For Quick Alerts
ALLOW NOTIFICATIONS  
For Daily Alerts

ಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ ಈ 5 ಅಂಶ ಗಮನದಲ್ಲಿರಲಿ

By ಅನಿಲ್ ಆಚಾರ್
|

ಚಿನ್ನದ ಮೇಲೆ ಭಾರತೀಯರು ಮೋಹಿಗಳು. ಹಾಗಂತ ಈ ಟ್ರೆಂಡ್ ನಿನ್ನೆ- ಮೊನ್ನೆಯದಲ್ಲ. ಬಹಳ ಸಮಯದಿಂದಲೂ ಇದೆ. ಚಿನ್ನದ ಮೇಲೆ ಪ್ರೀತಿಯ ಕಾರಣಕ್ಕೆ ಜಾಗತಿಕವಾಗಿ ಅತಿ ಹೆಚ್ಚು ಚಿನ್ನ ಬಳಕೆ ಮಾಡುವ ದೇಶ ಭಾರತ ಎಂಬ ಶ್ರೇಯ ಪಡೆದಿದೆ. ಬಹುತೇಕ ಪ್ರತಿ ಕುಟುಂಬದಲ್ಲೂ ಚಿನ್ನವು ಆಭರಣ, ನಾಣ್ಯ ಅಥವಾ ಗಟ್ಟಿ ರೂಪದಲ್ಲಿ ಇರಿಸಿಕೊಳ್ಳಬಹುದು.

ಆಭರಣಗಳ ರೂಪದಲ್ಲಿನ ಬದಲಾವಣೆ, ಅದಕ್ಕೆ ಭಾರೀ ಮೇಕಿಂಗ್ ಶುಲ್ಕಗಳು/ಡಿಸೈನ್ ಶುಲ್ಕಗಳು ಇವೆಲ್ಲ ಸೇರುವುದರಿಂದ ಜನರು ಚಿನ್ನದ ಗಟ್ಟಿಯನ್ನು ಖರೀದಿ ಮಾಡುವುದಕ್ಕೆ ಆದ್ಯತೆ ನೀಡಬಹುದು. ಇದಕ್ಕೆ ಇತರ ಶುಲ್ಕಗಳು ಬೀಳುವುದಿಲ್ಲ. ಈಚಿನ ದಿನಗಳಲ್ಲಿ ಇ ಕಾಮರ್ಸ್ ಪ್ಲಾಟ್ ಫಾರ್ಮ್ ಆದ ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತಿತರ ಕಡೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?

‌ಚಿನ್ನದ ಗಟ್ಟಿಯನ್ನು ಖರೀದಿ ಮಾಡುವ ಮುನ್ನ ಈ ಲೇಖನದಲ್ಲಿ ಪ್ರಸ್ತಾವ ಆಗಿರುವ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಿ.

ಉತ್ಕೃಷ್ಟತೆ

ಉತ್ಕೃಷ್ಟತೆ

ಗಟ್ಟಿಯನ್ನು ಹೂಡಿಕೆ ದೃಷ್ಟಿಗಾಗಿ ಎದುರು ನೋಡುತ್ತಿದ್ದಲ್ಲಿ ಪ್ರತಿ ಸಾವಿರಕ್ಕೆ ಎಷ್ಟು ಭಾಗ ಚಿನ್ನ ಒಳಗೊಂಡಿದೆ ಎಂಬುದು ಚಿನ್ನದ ಉತ್ಕೃಷ್ಟತೆಯನ್ನು ತೋರಿಸುತ್ತದೆ. ಆ ಕಾರಣಕ್ಕೆ ಕ್ಯಾರೆಟ್ ಗಿಂತ ಹೆಚ್ಚಾಗಿ ಉತ್ಕೃಷ್ಟತೆಯನ್ನು ಗಮನಿಸಬೇಕು. ಚಿನ್ನದ ಶುದ್ಧತೆಯು ಸಾವಿರ ಭಾಗಕ್ಕೆ 999.9 ಇರಬೇಕು. ಆದ್ದರಿಂದ ಖರೀದಿ ಮಾಡುವಾಗ ಉತ್ಕೃಷ್ಟತೆಯನ್ನು ಗಮನಿಸಬೇಕು.

ಪ್ರಮಾಣಪತ್ರ

ಪ್ರಮಾಣಪತ್ರ

‌ಚಿನ್ನದ ಗಟ್ಟಿ ಖರೀದಿ ಮಾಡುವಾಗ ಹಾಲ್ ಮಾರ್ಕ್ ಪ್ರಮಾಣಪತ್ರ ಇರಬೇಕು. ಆದ್ದರಿಂದ ಬಿಐಎಸ್ (ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಹಾಲ್ ಮಾರ್ಕ್ ಪ್ರಮಾಣಪತ್ರ ಇರುವುದನ್ನು ಖರೀದಿಸುವುದು ಉತ್ತಮ. ಈ ಪ್ರಮಾಣಪತ್ರ ಇದೆ ಎಂದಾದಲ್ಲಿ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಂದ ಆಭರಣದ ಗುಣಮಟ್ಟ ಖಾತ್ರಿ ಮಾಡುವಂತಾಗುತ್ತದೆ.

ಚಿನ್ನದ ಶುದ್ಧತೆ

ಚಿನ್ನದ ಶುದ್ಧತೆ

ಖರೀದಿ ಮಾಡುವಾಗ ಚಿನ್ನವು ಪರಿಶುದ್ಧವಾಗಿದೆಯಾ ಎಂಬ ಬಗ್ಗೆ ಖಾತ್ರಿ ಮಾಡಿಕೊಳ್ಳಿ. ಶುದ್ಧತೆಯನ್ನು ಅಳೆಯುವುದಕ್ಕೆ ಇರುವ ಮಾನದಂಡ ಕ್ಯಾರೆಟ್. ಹೆಚ್ಚಿನ ಕ್ಯಾರೆಟ್ ಇದ್ದಲ್ಲಿ ಶುದ್ಧತೆ ಕೂಡ ಜಾಸ್ತಿ ಇರುತ್ತದೆ. 14, 18, 22 ಹಾಗೂ 24 ಕ್ಯಾರೆಟ್ ಚಿನ್ನವು ದೊರೆಯುತ್ತದೆ. 24 ಕ್ಯಾರೆಟ್ ಚಿನ್ನವಾದಲ್ಲಿ ಅದು ಅತ್ಯಂತ ಶುದ್ಧವಾಗಿರುತ್ತದೆ. ಅದು ಶೇಕಡಾ ನೂರರಷ್ಟು ಚಿನ್ನ. ಆದ್ದರಿಂದ 24 ಕ್ಯಾರೆಟ್ ಚಿನ್ನ ಅಂದರೆ ಅದು ಹೂಡಿಕೆ ಉದ್ದೇಶಕ್ಕೆ ಮಾತ್ರ ಖರೀದಿಸಬಹುದು. ಒಂದು ವೇಳೆ ಆಭರಣ ತಯಾರಿಕೆ ಅಥವಾ ಬೇರೆ ಉದ್ದೇಶ ಇದ್ದಲ್ಲಿ 22 ಕ್ಯಾರೆಟ್ ಸಾಕು.

ಪ್ಯಾಕೇಜಿಂಗ್

ಪ್ಯಾಕೇಜಿಂಗ್

ಆನ್ ಲೈನ್ ನಲ್ಲಿ ಚಿನ್ನದ ಗಟ್ಟಿಯನ್ನು ಖರೀದಿ ಮಾಡುತ್ತಿದ್ದಲ್ಲಿ ಪ್ಯಾಕೇಜ್ ಆಗಿರುವಂಥದ್ದೇ ದೊರೆಯುತ್ತದೆ. ಅದು ಹೇಗೆ ಪ್ಯಾಕೇಜ್ ಆಗಿದೆಯೋ ಅದೇ ರೀತಿ ಇಡುವುದಕ್ಕೆ ಪ್ರಯತ್ನಿಸಬೇಕು. ಹೀಗೆ ಮಾಡುವುದರಿಂದ ಚಿನ್ನದ ಗಟ್ಟಿಯ ಶುದ್ಧತೆ ಕಾಯ್ದುಕೊಳ್ಳುವುದಕ್ಕೆ ಸಹಾಯ ಆಗುತ್ತದೆ.

ರಿಫೈನರಿ

ರಿಫೈನರಿ

ಪ್ರಮುಖ ರಿಫೈನರಿಗಳಿಂದ ಚಿನ್ನವನ್ನು ಖರೀದಿ ಮಾಡಿದಲ್ಲಿ ಅತ್ಯಂತ ಶುದ್ಧವಾಗಿರುತ್ತದೆ. ಖರೀದಿ ವೇಳೆ ಆ ಚಿನ್ನ ಎಲ್ಲಿ ರಿಫೈನ್ ಆಗಿದೆ ಎಂಬುದರ ಬಗ್ಗೆ ವಿಚಾರಿಸಿ. ಭಾರತದಲ್ಲಿ ಎರಡು ಚಿನ್ನದ ರಿಫೈನರಿ ಗಳಿವೆ. MMTC PAMP (ಇದು MMTC ಮತ್ತು ಸ್ವಿಟ್ಜರ್ಲೆಂಡ್ PAMP SA ಜಂಟಿ ಸಹಭಾಗಿತ್ವ) ಮತ್ತು ಬೆಂಗಳೂರು ರಿಫೈನರಿ.

English summary

5 Must Know Things Before Purchasing Gold Bar

Here are the 5 key things to consider before purchasing gold bar.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X