ಗಣೇಶ ಚತುರ್ಥಿ ಇನ್ನು ಕೆಲವೇ ದಿನಗಳಲ್ಲಿ ಆಚರಣೆ ಮಾಡಲಾಗುತ್ತದೆ. ಮಹಾರಾಷ್ಟ್ರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಹತ್ತು ದಿನಗಳ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ. ಗಣಪತಿ ದೇವರನ್ನು ಬುದ್ಧಿವಂತಿಕೆಯ ದೇವರೆಂದೇ ಕರೆಯಲಾಗುತ್ತದೆ. ಹಾಗಿರುವಾಗ ನೀವು ಹೂಡಿಕೆ, ಆರ್ಥಿಕ ವಿಚಾರಗಳ ಬುದ್ಧಿವಂತಿಕೆಯನ್ನು ತೋರಿಸದಿದ್ದರೆ ಹೇಗೆ?
1893 ರಲ್ಲಿ 'ಸಾರ್ವಜನಿಕ' (ಸಾರ್ವಜನಿಕ) ಸಭೆ ನಿಟ್ಟಿನಲ್ಲಿ ಆರಂಭ ಮಾಡಲಾದ ಗಣೇಶ ಚತುರ್ಥಿಯು ಇಂದಿಗೂ ಕೂಡಾ ಅತೀ ದೊಡ್ಡ ಹಬ್ಬವಾಗಿದೆ. ಎಲ್ಲ ಧರ್ಮದವರು ಕೂಡಾ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಹತ್ತು ದಿನಗಳ ಹಬ್ಬವಾದ ಗಣೇಶ ಚತುರ್ಥಿಯಿಂದ ನಾವು ಕಲಿಯಬೇಕಾದ 5 ಆರ್ಥಿಕ ಪಾಠಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಪಾಠ ಒಂದು: ಆರ್ಥಿಕ ಸವಾಲುಗಳನ್ನು ವಿಶ್ಲೇಷಿಸಿ, ಪರಿಹಾರ ಲಭಿಸುತ್ತೆ
ಶಿವ ಮತ್ತು ಪಾರ್ವತಿ ತನ್ನ ಮಕ್ಕಳಾದ ಗಣೇಶ, ಕಾರ್ತಿಕೇಯರ ಬಳಿ ಯಾರು ಪ್ರಪಂಚವನ್ನು ಮೂರು ಬಾರಿ ಸುತ್ತಿ ಮೊದಲು ಬರುತ್ತಾರೆಯೋ ಅವರಿಗೆ ಬುದ್ಧಿವಂತಿಕೆಯ ಹಣ್ಣು ನೀಡಲಾಗುತ್ತದೆ ಎಂದು ಹೇಳಿದರು. ಆ ಸಂದರ್ಭ ಕಾರ್ತಿಕೇಯನು ತನ್ನ ನವಿಲಿನ ಮೇಲೆ ಹತ್ತಿ ಹಾರಿದರೆ, ಗಣೇಶ ತನ್ನ ಕೈಗಳನ್ನು ಮಡಚಿ ತನ್ನ ಹೆತ್ತವರ ಸುತ್ತಲೂ ಮೂರು ಬಾರಿ ಸಂಪೂರ್ಣ ಭಕ್ತಿಯಿಂದ ಸುತ್ತಿ "ನೀವೇ ನನ್ನ ಪ್ರಪಂಚ" ಎಂದರು. ಜ್ಞಾನದ ಫಲವನ್ನು ಗೆದ್ದರು. ಅಂದಿನಿಂದ ಅವರನ್ನು 'ಬುದ್ಧಿವಂತಿಕೆಯ ದೇವರು' ಎಂದು ಕರೆಯಲಾಗುತ್ತದೆ.
ಈ ಕಥೆಯ ನೈತಿಕತೆಯನ್ನು ನಿಮ್ಮ ಆರ್ಥಿಕ ಜೀವನಕ್ಕೆ ಅನ್ವಯ ಮಾಡಿಕೊಳ್ಳಿ. ನೀವು ಎದುರಿಸುತ್ತಿರುವ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಶಾಂತರಾಗಿ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಿ. ಶಾಂತರಾಗಿ ಬುದ್ಧಿವಂತಿಕೆಯಿಂದ ನೀವು ನಿರ್ಧಾರ ಕೈಗೊಂಡರೆ ಸಮಸ್ಯೆ ಪರಿಹಾರಕ್ಕೆ ಮಾರ್ಗ ಲಭ್ಯವಾಗುತ್ತದೆ. ಅಪಾಯದ ಹೂಡಿಕೆ ಮಾಡುವಾಗ ಹೂಡಿಕೆ ಮೊತ್ತ ಗಣೇಶನ ಇಲಿಯಷ್ಟೇ ಚಿಕ್ಕದಾಗಿರಲಿ.
ಪಾಠ ಎರಡು: ನಿಮ್ಮ ಹೂಡಿಕೆಯ ಗಾತ್ರ ಏನೇ ಇರಲಿ, ವಿವೇಕ ಇರಲಿ
ಶಿವನ ಕಟ್ಟಾ ಭಕ್ತನಾದ ಗಜಮುಖಸುರ ಎಂಬ ರಾಕ್ಷಸ ಯಾವುದೇ ವ್ಯಕ್ತಿ ಆತನನ್ನು ನಾಶ ಮಾಡಲು ಆಗದು ಎಂಬ ವರ ಪಡೆದನು. ಆದರೆ ಅವನನ್ನು ನಿಯಂತ್ರಣಕ್ಕೆ ತರಲು ಗಣೇಶನು ಬುದ್ಧಿವಂತಿಕೆಯ ಯುದ್ಧದಲ್ಲಿ ರಾಕ್ಷಸನನ್ನು ಇಲಿಯಾಗಿ ಪರಿವರ್ತಿಸಿದನು. ಆ ಇಲಿಯ ಮೇಲೆ ಸವಾರಿ ಮಾಡುತ್ತಾನೆ. ಇದರ ಅರ್ಥ, ನಿಮ್ಮ ಹೂಡಿಕೆಯ ಮೊತ್ತ ಎಷ್ಟು ಚಿಕ್ಕದಾಗಿದೆ ಎಂಬುದು ಮುಖ್ಯವಲ್ಲ, ವಿವೇಕಯುತವಾಗಬೇಕು ಎಂಬುವುದಾಗಿದೆ.
ನೀವು ಒಮ್ಮೆ ಹೂಡಿಕೆ ಮಾಡಿದರೆ ನಿಮಗೆ ಗಣೇಶನ ಹೊಟ್ಟೆಯಂತೆ ಅತೀ ದೊಡ್ಡದಾದ ಹೂಡಿಕೆ ಆಫರ್‌ಗಳು ಇಮೇಲ್‌ಗಳು ಮತ್ತು ಕಾಲ್, ಸಂದೇಶದ ಮೂಲಕ ಬರಬಹುದು. ಆದರೆ ನೀವು ಹೂಡಿಕೆ ಮಾಡುವಾಗ ಎಂದಿಗೂ ಕೂಡಾ ಜಾಗರೂಕರಾಗಿ, ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಮುಖ್ಯ.
ಪಾಠ ಮೂರು: ವಿವಿಧ ಹೂಡಿಕೆ ಪ್ರಯೋಜನಕಾರಿ
ಗಣೇಶ ಅನೇಕ ತೋಳುಗಳನ್ನು ಹೊಂದಿರುವಂತೆ ಚಿತ್ರದಲ್ಲಿ ತೋರಿಸಲಾಗಿದೆ. ಇದರಲ್ಲಿ ಒಂದೊಂದು ಕೈಯಲ್ಲಿ ಒಂದೊಂದು ವಸ್ತು ಇರುತ್ತದೆ. ಇದು ಆರ್ಥಿಕ ಜೀವನದಲ್ಲೂ ಅನ್ವಯವಾಗುತ್ತದೆ. ಇದರಂತೆಯೇ ನೀವು ವಿವಿಧ ಕಡೆ ಹೂಡಿಕೆ ಮಾಡುವುದು ಉತ್ತಮ. ಒಂದೇ ಕಡೆ ಹೂಡಿಕೆ ಮಾಡಿದರೆ ಅಲ್ಲಿ ಉಂಟಾದ ನಷ್ಟ ನಿಮ್ಮ ಆರ್ಥಿಕ ಜೀವನಕ್ಕೆ ಭಾರೀ ಪ್ರಭಾವ ಬೀರಬಹುದು. ನೀವು ಬೇರೆ ಬೇರೆ ಕಡೆ ಹೂಡಿಕೆ ಮಾಡಿದರೆ, ಒಂದಲ್ಲ ಒಂದು ಕಡೆಯಿಂದ ಲಾಭ ದೊರೆಯುತ್ತದೆ.
ಪಾಠ ನಾಲ್ಕು: ಎಲ್ಲ ಮಾಹಿತಿ ಕೇಳಿ, ಸರಿಯಾಗಿ ಪರಿಶೀಲಿಸಿ
ಗಣೇಶನಿಗೆ ದೊಡ್ಡ ಕಿವಿಗಳನ್ನು ಹೊಂದಿದ್ದಾನೆ ಎಂದು ಚಿತ್ರದಲ್ಲಿ ತೋರಿಸಲಾಗುತ್ತದೆ. ಗಣೇಶ ತನ್ನ ದೊಡ್ಡ ಕಿವಿಯಲ್ಲಿ ಎಲ್ಲವನ್ನೂ ಸರಿಯಾಗಿ ಆಲಿಸುವಂತೆ ನೀವು ಹೂಡಿಕೆ ಮಾಡುವಾಗ ಎಲ್ಲ ನಿಯಮಗಳನ್ನು ಸರಿಯಾಗಿ ಕೇಳಿ ತಿಳಿದುಕೊಳ್ಳಿ. ಹಾಗೆಯೇ ನೀವು ಎಲ್ಲ ನಿಯಮಗಳ ಬಗ್ಗೆ ವಿವರವನ್ನು ಓದಿಕೊಳ್ಳಿ, ಅರ್ಥಮಾಡಿಕೊಳ್ಳಿ.
ಪಾಠ ಐದು: ಉತ್ತಮ ಆರಂಭ ಉತ್ತಮ ಯೋಜನೆಯೊಂದಿಗೆ ಪ್ರಾರಂಭ
ಹಬ್ಬಗಳ ವಿಷಯಕ್ಕೆ ಬಂದರೆ, ಮತ್ತು ನೀವು ಯಾವುದೇ ನಂಬಿಕೆಯನ್ನು ಅನುಸರಿಸಿದರೂ, ಎಂದಿಗೂ ಕೂಡಾ ಉತ್ತಮ ಆರಂಭವನ್ನು ಉತ್ತಮ ಯೋಜನೆಯೊಂದಿಗೆ ಮಾಡಲು ಸಾಧ್ಯವಾಗುತ್ತದೆ. ಗಣೇಶನನ್ನು ಪ್ರಥಮವಾಗಿ ಪೂಜಿಸಿ ಯಾವುದೆ ಕಾರ್ಯವನ್ನು ಮಾಡಲಾಗುತ್ತದೆ. ನೀವು ಯಾವುದೇ ವ್ಯವಹಾರವನ್ನು ಪ್ರಾರಂಭಿಸಲಿದ್ದರೂ, ಗಣೇಶನ ಆಶೀರ್ವಾದವನ್ನು ಪಡೆಯುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಯಾವುದೇ ಹೂಡಿಕೆ ಮಾಡುವುದಾದರೂ ಮೊದಲೇ ಅದಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳಿ. ಉತ್ತಮ ಸಿದ್ಧತೆ ಮಾಡಿದರೆ ಉತ್ತಮ ಆರಂಭ ಮಾಡಲು ಸಾಧ್ಯವಾಗುತ್ತದೆ.


Click it and Unblock the Notifications