ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?

Written By: Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಪ್ರಾವಿಡೆಂಟ್ ಫಂಡ್ ಅಥವಾ ಪಿಎಫ್ ಖಾತೆ ಪ್ರತಿಯೊಬ್ಬರಿಗೂ ನಿವೃತ್ತಿ ನಂತರದ ಜೀವನಕ್ಕೆ ಭವಿಷ್ಯದ ಬುತ್ತಿಯಾಗಿ ಕಷ್ಟಕಾಲದಲ್ಲಿ ಕೈಹಿಡಿಯುತ್ತದೆ. ಇದಕ್ಕಾಗಿಯೇ ಆರ್ಥಿಕ ತಜ್ಞರು ಉದ್ಯೋಗ ಮಾಡುವ ಅವಧಿಯಲ್ಲಿ ಪಿಎಫ್ ಖಾತೆಯ ಉಳಿತಾಯವನ್ನು ಖರ್ಚು ಮಾಡಬಾರದೆಂದು ಹೇಳುತ್ತಾರೆ. ಉದ್ಯೋಗಿಗಳು ನಿಯಮಿತವಾಗಿ ಪಿಎಫ್ ಬ್ಯಾಲೆನ್ಸ್ ಕಾಪಾಡಿಕೊಂಡರೆ ನಿವೃತ್ತಿ ನಂತರ ಉತ್ತಮವಾದ ಯೋಜನೆಯನ್ನು ಮಾಡಬಹುದಾಗಿದೆ. ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?

  ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಓ) ನೌಕರರು ತಕ್ಷಣದಲ್ಲಿ ತಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಅನೇಕ ಉಪಕ್ರಮಗಳನ್ನು ಹೊರತಂದಿದೆ. ಶೀಘ್ರದಲ್ಲಿ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಹೇಗೆ ಎಂಬುದರ ವಿವರ ಇಲ್ಲಿ ನೀಡಲಾಗಿದೆ.

  1. ಆನ್ಲೈನ್ ಮೂಲಕ ಪಿಎಫ್ ಪರಿಶೀಲನೆ(ಯುಎಎನ್ ಅಗತ್ಯವಿದೆ)

  2014ರಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಓ) ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ಬಿಡುಗಡೆಗೊಳಿಸಿದೆ. ಯುಎಎನ್ ಪೋರ್ಟಲ್ ಮೂಲಕ ಇದು ತನ್ನ ಸದಸ್ಯರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ.
  ಲಾಗಿನ್ ಆದ ನಂತರ ಪಿಎಫ್ ಕೊಡುಗೆ ಮತ್ತು ಸಂಗ್ರಹಿತ ಬ್ಯಾಲೆನ್ಸ್ ವಿವರಗಳನ್ನು ಒಳಗೊಂಡಿರುವ ಸದಸ್ಯ ಪಾಸ್ ಬುಕ್ ಚಂದಾದಾರರು ವೀಕ್ಷಿಸಬಹುದು.
  ಈ ಇಂಟರ್ಫೇಸ್ ಬಳಸಿ ಚಂದಾದಾರರು ಯುಎಎನ್ ಕಾರ್ಡ್ ಡೌನ್ಲೋಡ್ ಮಾಡಬಹುದು. ಜತೆಗೆ ಕೆವಾಯ್ಸಿ(KYC) ಮಾಹಿತಿಯನ್ನು ಅಪ್ಡೇಟ್ ಮಾಡಬಹುದು. ಈ ಇಂಟರ್ಫೇಸ್ ಬಳಸಲು ಯುಎಎನ್ ನಂಬರ್ ಅಗತ್ಯವಿದೆ ಎಂಬುದನ್ನು ಗಮನದಲ್ಲಿಡಬೇಕು.

  ಬಳಕೆದಾರರು ಮೊದಲಿಗೆ ಯುಎಎನ್ ಖಾತೆಯನ್ನು ಸಕ್ರಿಯಗೊಳಿಸಬೇಕು. ಖಾತೆ ಸಕ್ರಿಯವಾದ ನಂತರ ಪೋರ್ಟಲ್ ಗೆ ಲಾಗಿನ್ ಆಗಿ ಪಿಎಫ್ ಪಾಸ್ ಬುಕ್ ಡೌನ್ಲೋಡ್ ಮಾಡಿಕೊಳ್ಳಬೇಕು. ಇಪಿಎಫ್ಓ ತನ್ನ ಎಲ್ಲ ನೌಕರರಿಗೆ ಪಿಎಫ್ ಖಾತೆ ನಂಬರ್ ಯುಎಎನ್ ಗೆ ಲಿಂಕ್ ಮಾಡುವಂತೆ ಸಲಹೆ ನೀಡಿದೆ.
  ಪಿಎಫ್ ಚಂದಾದಾರರನ್ನು ಪ್ರೋತ್ಸಾಹಿಸಲು ಇಪಿಎಫ್ಓ ಇತ್ತೀಚಿಗೆ 'ಒನ್ ಮೆಂಬರ್ ಒನ್ ಎಪಿಎಫ್ ಅಕೌಂಟ್' ವಿಶೇಷ ಯೋಜನೆ ಪರಿಚಯಿಸಿದೆ.

  2. ಆನ್ಲೈನ್ ಮೂಲಕ ಪಿಎಫ್ ಪರಿಶೀಲನೆ(ಯುಎಎನ್ ಅಗತ್ಯವಿಲ್ಲ)

  ಯುಎಎನ್ ಸೌಲಭ್ಯವನ್ನು ಇಲ್ಲಿಯವರೆಗೆ ಪಡೆಯದೇ ಇರುವ ನೌಕರರು ಈ ವೆಬ್ ಆಧಾರಿತ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಸೌಲಭ್ಯವನ್ನು ಬಳಸಲು ಉದ್ಯೋಗಿಗಳಿಗೆ ತಮ್ಮ ಪೇ ಸ್ಲಿಪ್ ನಲ್ಲಿ ಉಲ್ಲೇಖಿಸಲ್ಪಟ್ಟಿರುವ ಪಿಎಫ್ ಖಾತೆ ನಂಬರ್ ಗೊತ್ತಿರಬೇಕಾಗುತ್ತದೆ.
  ರಾಜ್ಯ ಆಯ್ಕೆ ಮಾಡಿದ ನಂತರ ಪ್ರಾದೇಶಿಕ ಪಿಎಫ್ ಕಚೇರಿ ಆಯ್ಕೆ ಮಾಡಬೇಕು. ಒಂದು ವೇಳೆ ನಿಮಗೆ ಗೊಂದಲಗಳಿದ್ದರೆ ಪೇ ಸ್ಲಿಪ್ ಪರಿಶೀಲಿಸಿ. ಮೊದಲೆರಡು ಅಕ್ಷರಗಳು ಪ್ರಾದೇಶಿಕ ಕೋಡ್ ಆಗಿದ್ದು, ನಂತರದ ಮೂರು ಅಕ್ಷರಗಳು ಪ್ರಾದೇಶಿಕ ಪಿಎಫ್ ಕಚೇರಿಯ ಕೋಡ್ ಆಗಿರುತ್ತದೆ. ವಿವರಗಳು ಸಲ್ಲಿಸಿದ ನಂತರ ಚಂದಾದಾರರು ಪಿಎಫ್ ಬ್ಯಾಲೆನ್ಸ್‍ ಕುರಿತು ಸಂದೇಶವನ್ನು ಪಡೆಯುತ್ತಾರೆ.

  3. ಎಸ್ಎಂಎಸ್ ಸೇವೆ

  ಇಪಿಎಫ್ಓ ಪಿಎಫ್ ಬ್ಯಾಲೆನ್ಸ್ ಮತ್ತು ಕೊಡುಗೆ ವಿವರಗಳನ್ನು ಎಸ್ಎಂಎಸ್ ಸೇವೆ ಮೂಲಕ ತಿಳಿಯಲು ಅವಕಾಶ ಕಲ್ಪಿಸಿದೆ. ಈ ಸೇವೆಯನ್ನು ಪಡೆಯಲು ಚಂದಾದಾರರು 07738299899 ನಂಬರಿಗೆ ಸಂದೇಶ ಕಳುಹಿಸಬೇಕು. ಯುಎಎನ್
  ಸಕ್ರಿಯಗೊಳಿಸಿರುವ ಉದ್ಯೋಗಿಗಳು ಮಾತ್ರ ಈ ಸೇವೆಯನ್ನು ಪಡೆಯಬಹುದಾಗಿದೆ. EPFOHO UAN ಎಂಬುದಾಗಿ ಸಂದೇಶವನ್ನು ಕಳುಹಿಸಬೆಕು. ಚಂದಾದಾರರು ಸಂದೇಶವನ್ನು ಇಂಗ್ಲಿಷ್ ನಲ್ಲಿ ಪಡೆಯಲು ಇಚ್ಚಿಸಿದಲ್ಲಿ EPFOHO UAN ENG ಎಂಬುದಾಗಿ ಟೈಪ್ ಮಾಡಿ 07738299899 ನಂಬರಿಗೆ ಕಳುಹಿಸಬೆಕು. ಈ ಸೌಲಭ್ಯ ಭಾರತೀಯ ವಿವಿಧ ಭಾಷೆಗಳಲ್ಲೂ ಲಭ್ಯವಿದೆ.

  4. ಮಿಸ್ಡ್ ಕಾಲ್ ಸೇವೆ

  ಈ ಸೇವೆಯ ಅಡಿಯಲ್ಲಿ ಚಂದಾದಾರರು ತಮ್ಮ ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು 01122901406 ನಂಬರಿಗೆ ಮಿಸ್ಡ್ ಕಾಲ್ ಮಾಡಬೇಕಾಗುತ್ತದೆ. ಯುಎಎನ್ ಸಕ್ರಿಯಗೊಳಿಸಿದ ಎಲ್ಲಾ ಚಂದಾದಾರರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.

  5. ಆಫ್ (ಅಪ್ಲಿಕೇಶನ್)

  ಸ್ಮಾರ್ಟಫೋನ್ ಬಳಕೆದಾರರು ತಮ್ಮ ಪಿಎಫ್ ಬ್ಯಾಲೆನ್ಸ್‍ ತಿಳಿದುಕೊಳ್ಳಲು ಇಪಿಎಫ್ಒ ಮೊಬೈಲ್ ಆಪ್(M-Sewa) ಡೌನ್ಲೋಡ್ ಮಾಡಿಕೊಳ್ಳಬಹುದು. ಮೊಬೈಲ್ ಆಪ್ ಪಡೆದುಕೊಳ್ಳಲು ಯುಎಎನ್ ಮತ್ತು ನೊಂದಾಯಿತ ಮೊಬೈಲ್ ಸಂಖ್ಯೆ ಹೊಂದಿರಬೇಕಾಗುತ್ತದೆ.

  English summary

  PF Balance: Here Are 5 Ways To Check PF Instantly

  Provident fund or PF accounts for a big chunk of one's savings toward retirement. This is the reason financial experts suggest that the accumulated savings in PF accounts should not be withdrawn during one's working years.
  Company Search
  Enter the first few characters of the company's name or the NSE symbol or BSE code and click 'Go'
  Thousands of Goodreturn readers receive our evening newsletter.
  Have you subscribed?

  Find IFSC

  ಕರ್ನಾಟಕ ವಿಧಾನಸಭೆ ಚುನಾವಣೆ 2018

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more