ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ವಿಸ್ತಾರವಾದ ಹವಾಯಿಯನ್ ಎಸ್ಟೇಟ್‌ನ ಆಸ್ತಿಯ ಕುರಿತು ಹೊಸ ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ಅವರ ಎಸ್ಟೇಟ್‌ನ ಪರಿಧಿಯೊಳಗೆ ಇಲ್ಲಿಯವರೆಗೆ ಇಲ್ಲದಂತಹ ಹೈ ಸೆಕ್ಯುರಿಟಿ ಒಳಗೊಂಡಿದ್ದು, ಕಾಂಕ್ರೀಟ್ ತುಂಬಿದ ಲೋಹದ ಬಾಗಿಲನ್ನು ಹೊಂದಿರುವ ಭೂಗತ ಬಂಕರ್, ಹಗ್ಗದ ಸೇತುವೆಗಳಿಂದ ಸಂಪರ್ಕಗೊಂಡಿರುವ 11 ಟ್ರೀ ಹೌಸ್ ಗಳ ಜಾಲಗಳನ್ನು ಒಳಗೊಂಡಿದೆ ಎಂದು ವೈರ್ಡ್ ವರದಿ ಮಾಡಿದೆ.
ಕಾಂಪೌಂಡ್ ಒಳಗೆ ಸುಮಾರು 12 ಸ್ಟ್ರಕ್ಚರ್‌ಗಳಿದ್ದು ಎಲ್ಲವೂ ಅವರ ಅನುಕೂಲತೆಗಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಕನಿಷ್ಠ 30 ಬೆಡ್‌ರೂಮ್ ಮತ್ತು ಬಾತ್‌ರೂಮ್‌ಗಳ ಯೋಜನೆಗಳಿವೆ. ಎರಡು ಪ್ರಾಥಮಿಕವಾದ ಮನೆಗಳಿದ್ದು, ಇಲ್ಲಿ ಜಿಮ್, ಈಜುಕೊಳ, ಸೌನಾ, ಹಾಟ್ ಟಬ್, ಕೋಲ್ಡ್ ಪ್ಲುಂಗ್ ಮತ್ತು ಟೆನ್ನಿಸ್ ಕೋರ್ಟ್‌ನಂತಹ ಐಷಾರಾಮಿ ಸೌಕರ್ಯಗಳನ್ನು ಹೊಂದಿವೆ.

ನಂಬಲಸಾಧ್ಯವಾದ ವಿಚಾರವೆಂದರೆ ಅವರ ಎಸ್ಟೇಟ್ ನಲ್ಲಿ ಸುರಂಗದ ಮೂಲಕ ಸಂಪರ್ಕಗೊಂಡಿರುವ ಭೂಗತ ಬಂಕರ್ ಇದ್ದು, 5,000 ಚದರ ಅಡಿಗಳಷ್ಟು ವಿಸ್ತಾರವಾಗಿ ವ್ಯಾಪಿಸಿರುವ ಲಿವಿಂಗ್ ಸ್ಪೇಸ್ ಇದ್ದು ಮೆಕಾನಿಕಲ್ ಏರಿಯಾ ಮತ್ತು ಎಸ್ಕೇಪ್ ಹ್ಯಾಚ್ ಮುಂತಾದ ಅತ್ಯಾಧುನಿಕ ಸವಲತ್ತುಗಳಿವೆ. ಮಾತ್ರವಲ್ಲದೇ ಇದು ಕಾಂಕ್ರೀಟ್ ತುಂಬಿದ ಎತ್ತರದ ಲೋಹದ ಸಧೃಡವಾದ ಬಾಗಿಲುಗಳನ್ನು ಒಳಗೊಂಡಿದೆ.
ಸಂಪೂರ್ಣ ಎಸ್ಟೇಟ್ 18-ಅಡಿ ಎತ್ತರದ ನೀರಿನ ಟ್ಯಾಂಕ್, ಪಂಪ್ ಸಿಸ್ಟಮ್ ಮತ್ತು ಆಹಾರ ಉತ್ಪಾದನಾ ಸ್ಥಾಪಿತ ಸಾಮರ್ಥ್ಯದೊಂದಿಗೆ ಎಸ್ಟೇಟ್ ನಲ್ಲಿ ಜಾನುವಾರು ಸಾಕಣೆ, ಸಾವಯವ ಫಾರ್ಮ್‌ಗಳು ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಪಾಲುದಾರಿಕೆಗಳನ್ನು ಒಳಗೊಂಡಿದೆ.
6-ಅಡಿ ಎತ್ತರದಕಲ್ಲಿನ ಗೋಡೆ, ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ವಿಚಾರ ಬಹಿರಂಗಪಡಿಸದಿರುವ ಒಪ್ಪಂದಗಳು ಛಾಯಾಗ್ರಹಣದ ಮೇಲಿನ ನಿರ್ಬಂಧಗಳು ಸೇರಿದಂತೆ ಕಟ್ಟುನಿಟ್ಟಾದ ಕ್ರಮಗಳಿಂದ ಈ ಆಸ್ತಿಯ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತದೆ.
ಮೂಲಗಳ ಪ್ರಕಾರ, 170 ಮಿಲಿಯನ್ ಡಾಲರ್ ಮೌಲ್ಯದ ಭೂಮಿಯನ್ನು ಹೊರತುಪಡಿಸಿ, ಜುಕರ್‌ಬರ್ಗ್ ಅವರ ಆಸ್ತಿಗಾಗಿ ಸುಮಾರು 100 ಮಿಲಿಯನ್ ಡಾಲರ್ ವೆಚ್ಚ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ, ಜುಕರ್‌ಬರ್ಗ್ ಈ ಆಸ್ತಿಯಲ್ಲಿ 270 ಮಿಲಿಯನ್ ಡಾಲರ್ ಖರ್ಚು ಮಾಡುತ್ತಿದ್ದು ಇದು ಭಾರತೀಯ 2240.89 ಕೋಟಿ ರೂ.ಗೆ ಸಮನಾಗಿದೆ. 1,400-ಎಕರೆ ಆಸ್ತಿಯು 6-ಅಡಿ ಕಲ್ಲಿನ ಗೋಡೆಯಿಂದ ಆವೃತವಾಗಿದ್ದು್ ಸ್ಥಳೀಯರ ಪ್ರಕಾರ ಇದು ಪ್ರಾರಂಭದಿಂದಲೂ ಯಾರಿಗೂ ನಿಲುಕದ ನಿಗೂಢವಾದ ಆಸ್ತಿಯಾಗಿದೆ.


Click it and Unblock the Notifications