದಾಖಲೆಯ ಪ್ರತಿಗಳನ್ನು ಲಗತ್ತಿಸಿ ಏಜೆನ್ಸಿಗೆ ಸಲ್ಲಿಸಿ.
ಅರ್ಜಿ ಪಡೆದ ನಂತರ ಏಜೆನ್ಸಿಯವರು ನಿಮ್ಮ ಹೆಸರಿನಲ್ಲಿ ಅರ್ಜಿ ಸ್ವೀಕೃತಿ ಪತ್ರವನ್ನು ನೀಡುತ್ತಾರೆ. ಇದರಲ್ಲಿ ನೋಂದಣಿ ದಿನಾಂಕ ಹಾಗೂ ನೋಂದಣಿ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ.
ನಿಮ್ಮ ನೋಂದಣಿ ಸಂಖ್ಯೆಯ ಸರದಿ ಬಂದಾಗ ಏಜೆನ್ಸಿಯವರು ನಿಮಗೆ ಈ ಬಗ್ಗೆ ತಿಳಿಸುತ್ತಾರೆ.
ಕೆಲ ಏಜೆನ್ಸಿಗಳಲ್ಲಿ ಈ ಕೆಲಸ ಶೀಘ್ರವಾಗಿ ಆದರೆ ಇನ್ನು ಕೆಲ ಏಜೆನ್ಸಿಗಳವರು ಸ್ವಲ್ಪ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳಬಹುದು.
ಏಜೆನ್ಸಿಯವರು ತಿಳಿಸಿದ ನಂತರ ಏಜೆನ್ಸಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಕೆಯ ಸ್ವೀಕೃತಿ ಫಾರ್ಮ ತೋರಿಸಿ ರೆಗ್ಯುಲೇಟರ್, ಸಿಲಿಂಡರ್ ಹಾಗೂ ಠೇವಣಿಯ ಮೊತ್ತವನ್ನು ತುಂಬಬೇಕು.

ಎಲ್ಪಿಜಿ ಕನೆಕ್ಷನ್‌ಗಾಗಿ ಅಗತ್ಯ ದಾಖಲೆಗಳು (ಇವುಗಳಲ್ಲಿ ಯಾವುದಾದರೂ ಒಂದು)
 

ಎಲ್ಪಿಜಿ ಕನೆಕ್ಷನ್‌ಗಾಗಿ ಅಗತ್ಯ ದಾಖಲೆಗಳು (ಇವುಗಳಲ್ಲಿ ಯಾವುದಾದರೂ ಒಂದು)

ವೋಟರ್ ಐಡಿ ಕಾರ್ಡ್
ಪಾಸ್ಪೋರ್ಟ
ಡ್ರೈವಿಂಗ್ ಲೈಸೆನ್ಸ್
ಪ್ಯಾನ್ ಕಾರ್ಡ್
ಸರಕಾರದಿಂದ ನೀಡಲಾದ ಭಾವಚಿತ್ರ ಸಹಿತ ಗುರುತಿನ ಪತ್ರ ಅಥವಾ ಆಧಾರ ಸಂಖ್ಯೆ.
ಕೆವೈಸಿ ನಿಯಮಾವಳಿಗಳ ಪ್ರಕಾರ ಗುರುತು ಸಾಬೀತು ಪಡಿಸುವ ದಾಖಲೆ, ವಿಳಾಸದ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರ ಜೊತೆಗೆ ನಿಮ್ಮ ಮನೆಯಲ್ಲಿ ಈಗಾಗಲೇ ಎಲ್ಪಿಜಿ/ ಕೊಳವೆ ಮಾರ್ಗದ ಎಲ್ಪಿಜಿ ಕನೆಕ್ಷನ್ ಇಲ್ಲ ಎಂಬುದಾಗಿ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.

ವಿಳಾಸ ಪುರಾವೆಯ ದಾಖಲೆ (ಇವುಗಳಲ್ಲಿ ಯಾವುದಾದರೂ ಒಂದು)

ವಿಳಾಸ ಪುರಾವೆಯ ದಾಖಲೆ (ಇವುಗಳಲ್ಲಿ ಯಾವುದಾದರೂ ಒಂದು)

ವೋಟರ್ ಐಡಿ ಕಾರ್ಡ್
ರೇಶನ್ ಕಾರ್ಡ್
ವಿದ್ಯುತ್ ಬಿಲ್ (ಮೂರು ತಿಂಗಳಿಗಿಂತ ಇತ್ತೀಚಿನದು) ಉದ್ಯೋಗದಾತರು ನೀಡಿರುವ ದಾಖಲೆ
ಬಾಡಿಗೆ ಪಾವತಿ ರಸೀದಿ (ಕಳೆದ ಎರಡು ತಿಂಗಳಿನದು)
ಫ್ಲ್ಯಾಟ್ ಅನುಮೋದನೆ ಪತ್ರ
ಮನೆ ನೋಂದಣಿಯ ದಾಖಲೆ ಅಥವಾ ಆಧಾರ ಸಂಖ್ಯೆ.

ಎಲ್ಪಿಜಿ ಕನೆಕ್ಷನ್ ಶುಲ್ಕಗಳು

ಎಲ್ಪಿಜಿ ಕನೆಕ್ಷನ್ ಶುಲ್ಕಗಳು

ಒಂದು ಸಿಲಿಂಡರ್‌ನೊಂದಿಗೆ ಹೊಸ ಕನೆಕ್ಷನ್ ಶುಲ್ಕಗಳು ಹೀಗಿವೆ:
ಖಾಲಿ ಸಿಲಿಂಡರ್ ಶುಲ್ಕ: 1450 ರೂ. (ಮರುಪಾವತಿಯಾಗುವಂಥದ್ದು)
ಒಂದು ತುಂಬಿದ ಸಿಲಿಂಡರ್ ಬೆಲೆ (14.2 ಕೆಜಿ) : ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ
ರೆಗ್ಯುಲೇಟರ್ ಶುಲ್ಕ: ರೂ.150 (ಮರುಪಾವತಿಯಾಗುವಂಥದ್ದು)
ಗ್ಯಾಸ್ ಪಾಸಬುಕ್ ಶುಲ್ಕ : 25 ರೂ.
ದಾಖಲಾತಿ ಶುಲ್ಕಗಳು: ಕಂಪನಿಯಿಂದ ಕಂಪನಿಗೆ ವ್ಯತ್ಯಾಸವಾಗುತ್ತವೆ.
ಗ್ಯಾಸ್ ಒಲೆಯ ಬೆಲೆ (ಐಚ್ಛಿಕ) : ಗ್ಯಾಸ್ ಒಲೆಯ ಮಾಡೆಲ್ ಅನ್ನು ಆಧರಿಸಿರುತ್ತದೆ

ದೇಶದ ಪ್ರಮುಖ ಎಲ್ಪಿಜಿ ವಿತರಣಾ ಕಂಪನಿಗಳು

ದೇಶದ ಪ್ರಮುಖ ಎಲ್ಪಿಜಿ ವಿತರಣಾ ಕಂಪನಿಗಳು

ಭಾರತ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಭಾರತ ಗ್ಯಾಸ್)
ಹಿಂದೂಸ್ತಾನ ಪೆಟ್ರೊಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿ ಗ್ಯಾಸ್)
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಇಂಡೇನ್)

ಎಲ್ಜಿಜಿ ಸಂಪರ್ಕ ಪಡೆಯಲು ಅರ್ಹತೆಗಳು

ಎಲ್ಜಿಜಿ ಸಂಪರ್ಕ ಪಡೆಯಲು ಅರ್ಹತೆಗಳು

ದೇಶದ ಪ್ರತಿಯೊಂದು ಕುಟುಂಬವು (ಗ್ರಾಮೀಣ ಅಥವಾ ನಗರ ಪ್ರದೇಶ) ಎಲ್ಪಿಜಿ ಸಂಪರ್ಕ ಪಡೆಯುವ ಅಧಿಕಾರವನ್ನು ಹೊಂದಿದೆ. ಆದರೆ ಇಂಡೇನ್, ಎಚ್‌ಪಿ ಗ್ಯಾಸ್ ಅಥವಾ ಭಾರತ ಗ್ಯಾಸ್ ಈ ಮೂರು ಕಂಪನಿಗಳ ಪೈಕಿ ಯಾವುದಾದರೊಂದು ಕಂಪನಿಯಿಂದ ಒಂದು ಕುಟುಂಬಕ್ಕೆ ಒಂದು ಕನೆಕ್ಷನ್ ಪಡೆಯಲು ಮಾತ್ರ ಅವಕಾಶವಿದೆ.

ಎಲ್ಪಿಜಿ ಕನೆಕ್ಷನ್ ಮಾದರಿಗಳು

ಎಲ್ಪಿಜಿ ಕನೆಕ್ಷನ್ ಮಾದರಿಗಳು

ಗೃಹಬಳಕೆಯ ಎಲ್ಪಿಜಿ ಕನೆಕ್ಷನ್: 14.2 ಕೆಜಿ ಅಥವಾ 5 ಕೆಜಿ
ವಾಣಿಜ್ಯ ಬಳಕೆಯ ಎಲ್ಪಿಜಿ ಕನೆಕ್ಷನ್ (ಹೊಟೇಲುಗಳು, ಕೈಗಾರಿಕೆ ಮುಂತಾದುವುಗಳಲ್ಲಿ ಬಳಸಲು): 19 ಕೆಜಿ ಅಥವಾ 47.5 ಕೆಜಿ

ಹೊಸ ಎಲ್ಪಿಜಿ ಕನೆಕ್ಷನ್‌ನೊಂದಿಗೆ ಸಿಗುವ ಸಲಕರಣೆಗಳು

ಹೊಸ ಎಲ್ಪಿಜಿ ಕನೆಕ್ಷನ್‌ನೊಂದಿಗೆ ಸಿಗುವ ಸಲಕರಣೆಗಳು

ಒಂದು 14.2 ಕೆಜಿಯ ತುಂಬಿದ ಸಿಲಿಂಡರ್
ಒಂದು ರೆಗ್ಯುಲೇಟರ್
ಒಂದು ರಬ್ಬರ್ ಪೈಪ್
ಒಂದು ಗ್ಯಾಸ್ ಒಲೆ (ಐಚ್ಛಿಕ)
ಒಂದು ಪಾಸಬುಕ್
ಗ್ಯಾಸ್ ಕನೆಕ್ಷನ್‌ನ ದಾಖಲಾತಿ ಪತ್ರ

ಎಲ್ಪಿಜಿ ಕನೆಕ್ಷನ್ ಬಗೆಗಿನ ಈ ಮಾಹಿತಿಗಳು ತಿಳಿದಿರಲಿ

ಎಲ್ಪಿಜಿ ಕನೆಕ್ಷನ್ ಬಗೆಗಿನ ಈ ಮಾಹಿತಿಗಳು ತಿಳಿದಿರಲಿ

ನಿಯಮಾವಳಿಗಳ ಪ್ರಕಾರ ಒಂದು ಕುಟುಂಬ ಒಂದೇ ಕನೆಕ್ಷನ್ ಪಡೆಯಲು ಅವಕಾಶವಿದೆ.
ಕನೆಕ್ಷನ್ ಪಡೆಯುವಾಗ ವಿತರಕರಿಂದ ಗ್ಯಾಸ್ ಪಾಸಬುಕ್ ಪಡೆಯಲು ಮರೆಯಬೇಡಿ.
ಏಜೆನ್ಸಿಯು ನಿಮ್ಮ ಸಿಲಿಂಡರ್ ಬುಕಿಂಗ್‌ಗಳ ದಾಖಲೆಯನ್ನು ಇಟ್ಟಿರುತ್ತದೆ.
ಏಜೆನ್ಸಿ ಕಡೆಯಿಂದ ಗ್ಯಾಸ್ ಒಲೆ ಖರೀದಿಸುವುದು ಕಡ್ಡಾಯವಲ್ಲ.
ಗ್ಯಾಸ್ ಒಲೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ಗ್ರಾಹಕರು ಸ್ವತಂತ್ರರಾಗಿದ್ದಾರೆ.

English summary

How to get an LPG connection, here is complete details

To get a new LPG connection in India is one of the main concerns for many people in India. Here is your complete guide to get a new gas connection.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X