For Quick Alerts
ALLOW NOTIFICATIONS  
For Daily Alerts

ನಾಳೆ ಕೊನೆ ದಿನ: ಆಧಾರ್ - ಪ್ಯಾನ್ ಲಿಂಕ್‌ ಆಗಿದೆಯೇ, ತಿಳಿಯುವುದು ಹೇಗೆ?

ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡಲು ಕೇವಲ ಒಂದು ದಿನ ಬಾಕಿ ಇದ್ದು, ಮಾರ್ಚ್ 31ಕೊನೆ ದಿನವಾಗಿದೆ. ಆಧಾರ್ - ಪ್ಯಾನ್ ಲಿಂಕ್‌ ಮಾಡಿ ಎಂದು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸೂಚಿಸಿದೆ.

|

ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡಲು ಕೇವಲ ಒಂದು ದಿನ ಬಾಕಿ ಇದ್ದು, ಮಾರ್ಚ್ 31ಕೊನೆ ದಿನವಾಗಿದೆ. ಆಧಾರ್ - ಪ್ಯಾನ್ ಲಿಂಕ್‌ ಮಾಡಿ ಎಂದು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸೂಚಿಸಿದೆ. ಲಿಂಕ್‌ ಮಾಡದೇ ಹೋದರೆ ಏನಾಗುತ್ತದೆ ಎಂಬುದನ್ನು ಇಲಾಖೆ ಸ್ಪಷ್ಟಪಡಿಸದಿದ್ದರೂ ಹಲವು ಸಂದರ್ಭಗಳಲ್ಲಿ ತೊಂದರೆ ಅನುಭವಿಸುವುದು ಖಚಿತ. ಐಟಿಆರ್ ಫೈಲ್‌, ಬ್ಯಾಂಕಿಂಗ್‌, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಸಾಧ್ಯತೆಗಳಿವೆ.

 

ಪ್ಯಾನ್ ಕಾರ್ಡ್ ಅಮಾನ್ಯ

ಪ್ಯಾನ್ ಕಾರ್ಡ್ ಅಮಾನ್ಯ

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ ೧೩೯ ಎಎ ಪ್ರಕಾರ, ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಜೋಡಣೆ ಆಗದೇ ಇದ್ದರೆ ಅಂತಹ ಪ್ಯಾನ್ ಅಮಾನ್ಯವಾಗಿದೆ.
ಆದರೆ, ಆಧಾರ್ -ಪ್ಯಾನ್ ಜೋಡಣೆ ಮಾಡದೇ ಹೋದರೆ ಪ್ಯಾನ್‌ ಅಮಾನ್ಯವಾಗುವುದೇ ಎನ್ನುವ ಪ್ರಶ್ನೆಗೆ, ಆ ಸಾಧ್ಯತೆಗಳು ಇಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಪ್ಯಾನ್ ಹೊಸ ನಿಯಮ

ಪ್ಯಾನ್ ಹೊಸ ನಿಯಮ

ಹೊಸ ನಿಯಮದ ಪ್ರಕಾರ ಪ್ಯಾನ್ ಕಾರ್ಡ್ ಅರ್ಜಿದಾರರ ತಂದೆ ಇರದೆ ಹೋದಲ್ಲಿ ತಂದೆ ಹೆಸರು ನಮೂದಿಸಬೇಕಾಗಿಲ್ಲ. ತಾಯಿ ಹೆಸರನ್ನು ಅರ್ಜಿಯಲ್ಲಿ ಭರ್ತಿ ಮಾಡುವ ಅವಕಾಶವನ್ನು ಇಲಾಖೆ ನೀಡಲಿದೆ. ಹೊಸ ಡಿಜಿಟಲ್ ಪ್ಯಾನ್ ಕಾರ್ಡ್ ನೊಂದಿಗೆ ಹಳೆ ಪ್ಯಾನ್ ಕಾರ್ಡ್ ಗಳು ಚಾಲ್ತಿಯಲ್ಲಿರಲಿವೆ.
ಪ್ಯಾನ್‌ ಕಾರ್ಡ್ ನಲ್ಲಿ ವ್ಯಕ್ತಿಯ ಇನ್ಷಿಯಲ್‌ ಇರುವುದಿಲ್ಲ. ಹೀಗಾಗಿ ಪ್ಯಾನ್‌ ಮತ್ತು ಆಧಾರ್‌ನಲ್ಲಿ ವ್ಯಕ್ತಿಯ ಹೆಸರು ಹೊಂದಾಣಿಕೆಯಾಗದೇ ಹೋದರೆ, ಜೋಡಣೆ ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಪ್ಯಾನ್‌ನಲ್ಲಿರುವಂತೆಯೇ ಆಧಾರ್‌ನಲ್ಲೂ ಹೆಸರನ್ನು ಬದಲಿಸಿ, ಬಳಿಕ ಜೋಡಣೆ ಮಾಡಬೇಕಾಗುತ್ತದೆ.

ಪ್ಯಾನ್ ಲಿಂಕ್‌ ಆಗಿದೆಯೇ, ತಿಳಿಯುವುದು ಹೇಗೆ?
 

ಪ್ಯಾನ್ ಲಿಂಕ್‌ ಆಗಿದೆಯೇ, ತಿಳಿಯುವುದು ಹೇಗೆ?

ಆದಾಯ ತೆರಿಗೆ ಇಲಾಖೆ ಈಗಾಗಲೇ ಹಲವು ಬಾರಿ ಆಧಾರ್ ನೊಂದುಇಗೆ ಪ್ಯಾನ್ ಲಿಂಕ್ ಮಾಡಲು ಗಡುವು ನೀಡಿತ್ತು. ಆ ಸಂದರ್ಭದಲ್ಲಿ ಏನಾದರೂ ಪ್ಯಾನ್‌ ಮತ್ತು ಆಧಾರ್ ಲಿಂಕ್‌ ಆಗಿವೆಯೇ ಎನ್ನುವ ಅನುಮಾನ ನಿಮ್ಮಲ್ಲಿರದ್ದರೆ ಅದರ ಬಗ್ಗೆ ದೃಢೀಕರಿಸಿಕೊಳ್ಳಲು ಹೀಗೆ ಮಾಡಿ...
1. ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.incometaxindiaefiling.gov.in/ 2. ವೆಬ್ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ Link Aadhaar ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ನೀವು ಈಗಾಗಲೇ ಲಿಂಕ್‌ ಮಾಡಿದ್ದರೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಎಂಬ ಸಂದೇಶ ಕಾಣಿಸುತ್ತದೆ. ಅಲ್ಲಿರುವ Link Aadhaar ಅನ್ನುವುದನ್ನು ಕ್ಲಿಕ್‌ ಮಾಡಿ.
3. ಮುಂದಿನ ಪುಟದಲ್ಲಿ ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆಯನ್ನು ಅಲ್ಲಿ ಕೊಟ್ಟಿರುವ ಖಾಲಿ ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ. View Link Aadhaar Status ಅನ್ನುವುದನ್ನು ಕ್ಲಿಕ್‌ ಮಾಡಿ. ಆಗ ನಿಮ್ಮ ಕಾರ್ಡ್‌ ಲಿಂಕ್‌ ಆಗಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಶವು ತೆರೆ ಮೇಲೆ ಕಾಣಿಸುತ್ತದೆ.  ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಆಗಲಿದೆ ಪ್ರಮುಖ ಬದಲಾವಣೆ

Read more about: aadhar pan card money
English summary

Tommorow last day, How to Know Aadhaar - PAN card Link

Income Tax Department has been advertising via newspaper and other mediums reminding PAN card holders to link it with their Aadhaar number.
Story first published: Saturday, March 30, 2019, 13:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X