ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಮುನ್ನ ಈ 5 ಸಂಗತಿ ತಪ್ಪದೇ ಓದಿ..

ನಮ್ಮ ದೇಶದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಸ್ಥಾನಮಾನವಿದೆ. ಹೆಚ್ಚಿನ ಭಾರತೀಯರು ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಎದುರು ನೋಡುತ್ತಿರುತ್ತಾರೆ. ಏಕೆಂದರೆ ಈ ದಿನದಂದು ಚಿನ್ನ ಖರೀದಿಸುವುದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.

ನಮ್ಮ ದೇಶದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಸ್ಥಾನಮಾನವಿದೆ. ಹೆಚ್ಚಿನ ಭಾರತೀಯರು ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಎದುರು ನೋಡುತ್ತಿರುತ್ತಾರೆ. ಏಕೆಂದರೆ ಈ ದಿನದಂದು ಚಿನ್ನ ಖರೀದಿಸುವುದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಖರೀದಿಯ ಭರಾಟೆಯಲ್ಲಿ ತೊಡಗುವ ಗ್ರಾಹಕರು ತುಂಬಾ ಜಾಗೂರಕರಾಗಿರಬೇಕಾಗುತ್ತದೆ. ನೀವೂ ಕೂಡ ಅಕ್ಷಯ ತೃತೀಯದಂದು ಚಿನ್ನದ ನಾಣ್ಯಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ಐದು ಸಂಗತಿಗಳನ್ನು ಪರಿಗಣಿಸಬೇಕಾಗುತ್ತದೆ. ಅಕ್ಷಯ ತೃತೀಯದ ಮಹತ್ವವೇನು?

ಪರಿಶುದ್ಧತೆ

ಪರಿಶುದ್ಧತೆ

ಚಿನ್ನವನ್ನು ಖರೀದಿಸುವಾಗ ಅತ್ಯಂತ ಮುಖ್ಯವಾದ ಸಂಗತಿಯೆಂದರೆ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವುದು. 24 ಕ್ಯಾರೆಟ್ (KT)ಎನ್ನುವುದು ಚಿನ್ನದ ಶುದ್ಧವಾದ ರೂಪವಾಗಿದೆ. ಹೆಚ್ಚಿನ ಚಿನ್ನಾಭರಣಗಳ ಮಳಿಗೆಗಳಲ್ಲಿ ಪರಿಶುದ್ಧತೆ ಪರೀಕ್ಷಿಸಲು ಯಂತ್ರಗಳನ್ನು ಅಳವಡಿಸಿಕೊಂಡಿರುತ್ತಾರೆ ಚಿನ್ನದ ಖರೀದಿಯ ಮೊದಲು ಪರೀಕ್ಷಿಸಿ ತುರುವುದು ಸೂಕ್ತ.

ಹಾಲ್ ಮಾರ್ಕ್

ಹಾಲ್ ಮಾರ್ಕ್

ಒಂದು ಚಿನ್ನದ ನಾಣ್ಯವನ್ನು ಖರೀದಿಸುವಾಗ, ಅದರ ಹಾಲ್ಮಾರ್ಕ್ ನ್ನು ಪರೀಕ್ಷಿಸಬೇಕು. ಬಿಐಎಸ್ ಕಾಯಿದೆ ಪ್ರಕಾರ, ಲೋಹದ ವಿಷಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಶುದ್ಧತೆಗೆ ಅನುಗುಣವಾಗಿ ದೃಢೀಕರಿಸಲು ಆಭರಣಕಾರರು ಚಿನ್ನಾಭರಣಗಳ ಪ್ರತಿಯೊಂದು ತುಣುಕುಗಳನ್ನು ಹಾಲ್ಮಾರ್ಕಿಂಗ್ ಸಂಸ್ಥೆ ಮೌಲ್ಯಮಾಪನ ಮಾಡುತ್ತದೆ. ಆದಾಗ್ಯೂ, ಬಿಐಎಸ್ ಮಾರ್ಕ್ ಹೊಂದಿರುವ ಆಭರಣಗಳ 22 ಕ್ಯಾರೆಟ್ ಎಂದರ್ಥವಲ್ಲ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ತಯಾರಿಕಾ ಶುಲ್ಕ

ತಯಾರಿಕಾ ಶುಲ್ಕ

ಆಭರಣ ಖರೀದಿಗೆ ಹೋಲಿಸಿದರೆ ಚಿನ್ನದ ನಾಣ್ಯವನ್ನು ಖರೀದಿಸುವುದು ಸುಲಭವಾಗಿದೆ. ಕಿವಿಯೋಲೆಗಳು, ಉಂಗುರಗಳು, ಇನ್ನಿತರ ಆಭರಣಗಳಿಗೆ ಹೋಲಿಸಿದರೆ ನಾಣ್ಯಗಳು ಕಡಿಮೆ ತಯಾರಿಕೆ ಶುಲ್ಕಗಳನ್ನು ಹೊಂದಿರುತ್ತದೆ.

ಮಾರಾಟ ಸುಲಭ

ಮಾರಾಟ ಸುಲಭ

ನೀವು ಬ್ಯಾಂಕಿನಿಂದ ಚಿನ್ನದ ನಾಣ್ಯಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ದೇಶನದ ಪ್ರಕಾರ ಆ ನಾಣ್ಯಗಳನ್ನು ಬ್ಯಾಂಕು ಮತ್ತೆ ಖರೀದಿಸುವುದಿಲ್ಲ ಎಂಬುದು ಗಮನಿಸುವುದು ಮುಖ್ಯ.

ಕೊನೆ ಮಾತು

ಕೊನೆ ಮಾತು

ಇದು ಕೊನೆಯ ಮಾತು ಆದರೆ ಕಟ್ಟಕಡೆಯ ಮಾತಲ್ಲ. ನೀವು ಖರೀದಿಸುವ ಆಭರಣಕ್ಕಾಗಿ ಪ್ರತಿ ಶುಲ್ಕದ ವಿವರಗಳನ್ನು ಹೊಂದಿರುವ ಮಾನ್ಯವಾದ ನಗದು ಜ್ಞಾಪಕ ಅಥವಾ ಬಿಲ್ ಕೇಳಲು ಮರೆಯಬೇಡಿ. ನೆನಪಿನಲ್ಲಿಡಿ, ಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ, ಮಾನ್ಯ ಬಿಲ್ ಅಗತ್ಯವಾಗಿರುತ್ತದೆ. ಆ ಬಿಲ್ ಪವತಿ ಇಲ್ಲದೇ ಹೋದರೆ ಅಧಿಕಾರಿಗಳು ನಿಮ್ಮ ದೂರನ್ನು ಪರಿಗಣಿಸುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+