ಪರ್ಮನೆಂಟ್ ಅಕೌಂಟ್ ನಂಬರ್‌ಗೆ (ಪ್ಯಾನ್) ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದರೆ ಸರ್ಕಾರದ ಸೂಚನೆ ಪ್ರಕಾರ ಕೆಲವರಿಗೆ ಈ ಎರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡುವುದರಿಂದ ವಿನಾಯಿತಿ ಇದೆ. ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕಿಂಗ್ ಗಡುವನ್ನು ಹಲವಾರು ಬಾರಿ ವಿಸ್ತರಣೆ ಮಾಡಲಾಗಿದೆ. ಈಗ ಮಾರ್ಚ್ 31, 2023 ಪ್ಯಾನ್ ಆಧಾರ್ ಲಿಂಕಿಂಗ್ ಕೊನೆಯ ದಿನಾಂಕವಾಗಿದೆ. ಈ ಬಾರಿಯೂ ನಾವು ಎರಡು ಕಾರ್ಡ್‌ಗಳನ್ನು ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
ಹೌದು ಪ್ರಸ್ತುತ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಈ ತಿಂಗಳ ಅಂತ್ಯವೇ ಕೊನೆಯ ದಿನಾಂಕವಾಗಿದೆ. ಎರಡು ದಾಖಲೆಗಳನ್ನು ನೀವು ಲಿಂಕ್ ಮಾಡಿದ್ದರೆ, ಏಪ್ರಿಲ್ 01, 2023ರಿಂದ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. "ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ಯಾರು ವಿನಾಯಿತಿ ವಿಭಾಗದಡಿ ಬರುವುದಿಲ್ಲವೋ ಅವರು ಮಾರ್ಚ್ 31, 2023ಕ್ಕೂ ಮುನ್ನ ಪ್ಯಾನ್, ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಮುಖ್ಯವಾಗಿದೆ. ಇಲ್ಲವಾದರೆ ನಿಮ್ಮ ಪ್ಯಾನ್ ಕಾರ್ಡ್ ಏಪ್ರಿಲ್ 1ರಿಂದ ನಿಷ್ಕ್ರೀಯವಾಗಲಿದೆ," ಎಂದು ಆದಾಯ ತೆರಿಗೆ ಇಲಾಖೆಯು ಹೇಳಿದೆ.

ಪ್ಯಾನ್ ಕಾರ್ಡ್ ಎಂದರೇನು?
ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಪ್ಯಾನ್ ಎಂದು ಕರೆಯಲಾಗುತ್ತದೆ. ಇದು ವಿಶಿಷ್ಟವಾದ 10 ಡಿಜಿಟ್‌ನ ಕೋಡ್ ಆಗಿದ್ದು, ಆದಾಯ ತೆರಿಗೆ ಇಲಾಖೆ ನೀಡುತ್ತದೆ. ವ್ಯಕ್ತಿ, ಸಂಸ್ಥೆಗಳು ಪ್ಯಾನ್ ಕಾರ್ಡ್ ಹೊಂದುವುದು ಮುಖ್ಯವಾಗಿದೆ. ಹಣಕಾಸು ಕಾರ್ಯಗಳನ್ನು ನಡೆಸಬೇಕಾದರೆ, ಬ್ಯಾಂಕ್ ಖಾತೆಯನ್ನು ತೆರೆಯಬೇಕಾದರೆ, ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಬೇಕಾದರೆ, ಹೂಡಿಕೆ ಮಾಡಬೇಕಾದರೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.
ಆಧಾರ್ ಕಾರ್ಡ್ ಎಂದರೇನು?
12 ಅಂಕಿಗಳ ವಿಶಿಷ್ಟ ಗುರತಿನ ಸಂಖ್ಯೆಯೇ ಆಧಾರ್ ಸಂಖ್ಯೆಯಾಗಿದೆ. ಇದನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಭಾರತದ ಜನರಿಗೆ ನೀಡುವ ದಾಖಲೆಯಾಗಿದೆ. ಬಯೋಮೆಟ್ರಿಕ್, ಡೆಮಾಗ್ರಾಫಿಕ್ ಮಾಹಿತಿ ಇದರಲ್ಲಿ ಇರುತ್ತದೆ. ವಿಶ್ವದ ಅತೀ ದೊಡ್ಡ ಬಯೋಮೆಟ್ರಿಕ್ ಐಡೆಂಟಿಫಿಕೇಷನ್ ವ್ಯವಸ್ಥೆ ಆಧಾರ್ ಆಗಿದೆ. ಸರ್ಕಾರದ ಸಬ್ಸಿಡಿ, ಹಣಕಾಸು ವಹಿವಾಟು, ವೈಯಕ್ತಿಕ ಗುರುತಿನ ದೃಢೀಕರಣಕ್ಕೆ ಆಧಾರ್ ಕಾರ್ಡ್ ಮುಖ್ಯವಾಗಿದೆ.
ಯಾರು ಪ್ಯಾನ್ ಆಧಾರ್ ಲಿಂಕ್ ಮಾಡಬೇಕಾಗಿಲ್ಲ?
1. ಅಸ್ಸಾಂ, ಮೇಘಾಲಯ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕಿಂಗ್ ಕಡ್ಡಾಯವಾಗಿಲ್ಲ.
2. ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಎನ್‌ಆರ್‌ಇಗಳಾಗಿರುವವರು ಆಧಾರ್ ಪ್ಯಾನ್ ಲಿಂಕಿಂಗ್ ಕಡ್ಡಾಯವಾಗಿದೆ.
3. 80 ವರ್ಷದವರು ಅಥವಾ ಅದಕ್ಕಿಂತ ಅಧಿಕ ವಯಸ್ಸಿನವರು ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗಿಲ್ಲ.
4. ಭಾರತೀಯ ನಾಗರಿಕರು ಆಗಿಲ್ಲದಿದ್ದರೆ ಈ ಎರಡು ದಾಖಲೆಗಳನ್ನು ಲಿಂಕ್ ಮಾಡಬೇಕಾಗಿಲ್ಲ.
ಆಧಾರ್, ಪ್ಯಾನ್ ಲಿಂಕ್ ಮಾಡುವುದು ಹೇಗೆ?
ಆದಾಯ ತೆರಿಗೆ ಇಲಾಖೆಯು ಇ-ಫೈಲಿಂಗ್ ಪೋರ್ಟಲ್ ಮೂಲಕ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದಾಗಿದೆ. ಲಾಗಿನ್ ಮಾಡದೆ ಅಥವಾ ಲಾಗಿನ್ ಮಾಡಿ ಲಿಂಕ್ ಮಾಡಿಕೊಳ್ಳಬಹುದು.
ಆನ್‌ಲೈನ್ ಲಿಂಕಿಂಗ್: ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್ www.incometaxindiaefiling.gov.in ಗೆ ಭೇಟಿ ನೀಡಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಬಹುದು.
ಎಸ್‌ಎಂಎಸ್ ಲಿಂಕಿಂಗ್: ನೀವು 567678 ಅಥವಾ 56161ಗೆ ಮೆಸೇಜ್ ಮಾಡುವ ಮೂಲಕ ಪ್ಯಾನ್ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಬಹುದು. ಯುಐಡಿಪಿಎಎನ್ .
ಆಫ್‌ಲೈನ್ ಲಿಂಕಿಂಗ್: ನೀವು ಸಮೀಪದ ಪ್ಯಾನ್ ಸೇವಾ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು.


Click it and Unblock the Notifications