For Quick Alerts
ALLOW NOTIFICATIONS  
For Daily Alerts

ನಿಮ್ಮ ಸ್ಮಾರ್ಟ್‌ಫೋನ್ ಕಳ್ಳತನವಾದ್ರೆ, ನಿಮ್ಮ ಹಣವನ್ನ ಸುರಕ್ಷಿತಗೊಳಿಸಲು ಈ 8 ವಿಧಾನ ಅನುಸರಿಸಿ

|

ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ ಬೆರಳ ತುದಿಯಲ್ಲಿ ಎಲ್ಲವೂ ಅನ್ನೋ ಹಾಗೆ ಸೇವೆಗಳು ಸಿಗುತ್ತವೆ. ಕೇವಲ ಕರೆಗಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣ ಬಳಕೆ, ಹಣ ವರ್ಗಾವಣೆ, ವಸ್ತು ಹಾಗೂ ಸೇವೆಗಳ ಬುಕ್ಕಿಂಗ್, ವ್ಯವಹಾರ ಸೇರಿದಂತೆ ಎಲ್ಲವೂ ಸ್ಮಾರ್ಟ್‌ಫೋನ್‌ನಲ್ಲೇ ನಡೆದುಹೋಗುತ್ತದೆ.

ಹೀಗಾಗಿ ಈ ಸ್ಮಾರ್ಟ್‌ಫೋನ್ ನಮ್ಮ ಜೀವನದಲ್ಲಿ ಅತ್ಯವಶ್ಯಕ ಸಾಧನಗಳಲ್ಲಿ ಒಂದಾಗಿ ಬಿಟ್ಟಿದೆ. ಅದ್ರಲ್ಲೂ ಡಿಜಿಟಲ್ ಬ್ಯಾಂಕಿಂಗ್, ಯುಪಿಐ ಸಾಧನಗಳು ಬಂದ ಮೇಲಂತೂ ಜನರು ಹಣ ಬಳಕೆಯ ಪ್ರಮಾಣವನ್ನ ತಗ್ಗಿಸುತ್ತಿದ್ದಾರೆ. ಇದರ ನಡುವೆ ಸೈಬರ್ ಕ್ರೈಮ್, ಹ್ಯಾಕರ್ಸ್‌ಗಳ ಜಾಲ, ಆನ್‌ಲೈನ್ ವಂಚನೆಯು ಸಾಮಾನ್ಯ. ಹೀಗಾಗಿ ಬ್ಯಾಂಕ್‌ಗೆ ಲಿಂಕ್‌ ಆಗಿರುವ ಸಿಮ್‌ ಕಾರ್ಡ್‌ ಹೊಂದಿರುವ ನಿಮ್ಮ ಸ್ಮಾರ್ಟ್‌ಫೋನ್ ಫೋನ್ ಕಳ್ಳತನವಾದ್ರೆ ತಕ್ಷಣವೇ ಮಾಡಬೇಕಾದ 8 ವಿಷಯಗಳು ಇಲ್ಲಿವೆ.

ಸಿಮ್‌ ಕಾರ್ಡ್ ಬ್ಲಾಕ್ ಮಾಡಿ

ಸಿಮ್‌ ಕಾರ್ಡ್ ಬ್ಲಾಕ್ ಮಾಡಿ

ನಿಮ್ಮ ಮೊಬೈಲ್ ಕಳೆದು ಹೋದ ಕೆಲವೇ ಸಮಯದಲ್ಲಿ ನಿಮ್ಮ ಟೆಲಿಕಾಂ ಆಪರೇಟರ್‌ಗೆ ಕರೆ ಮಾಡಿ ಮತ್ತು ನಿಮ್ಮ ಸಿಮ್ ಕಾರ್ಡ್ ಅನ್ನು ತಕ್ಷಣವೇ ಬ್ಲಾಕ್ ಮಾಡಿಬಿಡಿ. ಏಕೆಂದರೆ
ಹಾಗೆ ಮಾಡಿದ್ದಲ್ಲಿ ಕಳ್ಳರು ಹಣಕಾಸು ಸೇವೆಗಳ OTP ಗಳಿಗೆ ಅಥವಾ ಇತರ ವೈಯಕ್ತಿಕ ಸಂದೇಶಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಸಹಜವಾಗಿ, ನೀವು ಹೊಸ ಸಿಮ್ ಕಾರ್ಡ್‌ನೊಂದಿಗೆ ಅದೇ ಮೊಬೈಲ್ ಸಂಖ್ಯೆಯನ್ನು ಬಳಸುವುದನ್ನು ಮುಂದುವರಿಸಬಹುದು.

ಹೀಗಾಗಿ ಮೊಬೈಲ್ ಕಳೆದುಹೋದ್ರೆ ಮಾಡಬೇಕಾದ ಮೊದಲ ವಿಚಾರ ಅಂದ್ರೆ ಅದು ಸಿಮ್‌ ಕಾರ್ಡ್ ಬ್ಲಾಕ್ ಮಾಡುವುದಾಗಿದೆ.

 

ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ

ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ

ನಿಮ್ಮ ಮೊಬೈಲ್ ಫೋನ್ ಕಳೆದುಕೊಂಡ ಕ್ಷಣ, ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ. ಕಳ್ಳರು ನಿಮ್ಮ ಬ್ಯಾಂಕಿಂಗ್ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾದರೆ ಅವರು ಸುಲಭವಾಗಿ ಹಣವನ್ನು ವರ್ಗಾಯಿಸಬಹುದು. ಏಕೆಂದರೆ ಅವರು ನಿಮ್ಮ ಮೊಬೈಲ್‌ನಲ್ಲಿ OTP ಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಹೀಗಾಗಿ ಇದನ್ನು ನಂತರದ ಹಂತದಲ್ಲಿ ಮಾಡಿ.

ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ

ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ

ನಿಮ್ಮ ಫೋನ್ ಕಳವು ಆಗಿದ್ದಲ್ಲಿ ಅಥವಾ ಕಳೆದುಹೋದಲ್ಲಿ ಅದು ಸಿಕ್ಕವರು ನಿಮ್ಮ ಬ್ಯಾಂಕಿಂಗ್ ಸೇವೆಯನ್ನ ಬಳಸಬಾರದಂತೆ ನೋಡಿಕೊಳ್ಳಲು, ನಿಮ್ಮ ರಿಜಸ್ಟರ್ಡ್‌ ಮೊಬೈಲ್ ನಂಬರ್ ಬದಲಾಯಿಸಿದರೆ ಎಲ್ಲವೂ ಸರಿಹೋಗುವುದು.

ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ವೈಯಕ್ತಿಕವಾಗಿ ನಿಮ್ಮ ಬ್ಯಾಂಕ್‌ಗೆ ಭೇಟಿ ನೀಡಿ, ಎಲ್ಲಾ ಪಾಸ್‌ವರ್ಡ್‌ಗಳನ್ನು ಮರುಹೊಂದಿಸಿ ಮತ್ತು ನಂತರ ಮಾತ್ರ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸಲು ಪ್ರಾರಂಭಿಸಿ.

 

ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ

ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ

ಒಂದು ವೇಳೆ ಕಳ್ಳರು ಆಧಾರ್ ದೃಢೀಕರಣಕ್ಕೆ ಪ್ರವೇಶ ಪಡೆದರೆ, ನಂತರ ಅವರು ದೊಡ್ಡ ಹಗರಣಗಳನ್ನು ನಡೆಸಲು ನಿಮ್ಮನ್ನು ಯಾಮಾರಿಸಲು ಆರಂಭಿಸಬಹುದು. ನಿಮ್ಮ ಮೊಬೈಲ್ ಕದ್ದ ತಕ್ಷಣ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವುದು ಸೂಕ್ತ.

ಆ ಫೋನ್ ಸಂಖ್ಯೆಯಲ್ಲಿ ನಿಮ್ಮ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಂದ UPI ಪಾವತಿಯನ್ನು ನಿಷ್ಕ್ರಿಯಗೊಳಿಸಿ. ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ನಿರ್ಬಂಧಿಸಿದ ನಂತರ, ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ UPI ಮತ್ತು ಇತರ ಮೊಬೈಲ್ ವ್ಯಾಲೆಟ್‌ಗಳನ್ನು ನಿಷ್ಕ್ರಿಯಗೊಳಿಸಲು ಮರೆಯಬೇಡಿ.

 

ಮೊಬೈಲ್ ವ್ಯಾಲೆಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿ

ಮೊಬೈಲ್ ವ್ಯಾಲೆಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿ

ನಿಮ್ಮ ಫೋನ್ ಸಂಖ್ಯೆಗೆ ಲಿಂಕ್ ಮಾಡಬಹುದಾದ Paytm, Google Pay , ಫೋನ್ ಪೇ ಮತ್ತು ಇತರ ಮೊಬೈಲ್ ವ್ಯಾಲೆಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ಅಪ್ಲಿಕೇಶನ್ ಮೂಲಕ ಅಥವಾ ಪರಿಶೀಲಿಸಿದ ಸಹಾಯವಾಣಿಗೆ ಕರೆ ಮಾಡುವ ಮೂಲಕ ಮೊಬೈಲ್ ವ್ಯಾಲೆಟ್ ಸೇವೆಯನ್ನು ನಿರ್ಬಂಧಿಸಿ

ಇತರ ಆನ್ಲೈನ್ ಸೇವೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ

ಇತರ ಆನ್ಲೈನ್ ಸೇವೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ

ನಿಮ್ಮ ಫೋನ್ ಸಂಖ್ಯೆಗೆ ಲಿಂಕ್ ಆಗಿರುವ ನಿಮ್ಮ ಎಲ್ಲಾ ಇಮೇಲ್ ಐಡಿ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನೀವು ನಿಷ್ಕ್ರಿಯಗೊಳಿಸಲು ನೀವು ಮುಂದಾಗಬಹುದು. ಹಾಗೆ ಮಾಡಿದ್ದಲ್ಲಿ ನಿಮ್ಮ ಫೇಸ್‌ಬುಕ್, ಇಮೇಲ್ ಐಡಿ ಮೂಲಕ ನಿಮ್ಮ ಆತ್ಮೀಯರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಲು ಸಾಧ್ಯವಾಗುವುದಿಲ್ಲ.

ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮತ್ತು ದೂರು ನೀಡಿ

ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮತ್ತು ದೂರು ನೀಡಿ

ನಿಮ್ಮ ಹಣವನ್ನು ನೀವು ಭದ್ರಪಡಿಸಿದ ನಂತರ, ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮತ್ತು ಘಟನೆಯನ್ನು ವರದಿ ಮಾಡಿ. ಅಲ್ಲದೆ, ನಿಮ್ಮ ಬ್ಯಾಂಕ್ ಖಾತೆಯಿಂದ ಯಾರಾದರೂ ಹಣವನ್ನು ಕದಿಯುವ ಸಂದರ್ಭದಲ್ಲಿ ಎಫ್‌ಐಆರ್‌ನ ನಕಲನ್ನು ಬ್ಯಾಂಕುಗಳು ಅಥವಾ ವ್ಯಾಲೆಟ್ ಕಂಪನಿಗಳಿಗೆ ಸಾಕ್ಷಿಯಾಗಿ ತೆಗೆದುಕೊಳ್ಳಲು ಮರೆಯಬೇಡಿ.

English summary

8 Things To Do Keep Money Safe When your SmartPhone Gets Stolen: Explained In Kannada

Here the details of how to safe your money when your smartphone gets stolen
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X