ಈ ಹಿಂದೆ ಕೇಂದ್ರ ಸರ್ಕಾರವು ಮಾರ್ಚ್ ತಿಂಗಳಲ್ಲಿ ತುಟ್ಟಿಭತ್ಯೆಯನ್ನು ಶೇಕಡ 4ರಷ್ಟು ಏರಿಕೆ ಮಾಡಿದೆ. ಇದೀಗ ಮತ್ತೆ ಕೇಂದ್ರ ಸರ್ಕಾರವು ಜುಲೈ ತಿಂಗಳಿನಲ್ಲಿ ತುಟ್ಟಿಭತ್ಯೆಯನ್ನು ಏರಿಕೆ ಮಾಡುವ ಸಾಧ್ಯತೆಯ ಬಗ್ಗೆ ವರದಿಯಾಗಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಷ್ಟತೆಯು ದೊರೆತಿಲ್ಲ. ಕಳೆದ ನಾಲ್ಕು ತಿಂಗಳ ಡೇಟಾವನ್ನು ಪರಿಶೀಲನೆ ಮಾಡಿ ನೋಡಿದ ತಜ್ಞರ ಪ್ರಕಾರ ಜುಲೈನಲ್ಲಿ ಕೇಂದ್ರ ಸರ್ಕಾರವು ಶೇಕಡ 4ರಷ್ಟು ಡಿಎಯನ್ನು ಹೆಚ್ಚಳ ಮಾಡಲಿದೆ. ಆದರೆ ಕೇಂದ್ರ ಸರ್ಕಾರವು ಡಿಎ ಏರಿಕೆಗೆ ಹೊಸ ಸೂತ್ರವನ್ನು ಜಾರಿ ಮಾಡುವ ಸಾಧ್ಯತೆಯಿದೆ ಎಂದು ಕೂಡಾ ವರದಿಯಾಗಿದೆ.
ಕೇಂದ್ರ ಸಚಿವ ಅನುರಾದ್ ಠಾಕೂರ್ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ 4ರಷ್ಟು ತುಟ್ಟಿಭತ್ಯೆ ಏರಿಕೆಯ ಘೋಷಣೆಯನ್ನು ಮಾಡಿದ್ದಾರೆ. 7ನೇ ವೇತನ ಆಯೋಗಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ ಮಾಡಿದ ಡಿಎ ಏರಿಕೆ ಬಳಿಕ ಕೇಂದ್ರ ಸರ್ಕಾರಿ ನೌಕರರರಿಗೆ ಲಭ್ಯವಾಗುವ ಡಿಎ ಪ್ರಮಾಣ ಶೇಕಡ 42ಕ್ಕೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಿನಿಂದ ಈ ನೂತನ ಡಿಎ ಲಾಭವನ್ನು ಕೇಂದ್ರ ಸರ್ಕಾರಿ ನೌಕರರು ಪಡೆಯಲಿದ್ದಾರೆ.

ಜುಲೈ ಡಿಎ ಏರಿಕೆಗೆ ಹೊಸ ಸೂತ್ರ
ಕಾರ್ಮಿಕ ಇಲಾಖೆಯು ಡಿಎ ಲೆಕ್ಕಾಚಾರದ ಸೂತ್ರವನ್ನು ಪರಿಷ್ಕರಣೆ ಮಾಡಿದೆ ಎಂದು ಝೀ ಬ್ಯುಜಿನೆಸ್ ವರದಿ ಮಾಡಿದೆ. ಕೇಂದ್ರ ಸರ್ಕಾರವು ಡಿಎಯ ಮೂಲ ವರ್ಷವನ್ನು 2016ರಲ್ಲಿ ಬದಲಾಯಿಸಿದೆ, ಹೊಸ ವೇತನ ದರ ಸೂಚ್ಯಂಕವನ್ನು ಜಾರಿ ಮಾಡಿದೆ. (ಡಬ್ಲ್ಯೂಆರ್‌ಐ-ವೇಜ್ ರೇಟ್ ಇಂಡೆಕ್ಸ್). 2016=100 ಮೂಲ ವರ್ಷದೊಂದಿಗಿನ ಡಬ್ಲ್ಯೂಆರ್‌ಐ ಹೊಸ ಸೀರಿಸ್ ಅನ್ನು ಮೂಲ ವರ್ಷದ 1963-65 ರ ಹಳೆಯ ಸೀರಿಸ್‌ಗೆ ಬದಲಾವಣೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಡಿಎ ಹೇಗೆ ಲೆಕ್ಕಾಚಾರ ಮಾಡುವುದು?
7ನೇ ವೇತನ ಆಯೋಗದ ಪ್ರಸ್ತುತ ತುಟ್ಟಿಭತ್ಯೆ ದರವನ್ನು ಮೂಲ ವೇತನದೊಂದಿಗೆ ಗುಣಿಸಿ ತುಟ್ಟಿಭತ್ಯೆಯನ್ನು ಲೆಕ್ಕ ಹಾಕಲಾಗುತ್ತದೆ. ಆಗಿದ್ದರೆ, ಪ್ರಸ್ತುತ ಶೇಕಡಾವಾರು ದರವು 12% ಆಗಿರುತ್ತದೆ. ನಿಮ್ಮ ಮೂಲ ವೇತನ ರೂ.56,900 ಆಗಿದ್ದರೆ, ಲೆಕ್ಕಾಚಾರ ಡಿಎ (56,900 x12)/100 ಆಗುತ್ತದೆ. ತುಟ್ಟಿಭತ್ಯೆ ಶೇಕಡವಾರು = ಕಳೆದ 12 ತಿಂಗಳ ಸರಾಸರಿ ಸಿಪಿಐ -115.76 ಎಂದು ಲೆಕ್ಕಾಚಾರವಾಗುತ್ತದೆ. ಇದಾದ ಬಳಿಕ ಬಂದ ಮೊತ್ತವನ್ನು 115.76 ರಿಂದ ಭಾಗಿಸಲಾಗುತ್ತದೆ. ಅದಾದ ಬಳಿಕ ಬರುವ ಸಂಖ್ಯೆಯನ್ನು 100 ರಿಂದ ಗುಣಿಸಲಾಗುತ್ತದೆ.
ತುಟ್ಟಿಭತ್ಯೆ ಮೇಲೆ ತೆರಿಗೆ ವಿಧಿಸಲಾಗುತ್ತದೆಯೇ?: ತುಟ್ಟಿಭತ್ಯೆಯು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ. ಭಾರತದಲ್ಲಿನ ಆದಾಯ ತೆರಿಗೆ ನಿಯಮದ ಪ್ರಕಾರ ಆದಾಯ ತೆರಿಗೆ ರಿಟರ್ನ್ (ಐಟಿಆರ್) ನಲ್ಲಿ ತುಟ್ಟಿಭತ್ಯೆಯ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ನೀಡಬೇಕಾಗುತ್ತದೆ.
ಕೇಂದ್ರ ಸರ್ಕಾರವು ತುಟ್ಟಿಭತ್ಯೆ (ಡಿಎ) ಅನ್ನು ಏರಿಕೆ ಮಾಡುವ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯನ್ನು ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ನೀಡಿದೆ. ಕೇಂದ್ರ ಸರ್ಕಾರವು ತುಟ್ಟಿ ಭತ್ಯೆ (ಡಿಎ) ಮತ್ತು ಡಿಯರೆನ್ಸ್ ರಿಲೀಫ್ (ಡಿಆರ್- ತುಟ್ಟಿಭತ್ಯೆ ಪರಿಹಾರ) ಶೇಕಡ 4ರಷ್ಟು ಏರಿಕೆ ಮಾಡಿದೆ. ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಮಾರ್ಚ್ 24ರಂದು ಮಾಹಿತಿ ನೀಡಿದರು. ಈ ಡಿಎ ಏರಿಕೆ ಬಳಿಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯು ಶೇಕಡ 42ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.


Click it and Unblock the Notifications