For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಜಾದೂ: 35 ರುಪಾಯಿಗೆ ವಿತರಿಸಿದ್ದ ಕೆನರಾ ಬ್ಯಾಂಕ್ ನ ಷೇರು 810 ತಲುಪಿತ್ತು

By ಕೆ.ಜಿ.ಕೃಪಾಲ್
|

ಷೇರು ಪೇಟೆಯಲ್ಲಿ ಹಣವನ್ನು ಸುಲಭವಾಗಿ ಗಳಿಸಬಹುದು. ಆದರೆ ಕೆಲವು ಅಲಿಖಿತ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಅಷ್ಟೇ. ಭಾವನಾತ್ಮಕ ಚಿಂತನೆಗಳಿಂದ ಹೊರಬಂದು, ವ್ಯಾವಹಾರಿಕ ಶೈಲಿಯಲ್ಲಿ ಚಟುವಟಿಕೆ ನಡೆಸಿದಲ್ಲಿ ಮಾತ್ರ ಷೇರುಪೇಟೆಯಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಾಣಲು ಸಾಧ್ಯ.

 

ಇದೊಂದು ರೀತಿಯ ಸೋಮಾರಿತನದ ಚಟುವಟಿಕೆಯಂತೆ ಕಾಣುತ್ತದೆ. ಆದರೆ ನಮ್ಮ ಸದೃಢ ನಿಲುವು, ನಿರ್ಧಾರಗಳೇ ಹೆಚ್ಚು ಪ್ರಭಾವಿ ಆಗಿರುತ್ತದೆ. ಮೂಲತಃ ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಉದ್ದೇಶ ನಮ್ಮಲ್ಲಿರುವ ಹಣವನ್ನು ಬೇರೊಂದು ವ್ಯವಹಾರದಲ್ಲಿ ತೊಡಗಿಸಿಕೊಂಡು, ಅದರಿಂದ ಸ್ವಾಭಾವಿಕವಾಗಿ ಬರುವ ಉಳಿತಾಯದ ಆದಾಯಕ್ಕಿಂತ ಹೆಚ್ಚಿನ ಸಂಪಾದನೆಯನ್ನು ಮಾಡುವುದಾಗಿದೆ.

ಲೋಕಸಭೆ ಚುನಾವಣೆ ಎರಡು ಗೆಲುವಿನ ವೇಳೆ ಷೇರು ಸೂಚ್ಯಂಕಗಳ ಹೋಲಿಕೆ ಲೋಕಸಭೆ ಚುನಾವಣೆ ಎರಡು ಗೆಲುವಿನ ವೇಳೆ ಷೇರು ಸೂಚ್ಯಂಕಗಳ ಹೋಲಿಕೆ

ಅಂದರೆ ನಮ್ಮ ಹಣವನ್ನು ನಮಗಾಗಿಯೇ ದುಡಿಯುವಂತೆ ಮಾಡುವುದಾಗಿದೆ. ಈ ಉದ್ದೇಶದಿಂದ ಉದ್ಯಮಿಗಳು ತಮ್ಮ ಉದ್ಯಮದ ಅನುಷ್ಠಾನ ಮತ್ತು ಕಾರ್ಯನಿರ್ವಹಣೆಗೆ ಬೇಕಾದ ಸಂಪನ್ಮೂಲವನ್ನು ಸಂಗ್ರಹಿಸಲು 'ಐಪಿ ಒ' ಗಳ ಮೂಲಕ ಅವಕಾಶ ಕಲ್ಪಿಸಿಕೊಟ್ಟು, ಹೌಸ್ ಹೋಲ್ಡ್ ಸೇವಿಂಗ್ಸ್ ಅನ್ನು ಇತ್ತ ಆಕರ್ಷಿಸಿ, ಹೆಚ್ಚಿನ ಅಭಿವೃದ್ಧಿಗೆ ಕಾರಣವಾಗುವಂತೆ ಮಾಡಲಾಯಿತು.

ಜಾಗತೀಕರಣದ ಪ್ರಭಾವ ಮತ್ತು ಬದಲಾವಣೆ

ಜಾಗತೀಕರಣದ ಪ್ರಭಾವ ಮತ್ತು ಬದಲಾವಣೆ

ಜಾಗತೀಕರಣಕ್ಕಿಂತ ಮುಂಚೆ ಭಾರತದ ಆರ್ಥಿಕತೆಯು ಸ್ವಾವಲಂಬಿಯಾಗಿ ಸೀಮಿತವಾಗಿದ್ದ ಕಾರಣ ಐಪಿಒ ನಿಯಮಾವಳಿಗಳು ಹೆಚ್ಚು ಬಿಗಿಯಾಗಿದ್ದವು. ಒಂದು ಕಂಪೆನಿ ಐಪಿಒ ಬರಬೇಕಾದರೆ, ಕೇಂದ್ರ ಸರಕಾರದ ಕಂಟ್ರೋಲರ್ ಆಫ್ ಕ್ಯಾಪಿಟಲ್ ಇಷ್ಯುಸ್ (ಸಿಸಿಐ) ಅನುಮತಿ ಪಡೆಯಲೇಬೇಕಿತ್ತು. ಸಿಸಿಐ ಕಂಪೆನಿಗಳಿಗೆ ಪ್ರೀಮಿಯಂ ಅನ್ನು ಬಹಳ ಕಠಿಣ ರೀತಿಯಲ್ಲಿ ನಿಗದಿಪಡಿಸುತ್ತಿತ್ತು. ಕಾಲ್ಗೇಟ್, ಬ್ರಿಟಾನಿಯ, ಎಚ್ ಎಂಎಂ , ಲಾರ್ಸನ್ ಅಂಡ್ ಟೊಬ್ರೋ, ರಿಲಯನ್ಸ್ ಇಂಡಸ್ಟ್ರೀಸ್ ನಂತಹ ಕಂಪೆನಿಗಳಿಗೆ ಹದಿನೈದು - ಇಪ್ಪತ್ತು ರೂಪಾಯಿಗಳ ಪ್ರೀಮಿಯಂ ದೊರೆತರೆ ಹೆಚ್ಚಾಗಿತ್ತು. ಅಂದರೆ ಆಗಿನ ನಿಯಮಾವಳಿಗಳು ಹೆಚ್ಚಾಗಿ ಗ್ರಾಹಕರ ಹಿತದಲ್ಲಿತ್ತು. ವಿಶೇಷವಾಗಿ ನಿರಕ್ಷರಸ್ಥ, ಸಾಮಾನ್ಯರ ಹಿತ ಕಾಯುತ್ತಿತ್ತು. ಜಾಗತೀಕರಣದ ನಂತರ ಅಂತರರಾಷ್ಟ್ರೀಯ ಮಟ್ಟದ ಚಿಂತನೆಗಳಲ್ಲಿರುವಂತೆ, ಹೂಡಿಕೆದಾರರು ಪ್ರಜ್ಞಾವಂತರು, ಅಪಾಯದ ಅರಿವಿನಿಂದ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವರು ಎಂಬ ಕಾರಣದಿಂದ ಸಿಸಿಐ ಇಲಾಖೆಯನ್ನು ರದ್ದುಗೊಳಿಸಲಾಯಿತು ಮತ್ತು ಫ್ರಿ ಪ್ರೈಸಿಂಗ್ ಜಾರಿಯಾಯಿತು.

ಅಂದಿನಿಂದ ಕಂಪೆನಿಗಳ ಪ್ರವರ್ತಕರು ವಿತರಿಸುವ ಐಪಿಒ ಗಳ ಬೆಲೆಯನ್ನು ಅತಿ ಹೆಚ್ಚಾಗಿ ನಿಗದಿಪಡಿಸಲು ಆರಂಭಿಸಿದರು. ಜಾಗತೀಕರಣಕ್ಕೆ ಮುಂಚೆ ಐಪಿಒಗಳಲ್ಲಿ ಷೇರುಗಳು ಸಿಕ್ಕರೆ ಒಂದು ರೀತಿಯ ಬಂಪರ್ ಬಹುಮಾನ ಬಂದಂತಹ ಭಾವನೆಯಿತ್ತು. ಆದರೆ ನಂತರದಲ್ಲಿ ಕಾರ್ಪೊರೇಟ್ ಗಳು ತಮಗೆ ಬೇಕಾದ ರೀತಿಯಲ್ಲಿ ಹೆಚ್ಚಿನ ಪ್ರೀಮಿಯಂ ನಲ್ಲಿ ಐಪಿಒ ನಲ್ಲಿ ಷೇರು ವಿತರಣೆ ಮಾಡಲಾರಂಭಿಸಿದ ಕಾರಣ ರೀಟೇಲ್ ಭಾಗವಹಿಸುವಿಕೆ ಕ್ಷೀಣವಾಗಿ ಸಾಂಸ್ಥಿಕ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಾಯಿತು. ಅಲ್ಲದೆ ಐಪಿಒಗಳಲ್ಲಿ ಷೇರು ಬಂದರೆ ಲಾಭ ಗಳಿಸುವುದೋ ಇಲ್ಲವೋ ಎಂಬ ಭಯ, ಭಾವನೆ ಹೆಚ್ಚಿನವರಲ್ಲಿ ಮೂಡತೊಡಗಿದೆ. ಈ ಫ್ರಿ ಪ್ರೈಸಿಂಗ್ ಜಾರಿಯಾದ ನಂತರ ಬಂದಂತಹ ಕೆನರಾ ಬ್ಯಾಂಕ್, ಮಾರುತಿ ಸುಜುಕಿ ಕಂಪೆನಿಗಳ ಐಪಿಒ ಆಕರ್ಷಕ ಬೆಲೆಯಲ್ಲಿ ವಿತರಿಸಿದ ಕಾರಣ ಉತ್ತಮ ಸಾರ್ವಜನಿಕ ಸ್ಪಂದನೆ ದೊರೆತು ನಿರುತ್ಸಾಹಮಯ ಆಗಿದ್ದಂತಹ ಷೇರುಪೇಟೆಯಲ್ಲಿ ಜೀವಕಳೆ ತುಂಬಿತು. ಅಲ್ಲದೆ ಆ ಸಂದರ್ಭದಲ್ಲಿ ಲೆಕ್ಕವಿಲ್ಲದಷ್ಟು ಹೊಸ ಡಿಮ್ಯಾಟ್ ಖಾತೆಗಳು ತೆರೆದು, ಹೊಸ ಹೂಡಿಕೆದಾರರಿಗೆ ಪ್ರವೇಶದ ಅವಕಾಶ ಕಲ್ಪಿಸಿತು.

ರಿಲಯನ್ಸ್ ಪವರ್ ನಿರಾಸೆ
 

ರಿಲಯನ್ಸ್ ಪವರ್ ನಿರಾಸೆ

ಆದರೆ 2008ರಲ್ಲಿ ಬಂದ ಎಡಿಎಜಿ ಸಮೂಹದ ರಿಲಯನ್ಸ್ ಪವರ್ ಕಂಪೆನಿಯು ಪ್ರತಿ ಷೇರಿಗೆ ರೂ.450ರಂತೆ ಐಪಿಒ ಮೂಲಕ ಪೇಟೆ ಪ್ರವೇಶಿಸಿದಾಗಲೂ ಭಾರಿ ಸಂಖ್ಯೆಯ ಹೂಡಿಕೆದಾರರು ಡಿಮ್ಯಾಟ್ ಖಾತೆ ತೆರೆದು, ಪೇಟೆಯೊಳಗೆ ಬಂದರು. ಆದರೆ ಈ ಷೇರು ಎಲ್ಲರಿಗೂ ನಿರಾಸೆ ಮೂಡಿಸಿತು. ಸದ್ಯ ಈ ಕಂಪೆನಿ ಷೇರು ರೂ.7.50 ಸಮೀಪವಿದೆ. ಐಪಿಒನಲ್ಲಿ ನೂರು, ಇನ್ನೂರು ಷೇರುಗಳಿಗೆ ಅರ್ಜಿ ಸಲ್ಲಿಸಿದರೂ ಲಭ್ಯವಾದ ಷೇರುಗಳು ಮಾತ್ರ ಅತಿ ಕಡಿಮೆಯಾಗಿದ್ದರಿಂದ ಐಪಿಒ ಹೆಚ್ಚು ಹಾನಿಕಾರವಾಗಲಿಲ್ಲ ಎಂಬುದು ಸಮಾಧಾನಕರ ವಿಚಾರ. ಜೆಟ್ ಏರ್ ವೇಸ್, ಎಸ್ ಡಿ ಅಲ್ಯೂಮಿನಿಯಂ, ಝಯ್ಲಾಗ್ ಸಿಸ್ಟಮ್ಸ್, ಎಂಪಿ ಡಿಸ್ಟಿಲ್ಲರಿಸ್, ಸುದಾರ್ ಗಾರ್ಮೆಂಟ್ಸ್, ಅಕ್ರೊಫೇಟಲ್ಸ್ ಟೆಕ್, ಎ ಟು ಝಡ್ ಮೆಂಟೆನನ್ಸ್, ಟ್ರೀ ಹೌಸ್ ಎಜುಕೇಷನ್, ವಿಕೆ ಎಸ್ ಪ್ರಾಜೆಕ್ಟ್ಸ್, ಶ್ರೀರಾಮ್ ಇಪಿಸಿ ಯಂತಹ ಅನೇಕ ಕಂಪೆನಿಗಳು ಹೂಡಿಕೆದಾರರಿಗೆ ಅಪಾರ ನಷ್ಟವನ್ನುಂಟು ಮಾಡಿವೆ. ಇವುಗಳಲ್ಲಿ ಹೆಚ್ಚಿನವು ಸಮಾಪನ ಹಂತದಲ್ಲಿವೆ.

ಷೇರು ಪೇಟೆಯಲ್ಲಿ ಹೀಗಂತ ಇರುವುದು ಶಾರ್ಟ್ ಸೆಲ್ಲಿಂಗ್ ಅಲ್ಲ, ಹೂಡಿಕೆ ಹಣದ ಶಾರ್ಟ್ ಕಿಲ್ಲಿಂಗ್ ಷೇರು ಪೇಟೆಯಲ್ಲಿ ಹೀಗಂತ ಇರುವುದು ಶಾರ್ಟ್ ಸೆಲ್ಲಿಂಗ್ ಅಲ್ಲ, ಹೂಡಿಕೆ ಹಣದ ಶಾರ್ಟ್ ಕಿಲ್ಲಿಂಗ್

ಬಂಡವಾಳ ಕರಗಿದರೂ ನಿರಂತರ ಕಾರ್ಪೊರೇಟ್ ಲಾಭ ಒದಗಿಸುವ ಅವಕಾಶ

ಬಂಡವಾಳ ಕರಗಿದರೂ ನಿರಂತರ ಕಾರ್ಪೊರೇಟ್ ಲಾಭ ಒದಗಿಸುವ ಅವಕಾಶ

ಇನ್ನು ಕೇಂದ್ರ ಸರಕಾರದ ಬಂಡವಾಳ ಹಿಂತೆಗೆತದ ಯೋಜನೆಯಡಿ ಆಫರ್ ಫಾರ್ ಸೆಲ್ ನಲ್ಲಿ ಹಿಂದಿನ ವರ್ಷ ಪ್ರತಿ ಷೇರಿಗೆ ರೂ.155ರ ಸಮೀಪ ಬೆಲೆಯಲ್ಲಿ ವಿತರಿಸಿದ ಎನ್ ಎಂಡಿಸಿ ಷೇರಿನ ಬೆಲೆ ರೂ.86ರ ಸಮೀಪಕ್ಕೆ ಡಿಸೆಂಬರ್ ನಲ್ಲಿ ಕುಸಿದು, ಮಾರ್ಚ್ ಅಂತ್ಯದ ಫಲಿತಾಂಶದ ನಂತರ ಸ್ವಲ್ಪ ಚೇತರಿಕೆ ಕಾಣುತ್ತಿದೆ. ಹಿಂದಿನ ವರ್ಷ ಮಾರ್ಚ್ ನಲ್ಲಿ ಪ್ರತಿ ಷೇರಿಗೆ ರೂ.1,215 ರಂತೆ ಐಪಿಒ ಮೂಲಕ ವಿತರಿಸಿದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಈ ವರ್ಷದ ಫೆಬ್ರವರಿಯಲ್ಲಿ ರೂ.603ರ ಸಮೀಪಕ್ಕೆ ಕುಸಿದು ಸದ್ಯ ರೂ.720ರ ಸಮೀಪದಲ್ಲಿದೆ. ಆದರೆ ಕಳೆದ ಮಾರ್ಚ್ ತಿಂಗಳಲ್ಲಿ ಪ್ರತಿ ಷೇರಿಗೆ ರೂ.19.80ರ ಲಾಭಾಂಶ ವಿತರಿಸಿದೆ. ಸಾರ್ವಜನಿಕ ವಲಯದ ಇತರೆ ಕಂಪೆನಿಗಳಾದ ಇಂಜಿನಿಯರ್ಸ್ ಇಂಡಿಯಾ, ನ್ಯೂ ಇಂಡಿಯಾ ಅಶುರನ್ಸ್, ಆಯಿಲ್ ಇಂಡಿಯಾ, ಐಒಸಿ ಮುಂತಾದ ಕಂಪೆನಿಗಳ ವಿತರಣಾ ಬೆಲೆ ಹೆಚ್ಚಿದ್ದರೂ ಆ ಕಂಪೆನಿಗಳು ವಿತರಿಸುವ ಲಾಭಾಂಶ, ಬೋನಸ್ ಮುಂತಾದವುಗಳ ಕಾರಣ ಹೊರೆಯಾಗಿರುವುದಿಲ್ಲ.

ಯಶಸ್ಸಿನ ಸುಲಭ ಪಟ್ಟು

ಯಶಸ್ಸಿನ ಸುಲಭ ಪಟ್ಟು

ಷೇರುಪೇಟೆಯಲ್ಲಿ ಸುಲಭವಾಗಿ ಹೇಗೆ ಹಣ ಗಳಿಸಬಹುದು ಎಂಬುದಕ್ಕೆ ಹಲವು 'ಪಟ್ಟು' ಗಳನ್ನು ಅಳವಡಿಸಿಕೊಳ್ಳಬೇಕು. ಅದರಲ್ಲಿ ವ್ಯಾಲ್ಯೂ ಪಿಕ್ ಅತಿ ಮುಖ್ಯ. ಅಂದರೆ ಕಂಪೆನಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ದೃಢಪಡಿಸಿಕೊಂಡು, ಆ ಷೇರಿನ ಬೆಲೆ ಕುಸಿತ ಕಂಡಿದೆ ಎಂದಾಗ, ಅದನ್ನು ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಹೂಡಿಕೆ ದೀರ್ಘಕಾಲೀನವೆಂದು ನಿರ್ಧರಿಸಿದರೂ ಅದು ಅಲ್ಪ ಸಮಯದಲ್ಲಿ ಅನಿರೀಕ್ಷಿತ ಲಾಭ ಗಳಿಸಿಕೊಟ್ಟಲ್ಲಿ ಅದರ ಮಾರಾಟದಿಂದ ಲಾಭವನ್ನು ಗಟ್ಟಿ ಮಾಡಿಕೊಳ್ಳುವುದು ಸೂಕ್ತ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹಿಂದೂಸ್ತಾನ್ ಏರೋನಾಟಿಕ್ಸ್ ಕಂಪೆನಿ. ಇದರ ಷೇರಿನ ಬೆಲೆ ಮಾರ್ಚ್ ಅಂತ್ಯದಲ್ಲಿ ರೂ.740ರ ಸಮೀಪವಿದ್ದು, ಮೇ ಮಧ್ಯದಲ್ಲಿ ರೂ.626 ರವರೆಗೂ ಕುಸಿದು, ಮತ್ತೊಮ್ಮೆ ರೂ.740 ತಲುಪಿ, ರೂ.720 ರ ಸಮೀಪವಿದೆ.

ಟಾಟಾ ಮೋಟಾರ್ಸ್: ಅದೇ ರೀತಿ ಮಾರ್ಚ್ ಅಂತ್ಯದಲ್ಲಿ ಟಾಟಾ ಮೋಟಾರ್ಸ್ ಷೇರಿನ ಬೆಲೆ ರೂ.170ರ ಸಮೀಪವಿತ್ತು. ನಂತರದಲ್ಲಿ ಏಪ್ರಿಲ್ ಮಧ್ಯಭಾಗದಲ್ಲಿ ರೂ.240 ತಲುಪಿ, ಈಗ ಮತ್ತೆ ರೂ.173 ರ ಸಮೀಪಕ್ಕೆ ಕುಸಿದಿದೆ. ಇದು ಉತ್ತಮ ವ್ಯಾಲ್ಯೂ ಪಿಕ್ ಗೆ ಅವಕಾಶ ಕಲ್ಪಿಸುತ್ತದೆಯೇ ನೋಡಬೇಕು.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್: ಈ ಷೇರು ಈ ತಿಂಗಳ ಮೊದಲ ವಾರದಲ್ಲಿ ರೂ.390 ರ ಸಮೀಪವಿದ್ದು, ನಂತರ ಮಧ್ಯಂತರದಲ್ಲಿ ರೂ.350ರ ಸಮೀಪಕ್ಕೆ ಕುಸಿದು, ಕಂಪೆನಿ ಫಲಿತಾಂಶ ಪ್ರಕಟವಾಗಿ, ಪ್ರತಿ ಷೇರಿಗೆ ರೂ.8ರಂತೆ ಡಿವಿಡೆಂಡ್ ಪ್ರಕಟಿಸಿದ ನಂತರ ಮತ್ತೆ ರೂ.400 ದಾಟಿದೆ.

ಫಂಡ್ ರೈಸಿಂಗ್ ಎಂಬ ಹೊಸ ಟ್ರೆಂಡ್; ಬ್ಯಾಂಕ್ ಗಳು ಸಹ ಇದರಿಂದ ಹೊರತಲ್ಲ ಫಂಡ್ ರೈಸಿಂಗ್ ಎಂಬ ಹೊಸ ಟ್ರೆಂಡ್; ಬ್ಯಾಂಕ್ ಗಳು ಸಹ ಇದರಿಂದ ಹೊರತಲ್ಲ

ಹಂತಹಂತವಾಗಿ ಖರೀದಿಸಿ

ಹಂತಹಂತವಾಗಿ ಖರೀದಿಸಿ

ಟಾಟಾ ಸ್ಟೀಲ್: ಟಾಟಾ ಸ್ಟೀಲ್ ಕಂಪೆನಿಯ ಷೇರಿನ ಬೆಲೆ ಹಿಂದಿನ ತಿಂಗಳು ರೂ.560ರ ಸಮೀಪವಿದ್ದು, ನಂತರ ಅಂತರರಾಷ್ಟ್ರೀಯ 'ಬೆಲೆ ಸಮರ' ಕಾರಣ ಷೇರಿನ ಬೆಲೆ ರೂ.455ರ ಸಮೀಪಕ್ಕೆ ಕುಸಿದು, ಮತ್ತೆ ರೂ.515ಕ್ಕೆ ಪುಟಿದೆದ್ದು ಉತ್ತಮ ಲಾಭದ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಈ ಕಂಪೆನಿಯ ಷೇರಿನಲ್ಲಿ ಚಟುವಟಿಕೆಯು ಜೀವಂತವಾಗಿರಿಸಲು, ಕಂಪೆನಿ ವಿತರಿಸಲಿರುವ ರೂ.13ರ ಲಾಭಾಂಶವು ಪ್ರೇರಕವಾಗಿದೆ.

ಇದೇ ರೀತಿ ಅಗ್ರಮಾನ್ಯ ಬ್ರ್ಯಾಂಡ್ ಉಳ್ಳ, ಆಕರ್ಷಕ ಡಿವಿಡೆಂಡ್, ಬೋನಸ್ ಷೇರು ಪ್ರಕಟಿಸಿರುವ ಕಂಪೆನಿಗಳ ಷೇರಿನ ಬೆಲೆಯು ಭಾರಿ ಕುಸಿತ ಕಂಡಾಗ ಅವು ಉತ್ತಮ ವ್ಯಾಲ್ಯೂ ಪಿಕ್ ಆಗಿರುತ್ತದೆ. ಪೇಟೆ ಕುಸಿತದಲ್ಲಿದೆ ಎಂಬ ತಾತ್ಸಾರ ಬೇಡ, ಬದಲಿಗೆ ಅದನ್ನು ಅವಕಾಶವೆಂದು ಚಟುವಟಿಕೆ ನಡೆಸಿರಿ. ಕುಸಿಯುತ್ತಿದ್ದಾಗ ಖರೀದಿಯು ಹಂತ ಹಂತವಾಗಿದ್ದಲ್ಲಿ ಮತ್ತಷ್ಟು ಸುರಕ್ಷಿತ ಎನಿಸುತ್ತದೆ.

ಡಿವಿಡೆಂಡ್ ಹೇಗೆ ವಿತರಿಸಲಾಗುತ್ತದೆ? ಲಾಭಾಂಶ ಪ್ರಕಟಿಸಿದ ಕಂಪನಿಗಳು ಯಾವುವು? ಡಿವಿಡೆಂಡ್ ಹೇಗೆ ವಿತರಿಸಲಾಗುತ್ತದೆ? ಲಾಭಾಂಶ ಪ್ರಕಟಿಸಿದ ಕಂಪನಿಗಳು ಯಾವುವು?

English summary

Canara bank issued IPO at 35 rupees and touched 810 rupees

How to make money in share market? Here is an explanation by financial expert, Oneindia columnist KG Krupal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X