For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಆಗಲಿದೆ ಪ್ರಮುಖ ಬದಲಾವಣೆ

|

ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಮಾಡಿಸುವ ಆಲೋಚನೆಗಯಲ್ಲಿದ್ದರೆ ಕಾಲಕಾಲಕ್ಕೆ ಬದಲಾಗುವ ನಿಯಮಗಳನ್ನು ತಿಳಿದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ.

ಇದೀಗ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ನಿಯಮದಲ್ಲಿ ಕೆಲವೊಂದು ಬದಲಾವಣೆ ಮಾಡಿದೆ ಅಲ್ಲದೇ ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡುವ ಗಡುವು ಕೂಡ ಹತ್ತಿರ ಬರುತ್ತಿದೆ.

ಪ್ಯಾನ್ ಕಾರ್ಡ್ ಅಮಾನ್ಯ
 

ಪ್ಯಾನ್ ಕಾರ್ಡ್ ಅಮಾನ್ಯ

ಇದೇ ಮಾರ್ಚ್ 31, 2019 ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೊನೆ ದಿನವಾಗಿದೆ. ಒಂದುವೇಳೆ ನೀವು ಆಧಾರ್-ಪ್ಯಾನ್ ಜೋಡಣೆ ಮಾಡಲು ವಿಫಲರಾದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಬಹುದು. ತದನಂತರದಲ್ಲಿ ತೆರಿಗೆ ಪಾವತಿ ಹಾಗೂ ಮರುಪಾವತಿ ಸಾಧ್ಯವಾಗುವುದಿಲ್ಲ.

ಪ್ಯಾನ್ ಕಾರ್ಡ್ ಕಡ್ಡಾಯ

ಪ್ಯಾನ್ ಕಾರ್ಡ್ ಕಡ್ಡಾಯ

ಸುಪ್ರೀಕೋರ್ಟ್ ಆಧಾರ್ ಕಾರ್ಡ್ ಸಂವಿಧಾನಾತ್ಮಕ ಮಾನ್ಯತೆ ನೀಡಿದ್ದು, ಹಣಕಾಸು ವರ್ಷದಲ್ಲಿ 2.5 ಲಕ್ಷಕ್ಕಿಂತ ಹೆಚ್ಚು ಹಣಕಾಸು ವ್ಯವಹಾರ ನಡೆಸುವ ವೈಯಕ್ತಿಕವಲ್ಲದ ಘಟಕಗಳಿಗೆ, ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಅನಿವಾರ್ಯ ಮಾಡಿದೆ. ಐಟಿ ರಿಟರ್ನ್ ಸಲ್ಲಿಕೆ ಮತ್ತು ಪ್ಯಾನ್ ಕಾರ್ಡ್ ಪಡೆಯುವಾಗ ಆಧಾರ್ ಕಡ್ಡಾಯವಾಗಿರುತ್ತದೆ.

ಹೊಸ ಪ್ಯಾನ್ ಕಾರ್ಡ್ ಹೇಗಿರಲಿದೆ?

ಹೊಸ ಪ್ಯಾನ್ ಕಾರ್ಡ್ ಹೇಗಿರಲಿದೆ?

ಇನ್ಮುಂದೆ ಜಾರಿಗೆ ಬರುವ ಪ್ಯಾನ್ ಕಾರ್ಡ್ ಗಳಲ್ಲಿ ಅರ್ಜಿದಾರರ ಹೆಸರು, ತಂದೆ ಅಥವಾ ತಾಯಿ ಹೆಸರು, ಜನ್ಮ ದಿನಾಂಕ, ಪ್ಯಾನ್ ನಂಬರ್ ಜೊತೆ ಕ್ಯೂಆರ್ ಕೋಡ್ ಇರಲಿದೆ. ಕ್ಯೂಆರ್ ಕೋಡ್ ನಲ್ಲಿ ಅರ್ಜಿದಾರನ ಫೋಟೋ ಹಾಗೂ ಸಹಿ ಇರಲಿದೆ. ಮುಂದಿನ ವರ್ಷ ಮಾರ್ಚ್ 31ರೊಳಗೆ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು.

ಹೊಸ ನಿಯಮದ ಪ್ರಕಾರ
 

ಹೊಸ ನಿಯಮದ ಪ್ರಕಾರ

ಹೊಸ ನಿಯಮದ ಪ್ರಕಾರ ಪ್ಯಾನ್ ಕಾರ್ಡ್ ಅರ್ಜಿದಾರರ ತಂದೆ ಇರದೆ ಹೋದಲ್ಲಿ ತಂದೆ ಹೆಸರು ನಮೂದಿಸಬೇಕಾಗಿಲ್ಲ. ತಾಯಿ ಹೆಸರನ್ನು ಅರ್ಜಿಯಲ್ಲಿ ಭರ್ತಿ ಮಾಡುವ ಅವಕಾಶವನ್ನು ಇಲಾಖೆ ನೀಡಲಿದೆ. ಹೊಸ ಡಿಜಿಟಲ್ ಪ್ಯಾನ್ ಕಾರ್ಡ್ ನೊಂದಿಗೆ ಹಳೆ ಪ್ಯಾನ್ ಕಾರ್ಡ್ ಗಳು ಚಾಲ್ತಿಯಲ್ಲಿರಲಿವೆ.

ಇಲ್ಲಿ ಮಾಹಿತಿ ಲಭ್ಯ

ಇಲ್ಲಿ ಮಾಹಿತಿ ಲಭ್ಯ

ಹೊಸ ವಿನ್ಯಾಸದ ಪ್ಯಾನ್ ಕಾರ್ಡ್ https://www.tin-nsdl.com/ ನಲ್ಲಿ ಲಭ್ಯವಿದೆ. ಪಾಪ್ ಆಫ್ ಮೇಲೆ ಕ್ಲಿಕ್ ಮಾಡಿ ನಂತರ ವೆಬ್ಸೈಟ್ ಹೊಸ ವಿನ್ಯಾಸ ಪ್ಯಾನ್ ಕಾರ್ಡ್ ನ ಎಲ್ಲಾ ವಿವರಗಳನ್ನು ಪಡೆಯಬಹುದು.

Read more about: pan card aadhar money
English summary

Major change will be in the PAN Card rules from April 1

The deadline for linking PAN card with Aadhaar is March 31, 2019. If you fail to link your PAN with Aadhaar, your PAN card might become invalid.
Story first published: Wednesday, March 20, 2019, 14:22 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more