ಇತ್ತೀಚೆಗೆ ಕೇಂದ್ರ ಸರ್ಕಾರವು ತುಟ್ಟಿಭತ್ಯೆ (ಡಿಎ) ಏರಿಕೆಯನ್ನು ಮಾಡಿದೆ. ಈಗ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಮುಂದಿನ ತುಟ್ಟಿಭತ್ಯೆ ಏರಿಕೆಯಾಗಿ ಕಾಯುತ್ತಿದ್ದಾರೆ. ಜುಲೈ 2023ರಲ್ಲಿ ಕೇಂದ್ರ ಸರ್ಕಾರವು ಮತ್ತೆ ಡಿಎ ಏರಿಕೆ ಮಾಡುವ ನಿರೀಕ್ಷೆಯಿದೆ. ಕಳೆದ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಡಿಎ ಮತ್ತು ಡಿಆರ್ ಅನ್ನು ಶೇಕಡ 4ರಷ್ಟು ಏರಿಕೆ ಮಾಡಿದೆ. ಈ ಪರಿಷ್ಕೃತ ಬಡ್ಡಿದರ ಜನವರಿ 1ರಿಂದ ಜಾರಿಗೆ ಬರಲಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಮಿಕ ಬ್ಯೂರೋ ಬಿಡುಗಡೆ ಮಾಡಿದ ಅಖಿಲ-ಭಾರತ CPI-IW ಡೇಟಾದ ಪ್ರಕಾರ ತುಟ್ಟಿಭತ್ಯೆಯ ದರವನ್ನು ಕೇಂದ್ರವು ನಿರ್ಧರಿಸುತ್ತದೆ ಎಂಬುದನ್ನು ಕೇಂದ್ರ ಸರ್ಕಾರಿ ನೌಕರರು ತಿಳಿದಿರಬೇಕಾದ ವಿಚಾರವಾಗಿದೆ. AICPI-IW ಫೆಬ್ರವರಿ 2023ರಲ್ಲಿ ಏರಿಕೆಯಾಗಿದೆ. ಸುಮಾರು 0.1 ಪಾಯಿಂಟ್ ಹೆಚ್ಚಳವಾಗಿ, 132.7ಕ್ಕೆ ತಲುಪಿದೆ.

ಜನವರಿ 2023ರಲ್ಲಿ AICPI-IW 132.8ರಷ್ಟಿತ್ತು. ಇನ್ನು ಮಾರ್ಚ್ 2023ರ AICPI-IW ಏಪ್ರಿಲ್ 28, 2023ರಂದು ಆರಂಭವಾಗಲಿದೆ. ಆದರೆ ನಾವು ಫೆಬ್ರವರಿಯ AICPI-IW ಅನ್ನು ನೋಡಿದಾಗ ಮಾರ್ಚ್‌ನಲ್ಲಿಯೂ ಡಿಎ ಮತ್ತು ಡಿಆರ್ ಏರಿಕೆಯಾಗಲಿದೆ. ಅಂದಾಜಿನ ಪ್ರಕಾರ ಶೇಕಡ 3ರಷ್ಟು ಡಿಎ/ ಡಿಆರ್ ಹೆಚ್ಚಳವಾಗಲಿದೆ ಎಂದು ವರದಿ ಉಲ್ಲೇಖಿಸಿದೆ.
ಪ್ರಸ್ತುತ, ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಡಿಎ/ಡಿಆರ್ ದರವು ಶೇಕಡ 42 ಆಗಿದೆ. ಜುಲೈನಲ್ಲಿ ಕೇಂದ್ರ ಸರ್ಕಾರವು ಡಿಎ ಮತ್ತು ಡಿಆರ್ ಅನ್ನು ಶೇಕಡ 3ರಷ್ಟು ಏರಿಕೆ ಮಾಡಿದರೆ, ದರವು ಶೇಕಡ 45ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಫೆಬ್ರವರಿ 2023 ರ AICPI-IW ಡೇಟಾ ಸೂಚಿಸುತ್ತದೆ. ಆದರೆ ಜುಲೈ 2023ರ ಡಿಎ/ ಡಿಆರ್ ಏರಿಕೆಯು ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ 2023 ಡೇಟಾದ ಮೇಲೆಯೂ ನಿರ್ಧರಿತವಾಗಿರುತ್ತದೆ.
ಹರಿಯಾಣದಲ್ಲಿ ಶೇಕಡ 4ರಷ್ಟು ಡಿಎ ಏರಿಕೆ
ಕಳೆದ ವಾರ, ಹರಿಯಾಣ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಏರಿಕೆ ಮಾಡಿದೆ. ಕೇಂದ್ರ ಸರ್ಕಾರ ಏರಿಕೆ ಮಾಡಿದಂತೆ ಶೇಕಡ 4ರಷ್ಟು ಡಿಎ ಹೆಚ್ಚಳ ಮಾಡಿದೆ. ಇತ್ತೀಚಿನ ಹೆಚ್ಚಳದೊಂದಿಗೆ, ಡಿಎ ಶೇಕಡ 38ರಿಂದ ಶೇಕಡ 42ಕ್ಕೆ ಏರಿಕೆಯಾಗಿದೆ. ಈ ನೂತನ ದರವು ಜನವರಿ 1, 2023ರಿಂದ ಜಾರಿಗೆ ಬರುತ್ತದೆ. ಹರಿಯಾಣ ಸರ್ಕಾರವು ಡಿಎಯನ್ನು ಏಪ್ರಿಲ್‌ನಿಂದ ಪಾವತಿಸಲಾಗುವುದು 2023 ರ ಜನವರಿಯಿಂದ ಮಾರ್ಚ್ ತಿಂಗಳ ಬಾಕಿಯನ್ನು ಮೇ ತಿಂಗಳಲ್ಲಿ ಪಾವತಿಸಲಾಗುವುದು ಎಂದು ಹೇಳಿದೆ.
ಡಿಎ ಏರಿಸಿದ ಹಿಮಾಚಲ ಪ್ರದೇಶ ಸರ್ಕಾರ
ಹರಿಯಾಣದಂತೆ ಹಿಮಾಚಲ ಪ್ರದೇಶ ಸರ್ಕಾರವು ಕೂಡಾ ಡಿಎ ಏರಿಕೆ ಮಾಡಿದೆ. ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರವು ಶೇಕಡ 3ರಷ್ಟು ಡಿಎ ಹೆಚ್ಚಳ ಮಾಡಿದೆ. ರಾಜ್ಯ ಮುಖ್ಯಮಂತ್ರಿ ಸುಖ್‌ವಿಂದರ್ ಸಿಂಗ್ ಸಖು 76ನೇ ಹಿಮಾಚಲ ದಿನವನ್ನು ಆಚರಣೆ ಸಂದರ್ಭದಲ್ಲಿ ಈ ಡಿಎ ಏರಿಕೆಯನ್ನು ಘೋಷಣೆ ಮಾಡಿದ್ದಾರೆ.
ಹಿಮಾಚಲ ಪ್ರದೇಶ ಸರ್ಕಾರವು ಸರ್ಕಾರಿ ನೌಕರರಿಗೆ ಹಾಗೂ ಮಹಿಳೆಯರಿಗಾಗಿ ಡಿಎ ಹಾಗೂ ಆರ್ಥಿಕ ಸಹಾಯದ ಘೋಷಣೆಯನ್ನು ಮಾಡಿದೆ. ಸರ್ಕಾರಿ ನೌಕರರಿಗೆ ಡಿಎ ಏರಿಕೆ ಮಾಡಲಾಗಿದ್ದು, ಇದು ನಿವೃತ್ತಿ ಹೊಂದಿರುವವರಿಗೂ ಅನ್ವಯವಾಗಲಿದೆ. ಪ್ರಸ್ತುತ ಹಿಮಾಚಲ ಪ್ರದೇಶ ಸರ್ಕಾರವು ಶೇಕಡ 3ರಷ್ಟು ಡಿಎ ಏರಿಕೆ ಮಾಡುವ ಘೋಷಣೆಯನ್ನು ಮಾಡಿದೆ.
ತುಟ್ಟಿಭತ್ಯೆ ಹೆಚ್ಚಳದ ನಂತರವೂ, ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮಹಿಳೆಯರಿಗೆ ಆರ್ಥಿಕ ಸಹಾಯದ ಬಗ್ಗೆ ಘೋಷಣೆ ಮಾಡಿದ್ದಾರೆ. 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 9,000 ಮಹಿಳೆಯರಿಗೆ ಮಾಸಿಕವಾಗಿ 1500 ರೂಪಾಯಿ ಆರ್ಥಿಕ ಸಹಾಯ ಘೋಷಣೆ ಮಾಡಿದ್ದಾರೆ. ಇದು ಜೂನ್ 2023 ರಿಂದ ಪ್ರಾರಂಭವಾಗುತ್ತದೆ.


Click it and Unblock the Notifications