ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ನ್ಯಾಶನಲ್ ಇ-ಗವರ್ನೆನ್ಸ್ ಇಲಾಖೆಗಳು ಉಮಂಗ್ ಆಪ್ ಅನ್ನು ಜಾರಿಗೆ ತಂದಿದ್ದು, ಈ ಆಪ್ ಪ್ರಸ್ತುತ ನಾಲ್ಕು ಹೊಸ ಆಧಾರ್ ಸೇವೆಯನ್ನು ನೀಡಲಿದೆ. ಈ ಸೇವೆಯ ಬಗ್ಗೆ ಈ ಸುದ್ದಿಯಲ್ಲಿ ವಿವರವನ್ನು ನೀಡಲಾಗಿದೆ.
ಈ ಬಗ್ಗೆ ಉಮಂಗ್ ಆಪ್ ಇಂಡಿಯಾ ಟ್ವೀಟ್ ಮೂಲಕ ಮಾಹಿತಿ ನೀಡಿದೆ. "ಉಮಂಗ್ ಆಪ್‌ನಲ್ಲಿ ಆಧಾರ್ ಕಾರ್ಡ್ ಬಳಕೆದಾರರಿಗೆ ಹೊಸ ಸೇವೆಯನ್ನು ನೀಡಲು ಆರಂಭ ಮಾಡಲಾಗಿದೆ. ಉಮಂಗ್ ಆಪ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಈ ಸೇವೆಯ ಬಗ್ಗೆ ಅಧಿಕ ಮಾಹಿತಿಯನ್ನು ಪಡೆದುಕೊಳ್ಳಿ. 97183-97183 ಗೆ ಮಿಸ್ಡ್ ಕಾಲ್ ನೀಡುವ ಮೂಲಕವು ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ," ಎಂದು ತಿಳಿಸಿದ್ದಾರೆ.
ಪ್ರಸ್ತುತ ಉಮಂಗ್ ಆಪ್ ಮೂಲಕನಾವು ಇಪಿಎಫ್, ಪ್ಯಾನ್, ಆಧಾರ್, ಮೊಬೈಲ್ ಬಿಲ್ ಪಾವತಿ, ಗ್ಯಾಸ್ ಬುಕಿಂಗ್, ವಿದ್ಯುತ್ ಬಿಲ್ ಪಾವತಿಯಂತಹ ಸೇವೆಗಳನ್ನು ನಿರ್ವಹಿಸಬಹುದು. ಇದು ಕೇಂದ್ರ ಸರ್ಕಾರದ ಉಚಿತ ಮೊಬೈಲ್ ಆಪ್ ಆಗಿದೆ. ಈ ಆಪ್‌ನಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾಗಿರುವ ಆಧಾರ್ ಸೇವೆಯ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..
ಪ್ರಮುಖ ಸೇವೆಗಳು ಯಾವುದು?
ಆಧಾರ್ ದೃಡೀಕರಣ: ಆಧಾರ್ ಸ್ಟೇಟಸ್ ಅನ್ನು ತಿಳಿಯಲು, ಆಧಾರ್ ಅಪ್‌ಡೇಟ್ ಮನವಿಯ ಅಪ್‌ಡೇಟ್ ಬಗ್ಗೆ ಮಾಹಿತಿ ತಿಳಿಯಲು ಉಮಂಗ್ ಆಪ್‌ನಲ್ಲಿರುವ ಸೇವೆಯನ್ನು ನಾಗರಿಕರು ಬಳಕೆ ಮಾಡಲು ಸಾಧ್ಯವಾಗಲಿದೆ. ಆಧಾರ್ ಇಐಡಿ ಅಥವಾ ಆಧಾರ್ ಸಂಖ್ಯೆ ಪಡೆಯಲು: ನಾವು ನಮ್ಮ ಆಧಾರ್ ಸಂಖ್ಯೆಯನ್ನು ತಿಳಿಯಲು ಅಥವಾ ಇಐಡಿಯನ್ನು ತಿಳಿಯಲು ಕೂಡಾ ಉಮಂಗ್‌ನ ಆಧಾರ್ ಸೇವೆಯನ್ನು ಬಳಕೆ ಮಾಡಬಹುದು. ಈ ಸೇವೆಗಳನ್ನು ಪಡೆಯಬೇಕಾದರೆ ಆಧಾರ್ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಯಿಂದ ಉಮಂಗ್ ಆಪ್‌ಗೆ ಲಾಗಿನ್ ಆಗಬೇಕಾಗುತ್ತದೆ.
ಏನೆಲ್ಲ ಸೇವೆ ಪಡೆಯಬಹುದು ನೋಡಿ
1) ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ
2) ವರ್ಚುವಲ್ ಐಡಿಯನ್ನು ಜನರೇಟ್ ಮಾಡಿ
3) ದೃಢೀಕರಣ ಮಾಹಿತಿ ಪಡೆಯಲು ಸಾಧ್ಯವಾಗಲಿದೆ
4) ಆಫ್‌ಲೈನ್ ಮೂಲಕ ಇ ಕೆವೈಸಿ ಮಾಡಲು ಕೂಡಾ ಸಾಧ್ಯವಾಗಲಿದೆ
5) ಪೇಮೆಂಟ್ ಹಿಸ್ಟರಿ ಲಾಕ್ ಮಾಡಲು ಸಾಧ್ಯವಾಗಲಿದೆ ಹಾಗೂ ಬಯೋಮೆಟ್ರಿಲ್ ಅನ್‌ಲಾಕ್ ಮಾಡಲು ಸಾಧ್ಯವಾಗಲಿದೆ
ಉಮಂಗ್ ಆಪ್‌ನಲ್ಲಿ ಆಧಾರ್ ಸೇವೆ ಪಡೆಯುವುದು ಹೇಗೆ?
ಹಂತ 1: ಪ್ಲೇ ಸ್ಟೋರ್‌ನಿಂದ ಉಮಂಗ್ ಆಪ್ ಡೌನ್‌ಲೋಡ್ ಮಾಡಿ, ಬಳಿಕ ಲಾಗಿನ್ ಆಗಿ
ಹಂತ 2: 'MY Aadhaar' ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಆಧಾರ್ ಅನ್ನು ಲಿಂಕ್ ಮಾಡುವಂತೆ ತಿಳಿಸಲಾಗುತ್ತದೆ.
ಹಂತ 4: ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ಹಾಕಿ
ಹಂತ 5: ಒಟಿಪಿ ಮೇಲೆ ಕ್ಲಿಕ್ ಮಾಡಿ, ಮೊಬೈಲ್‌ಗೆ ಬಂದ ಒಟಿಪಿಯನ್ನು ನಮೂದಿಸಿ
ಹಂತ 6: ಒಟಿಪಿಯನ್ನು ಹಾಕಿದ ಬಳಿಕ Save ಮೇಲೆ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಅಂತ್ಯವಾಗಲಿದೆ
ನಿಮ್ಮ ಆಧಾರ್ ಉಮಂಗ್ ಆಪ್‌ನಲ್ಲಿ ಲಿಂಕ್ ಆದ ಬಳಿಕ ನೀವು ಸುಲಭವಾಗಿ ಆಧಾರ್ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ಸರಳವಾಗಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿದೆ. ಹಾಗೆಯೇ ವರ್ಚುವಲ್ ಐಡಿಯನ್ನು ಜನರೇಟ್ ಮಾಡಲು ಸಾಧ್ಯವಾಗಲಿದೆ. ಇನ್ನು ಮೇಲೆ ತಿಳಿಸಲಾದ ಸೇವೆಗಳನ್ನು ಕೂಡಾ ಪಡೆಯುವ ಅವಕಾಶ ಉಮಂಗ್ ಆಪ್‌ನಲ್ಲಿಯೇ ನಿಮಗೆ ಲಭ್ಯವಾಗಲಿದೆ. ಇನ್ನು ಈ ಆಪ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ಯೋಜನೆಗಳ ವಿವರಗಳನ್ನು ಪಡೆಯಬಹುದು. 'ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ ಏಜ್ ಗವರ್ನೆನ್ಸ್-ಉಮಂಗ್' ಎಂಬ ಹೆಸರಿನ ಈ ಮೊಬೈಲ್ ಆ್ಯಪ್ ಮೂಲಕ ಮೊಬೈಲ್ ಫೋನಿನಲ್ಲಿಯೇ ಭವಿಷ್ಯನಿಧಿ (ಪಿಎಫ್) ವಿವರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.


Click it and Unblock the Notifications