ಬ್ಯಾರೆನ್ಸ್ ನಾಲ್ಕನೇ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಯುಎಸ್‌ನ ಹಣಕಾಸು ಕ್ಷೇತ್ರದಲ್ಲಿನ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಭಾರತೀಯರು ಕೂಡಾ ಕಾಣಿಸಿಕೊಂಡಿದ್ದಾರೆ. ಹಣಕಾಸು ಸೇವೆಗಳ ಉದ್ಯಮದಲ್ಲಿ ಪ್ರಾಮುಖ್ಯತೆಯ ಸ್ಥಾನಗಳನ್ನು ಸಾಧಿಸಿದವರು ಮತ್ತು ಹಣಕಾಸು ಕ್ಷೇತ್ರದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಅತೀ ಹೆಚ್ಚು ಕೊಡುಗೆಯನ್ನು ನೀಡಿದ ಯುಎಸ್‌ನ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿ ಇದಾಗಿದೆ. ಈ ಪಟ್ಟಿಯಲ್ಲಿ ಐವರು ಭಾರತೀಯ- ಅಮೇರಿಕನ್ ಮಹಿಳೆಯರ ಹೆಸರು ಕೂಡಾ ಇದೆ.
ಪಟ್ಟಿಯಲ್ಲಿ ಜೆಪಿ ಮಾರ್ಗನ್‌ನ ಅನು ಐಯ್ಯಾಂಗರ್, ಏರಿಯಲ್ ಇನ್‌ವೆಸ್ಟ್‌ಮೆಂಟ್ ರೂಪಾಲಿ ಜೆ. ಬನ್ಸಾಲಿ, ಗೋಲ್ಡ್‌ಮ್ಯಾನ್ ಸಾಚ್ಸ್ ಗ್ರೂಪ್‌ನ ಮೀನಾ ಲಕ್ಡಾವಾಲಾ ಫ್ಲಿನ್, ಫ್ರಾನ್‌ಕ್ಲಿನ್ ಟೆಪ್ಲೆಟಾನ್‌ನ ಸೋನಾಲಿ ದೇಸಾಯಿ, ಬಿಒಎಫ್‌ಎ ಸೆಕ್ಯೂರಿಟೀಸ್‌ನ ಸವಿತಾ ಸುಬ್ರಮಣಿಯನ್ ಕಾಣಿಸಿಕೊಂಡಿದ್ದಾರೆ. ಸಿಟಿ ಪ್ರೈವೇಟ್ ಬ್ಯಾಂಕ್‌ನ ಇಡಾ ಲಿಯೂ, ಎರಡು ದಶಕಗಳಿಂದ ವೆಂಚರ್ ಕ್ಯಾಪಿಟಲ್‌ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಐಲೀನ್ ಲೀ, ಫ್ರೀ ಸೈಲ್ ಕ್ಯಾಪಿಟಲ್‌ನ ಜೆನರಲ್ ಪಾರ್ಟ್‌ನರ್ ಜೆನ್ನಿ ಲೆಫ್‌ಕೋರ್ಟ್ ಮೊದಲಾದವು ಕಾಣಿಸಿಕೊಂಡಿದ್ದಾರೆ. ಪಟ್ಟಿಯಲ್ಲಿರುವ ಭಾರತೀಯರ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

ಜೆಪಿ ಮಾರ್ಗನ್‌ನ ಅನು ಐಯ್ಯಾಂಗರ್: ಜೆಪಿ ಮಾರ್ಗನ್ ಸಂಸ್ಥೆಯಲ್ಲಿ ಮೆರ್ಜರ್ ಮತ್ತು ಅಕ್ವಿಸೀಷನ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. 2020 ರಿಂದ ವಿಭಾಗದ ಸಹ-ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ ಜನವರಿಯಲ್ಲಿ ಹೊಸ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಸವಾಲಿನ ಮಾರುಕಟ್ಟೆಗಳಲ್ಲಿ ಕ್ಲೈಂಟ್‌ಗಳಿಗೆ ಮಾರ್ಗದರ್ಶನವನ್ನು ಜೆಪಿ ಮಾರ್ಗನ್ ನೀಡುತ್ತಾ ಬಂದಿದ್ದಾರೆ. ಬ್ಯಾರನ್ ಪಟ್ಟಿಯ ಪ್ರಕಾರ, ಜೆಪಿ ಮಾರ್ಗನ್ ತನಗೆ ತನ್ನ ಕಾರ್ಯದ ಮೇಲೆ ಇರುವ ಪ್ರೀತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಕಾನೂನು ಒಪ್ಪಂದಗಳು ಮತ್ತು ಕ್ಲೈಂಟ್ ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ಬದ್ಧರಾಗಿದ್ದಾರೆ.
ಏರ್‌ಟೆಲ್ ಇನ್‌ವೆಸ್ಟ್‌ಮೆಂಟ್ಸ್‌ನ ರೂಪಾಲಿ ಜೆ. ಬನ್ಸಾಲಿ: ಏರಿಯಲ್ ಇನ್‌ವೆಸ್ಟ್‌ಮೆಂಟ್‌ನ ಜಾಗತಿಕ ಈಕ್ವಿಟಿ ಕಾರ್ಯತಂತ್ರದಲ್ಲಿ ಮುಖ್ಯ ಹೂಡಿಕೆ ಅಧಿಕಾರಿ ಮತ್ತು ಖಾತೆ ನಿರ್ವಾಹಕರಾಗಿ ರೂಪಾಲಿ ಜೆ. ಬನ್ಸಾಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈಗ ನಾವು ಮಾಡಿರುವ ಕಾರ್ಯಗಳನ್ನು ಮುಂದಿನ ದಶಕಗಳಲ್ಲಿ ಮಾಡಲು ಅಸಂಭವವಾಗಿದೆ. ಆದ್ದರಿಂದ ಹೂಡಿಕೆದಾರರು ತಮ್ಮ ಬಂಡವಾಳವನ್ನು ಮತ್ತೆ ಹೂಡಿಕೆ ಮಾಡಲು ಇದು ಉತ್ತಮ ಸಮಯ ಎಂದು ರೂಪಾಲಿ ಜೆ. ಬನ್ಸಾಲಿ ನಂಬಿದ್ದಾರೆ. ಹಾಗೆಯೇ ನಾವು ಹುಟ್ಟಿನಿಂದಲೇ ಹಣದ ನಿರ್ವಹಣೆ ಮಾಡಲು ಕಲಿಯಬೇಕು ಮತ್ತು ಮಹಿಳೆಯರನ್ನು ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರೋತ್ಸಾಹಿಸಬೇಕು ಎಂದು ಹೇಳುತ್ತಾರೆ.
ಫ್ರಾನ್‌ಕ್ಲಿನ್ ಟೆಪ್ಲೆಟಾನ್‌ನ ಸೋನಾಲಿ ದೇಸಾಯಿ: 58 ವರ್ಷ ಪ್ರಾಯದ ಸೋನಾಲಿ ದೇಸಾಯಿ ಫ್ರಾನ್‌ಕ್ಲಿನ್ ಟೆಪ್ಲೆಟಾನ್‌ನ ಮೊದಲ ಮಹಿಳಾ ಮುಖ್ಯ ಹೂಡಿಕೆ ಅಧಿಕಾರಿ (chief investment officer) ಆಗಿದ್ದಾರೆ. ಅವರು 2018ರಲ್ಲಿ ಈ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಸೋನಾಲಿ ದೇಸಾಯಿ ಸುಮಾರು 137 ಬಿಲಿಯನ್ ಡಾಲರ್ ಆಸ್ತಿಯನ್ನು ನಿರ್ವಹಣೆ ಮಾಡುತ್ತಿದ್ದಾರೆ. 2009ರಲ್ಲಿ ಸೋನಾಲಿ ದೇಸಾಯಿ ಫ್ರಾನ್‌ಕ್ಲಿನ್ ಟೆಪ್ಲೆಟಾನ್ ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. ಅದಕ್ಕೂ ಮುನ್ನ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ಡ್ರೆಸ್ಡ್‌ನೆರ್ ಕ್ಲೈನ್‌ವರ್ಟ್ ವಾಸ್ಸೆರ್ಸ್ಟೈನ್, ಥೇಮ್ಸ್ ರಿವರ್ ಕ್ಯಾಪಿಟಲ್‌ನಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ.
ಗೋಲ್ಡ್‌ಮ್ಯಾನ್ ಸಾಚ್ಸ್ ಗ್ರೂಪ್‌ನ ಮೀನಾ ಲಕ್ಡಾವಾಲಾ ಫ್ಲಿನ್: ಗೋಲ್ಡ್‌ಮ್ಯಾನ್ ಸಾಚ್ಸ್ ಗ್ರೂಪ್‌ನ ಜಾಗತಿಕ ಖಾಸಗಿ ಸಂಪತ್ತು ನಿರ್ವಹಣೆ ವಿಭಾಗ ಸಹ ಮುಖ್ಯಸ್ಥೆ ಮೀನಾ ಲಕ್ಡಾವಾಲಾ ಫ್ಲಿನ್ ಆಗಿದ್ದಾರೆ. ಬೇರೆ ಬೇರೆ ಹುದ್ದೆಗಳನ್ನು ಕೂಡಾ ನಿರ್ವಹಣೆ ಮಾಡುತ್ತಿದ್ದಾರೆ. ಆ ಪೈಕಿ ಗ್ಲೋಬಲ್ ಇನ್ಲೂಷನ್ ಆಂಡ್ ಡೈವರ್ಸಿಟಿ ಕಮೀಟಿಯ ಉಪಾಧ್ಯಕ್ಷ ಸ್ಥಾನವೂ ಕೂಡಾ ಹೌದು. ಕ್ರೀಡೆ ವೇಳೆ ಗಾಯವಾದ ಬಳಿಕ ಮೀನಾ ಲಕ್ಡಾವಾಲಾ ಫ್ಲಿನ್ ಹಣಕಾಸು ಕ್ಷೇತ್ರದಲ್ಲಿ ತನ್ನ ವೃತ್ತಿಜೀವನ ಪ್ರಾರಂಭಿಸಿದ್ದಾರೆ. ಫ್ರೈಡ್‌ಮೆನ್, ಬಿಲ್ಲಿಂಗ್ಸ್, ರಾಮ್ಸೆ ಗ್ರೂಪ್ ಮೊದಲಾವುಗಳಲ್ಲಿ ಇಂಟರ್ನ್‌ಶಿಪ್ ನಿರ್ವಹಿಸಿದ್ದಾರೆ.
ಬಿಒಎಫ್‌ಎ ಸೆಕ್ಯೂರಿಟೀಸ್‌ನ ಸವಿತಾ ಸುಬ್ರಮಣಿಯನ್: ಬ್ಯಾಂಕ್ ಆಫ್ ಅಮೇರಿಕಾ ಸೆಕ್ಯುರಿಟೀಸ್‌ನಲ್ಲಿ ಯುಎಸ್ ಇಕ್ವಿಟಿ ಮತ್ತು ಪರಿಮಾಣಾತ್ಮಕ ಕಾರ್ಯತಂತ್ರದ ಮುಖ್ಯಸ್ಥರಾಗಿ ಸವಿತಾ ಸುಬ್ರಮಣಿಯನ್ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈಕ್ವಿಟಿಗಳಲ್ಲಿ ಯುಎಸ್ ವಲಯದ ಹಂಚಿಕೆಗಳನ್ನು ಶಿಫಾರಸು ಮಾಡುವುದು ಮತ್ತು ಎಸ್&ಪಿ 500 ಮತ್ತು ಇತರ ಪ್ರಮುಖ ಯುಎಸ್ ಸೂಚ್ಯಂಕಗಳ ಮುನ್ಸೂಚನೆಗಳನ್ನು ನಿರ್ಧಾರ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ.


Click it and Unblock the Notifications