ಡಿಜಿಟಲ್ ಜಗತ್ತಿನಲ್ಲಿ ಆಗುತ್ತಿರುವ ವಂಚನೆಗಳ ವಿರುದ್ಧ ಹೋರಾಡಲು ರಾಷ್ಟ್ರೀಯ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಒಂದು ಕಾರ್ಯಾಚರಣೆಯನ್ನು ಆರಂಭಿಸಿದೆ.
ಡಿಜಿಟಲ್ ಜಗತ್ತಿನಲ್ಲಿ ಆಗುತ್ತಿರುವ ವಂಚನೆಗಳ ವಿರುದ್ಧ ಹೋರಾಡಲು ರಾಷ್ಟ್ರೀಯ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಒಂದು ಕಾರ್ಯಾಚರಣೆಯನ್ನು ಆರಂಭಿಸಿದೆ.
ಇದಕ್ಕಾಗಿ ಎನ್ಪಿಸಿಐ ಸ್ಪರ್ಧೆ ಪ್ರಾರಂಭಿಸಿದ್ದು, ಇದರಲ್ಲಿ ಭಾಗವಹಿಸುವ ವ್ಯಕ್ತಿ ರೂ. 5 ಲಕ್ಷ ಬಹುಮಾನ ಗೆಲ್ಲುವ ಸಾಧ್ಯತೆ ಇದೆ. ಈ ಸ್ಪರ್ಧೆಯು ಫೆಬ್ರುವರಿ 15 ರಿಂದ ಆರಂಭವಾಗಿದ್ದು, ಫೆಬ್ರವರಿ 28, 2019 ವರೆಗೆ ನಡೆಯಲಿದೆ. ರಾಷ್ಟ್ರೀಯ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಏನು ಮಾಡಬೇಕು ಎಂಬುದನ್ನು ತಿಳಿಯೋಣ...
5 ಲಕ್ಷ ಗಳಿಸಲು ಏನು ಮಾಡಬೇಕು?
ಎನ್ಪಿಸಿಐ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸುವವರು ಎಲ್ಲಿಯೂ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಸೃಜನಾತ್ಮಕ ಟ್ವಿಟ್ ಮಾಡುವ ವ್ಯಕ್ತಿಗಳು 5 ಲಕ್ಷ ರೂಪಾಯಿ ಗಳಿಸಬಹುದು. ನಿಮ್ಮ ಟ್ವೀಟರ್ ನಲ್ಲಿ, ಡಿಜಿಟಲ್ ವಂಚನೆ ತಡೆಯುವ ಬಗ್ಗೆ ಹಾಗೂ ಆನ್ಲೈನ್ ವಂಚನೆ ಸೇರಿದಂತೆ ಸುರಕ್ಷಿತ ಬ್ಯಾಂಕಿಂಗ್ ವ್ಯವಸ್ಥೆಗೆ ಸಲಹೆ ನೀಡುವ ಮಾಹಿತಿಯುಳ್ಳ ಆಕರ್ಷಕ ಟ್ವಿಟ್ ಮಾಡಬೇಕು.
#StopThinkAct
ನೀವು ಟ್ವಿಟ್ ಮಾಡುವಾಗ #StopThinkAct ಹ್ಯಾಶ್ ಟ್ಯಾಗ್ ಬಳಸಬೇಕು. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಫೋಟೋ, ವಿಡಿಯೋ, ಗ್ರಾಫಿಕ್ಸ್ ಯಾವುದನ್ನು ಬೇಕಾದ್ರೂ ನೀವು ಬಳಸಬಹುದು.
ಸ್ಪರ್ಧೆಯಲ್ಲಿ ಯಾರು ಪಾಲ್ಗೊಳ್ಳಬಹುದು
18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಗಳಲ್ಲದೇ ಜಾಹೀರಾತು ಏಜೆನ್ಸಿಗಳು, ಪ್ರಮೋಷನಲ್ ಏಜೆನ್ಸಿಯಂತಹ ಸಂಸ್ಥೇಗಳು ಇದರಲ್ಲಿ ಭಾಗವಹಿಸಬಹುದು. ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಎನ್.ಪಿ.ಸಿ.ಐ. ಅಧಿಕೃತ ವೆಬ್ ಸೈಟ್, ಟ್ವಿಟರ್ ಖಾತೆ ಅಥವಾ https://www.facebook.com/notes/national-payments-corporation-of-india/terms-and-conditions-stopthinkact/ ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.


Click it and Unblock the Notifications