For Quick Alerts
ALLOW NOTIFICATIONS  
For Daily Alerts

ತಪ್ಪು ಖಾತೆಗೆ ವರ್ಗಾವಣೆಯಾದ ಹಣ ಹಿಂತೆಗೆದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ನಮ್ಮಿಂದ ತಪ್ಪುಗಳಾಗುವುದು ಸಹಜವಾಗಿದ್ದು, ಆನ್ಲೈನ್, ಇ-ಕಾಮರ್ಸ್, ನೆಟ್ ಬ್ಯಾಂಕಿಂಗ್, ಇ-ವ್ಯಾಲೆಟ್ ಸೇವೆಗಳು ಬಂದ ನಂತರ ಹೆಚ್ಚು ಜನರು ವಂಚನೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾಗುತ್ತಿವೆ.

|

ನಮ್ಮಿಂದ ತಪ್ಪುಗಳಾಗುವುದು ಸಹಜವಾಗಿದ್ದು, ಆನ್ಲೈನ್, ಇ-ಕಾಮರ್ಸ್, ನೆಟ್ ಬ್ಯಾಂಕಿಂಗ್, ಇ-ವ್ಯಾಲೆಟ್ ಸೇವೆಗಳು ಬಂದ ನಂತರ ಹೆಚ್ಚು ಜನರು ವಂಚನೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾಗುತ್ತಿರುವ ತಪ್ಪುಗಳು ಕೂಡ ಸಂಭವಿಸುತ್ತವೆ. ಒಂದು ವೇಳೆ ತಪ್ಪು ಖಾತೆಗೆ ಹಣ ವರ್ಗಾವಣೆಯಾದ ನಂತರ, ಸ್ವೀಕರಿಸಿದವರನ್ನು ಹೇಗೆ ಸಂಪರ್ಕಿಸಬೇಕು ಎಂಬುದರ ಬಗ್ಗೆ ಹೆಚ್ಚಿನ ಪ್ರಶ್ನೆಗಳು ಉದ್ಭವವಾಗುತ್ತವೆ. ಮನಿ ಬ್ಯಾಂಕ್ ಪಡೆಯಲು ಸಾಧ್ಯವಾಗುತ್ತದೆಯೇ? ತಪ್ಪು ಖಾತೆಗೆ ಹೋದ ಹಣ ಬ್ಯಾಂಕುಗಳಿಗೆ ಹಿಂದಿರುಗಿಸುವ ಅಧಿಕಾರವಿದೆಯೇ? ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸುವುಉದ ಸಾಮಾನ್ಯ.
ಈ ಲೇಖನದಲ್ಲಿ, ತಪ್ಪು ಖಾತೆಗೆ ವರ್ಗಾವಣೆಯಾದ ಹಣವನ್ನು ಹಿಂಪಡೆಯುವಾಗ ಈ ಪ್ರಶ್ನೆಗಳನ್ನು, ಕಾರ್ಯವಿಧಾನವನ್ನು ಮತ್ತು ಕಾನೂನುಬದ್ಧತೆಯನ್ನು ನೋಡುತ್ತೇವೆ ಬನ್ನಿ ತಿಳಿಯೋಣ..

ತಪ್ಪು ಖಾತೆಗೆ ವರ್ಗಾವಣೆಗೊಂಡ ಹಣವನ್ನು ಹಿಂಪಡೆಯಲು ವೇಗವಾದ ಮಾರ್ಗ?

ತಪ್ಪು ಖಾತೆಗೆ ವರ್ಗಾವಣೆಗೊಂಡ ಹಣವನ್ನು ಹಿಂಪಡೆಯಲು ವೇಗವಾದ ಮಾರ್ಗ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಹಣ ಪಾವತಿಸುವಾಗ ಫಲಾನುಭವಿ ಸರಿಯಾದ ಖಾತೆ ಸಂಖ್ಯೆ ಮತ್ತು ವಿವರಗಳನ್ನು ಒದಗಿಸುವ ಜವಾಬ್ದಾರಿ ವಹಿಸಬೆಕಾಗುತ್ತದೆ.
ಆದ್ದರಿಂದ, ಒಂದು ವೇಳೆ ತಪ್ಪು ಖಾತೆಗೆ ಹಣ ವರ್ಗಾವಣೆಯ ಸಂದರ್ಭದಲ್ಲಿ ರಿಮಿಟರ್ ಮಾತ್ರ ಹೊಣೆಗಾರ ಮತ್ತು ಜವಾಬ್ದಾರನಾಗಿರುತ್ತಾನೆ. ಇದಕ್ಕೆ ಬ್ಯಾಂಕ್ ಅಥವಾ ಯಾವುದೇ ವ್ಯಕ್ತಿಯನ್ನು ಹೊಣೆಗಾರನಾಗಿರುವುದಿಲ್ಲ. ಇದಲ್ಲದೆ, ಫಲಾನುಭವಿಯ ಅನುಮತಿಯಿಲ್ಲದೆ ಬ್ಯಾಂಕ್ ಕೂಡ ಹಣ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಬ್ಯಾಂಕ್ ಒಬ್ಬ ಕೆಲಸಗಾರನಾಗಿ ಮಾತ್ರ ಕಾರ್ಯನಿರ್ವಹಿಸಬಲ್ಲದು.

ಖಾತೆ ಸಂಖ್ಯೆ ಅಸ್ತಿತ್ವದಲ್ಲಿ ಇಲ್ಲದಿದ್ದರೆ ತಕ್ಷಣ ಹಣ ಹಿಂಪಡೆಯಬಹುದು

ಖಾತೆ ಸಂಖ್ಯೆ ಅಸ್ತಿತ್ವದಲ್ಲಿ ಇಲ್ಲದಿದ್ದರೆ ತಕ್ಷಣ ಹಣ ಹಿಂಪಡೆಯಬಹುದು

ಫಲಾನುಭವಿಯ ಖಾತೆ ಸಂಖ್ಯೆ ಅಸ್ತಿತ್ವದಲ್ಲಿಲ್ಲದೆ ತಪ್ಪಾಗಿ ಹಣ ವರ್ಗಾವಣೆ ಮಾಡಿದಲ್ಲಿ ಸುಲಭವಾಗಿ ಹಣ ಹಿಂಪಡೆಯುವ ಅವಕಾಶವಿರುತ್ತದೆ. ಖಾತೆ ಸಂಖ್ಯೆ ಅಮಾನ್ಯವಾಗಿದ್ದರೆ ಅಥವಾ ಅಸ್ತಿತ್ವದಲ್ಲಿರದಿದ್ದರೆ ಹಣ ಸ್ವಯಂಚಾಲಿತವಾಗಿ ರವಾನೆದಾರನಿಗೆ ವರ್ಗಾಯಿಸಲಾಗುತ್ತದೆ.

ಅಸ್ತಿತ್ವದಲ್ಲಿರುವ ಖಾತೆಯಾದರೆ?
 

ಅಸ್ತಿತ್ವದಲ್ಲಿರುವ ಖಾತೆಯಾದರೆ?

ಒಂದು ವೇಳೆ ಅಸ್ತಿತ್ವದಲ್ಲಿರುವ ಖಾತೆ ಹೊಂದಿದ್ದು ಹಣವನ್ನು ತಪ್ಪಾಗಿ ವರ್ಗಾವಣೆ ಮಾಡಿದ್ದರೆ ವೇಗವಾದ ಮತ್ತು ಸರಳವಾದ ಮಾರ್ಗವೆಂದರೆ ಬ್ಯಾಂಕುಗಳಿಗೆ ಲಿಖಿತ ಪತ್ರವನ್ನು ಕಳುಹಿಸುವುದು. ರವಾನೆದಾರ ಮತ್ತು ಫಲಾನುಭವಿ ಒಂದೇ ಬ್ಯಾಂಕಿನಲ್ಲಿದ್ದರೆ ಅನುಕೂಲಕರವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಬ್ಯಾಂಕು ಮತ್ತು ಫಲಾನುಭವಿಯೊಂದಿಗೆ ಮಾತನಾಡಿ ಹಣವನ್ನು ಪುನಃ ವರ್ಗಾವಣೆ ಮಾಡಲು ಕೋರಿದಲ್ಲಿ ಹಣ ವರ್ಗಾವಣೆ/ಹಿಂಪಡೆಯುವ ಪ್ರಕ್ರಿಯೆಯು ವೇಗವಾಗಿ ಮತ್ತು ಸುಲಭವಾಗಿರುತ್ತದೆ.

ಬೇರೆ ಬ್ಯಾಂಕಿನ ತಪ್ಪು ಖಾತೆಗೆ ಹಣ ವರ್ಗಾವಣೆಯಾದರೆ?

ಬೇರೆ ಬ್ಯಾಂಕಿನ ತಪ್ಪು ಖಾತೆಗೆ ಹಣ ವರ್ಗಾವಣೆಯಾದರೆ?

ಒಂದು ವೇಳೆ ನೀವು ವರ್ಗಾಯಿಸುವ ಹಣ ಬೇರೆ ಬ್ಯಾಂಕಿನ ತಪ್ಪು ಖಾತೆಗೆ ವರ್ಗಾವಣೆಯಾದರೆ ನಿಮ್ಮ ಬ್ಯಾಂಕರ್ (ರಿಮಿಟರ್ ಬ್ಯಾಂಕರ್) ಸಂಪರ್ಕಿಸುವುದರ ಜೊತೆಗೆ, ತಪ್ಪು ಖಾತೆಗೆ ಹಣ ವರ್ಗಾವಣೆಯಾದ ಫಲಾನುಭವಿಯ ಶಾಖೆ ಮ್ಯಾನೆಜರ್ ರನ್ನು ಸಂಪರ್ಕಿಸಬೇಕು. ಅಲ್ಲದೆ ಪರಿಸ್ಥಿತಿಯನ್ನು ವಿವರಾತ್ಮಕವಾಗಿ ಲಿಖಿತ ಪತ್ರದಲ್ಲಿ ನೀಡಬೇಕು. ಫಲಾನುಭವಿಯ ಶಾಖೆ ವ್ಯವಸ್ಥಾಪಕರನ್ನು, ನಂತರ ತಪ್ಪಾಗಿ ಹಣ ವರ್ಗಾವಣೆಗೊಂಡ ಫಲಾನುಭವಿಯನ್ನು ಸಂಪರ್ಕಿಸಿ ನಿಮ್ಮ ಹಣ ಮರು-ವರ್ಗಾವಣೆ ಮಾಡಲು ಕೋರಬಹುದು.

ತಪ್ಪು ಹಣ ವರ್ಗಾವಣೆಗೆ ಕಾನೂನು ಪರಿಹಾರಗಳು ಲಭ್ಯ

ತಪ್ಪು ಹಣ ವರ್ಗಾವಣೆಗೆ ಕಾನೂನು ಪರಿಹಾರಗಳು ಲಭ್ಯ

ತಪ್ಪಾಗಿ ಹಣ ವರ್ಗಾವಣೆಯಾದಲ್ಲಿ ಹಣ ಪಾವತಿಯಾಗಿರುವ ತಪ್ಪು ಫಲಾನುಭವಿಯ ಒಪ್ಪಿಗೆಯಿಲ್ಲದೆ ಸುಲಭವಾಗಿ ಹಣ ಬದಲಾಯಿಸಲಾಗುವುದಿಲ್ಲ. ಹಣವನ್ನು ಮರಳಿ ಪಡೆಯಲು ಫಲಾನುಭವಿಯು ತಪ್ಪು ವ್ಯವಹಾರ ಮಾಡಿರುವ ಬಗ್ಗೆ ಒಪ್ಪಿಕೊಳ್ಳಬೇಕು. ಒಂದು ವೇಳೆ ತಪ್ಪು ಫಲಾನುಭವಿಯು ಹಣವನ್ನು ಹಿಂತಿರುಗಿಸಲು ವಿಫಲವಾದಲ್ಲಿ ನಂತರ ಲಿಖಿತ ದೂರನ್ನು ಸಂಬಂಧಪಟ್ಟ ಬ್ಯಾಂಕ್ ಗೆ ಸಲ್ಲಿಸಬೇಕು. ತದನಂತರ ಕಾನೂನಾತ್ಮಕವಾಗಿ ವಕೀಲರು ತಪ್ಪು ಫಲಾನುಭವಿಗೆ ನೋಟಿಸ್ ನೀಡಿ, ಹಣವನ್ನು ಮರಳಿ ವರ್ಗಾವಣೆ ಮಾಡುವಂತೆ ಮನವಿ ಮಾಡುತ್ತಾರೆ. ಕಾನೂನು ಸೂಚನೆ ನಂತರವೂ, ಅವನು ಅಥವಾ ಅವಳು ಹಣವನ್ನು ನೀಡಲು ನಿರಾಕರಿಸಿದರೆ ಕಾನೂನುಬದ್ದವಾದ ಪ್ರಕರಣವನ್ನು ಪ್ರಾರಂಭಿಸಬಹುದು. ಆದರೆ ಇದು ದುಬಾರಿ ಮತ್ತು ಸಮಯ ತೆಗೆದುಕೊಳ್ಳುವ ನಿರ್ಣಯದ ಮಾರ್ಗವಾಗಿರುತ್ತದೆ.

ತಪ್ಪು ಹಣ ವರ್ಗಾವಣೆ ತಪ್ಪಿಸುವುದು

ತಪ್ಪು ಹಣ ವರ್ಗಾವಣೆ ತಪ್ಪಿಸುವುದು

ಸರಿಯಾದ ಖಾತೆ ಸಂಖ್ಯೆ ಮತ್ತು ಐಎಫ್ಎಸ್ಸಿ ಕೋಡ್ ಒದಗಿಸುವುದು ರವಾನೆದಾರನ ಜವಾಬ್ದಾರಿಯಾಗಿರುತ್ತದೆ ಎಂದು ಆರ್ಬಿಐ ಮಾರ್ಗಸೂಚಿ ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ, ಹಣ ವರ್ಗಾವಣೆಯ ಸಂದರ್ಭದಲ್ಲಿ ಫಲಾನುಭವಿಯ ವಿವರಗಳನ್ನು ಎರಡೆರಡು ಬಾರು ಚೆಕ್ ಮಾಡಿ ಖಚಿತಪಡಿಸುವುದೇ ಸುರಕ್ಷಿತ.
ಒಂದು ವೇಳೆ ದೊಡ್ಡ ಮೊತ್ತದ ಹಣ ವರ್ಗಾವಣೆಯ ಸಂದರ್ಭದಲ್ಲಿ ಸರಿಯಾದ ಫಲಾನುಭವಿಗೆ ಹಣ ವರ್ಗಾವಣೆಯಾಗಿದೆಯೇ ಎಂದು ಪರಿಶೀಲಿಸಲು ರೂ. 100 ರಂತೆ ಸಣ್ಣ ಪ್ರಮಾಣದ ಹಣವನ್ನು ವರ್ಗಾಯಿಸಿ ಖಚಿತಪಡಿಸಲು ಸಲಹೆ ನೀಡಲಾಗುತ್ತದೆ. ಹೀಗಾಗಿ, ​​ಪಾವತಿ ಸಂದರ್ಭದಲ್ಲಿ ಖಾತೆ ವಿವರಗಳನ್ನು ಎರಡು ಬಾರಿ ಪರೀಕ್ಷಿಸಿ, ಫಲಾನುಭವಿಯ ಖಾತೆಯು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

Read more about: money banking frauds finance news atm
English summary

How to Reverse Money Transferred to Wrong Account

when money is wrongly transferred to a wrong account. Soon after the wrong transfer, plenty of questions arise on how to contact the recipient.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X