ಫೋರ್ಬ್ಸ್ ಏಪ್ರಿಲ್ 4 ರಂದು 2023 ರ ಬಿಲಿಯನೇರ್‌ಗಳ ವಾರ್ಷಿಕ ಪಟ್ಟಿಯನ್ನು ಪ್ರಕಟಿಸಿದ್ದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ಎಂಡಿ ಮುಖೇಶ್ ಅಂಬಾನಿ ಈಗ ಫೋರ್ಬ್ಸ್ ಪ್ರಕಾರ ಏಷ್ಯಾ ಮತ್ತು ಭಾರತ ಎರಡರಲ್ಲೂ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಇನ್ನು ಫೋರ್ಬ್ಸ್ ಪಟ್ಟಿಯ ಪ್ರಕಾರ, ಸಾವಿತ್ರಿ ಜಿಂದಾಲ್, ರೋಹಿಕಾ ಸೈರಸ್ ಮಿಸ್ತ್ರಿ, ರೇಖಾ ಜುಂಜುನ್‌ವಾಲಾ, ವಿನೋದ್ ರಾಯ್ ಗುಪ್ತಾ ಮತ್ತು ಲೀನಾ ತಿವಾರಿ ಭಾರತದ ಐದು ಟಾಪ್ ಶ್ರೀಮಂತ ಮಹಿಳೆಯರಾಗಿದ್ದಾರೆ. 2023 ರ ಫೋರ್ಬ್ಸ್‌ನ ನೂತನ ಪಟ್ಟಿಯಲ್ಲಿ ಭಾರತದ 16 ಹೊಸ ಬಿಲಿಯನೇರ್‌ಗಳ ಹೆಸರನ್ನು ಒಳಗೊಂಡಿದ್ದು ಅವರಲ್ಲಿ ಮೂವರು ಮಹಿಳೆಯರಾಗಿದ್ದಾರೆ.

ಲೀನಾ ತಿವಾರಿ ಯಾರು?
ಲೀನಾ ತಿವಾರಿ ಅಥವಾ ಲೀನಾ ಗಾಂಧಿ ತಿವಾರಿ ಅವರು 'ಮಾಧ್ಯಮದ ಮುಂದೆ ಕಾಣಿಸಿಕೊಳ್ಳದ ಸಂಕೋಚ ಸ್ವಭಾವದ ಬಿಸಿನೆಸ್ ವುಮನ್ ಆಗಿದ್ದು, ಬೃಹತ್ ಫಾರ್ಮಾ ಉದ್ಯಮ ಸಂಪತ್ತಿನ ವಾರಸುದಾರರಾಗಿದ್ದಾರೆ. ಲೀನಾ ತಿವಾರಿ ಅವರು ಯುಎಸ್ವಿ ಇಂಡಿಯಾದ ಅಧ್ಯಕ್ಷರಾಗಿದ್ದು ಪ್ರಸ್ತುತ ನಿವ್ವಳ ಮೌಲ್ಯ ಯುಎಸ್ ಡಿ 3.4 ಶತಕೋಟಿ (ಸುಮಾರು 30,000 ಕೋಟಿ ರೂ.) ಆಗಿದೆ.
ಲೀನಾ ತಿವಾರಿ ಅವರ ಫಾರ್ಮಾ ಕಂಪನಿಯು ಕಾರ್ಡಿಯೋವಾಸ್ಕ್ಯುಲರ್ ಮತ್ತು ಡಯಾಬಿಟಿಕ್ ಔಷಧಿಗಳ ವಿಭಾಗದಲ್ಲಿ ಭಾರತದಲ್ಲಿ ಅಗ್ರ ಐದು ಸ್ಥಾನಗಳಲ್ಲಿದೆ. ಮಾತ್ರವಲ್ಲದೇ ಅವರ ಫಾರ್ಮಾ ಆಕ್ಟಿವ್ ಫಾರ್ಮಸಿಟಿಕಲ್ ಇನ್ಗ್ರೇಡಿಯೆಂಟ್ಸ್ (API) injectables ಮತ್ತು ಬಯೋಸಿಮಿಲರ್ ಡ್ರಗ್ಸ್ ಗಳನ್ನು ತಯಾರಿಸುವ ವ್ಯವಹಾರದಲ್ಲಿದೆ. ಗ್ಲೈಕೋಮೆಂಟ್ ಎಂಬ USV ಅಂಟಿ-ಡಯಾಬಿಟಿಕ್ ಫಾರ್ಮುಲೇಶನ್ ದೇಶೀಯ ಉದ್ಯಮದಲ್ಲಿ ಅಗ್ರ 3 ರ ಸ್ಥಾನದಲ್ಲಿದೆ.
ಫಾರ್ಚೂನ್ ವರದಿ ಪ್ರಕಾರ, ಲೀನಾ ತಿವಾರಿ ಲೈಮ್ ಲೈಟ್ ನಿಂದ ದೂರ ಉಳಿಯಲು ಬಯಸುವ ವ್ಯಕ್ತಿಯಾಗಿದ್ದರೂ ಅವರು ಪರೋಪಕಾರಿಯಾಗಿದ್ದಾರೆ. ಇನ್ನು ಲೀನಾ ತಿವಾರಿ ಅವರ ಹವ್ಯಾಸಗಳ ಬಗ್ಗೆ ಹೇಳಬೇಕೆಂದರೆ, ಪ್ರಯಾಣವನ್ನು ಬಹುವಾಗಿ ಇಷ್ಟಪಡುವ ಅವರಿಗೆ ಪುಸ್ತಕಗಳೆಂದರೆ ಅಷ್ಟೇ ಪ್ರೀತಿ. ಲೀನಾ ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಬಿಕಾಂ ಪದವಿ ಪಡೆದಿದ್ದು, ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಕೋರ್ಸ್ ಮಾಡಿದ್ದಾರೆ.
ಯುಎಸ್ವಿಯ ಎಂಡಿ ಆಗಿ ಕಂಪನಿ ನಡೆಸುತ್ತಿರುವ ಪ್ರಶಾಂತ್ ತಿವಾರಿ ಅವರನ್ನು ಲೀನಾ ವಿವಾಹವಾಗಿದ್ದು ಈ ದಂಪತಿಗಳಿಗೆ ಅನೀಶಾ ಗಾಂಧಿ ತಿವಾರಿ ಎಂಬ ಪುತ್ರಿ ಇದ್ದಾಳೆ. ಪ್ರಶಾಂತ್ ತಿವಾರಿ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಯುಎಸ್‌ನ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಬಾಲಿವುಡ್ ನಟಿ ಜೂಹಿ ಚಾವ್ಲಾ, ಲೀನಾ ತಿವಾರಿ ಅವರ ಸ್ನೇಹಿತರಾಗಿದ್ದು, ಒಮ್ಮೆ ಇವರು ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಲು ತಯಾರಿಗಿರುವ ಔಟ್ ಫಿಟ್ ನೊಂದಿಗೆ ಪೋಸ್ಟ್ ಮಾಡಿದ್ದರು.
ದೇಶದ ಶ್ರೀಮಂತ ಮಹಿಳೆ
ಫೋರ್ಬ್ಸ್ ಪ್ರಕಾರ, 2023ರಲ್ಲಿ ಭಾರತದಲ್ಲಿ ಬಿಲಿಯನೇರ್ ಆದ ಮೂವರು ಮಹಿಳೆಯರಲ್ಲಿ ರೋಹಿಕಾ ಮಿಸ್ತ್ರಿ ಕೂಡ ಒಬ್ಬರು. ಆಕೆಯ ನಿವ್ವಳ ಆಸ್ತಿ ಮೌಲ್ಯ 7 ಶತಕೋಟಿ ಡಾಲರ್ ಆಗಿದ್ದು, ಅದು 56000 ಕೋಟಿ ರೂ. ಆಗಿದೆ. ಅಷ್ಟೇಅಲ್ಲ ಅವರು ಭಾರತದ 2ನೇ ಅತಿದೊಡ್ಡ ಮಹಿಳೆಯಾಗಿದ್ದಾರೆ.
17 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಸಾವಿತ್ರಿ ಜಿಂದಾಲ್ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ದೇಶದ ಪ್ರಸಿದ್ಧ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜುಂಜುನ್‌ವಾಲಾ ಹಾಗೂ ಸರೋಜ್ ರಾಣಿ ಗುಪ್ತ ಅವರು ಬಿಲಿಯನೇರ್ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.


Click it and Unblock the Notifications