ನವದೆಹಲಿ, ಜನವರಿ 22: ಐಐಟಿ ಹಾಗೂ ಐಐಎಂನಲ್ಲಿ ಓದಿದ ಅನೇಕ ಮಂದಿ ಹಲವು ಪ್ರಮುಖ ಕಂಪೆನಿಗಳಿಂದ ಅತ್ಯುತ್ತಮ ವೇತನದೊಂದಿಗೆ ಕೆಲಸ ಗಿಟ್ಟಿಸುವುದು ವಾಡಿಕೆ. ಆದರೆ ಬೆಂಗಳೂರಿನ ಪ್ರತಿಭಾವಂತನ ಯುವಕನೊಬ್ಬ ತನ್ನ ಸ್ವಂತ ಪರಿಶ್ರಮದಿಂದ ಈ ರೂಢಿಯನ್ನು ಸುಳ್ಳು ಮಾಡಿದ್ದಾನೆ.
ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಪದವೀಧರನೊಬ್ಬ 2021 ರಲ್ಲಿ ಯುಎಸ್ ಮೂಲದ ಕಂಪನಿ ಕಾನ್ಫ್ಲುಯೆಂಟ್‌ನಿಂದ ಮಹತ್ವದ ಉದ್ಯೋಗದ ಆಫರ್ ಪಡೆದುಕೊಂಡಿದ್ದಾರೆ. ಕಂಪ್ಯೂಟರ್ ಸೈನ್ಸ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವೀಧರರಾದ ಸಾರಂಗ್ ರವೀಂದ್ರನ್ ಅವರೇ ಈ ಪ್ರತಿಭಾವಂತ. ಸಾರಂಗ್ ರವೀಂದ್ರನ್ ಅವರ ವೇತನ ಬರೋಬ್ಬರಿ 1.5 ಕೋಟಿ ರೂಪಾಯಿ.

ನಿರ್ಮಾಣ ಉದ್ಯಮದ ಕುಟುಂಬದಿಂದ ಬಂದ ಸಾರಂಗ್ ಮತ್ತು ಅವರ ಹಿರಿಯ ಸಹೋದರ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಬಲವಾದ ಆಸಕ್ತಿಯನ್ನು ಹಂಚಿಕೊಂಡರು. ತನ್ನ ಅಧ್ಯಯನದಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಕೆಲಸದ ಪ್ರಸ್ತಾಪವು ಸಾರಂಗ್ ಅವನ ಕುಟುಂಬ ಮತ್ತು ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಆಡಳಿತಕ್ಕೆ ಆಶ್ಚರ್ಯವನ್ನುಂಟುಮಾಡಿತು.
ಡೆಕ್ಕನ್ ಹೆರಾಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಸಾರಂಗ್ ಪದವಿಯ ನಂತರದ ಮೊದಲ ನಾಲ್ಕು ತಿಂಗಳಲ್ಲಿ ಯಾವುದೇ ಆಫರ್‌ಗಳನ್ನು ಪಡೆಯಲಿಲ್ಲ. ಬಳಿಕ ನವೆಂಬರ್‌ನಲ್ಲಿ ಮೊದಲ ಆಫರ್ ಬಂದಿತು. ನಾನು ಇಂಟರ್‌ನಿಂಗ್ ಮಾಡುತ್ತಿರುವ ಕಂಪನಿಗೆ ತಿಳಿಸಿದೆ. ಕಂಪನಿಯು ತ್ವರಿತವಾಗಿ ಸಂದರ್ಶನಕ್ಕೆ ವ್ಯವಸ್ಥೆ ಮಾಡಿತು ಮತ್ತು ನನ್ನನ್ನು ತಕ್ಷಣವೇ ನೇಮಿಸಿಕೊಂಡಿತು" ಎಂದು ಸಾರಂಗ್ ಹೇಳಿದರು.
ಸಾರಂಗ್ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕುಮಾರನ್ ಶಾಲೆಯಲ್ಲಿ ಮುಗಿಸಿದರು ಮತ್ತು ಜಯನಗರದ ಆರ್ವಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದನು. COVID-19 ಸಾಂಕ್ರಾಮಿಕ ರೋಗದಿಂದಾಗಿ ಅವರು ವರ್ಚುವಲ್ ವಿಧಾನಗಳ ಮೂಲಕ ಸಂದರ್ಶನ ಪ್ಯಾನೆಲ್‌ಗಳೊಂದಿಗೆ ಸಂವಹನ ನಡೆಸುವ ಸವಾಲುಗಳನ್ನು ಎದುರಿಸಿದರು. ಮುಖಾಮುಖಿ ಸಂವಾದಗಳಿಗೆ ಹೋಲಿಸಿದರೆ ವರ್ಚುವಲ್ ಸ್ವರೂಪವು ಪ್ಯಾನೆಲ್‌ನೊಂದಿಗೆ ತೊಡಗಿಸಿಕೊಳ್ಳಲು ಕಷ್ಟಕರವಾಗಿದೆ ಎಂದು ಅವರು ಹೇಳಿದರು.
ಸಾರಂಗ್ ನುರಿತ ತಬಲಾ ಸಹ ವಾದಕರಾಗಿದ್ದಾರೆ. ಅವರ ಅಜ್ಜಿ ಆಲ್ ಇಂಡಿಯಾ ರೇಡಿಯೊದಲ್ಲಿ ಶಾಸ್ತ್ರೀಯ ಗಾಯಕಿ ಮತ್ತು ಕಲಾವಿದರಾಗಿದ್ದರು. ಸಾರಂಗ್ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಪ್ರಸ್ತುತ ಲಂಡನ್‌ನಲ್ಲಿದ್ದಾರೆ.


Click it and Unblock the Notifications