For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ 2019, ಇಂದು ನಿವೇನು ಮಾಡಬಹುದು? ಈ 4 ಮಾರ್ಗ ಆಯ್ಕೆ ಮಾಡಿ..

ಅಕ್ಷಯ ತೃತೀಯ 2019 ರ ಸಂದರ್ಭದಲ್ಲಿ ಮಂಗಳವಾರ ಎನ್ಎಸ್ಇ, ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಗೋಲ್ಡ್ ಇಟಿಎಫ್ಗಳು) ಮತ್ತು ಸಾವರಿನ್ ಗೋಲ್ಡ್ ಬಾಂಡ್ ವ್ಯಾಪಾರಕ್ಕಾಗಿ ವಿಸ್ತೃತ ಲೈವ್ ಟ್ರೇಡಿಂಗ್ ಸೆಶನ್ ಅನ್ನು ನಡೆಸುತ್ತಿದೆ.

|

ಪ್ರತಿ ವರ್ಷ ಅಕ್ಷಯ ತೃತೀಯದಂದು, ಹಲವಾರು ಜನರು ಚಿನ್ನವನ್ನು ಖರೀದಿಸಲು ಎದುರು ನೋಡುತ್ತಾರೆ. ಈ ದಿನದಂದು ಬಂಗಾರ, ಆಸ್ತಿ ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಕ್ಷಯ ತೃತೀಯ 2019 ರ ಸಂದರ್ಭದಲ್ಲಿ ಮಂಗಳವಾರ ಎನ್ಎಸ್ಇ, ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಗೋಲ್ಡ್ ಇಟಿಎಫ್ಗಳು) ಮತ್ತು ಸಾವರಿನ್ ಗೋಲ್ಡ್ ಬಾಂಡ್ ವ್ಯಾಪಾರಕ್ಕಾಗಿ ವಿಸ್ತೃತ ಲೈವ್ ಟ್ರೇಡಿಂಗ್ ಸೆಶನ್ ಅನ್ನು ನಡೆಸುತ್ತಿದೆ. ಭಾರತದಲ್ಲಿ ಚಿನ್ನದ ಬೆಲೆ ಕಳೆದ 1-5 ವರ್ಷಗಳಲ್ಲಿ ಶೇ.0 ದಿಂದ ಶೇ. 1ಕ್ಕೆ ಏರಿದೆ. 2014 ರ ಮೇ 5 ರಂದು ಬೆಲೆ ರೂ. 29.007 ರಷ್ಟಿದ್ದ ಬೆಲೆ ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆ ರೂ. 31,500 ಆಗಿದೆ.

ಚಿನ್ನ ಖರೀದಿದಾರರಿಗೆ ಮಾರುಕಟ್ಟೆಯಲ್ಲಿ ಹಲವಾರು ವಿಧಾನಗಳು ಲಭ್ಯವಿವೆ. ಅದರಲ್ಲಿ ಇಟಿಎಫ್, ಸಾವರಿನ್ ಗೋಲ್ಡ್ ಬಾಂಡ್, ಡಿಜಿಟಲ್ ಗೋಲ್ಡ್ , ಚಿನ್ನದ ನಾಣ್ಯಗಳು, ಭೌತಿಕ ಚಿನ್ನ ಇತ್ಯಾದಿ ರೂಪಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಅವುಗಳಲ್ಲಿ ಕೆಲ ವಿಧಾನಗಳನ್ನು ನೋಡೋಣ ಬನ್ನಿ..

1. ಸಾವರಿನ್ ಗೋಲ್ಡ್ ಬಾಂಡ್ (SGB)

1. ಸಾವರಿನ್ ಗೋಲ್ಡ್ ಬಾಂಡ್ (SGB)

ಸಾವರಿನ್ ಗೋಲ್ಡ್ ಬಾಂಡ್ಗಳು (SGBs) ಸರ್ಕಾರದಿಂದ ನೀಡಲ್ಪಡುತ್ತವೆ. ಇದರಲ್ಲಿ ಬಾಂಡ್ ಗಳ ಹೂಡಿಕೆಯನ್ನು ಹೋಲುವಂತೆ ಕಾಗದ ರೂಪದಲ್ಲಿ ಚಿನ್ನದ ಖರೀದಿಸಲು ಹೂಡಿಕೆ ಮಾಡಲಾಗುತ್ತದೆ. ಆರಂಭಿಕ ಸಂಚಿಕೆಯಲ್ಲಿ, 1 ಗ್ರಾಂ ಚಿನ್ನಕ್ಕಾಗಿ ಕೊಳ್ಳುವ ಬೆಲೆಯು ಸರ್ಕಾರ ನಿರ್ಧರಿಸುತ್ತದೆ. ನಂತರ ಯಾವುದೇ ಸಮಯದಲ್ಲಿ ಖರೀದಿ ಮತ್ತು ಮಾರಾಟಕ್ಕಾಗಿ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಪಟ್ಟಿ ಮಾಡಲ್ಪಡುತ್ತದೆ. ಭೌತಿಕ ಚಿನ್ನಕ್ಕೆ ವಿರುದ್ಧವಾಗಿ, ಚಿನ್ನವನ್ನು ಹೊಂದುವ ವೆಚ್ಚ SGB ಯಲ್ಲಿ ಕಡಿಮೆಯಿರುತ್ತದೆ ಮತ್ತು ಚಿನ್ನದ ಸುರಕ್ಷಿತವನ್ನು ಇಟ್ಟುಕೊಳ್ಳುವ ಚಿಂತೆಗಳು ಅಸ್ತಿತ್ವದಲ್ಲಿಲ್ಲ. SGB ​​ನಲ್ಲಿನ ಹೂಡಿಕೆಯು ಚಿನ್ನದ ಬೆಲೆಗಳಲ್ಲಿ ಚಂಚಲತೆಗೆ ಒಳಪಟ್ಟಿರುತ್ತದೆ ಆದರೆ ಹೂಡಿಕೆಯು ಬಡ್ಡಿಗಳನ್ನು ಮುಕ್ತಾಯದವರೆಗೂ ಉಳಿಸಿಕೊಂಡಿರುವಲ್ಲಿ ವಾರ್ಷಿಕ 2.5 ಪ್ರತಿಶತದಷ್ಟು ಸ್ಥಿರ ಬಡ್ಡಿ ದರವನ್ನು (ತೆರಿಗೆಯ) ಪಡೆಯುತ್ತದೆ.
SGB ​​ನಲ್ಲಿನ ಹೂಡಿಕೆಯು ಚಿನ್ನದ ಬೆಲೆಗಳಲ್ಲಿ ಚಂಚಲತೆಗೆ ಒಳಪಟ್ಟಿರುತ್ತದೆ. ಆದರೆ ಹೂಡಿಕೆಯು ವಾರ್ಷಿಕ 2.5 ಪ್ರತಿಶತದಷ್ಟು ಸ್ಥಿರ ಬಡ್ಡಿ ದರವನ್ನು ( taxable) ಪಡೆಯುತ್ತದೆ. ಬಾಂಡುಗಳು 8 ವರ್ಷಗಳ ಅವಧಿಯನ್ನು ಹೊಂದಿದ್ದರೂ, ಬಡ್ಡಿ ಪಾವತಿ ದಿನಾಂಕದಂದು 5 ನೇ, 6 ನೇ ಮತ್ತು 7 ನೇ ವರ್ಷಗಳಲ್ಲಿ ಬಿಡುಗಡೆಗೆ ಅನುಮತಿಸಲಾಗಿದೆ. ಪ್ರತಿ ಬಾರಿಯೂ ನೀವು ಹೊಸ ಸಂಚಿಕೆಯಲ್ಲಿ ಹೂಡಿಕೆ ಮಾಡಿ, ಇದರ ಹೋಲ್ಡಿಂಗ್ ಅವಧಿಯು 5 ರಿಂದ 8 ವರ್ಷಗಳಾಗಿರುತ್ತದೆ.

2. ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್)

2. ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್)

ಚಿನ್ನ ಮೇಲೆ ಹೂಡಿಕೆ ಮಾಡುವ ಇನ್ನೊಂದು ವಿಧಾನ ಗೋಲ್ಡ್ ಇಟಿಎಫ್. ಇದು ಕೂಡಕಾಗದ ರೂಪದ ಬಂಗಾರ ಹೂಡಿಕೆಯಾಗಿರುತ್ತದೆ. ವ್ಯಾಪಾರದ ಸಮಯದಲ್ಲಿ ಎಲ್ಲಾ ಸ್ಟಾಕ್ ಎಕ್ಸ್ಚೇಂಜ್ ಗಳಲ್ಲಿ ವ್ಯಾಪಾರಗೊಳ್ಳುತ್ತದೆ. ಇದರ ವಹಿವಾಟಿನ ಬೆಲೆಯು ಚಿನ್ನದ ಬೆಲೆಗೆ ಹತ್ತಿರದಲ್ಲಿದೆ. ಎನ್ಎಸ್ಇಯಲ್ಲಿ ಆಕ್ಸಿಸ್ ಗೋಲ್ಡ್ ಇಟಿಎಫ್, ಐಸಿಐಸಿಐ ಪ್ರುಡೆನ್ಶಿಯಲ್ ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಅಥವಾ ರಿಲಯನ್ಸ್ ಇಟಿಎಫ್ ಗೋಲ್ಡ್ ಬೀಸ್ ವಹಿವಾಟು ನಡೆಸುತ್ತವೆ.

3. ಭೌತಿಕ ಚಿನ್ನ

3. ಭೌತಿಕ ಚಿನ್ನ

ಭೌತಿಕ ರೂಪದಲ್ಲಿ ಆಭರಣ, ನಾಣ್ಯಗಳು ಅಥವಾ ಚಿನ್ನದ ಬಾರ್ ಗಳನ್ನು ಖರೀದಿಸಿದರೆ ಮಾತ್ರ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳುವುದು ಸಾಧ್ಯ. ಕಾಗದ ರೂಪದ ಚಿನ್ನಕ್ಕೆ ಹೋಲಿಸಿದರೆ ಕೇವಲ ಸುರಕ್ಷತೆಯಲ್ಲದೆ, ಭೌತಿಕ ರೂಪದ ಚಿನ್ನವನ್ನು ಹೊಂದಲು ವೆಚ್ಚ ಹೆಚ್ಚಾಗಿರುತ್ತದೆ. ಭವಿಷ್ಯದಲ್ಲಿ ಆಭರಣಗಳನ್ನು ತಯಾರಿಸಲು ಚಿನ್ನದ ನಾಣ್ಯಗಳನ್ನು ಖರೀದಿಸುವುದು ಕೂಡ ಹೆಚ್ಚು ವೆಚ್ಚದಾಯಕ ಪ್ರಕ್ರಿಯೆ. ಆಭರಣ ತಯಾರಿಕೆ ಶುಲ್ಕಗಳು ಶೇಕಡಾ 10 ರಷ್ಟು ಇರುತ್ತದೆ. ವಿಶೇಷ ವಿನ್ಯಾಸಗಳಿಗಾಗಿ ಶೇ. 20ರವರೆಗೆ ಶುಲ್ಕ ವಿಧಿಸಲಾಗುತ್ತದೆ.

4. ಡಿಜಿಟಲ್ ಗೋಲ್ಡ್

4. ಡಿಜಿಟಲ್ ಗೋಲ್ಡ್

ಆಫ್ ಅಥವಾ ವೆಬ್ಸೈಟ್ ಗಳ ಮೂಲಕ ಚಿನ್ನ ಖರೀದಿಸುವುದು ಇದೀಗ ಸಾಧ್ಯವಿದೆ. ಡಿಜಿಟಲ್ ಗೋಲ್ಡ್ ರೂಪದಲ್ಲಿ ಚಿನ್ನದ ನಾಣ್ಯಗಳು, ಬಾರ್ ಗಳು ಮತ್ತು ಆಭರಣಗಳು ಆನ್ಲೈನ್ ನಲ್ಲಿ ಲಭ್ಯವಿದೆ. ಪೇಟಿಎಂ ಅಥವಾ ಫೋನ್ಪೆನ್ ಪೇಯಂತಹ ಹಲವಾರು ಮೊಬೈಲ್ ವಾಲೆಟ್ ವೇದಿಕೆ ಮೂಲಕ ಭೌತಿಕ ರೂಪದಲ್ಲಿ ಚಿನ್ನವನ್ನು ಖರೀದಿಸಲು ಅಥವಾ ವಿತರಿಸಲು ಅವಕಾಶವಿದೆ. ಹೆಚ್ಚುವರಿಯಾಗಿ, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ 'ಗೋಲ್ಡ್ ರಶ್' ಹೆಸರಿನಲ್ಲಿ ಮತ್ತು ಮೋತಿಲಾಲ್ ಒಸ್ವಾಲ್ 'ಮಿ-ಗೋಲ್ಡ್' ಹೆಸರಿನಲ್ಲಿ ಖರೀದಿಗೆ ಅವಕಾಶ ಕಲ್ಪಿಸಿವೆ. ಇದರ ಪ್ರಯೋಜನವೆಂದರೆ ಡಿಜಿಟಲ್ ಗೋಲ್ಡ್ ಯೋಜನೆಯಲ್ಲಿ ಕಡಿಮೆ ಆರಂಭಿಕ ಹೂಡಿಕೆಯೊಂದಿಗೆ ಚಿನ್ನವನ್ನು ಹೊಂದಬಹುದು.

ಕೊನೆ ಮಾತು

ಕೊನೆ ಮಾತು

ಸಾವರಿನ್ ಗೋಲ್ಡ್ ಬಾಂಡ್ (SGB) ​​ತೆರಿಗೆ ಪ್ರಯೋಜನ ಹೊಂದಿದೆ. ಗೋಲ್ಡ್ ಇಟಿಎಫ್ ಹೂಡಿಕೆಯು ಹೆಚ್ಚು ಸರಳ ನಿಯಮ ಹೊಂದಿದೆ. ಚಿನ್ನದ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಹೆಚ್ಚು ವೆಚ್ಚಗಳನ್ನು ಒಳಗೊಂಡಿರುತ್ತದೆ. ಚಿನ್ನವನ್ನು ಹೊಂದುವುದು ಅಥವಾ ಚಿನ್ನದ ಹೂಡಿಕೆ ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಚಿನ್ನದ ವ್ಯವಹರದಲ್ಲಿ ತುಂಬಾ ಜಾಗೂರುಕತೆಯಿಂದ ವ್ಯವಹರಿಸಬೇಕಾಗುತ್ತದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಮುನ್ನ ಈ 5 ಸಂಗತಿ ತಪ್ಪದೇ ಓದಿ..

English summary

4 ways to invest in gold on Akshay Tritiya 2019

Every year on the occasion of Akshaya Tritiya, several people look forward to buying gold as it is considered auspicious to own gold on this day.
Story first published: Tuesday, May 7, 2019, 9:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X