For Quick Alerts
ALLOW NOTIFICATIONS  
For Daily Alerts

ನೀವು ಈ ತಪ್ಪುಗಳನ್ನು ಮಾಡುತ್ತಿದ್ದಿರಾ? ಚೆಕ್ ಮಾಡಿ..

|

ಹೊಸ ವರ್ಷದ ಆರಂಭದಲ್ಲಿ, ಮದುವೆಯಾದ ಹೊಸತರಲ್ಲಿ, ಹುಟ್ಟುಹಬ್ಬದ ಸಂದರ್ಭದಲ್ಲಿ, ಕೆಲಸಕ್ಕೆ ಸೇರಿದ ಆರಂಭದಲ್ಲಿ ಹೀಗೆ ಹಲವಾರು ಸಂದರ್ಭಗಳಲ್ಲಿ ನೂತನ ರೆಸಲ್ಯೂಷನ್, ನಿರ್ಧಾರಗಳನ್ನು ಕೈಗೊಳ್ಳುವುದು ಸಾಮಾನ್ಯ. ಕುಟುಂಬ, ಭವಿಷ್ಯತ್ತು ಬಗ್ಗೆ ಬಗ್ಗೆ ಕಾಳಜಿ ಉಳ್ಳವರು ಬಜೆಟ್ ಎಷ್ಟು ಉಳಿಸುವುದು? ಎಷ್ಟು ಖರ್ಚು ಮಾಡುವುದು? ಎಂಬುದರ ಲೆಕ್ಕಾಚಾರ ಹಾಕಿ ಪಟ್ಟಿ ತಯಾರಿಸುತ್ತಾರೆ.

ಅದರೆ ಕಾಲ ಸರಿದಂತೆ ಎಲ್ಲಾ ಹೊಸ ನಿರ್ಣಯಗಳು ಒಂದೊಂದಾಗಿ ಮಾಸ ತೊಡಗುತ್ತವೆ. ಹೀಗಾಗಿ ನಾವು ಇಷ್ಟು ಉಳಿಸೋಣ, ತಿಂಗಳಿಗೆ ಇಷ್ಟೇ ಖರ್ಚು ಮಾಡೋಣ ಎಂಬ ನಿರ್ಣಯಗಳು ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ಅರ್ಥವಿಲ್ಲದ ಕೆಲವು ನಿರ್ಣಯಗಳನ್ನು ಕೈ ಬಿಟ್ಟು ಸರಿಯಾದ ರೀತಿಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬಹುದಾದ ನಿರ್ಣಯಗಳನ್ನು ಕೈಗೊಂಡು, ಅದಕ್ಕೆ ಕಟಿಬದ್ದರಾಗೋದು ಉತ್ತಮ.

 

ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಣೆಗಾಗಿ ಕುಟುಂಬದ ಇತರೆ ಸದಸ್ಯರ ಮೇಲೆ ಹೆಚ್ಚಿನ ಒತ್ತಡ ಹೇರಬೇಡಿ. ಅದರೆ ಆದಾಯ ಹಾಗೂ ಬಜೆಟ್ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವುದು ಒಳ್ಳೆಯ ನಡವಳಿಕೆ. ಕ್ರೆಡಿಟ್ ಕಾರ್ಡ್ ಅಥವಾ ಚೀಟಿ ವ್ಯವಹಾರದ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡು ನಿಮ್ಮ ಬಜೆಟ್ ಅಥವಾ ನಿರ್ಣಯಗಳನ್ನು ಕೈಗೊಳ್ಳಬೇಡಿ. ಆರ್ಥಿಕ ನಿರ್ಣಯ ಕೈಗೊಳ್ಳುವುದರ ಬಗ್ಗೆ ಅನೇಕ ಸಾಧನಗಳು ಈಗ ಆನ್ಲೈನ್ ನಲ್ಲಿ ಅಥವಾ ಸ್ಮಾರ್ಟ್ ಫೋನ್ ಗಳಲ್ಲೇ ಲಭ್ಯವಿರುತ್ತದೆ.

ಓದುಗರ ಅನುಕೂಲಕ್ಕಾಗಿ ಇಲ್ಲಿ ಕೆಲವು ನಿರ್ಣಯಗಳನ್ನು ನೀಡಿದ್ದೇವೆ. ದಯವಿಟ್ಟು ಈ ರೀತಿ ನಿರ್ಣಯಗಳನ್ನು ಕೈಗೊಳ್ಳುವ ಮೊದಲು ಪ್ರಾಕ್ಟಿಕಲ್ ಆಗಿ ಚಿಂತಿಸಿ.

ನಾನು ಬಜೆಟ್ ಮೀರಲ್ಲ

ನೀವು ನಿರ್ಣಯಗಳನ್ನು ಮೊದಲೇ ನಿರ್ಧರಿಸಿದರೆ ಹಾಗೂ ಸರಿಯಾಗಿ ನಿರ್ಣಯಗಳನ್ನು ಪಾಲಿಸಿದರೆ ಬಜೆಟ್ ಮೀರುವ ಪ್ರಶ್ನೆಯೇ ಎದುರಾಗುವುದಿಲ್ಲ. ಹೀಗಾಗಿ ಬಜೆಟ್ ಅಥವಾ ಸ್ಮಾರ್ಟ್ಫೋನ್ ಅಪ್ ಬಳಸಿಯಾದರೂ ನಿಮ್ಮ ಬಜೆಟ್ ಬಗ್ಗೆ ನಿರ್ಣಯಗಳ ಪಟ್ಟಿ ಕಾಲಕಾಲಕ್ಕೆ ನೆನಪಿಟ್ಟುಕೊಳ್ಳಿ.

ದೂರದ ಗುರಿ ಮುಟ್ಟುವ ಮುನ್ನ ಪ್ರತಿ ದಿನದ ಹೆಜ್ಜೆ ಎಲ್ಲಿ ಇಡಬೇಕು, ಹೇಗೆ ಇಡಬೇಕು, ಎಷ್ಟು ದೂರ ಕ್ರಮಿಸಬೇಕು ಎಂಬುದರ ಪರಿಜ್ಞಾನವಿರಬೇಕು.

ಕಾಲಕಾಲಕ್ಕೆ ನಿರ್ಣಯಗಳು ಹಾಗೂ ಅನುಷ್ಠಾನದ ಬಗ್ಗೆ ನೋಟ್ ಮಾಡಿಕೊಳ್ಳಿ. ಅದಾಯ ಗಳಿಸಿದರೆ ಸಾಲದು ಆದನ್ನು ಜಾಣ್ಮೆಯಿಂದ ಖರ್ಚು ಮಾಡುವ ಬಜೆಟ್ ಕೂಡಾ ಮುಖ್ಯವಾಗುತ್ತದೆ.

ನಾನು ಅತ್ಯಂತ ಕಡಿಮೆ ಖರ್ಚು ಮಾಡುತ್ತೇನೆ

ಪ್ರತಿಯೊಬ್ಬರೂ ಈ ವರ್ಷ ನಾನು ಅತೀ ಕಡಿಮೆ ಖರ್ಚು ಮಾಡುತ್ತೇನೆ ಎನ್ನುತ್ತಾರೆ. ಆದರೆ ಈ ನಿರ್ಣಯ ತೀರಾ ಕ್ಲೀಷೆಯಾಗಿದೆ. ಹಣಕಾಸಿನ ಅಭಾವ ತೋರಿದಾಗ ಅಥವಾ ಐಷಾರಾಮಿ ವಸ್ತು ಖರೀದಿ ಸಂದರ್ಭ ಎದುರಾದಾಗ ಈ ರೀತಿಯ ಮಾತುಗಳನ್ನಾಡುವುದು ಸಾಮಾನ್ಯ.

ಹೀಗಾಗಿ ನಿಮ್ಮ ದರ ಪಟ್ಟಿಯಲ್ಲಿ ಯಾವುದು ಹೆಚ್ಚು ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ತಿಳಿದು ಅದನ್ನು ಮಾತ್ರ ಕೈ ಬಿಡಿ. ಹೊರಗಡೆ ಓಡಾಟ, ಸಿನಿಮಾ ವೀಕ್ಷಣೆ,ಪಾರ್ಟಿ ಇತ್ಯಾದಿಗಳನ್ನು ಕಡಿಮೆ ಮಾಡಿ. ಪ್ರತಿ ತಿಂಗಳು ಒಂದಿಷ್ಟು ಹಣ ಆಪತ್ ಕಾಲಕ್ಕೆ ಎಂದು ಮೀಸಲಿಡಿ. ಉಳಿಸುವುದು ಅಭ್ಯಾಸವಾದರೆ ಖರ್ಚು ಮಾಡುವುದು ಸ್ವಯಂ ಕಡಿಮೆಯಾಗುತ್ತದೆ.

ಈ ವರ್ಷ ಸಾಲ ತೀರಿಸಿ ಬಿಡುತ್ತೇನೆ
 

ಈ ವರ್ಷ ಸಾಲ ತೀರಿಸಿ ಬಿಡುತ್ತೇನೆ

ಈ ವರ್ಷ ಸಾಲವನ್ನೆಲ್ಲ ತೀರಿಸಿ ಬಿಡುತ್ತೇನೆ ಎಂಬ ಮಾತು ಕೇಳಲು ಆಕರ್ಷಣೀಯವಾಗಿ ಕಾಣುತ್ತದೆ. ಆದರೆ ಇದರಿಂದ ನಿಮ್ಮ ತಿಂಗಳ ಆದಾಯ ಹೆಚ್ಚಾಗಲ್ಲ ಅಥವಾ ಸಾಲದ ಮೇಲಿನ ಬಡ್ಡಿದರವಾಗಲಿ ಕಡಿಮೆಯಾಗಲ್ಲ.

ಪ್ರತಿ ತಿಂಗಳು ಒಂದಿಷ್ಟು ಉಳಿಸುವ ನಿರ್ಣಯ ಕೈಗೊಂಡ ಮೇಲೆ ವಾರ್ಷಿಕವಾಗಿ ರೂ. 12,000 ಅಥವಾ ತಿಂಗಳಿಗೆ 2,000 ರು ಉಳಿಸುವ ಟಾರ್ಗೆಟ್ ಇಟ್ಟುಕೊಳ್ಳಿ. ಅಥವಾ ಅದಕ್ಕಿಂತ ಸಣ್ಣ ಮಟ್ಟದ ಮೊತ್ತವನ್ನು ಸಣ್ಣ ಅವಧಿಗೆ (ವಾರ, ದಿನ) ಇಟ್ಟುಕೊಂಡರೂ ಅಡ್ಡಿಯಿಲ್ಲ. ಹೀಗೆ ಮಾಡಿದರೆ ಉಳಿಸಿದ ಹಣವನ್ನು ಸಾಲ ತೀರಿಸಲು ಸಮರ್ಥವಾಗಿ ಬಳಸಬಹುದು.

ನಾನು ಹೆಚ್ಚಿನ ಆದಾಯ ಗಳಿಸುತ್ತೇನೆ

ಹೆಚ್ಚು ಉಳಿತಾಯ ಮಾಡುವುದನ್ನು ಕಲಿತರೆ ಹೆಚ್ಚು ಆದಾಯ ಗಳಿಕೆ ಸಾಧ್ಯ. ಇಲ್ಲದಿದ್ದರೆ ಆರ್ಥಿಕ ಪರಿಸ್ಥಿತಿ ಹದಗೆಡುವುದು ನಿಶ್ಚಿತ. ಹೆಚ್ಚಿನ ಆದಾಯಕ್ಕಾಗಿ ಅರೆ ಕಾಲಿಕ ಉದ್ಯೋಗ, ನಿಮ್ಮ ಕೌಶಲ್ಯಕ್ಕೆ ತಕ್ಕ ಕೆಲಸವನ್ನು ಹುಡುಕಿಕೊಳ್ಳಬಹುದು. ಅದರೆ ನಿಮ್ಮ ಮೂಲ ಆದಾಯಕ್ಕೆ ಇದು ಹೊರೆಯಾಗಬಾರದು. ಇಲ್ಲದಿದ್ದರೆ ಉಳಿತಾಯದ ಮಂತ್ರವೇ ಸಾಕು.

ಐಷಾರಾಮಿ ವಸ್ತುಗಳನ್ನು ಖರೀದಿಸುವುದಿಲ್ಲ

ಜೀವನಕ್ಕೆ ಅಗತ್ಯವಾಗಿದ್ದರೆ ಐಷಾರಾಮಿ ವಸ್ತುಗಳನ್ನು ಖರೀದಿಸಿ ಆದರೆ ವಿನಾಕಾರಣ ಶೋಕಿಗಾಗಿ ಖರೀದಿ ಬೇಡ. ಯಾವುದೇ ಖರೀದಿ ಹಾಗೂ ಹೂಡಿಕೆಗೂ ಮುನ್ನ ಎರಡು ಬಾರಿ ಯೋಚಿಸಿ ನಿರ್ಣಯ ಕೈಗೊಳ್ಳುವುದು ಒಳ್ಳೆಯದು.

English summary

Worst Financial Resolutions You Should Never Keep

Every year we make resolutions to improve our financial health but somehow down the line we fail to adhere to it.
Story first published: Monday, June 17, 2019, 10:44 [IST]
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more