ನೌಕರರಿಗೆ ತೊಂದರೆಗಳಾಗದೇ ತಕ್ಷಣದಲ್ಲಿ ತಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡುವುದಕ್ಕಾಗಿ ಆನ್ಲೈನ್, ಮೊಬೈಲ್ ಸಂಖ್ಯೆ, ಎಸ್ಎಂಎಸ್, ಮಿಸ್ಡ್ ಕಾಲ್, ಆಪ್ ಇತ್ಯಾದಿ ಉಪಕ್ರಮಗಳ ಮೂಲಕ ಇಪಿಎಫ್ ಚೆಕ್ ಮಾಡಲು ಸಾದ್ಯವಾಗಿಸಿದೆ.
ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಓ) ತನ್ನ ಚಂದಾದಾರರಿಗೆ ಹಲವಾರು ಸುವಿಧಾನಗಳನ್ನು ಮಾಡಿಕೊಟ್ಟಿದೆ. ಅವುಗಳಲ್ಲಿ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಕೂಡ ಒಂದು.
ನೌಕರರಿಗೆ ತೊಂದರೆಗಳಾಗದೇ ತಕ್ಷಣದಲ್ಲಿ ತಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡುವುದಕ್ಕಾಗಿ ಆನ್ಲೈನ್, ಮೊಬೈಲ್ ಸಂಖ್ಯೆ, ಎಸ್ಎಂಎಸ್, ಮಿಸ್ಡ್ ಕಾಲ್, ಆಪ್ ಇತ್ಯಾದಿ ಉಪಕ್ರಮಗಳ ಮೂಲಕ ಇಪಿಎಫ್ ಚೆಕ್ ಮಾಡಲು ಸಾದ್ಯವಾಗಿಸಿದೆ. ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?
ಇವುಗಳಲ್ಲಿ ಸರಳ ಕ್ರಮವಾದ ಮಿಸ್ಡ್ ಕಾಲ್ ಮೂಲಕ ಶೀಘ್ರದಲ್ಲಿ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ ಎಂಬುದನ್ನು ನೋಡೋಣ ಬನ್ನಿ..
ನಿಮಗೇನು ಬೇಕು?
ಮಿಸ್ಡ್ ಕಾಲ್ ಮೂಲಕ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಕೆಲ ಕಂಡಿಷನ್ ಗಳಿವೆ. ಇದನ್ನು ತಿಳಿದುಕೊಳ್ಳಲು ಕೆಲ ಸಂಗತಿಗಳನ್ನು ಗಮನಿಸಬೇಕು.
* ಯುಎಎನ್ ನಂಬರ್ ಹೊಂದಿರಬೇಕು
* ಯುಎಎನ್ ಕ್ರಿಯಾಶೀಲವಾಗಿರಬೇಕು
* ಯುಎಎನ್ ಪೋರ್ಟಲ್ ಗೆ ಸರಿಯಾದ ಮೊಬೈಲ್ ಸಂಖ್ಯೆ ಒದಗಿಸಬೇಕು. ನೋಂದಾಯಿತ ಮೊಬೈಲ್ ನಂಬರ್ ಬಳಕೆ ಮಾಡದಿದ್ದಲ್ಲಿ ಹೊಸ ನಂಬರ್ ನೋಂದಾಯಿಸಬೇಕು.
* ಯುಎಎನ್ ಪೋರ್ಟಲ್ ನಲ್ಲಿ ನೋಂದಾಯಿಸಲ್ಪಟ್ಟ ಸಂಖ್ಯೆಯಿಂದಲೇ ಕರೆ ಮಾಡಬೇಕು.
* ಯುಎಎನ್ ಆಧಾರ್/ಪ್ಯಾನ್/ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕು.
ಮಿಸ್ಡ್ ಕಾಲ್ ಮತ್ತು ವಿವರ
ಇಪಿಎಫ್ ಬ್ಯಾಲೆನ್ಸ್ ಮಾಹಿತಿ ಪಡೆಯೋದು ಈಗ ಸುಲಭ ಪ್ರಕ್ರಿಯೆ. ತಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಪರಿಶೀಲನೆ ಮಾಡಬಯಸುವವ ಪಿಎಫ್ ಖಾತೆದಾರರು 01122901406 ಸಂಖ್ಯೆಗೆ ನೊಂದಾಯಿಸಲ್ಪಟ್ಟ ಮೊಬೈಲ್ ನಂಬರ್ ನಿಂದ ಮಿಸ್ಡ್ ಕಾಲ್ ಕೊಡಬೇಕು. ತದನಂತರ ಖಾತೆದಾರನ ನಂಬರ್ ಗೆ ಒಂದು ಎಸ್ಎಂಎಸ್ ಬರುತ್ತದೆ. ಇದು ಖಾತೆದಾರರ ಹೆಸರು, ಆಧಾರ್ ಮತ್ತು ಪ್ಯಾನ್ ಕಾರ್ಡ್ ನಂಬರ್, ಕೊನೆಯ ಕೊಡುಗೆ ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ.
ಮಿಸ್ಡ್ ಕಾಲ್ ಮೂಲಕ ಪರಿಶೀಲನೆ ಹೇಗೆ?
ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಈ ನಂಬರ್ ಗೆ ಕರೆ ಮಾಡಿ. ಯುಎಎನ್ ಕ್ರಿಯಾಶೀಲವಾದ ನಂತರ ನಿಮ್ಮ ಮೊಬೈಲ್ ನಂಬರ್ ನೀಡಬೇಕು. ಒಂದು ಯುಎಎನ್ ಕೇವಲ ಒಂದು ಮೊಬೈಲ್ ನಂಬರ್ ಹೊಂದಿರುತ್ತದೆ. ಮೊಬೈಲ್ ನಂಬರ್ ನೋಂದಣಿ ಮಾಡದೇ ಇದ್ದರೆ ಖಾತರಿಪಡಿಸಿ. ಅಲ್ಲದೆ ಈ ನಂಬರ್ ನ್ನು ಬದಲಾಯಿಸಿಬಾರದು. ಒಂದು ವೇಳೆ ಮೊಬೈಲ್ ನಂಬರ್ ಬದಲಾಯಿಸಿದರೆ ಹೊಸ ನಂಬರ್ ಯುಎಎನ್ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಬೇಕು.
ಎಸ್ಎಂಎಸ್
ಮಿಸ್ ಕಾಲ್ ಕೊಟ್ಟ ನಂತರ ನಿಮಗೆ AM-EPFOHO ನಿಂದ ಸಂದೇಶ ಬರುತ್ತದೆ. ನಿಮ್ಮ ಮಿಸ್ಡ್ ಕಾಲ್ ಗೆ ಪ್ರತಿಕ್ರಿಯೆಯಾಗಿ ಇಪಿಎಫ್ಓ ಎಸ್ಎಂಎಸ್ ಕಳುಹಿಸುತ್ತದೆ. ಈ ಸಂದೇಶ ನಿಮ್ಮ ಖಾತೆಯಲ್ಲಿರುವ ಮೊತ್ತದ ಮಾಹಿತಿ ಒಳಗೊಂಡಿರುತ್ತದೆ. ಜತೆಗೆ ಈ ಕೆಳಗಿನ ವಿವರ ಒಳಗೊಂಡಿರುತ್ತದೆ.
- ಮೆಂಬರ್ ಐಡಿ(UAN)
- ಪಿಎಫ್ ನಂಬರ್
- ಹೆಸರು
- ಜನ್ಮದಿನಾಂಕ
- ಇಪಿಎಫ್ ಬ್ಯಾಲೆನ್ಸ್
- ಕೊನೆ ಕೊಡುಗೆ
ಒಂದು ವೇಳೆ ನಿಮ್ಮ ಕಂಪನಿ ಖಾಸಗಿ ಟ್ರಸ್ಟ್ ಆಗಿದ್ದರೆ, ಬ್ಯಾಲೆನ್ಸ್ ವಿವರ ಸಿಗುವುದಿಲ್ಲ. ಉದ್ಯೋಗದಾತರನ್ನು ಸಂಪರ್ಕಿಸಬೇಕಾಗುತ್ತದೆ.
ಮಿಸ್ಡ್ ಕಾಲ್ ಗೆ ಯಾಕೆ ಆದ್ಯತೆ ನೀಡಬೇಕು?
ಮಿಸ್ಡ್ ಕಾಲ್ ಸೇವೆ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ತುಂಬಾ ಸರಳವಾದ ಪ್ರಕ್ರಿಯೆ. ಮೊಬೈಲ್ ಆಪ್ ಅಥವಾ ಎಸ್ಎಂಎಸ್ ವಿಧಾನಗಳಿಗಿಂತ ಈ ಪ್ರಕ್ರಿಯೆ ಸುಲಭ.
- ಇದಕ್ಕೆ ಸ್ಮಾರ್ಟ್ಫೋನ್ ಅಗತ್ಯವಿಲ್ಲ. ಆದರೆ ಆಪ್ ಆಧಾರಿತ ಸೇವೆಗಳನ್ನು ಪಡೆಯಲು ಸ್ಮಾರ್ಟ್ಫೋನ್ ಕಡ್ಡಾಯ.
- ಮೊಬೈಲ್ ಆಫ್ ಗಳಾದರೆ ತುಂಬಾ ಕಿರಿಕಿರಿ. ಡೇಟಾ, ಸ್ಪೇಸ್ ಇತ್ಯಾದಿ ಸಮಸ್ಯೆ.
- ಎಸ್ಎಂಎಸ್ ಟೈಪ್ ಕಳುಹಿಸುವುದಕ್ಕಿಂತ ಮಿಸ್ ಕಾಲ್ಡ್ ಕೊಡುವುದು ತುಂಬಾ ಸುಲಭ. ಸಮಯದ ಉಳಿತಾಯ.
- ನುರಿತವರಲ್ಲದಿದ್ದರೂ ಮಿಸ್ಡ್ ಕಾಲ್ ಸೌಲಭ್ಯ ಬಳಸಬಹುದು. ಎಸ್ಎಂಎಸ್ ಬ್ಯಾಲೆನ್ಸ್ ಸೇವೆಗಾದರೆ ಕೋಡ್ ನಂಬರ್ ನೆನಪಿನಲ್ಲಿಡಬೇಕು.
- ಈ ಸೇವೆಗೆ ಹಣ ಪಾವತಿಸಬೇಕಿಲ್ಲ.
ಮಿಸ್ಡ್ ಕಾಲ್ ಸೇವೆ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಯುಎಎನ್ ಆಕ್ಟಿವೆಶನ್ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆ ಕೊಟ್ಟರೆ ಯುಎಎನ್ ಜತೆ ಲಿಂಕ್ ಆಗುತ್ತದೆ. ಪ್ಯಾನ್/ಆಧಾರ್/ಖಾತೆ ಸಂಖ್ಯೆ ಹೊದಿರುವ ಯುಎಎನ್ ನಂಬರ್ ವೆರಿಪೈಯ್ಡ್ ನಂಬರ್ ಆಗಿರುತ್ತದೆ. ಯುಎಎನ್ ಪೋರ್ಟಲ್ ಇಪಿಎಫ್ ಗ್ರಾಹಕರ ಎಲ್ಲಾ ಮಾಹಿತಿಯನ್ನು ನಿರ್ವಹಿಸುತ್ತದೆ.
ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಇಪಿಎಫ್ಓ ಗೆ ಮಿಸ್ಡ್ ಕಾಲ್ ಕೊಟ್ಟರೆ ಇಪಿಎಫ್ಓ ನಿಂದ ನಿಮಗೆ ವಿವರ ಒಳಗೊಂಡ ಸಂದೇಶ ಬರುತ್ತದೆ.
ಮಿಸ್ಡ್ ಕಾಲ್ ಸೇವೆ ಕಾರ್ಯನಿರ್ವಹಿಸದಿದ್ದರೆ?
ಕೆಲ ಸಂದರ್ಭಗಳಲ್ಲಿ ಮಿಸ್ಡ್ ಕಾಲ್ ಸೇವೆ ಕಾರ್ಯನಿರ್ವಹಿಸದಿರಬಹುದು. ಅಂತಹ ಸಂದರ್ಭಗಳಲ್ಲಿ ಇದರ ಹೊರತಾದ ವಿಧಾನಗಳನ್ನು ಅಳವಡಿಸಬೇಕಾಗುತ್ತದೆ. ಮೊಬೈಲ್ ಎಸ್ಎಂಎಸ್, M-EPF ಆಪ್ ನಂತಹ ಸೇವೆಗಳನ್ನು ಆಯ್ಕೆ ಮಾಡಿ ಬ್ಯಾಲೆನ್ಸ್ ಚೆಕ್ ಮಾಡಬಹುದು.


Click it and Unblock the Notifications