ಇತ್ತೀಚೆಗೆ ಲಭ್ಯವಾದ 7ನೇ ವೇತನ ಆಯೋಗದ ಮಾಹಿತಿ ಪ್ರಕಾರವಾಗಿ ಕೇಂದ್ರ ಸರ್ಕಾರಿ ನೌಕರರು ಜುಲೈ ವೇಳೆಗೆ ತುಟ್ಟಿಭತ್ಯೆಯ ವಿಚಾರದಲ್ಲಿ ಸಿಹಿಸುದ್ದಿಯನ್ನು ಪಡೆಯುವ ಸಾಧ್ಯತೆಯಿದೆ. ಜುಲೈ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಜುಲೈನಿಂದ ಏರಿಕೆ ಮಾಡುವ ನಿರೀಕ್ಷೆಯಿದೆ.
ಈ ಹಿಂದೆ ಕೇಂದ್ರ ಸರ್ಕಾರವು ಮಾರ್ಚ್ ತಿಂಗಳಲ್ಲಿ ತುಟ್ಟಿಭತ್ಯೆಯನ್ನು ಶೇಕಡ 4ರಷ್ಟು ಏರಿಕೆ ಮಾಡಿದೆ. ಇದೀಗ ಮತ್ತೆ ಕೇಂದ್ರ ಸರ್ಕಾರವು ಜುಲೈ ತಿಂಗಳಿನಲ್ಲಿ ತುಟ್ಟಿಭತ್ಯೆಯನ್ನು ಏರಿಕೆ ಮಾಡುವ ಸಾಧ್ಯತೆಯ ಬಗ್ಗೆ ವರದಿಯಾಗಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಷ್ಟತೆಯು ದೊರೆತಿಲ್ಲ.

ನಡೆಯುತ್ತಿರುವ ಆರ್ಥಿಕ ವರ್ಷದಲ್ಲಿ, ಸರ್ಕಾರವು ಮೊದಲ ಬಾರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಲು ಯೋಜಿಸಿದೆ. ಏಪ್ರಿಲ್‌ನ ಎಐಸಿಪಿಐ (ಆಲ್ ಇಂಡಿಯಾ ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್) ಆಧಾರದಲ್ಲಿ ನೋಡಿದಾಗ ತುಟ್ಟಿಭತ್ಯೆಯನ್ನು ಸುಮಾರು ಶೇಕಡ 3ರಿಂದ ಶೇಕಡ 4ರಷ್ಟು ಏರಿಕೆ ಮಾಡುವ ನಿರೀಕ್ಷೆಯಿದೆ. ಆದರೆ ಮೇ ಹಾಗೂ ಜೂನ್ ತಿಂಗಳ ದಾಖಲೆಯು ಕೂಡಾ ಇದಕ್ಕೆ ಪ್ರಭಾವ ಉಂಟು ಮಾಡಲಿದೆ.
ಈ ಎರಡು ತಿಂಗಳ ಅವಧಿಯಲ್ಲಿ ಎಐಸಿಪಿಐ (ಆಲ್ ಇಂಡಿಯಾ ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್) ಆಧಾರದಲ್ಲಿ ಶೇಕಡ 4ರಷ್ಟು ತುಟ್ಟಿಭತ್ಯೆಯನ್ನು ಏರಿಕೆ ಮಾಡಬಹುದು. ಆದರೆ ಈ ಎರಡು ತಿಂಗಳ ಎಐಸಿಪಿಐ ಮೇಲೆಯೇ ಎಲ್ಲವೂ ಅವಲಂಭಿತವಾಗಿರುತ್ತದೆ. ಎಷ್ಟು ವೇತನ ಹೆಚ್ಚಾಗಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ತುಟ್ಟಿಭತ್ಯೆ ಹೆಚ್ಚಳದ ಪ್ರಮಾಣ
ನಿರೀಕ್ಷಿತ ತುಟ್ಟಿಭತ್ಯೆ ಹೆಚ್ಚಳದ ಪ್ರಮಾಣವನ್ನು ನೋಡೋಣ. ಪ್ರಸ್ತುತ, ಕೇಂದ್ರ ನೌಕರರು ಶೇಕಡ 42ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಾರೆ. ಕೇಂದ್ರ ಸರ್ಕಾರವು ಮತ್ತೆ ಶೇಕಡ 4ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದರೆ, ತುಟ್ಟಿಭತ್ಯೆಯು ಶೇಕಡ 46ಕ್ಕೆ ತಲುಪುತ್ತದೆ. ಮಾಧ್ಯಮ ವರದಿಗಳ ಪ್ರಕಾರ ಏಪ್ರಿಲ್‌ನಲ್ಲಿ ಎಐಸಿಪಿಐ ಅಂಕಿ ಅಂಶವು 134.2 ಪಾಯಿಂಟ್‌ಗಳಷ್ಟಿದೆ. ಇದರ ಪರಿಣಾಮವಾಗಿ ಡಿಎ ಸ್ಕೋರ್ 45.06ಕ್ಕೆ ತಲುಪಿದೆ. ಸೂಚ್ಯಂಕವು ಮೇ ಮತ್ತು ಜೂನ್‌ನಲ್ಲಿ 46.40 ಕ್ಕೆ ತಲುಪುವ ನಿರೀಕ್ಷೆಯಿದೆ. ಹೀಗಾಗಿ ಶೇಕಡ 4ರಷ್ಟು ಡಿಎ ಹೆಚ್ಚಳವನ್ನು ಮಾಡುವ ಸಾಧ್ಯತೆಯಿದೆ.
ವೇತನ ಎಷ್ಟು ಏರಿಕೆಯಾಗಲಿದೆ?
ಈಗ, ಉದ್ಯೋಗಿಗಳ ಸಂಬಳದ ಮೇಲೆ ಈ ಡಿಎ ಹೆಚ್ಚಳದ ಪರಿಣಾಮವನ್ನು ನಾವು ಪರಿಶೀಲಿಸೋಣ. ಉದ್ಯೋಗಿಯ ಮಾಸಿಕ ವೇತನವು 18,000 ರೂಪಾಯಿ ಆಗಿದ್ದರೆ, ಪ್ರಸ್ತುತ ದರದಲ್ಲಿ ಶೇಕಡ 42ರಷ್ಟು ತುಟ್ಟಿಭತ್ಯೆ ಇರುವಾಗ 7,560 ರೂಪಾಯಿ ತುಟ್ಟಿಭತ್ಯೆ ಆಗುತ್ತದೆ. ನಾವು ಶೇಕಡ 46ರಷ್ಟು ತುಟ್ಟಿಭತ್ಯೆ ಆಧಾರದಲ್ಲಿ ವೇತನವನ್ನು ಲೆಕ್ಕಾಚಾರ ಮಾಡಿದಾಗ 8,280 ರೂಪಾಯಿ ತುಟ್ಟಿಭತ್ಯೆ ಆಗಲಿದೆ. ಆದ್ದರಿಂದಾಗಿ ನಿಮ್ಮ ಮಾಸಿಕ ವೇತನದಲ್ಲಿ 720 ರೂಪಾಯಿ ಏರಿಕೆಯಾಗಲಿದೆ, ವಾರ್ಷಿಕವಾಗಿ 99,360 ರೂಪಾಯಿ ಹೆಚ್ಚಳವಾಗಲಿದೆ.
ಇದಲ್ಲದೆ, ಡಿಎ ಹೆಚ್ಚಳದ ಜೊತೆಗೆ, ನೌಕರರು ಜುಲೈನಲ್ಲಿ ಸಂಬಳದಲ್ಲಿ ಮೂಲ ವೇತನದಲ್ಲಿ ಏರಿಕೆ ಆಗಬಹುದು. ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 8,000 ರೂಪಾಯಿ ಏರಿಕೆಯಾಗಲಿದೆ ಎಂದು ಊಹಾಪೋಹಗಳು ಹರಿದಾಡುತ್ತಿದೆ. ಅಂದರೆ ಉದ್ಯೋಗಿಗಳ ವೇತನವು ಈಗ 18,000 ರೂಪಾಯಿ ಆಗಿದ್ದರೆ, ವೇತನ ಹೆಚ್ಚಳದ ಬಳಿಕ ವೇತನವು 26,000 ರೂಪಾಯಿಗೆ ತಲುಪಲಿದೆ.
ಕೇಂದ್ರ ಸರ್ಕಾರವು ತುಟ್ಟಿಭತ್ಯೆ (ಡಿಎ) ಅನ್ನು ಏರಿಕೆ ಮಾಡುವ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯನ್ನು ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ನೀಡಿದೆ. ಕೇಂದ್ರ ಸರ್ಕಾರವು ತುಟ್ಟಿ ಭತ್ಯೆ (ಡಿಎ) ಮತ್ತು ಡಿಯರೆನ್ಸ್ ರಿಲೀಫ್ (ಡಿಆರ್- ತುಟ್ಟಿಭತ್ಯೆ ಪರಿಹಾರ) ಶೇಕಡ 4ರಷ್ಟು ಏರಿಕೆ ಮಾಡಿದೆ. ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಮಾರ್ಚ್ 24ರಂದು ಮಾಹಿತಿ ನೀಡಿದರು. ಈ ಡಿಎ ಏರಿಕೆ ಬಳಿಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯು ಶೇಕಡ 42ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.


Click it and Unblock the Notifications